ಬಂಟ್ವಾಳ: ಅಪಘಾತ ಪ್ರಕರಣವೊಂದರ ಆರೋಪಿಯಾಗಿದ್ದು, ಕಳೆದ 9 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ದಂಡಿಗನ ಹೋಬಳಿಯ ದೊಡ್ಡಕೆರೆ ದೇರುಹಳ್ಳಿ ಮನೆ ವಸಂತ ಡಿ ಹೆಚ್ ಬಂಧಿತ ಆರೋಪಿ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಂಡು 2013 ನೇ ಸಾಲಿನಲ್ಲಿ ನ್ಯಾಯಾಲಯವು 1 ವರ್ಷ ಸಜೆಯನ್ನು ವಿಧಿಸಿತ್ತು.
ಆದರೆ ಆರೋಪಿ ಸುಮಾರು 9 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ನ್ಯಾಯಾಲಯದ ಆದೇಶದಂತೆ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರ ನೇತೃತ್ವದ ಎಸ್.ಐ.ಸಂದೀಪ್ ಅವರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.