ಮಂಗಳೂರು: ತುಳುನಾಡಿನಲ್ಲಿ ನಡೆಯುವ ಯಕ್ಷಗಾನ, ಕಂಬಳ ಕ್ರೀಡೆಗೆ ಸುಪ್ರೀಂಕೋರ್ಟ್‌ನ ಶಬ್ಧಮಾಲಿನ್ಯ ನಿಯಮ ನಿರ್ಬಂಧ ಆದೇಶದಿಂದ ತಲ್ಲಣಗೊಳ್ಳುವಂತೆ ಮಾಡಿದೆ. ಇದರಿಂದ ಮೇಳದ ಯಜಮಾನರು, ಕಂಬಳ ಸಂಘಟಕರು ಗೊಂದಲದಲ್ಲಿ ಸಿಲುಕಿದ್ದಾರೆ.
ಕಾಂತಾರ ಸಿನಿಮಾ ಹಳ್ಳಿಯಿಂದ ದಿಲ್ಲಿಯವರೆಗೆ ಸದ್ದು ಮಾಡುತ್ತಿದೆ. ಇದರಿಂದಾಗಿ ಈ ಬಾರಿ ತುಳುನಾಡಿನ ಕಂಬಳ, ಕೋಲ, ನೇಮಗಳಿಗೆ ಜನರ ಮನಸ್ಸಿನಲ್ಲಿ ಇನ್ನಿಲ್ಲದ ಮಾನ್ಯತೆ ದೊರೆತಿದೆ.
ಸುಪ್ರೀಂ ಕೋರ್ಟ್ ಶಬ್ಧಮಾಲಿನ್ಯ ನಿಯಮವನ್ನು ಎತ್ತಿಹಿಡಿದಿದ್ದು, 2005ರ ನಿಯಮವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿದೆ. ಈ ನಿಯಮದ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ನಿರ್ಬಂಧವಿದ್ದು, ಇದು ಕರಾವಳಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ದೊಡ್ಡ ಹೊಡೆತ ಬಿದ್ದಿದೆ.
ಸುಪ್ರೀಂ ಕೋರ್ಟ್ ಉಲ್ಲೇಖಿಸಿರುವ ನಿಯಮವನ್ನು ಪಾಲಿಸಿಕೊಂಡು ಯಕ್ಷಗಾನ, ಉತ್ಸವ, ಕಂಬಳ ನಡೆಸುವುದು ಕಷ್ಟ ಎನ್ನುತ್ತಾರೆ ಸಂಘಟಕರು.
ಇನ್ನು ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಯಕ್ಷಾಭಿಮಾನಿಗಳು ‘ರಾಜ್ಯ ಸರಕಾರ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ನಿಬಂಧನೆಗೊಳಪಟ್ಟು ಧ್ವನಿವರ್ಧಕ ಬಳಸುವಂತೆ ಗ್ರೀನ್ ಸಿಗ್ನಲ್ ನೀಡಿದೆ.
ಆದರೆ ಯಕ್ಷಗಾನ, ಕಂಬಳ, ಜಾತ್ರೆ, ಉತ್ಸವ ಸೀಸನ್ ಈ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಇದಕ್ಕೆ ಸರಕಾರ ಯಾವುದೇ ಮಾರ್ಗಸೂಚಿ ನೀಡದಿರುವುದು ಜಿಲ್ಲಾಡಳಿತಕ್ಕೂ ಬಿಸಿತುಪ್ಪವಾಗಿದೆ. ಈ ಉತ್ಸವಗಳ ಮೇಲೆ ಹೊಡೆತ ಬಿದ್ದರೆ ಕರಾವಳಿಯ ಸಾಂಸ್ಕೃತಿಕ ಟೂರಿಸಂಗೂ ಹಿನ್ನಡೆಯಾಗಲಿದೆ’ ಎಂದಿದ್ದಾರೆ.
first they started to ban azan and other Religion practice which coming from long back , now they suffer , think before act policy is suitable in this case , we love mangalore culture but simply they started pulling other religion leg