ಕಣ್ಮರೆಯಾಯ್ತು ಕಾರ್ಪೋರೇಶನ್, ಸಿಂಡಿಕೇಟ್ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು
Published
5 years agoon
By
Adminಕಣ್ಮರೆಯಾಯ್ತು ಕಾರ್ಪೋರೇಶನ್, ಸಿಂಡಿಕೇಟ್ ಬ್ಯಾಂಕ್
ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು
ಮಂಗಳೂರು : ಕರಾವಳಿಯ ಜೀವನಾಡಿಯಾಗಿ ಗುರುತಿಸಿಕೊಂಡಿದ್ದ, ಕರಾವಳಿಯಲ್ಲೇ ಹುಟ್ಟಿಬೆಳೆದು ಇಲ್ಲಿನ ಸಾವಿರಾರು ಮಂದಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ನೀಡಿ ಅವರ ಬದುಕಿನಲ್ಲಿ ಅಭಿವೃದ್ಧಿಗೆ ಮುನ್ನಡಿ ಹಾಕಿದ್ದ ಬ್ಯಾಂಕುಗಳು ಕಣ್ಮರೆಯಾಗುತ್ತಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಾಕಷ್ಟು ಆರ್ಥಿಕ ನೆರವು ನೀಡಿದ್ದ ವಿಜಯಾ ಬ್ಯಾಂಕ್ ಬ್ಯಾಂಕ್ 2019ರಲ್ಲಿ ಆಫ್ ಬರೋಡಾದೊಂದಿಗೆ ವಿಲಿನೀಕರಣ ಮಾಡಿದಾಗ ಇಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಲಾಭದಲ್ಲಿದ್ದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿದ್ದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲಿನೀಕರಣ ಮಾಡಿದಾಗ ಕರಾವಳಿಯಾದ್ಯಂತ ರಾತ್ರಿಹಗಳೆನ್ನದೇ ಭಾರೀ ಪ್ರತಿಭಟನೆ ನಡೆದಿತ್ತು. ಬ್ಯಾಂಕನ್ನು ಉಳಿಸಿಕೊಳ್ಳಬೇಕೆಂದು ಬೀದಿಗಿಳಿದು ಹೋರಾಟ ಮಾಡಿದ್ದರು. ಆದರೆ ಕೇಂದ್ರ ಸರಕಾರ ಈ ಹೋರಾಟಕ್ಕೆ ಕ್ಯಾರೇ ಅನ್ನಲಿಲ್ಲ. ಅಷ್ಟೇ ಏಕೆ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಬ್ಯಾಂಕ್ ವಿಲಿನೀಕರಣಕ್ಕೆ ಕೇಂದ್ರ ಮುಂದಾದಾಗ ತುಟಿಕ್ ಪಿಟಿಕ್ ಎನ್ನದೇ ಕುಳಿತುಕೊಂಡಿದ್ದು ಕೂಡಾ ಬೇಸರವನ್ನು ತರಿಸಿತ್ತು.
ಅಂತೂ ಇಂತು ಒಂದು ಬ್ಯಾಂಕ್ ವಿಲಿನೀಕರಣವಾದಾಗ ಉಳಿದ ಬ್ಯಾಂಕ್‌ಗಳಿಗೂ ವಿಲಿನೀಕರಣದ ಭೀತಿ ಸಹಜವಾಗಿಯೇ ಕಾಡಿತ್ತು. ಅದು ಬಳಿಕದ ದಿನಗಳಲ್ಲಿ ನಿಜ ಆಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್ ವಿಲೀನವಾಗಲಿದೆ ಎಂದು ಕೇಂದ್ರ ಸರಕಾರ ಮುನ್ಸೂಚನೆಯನ್ನೂ ಕೊಟ್ಟಿತ್ತು. ಅದೀಗ ನಿಜ ಆಗಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮತ್ತೆ ಎರಡು ಕರಾವಳಿ ಬ್ಯಾಂಕ್‌ಗಳು ಕಣ್ಮರೆಯಾದವು. ಪ್ರತಿಷ್ಟಿತ ಬ್ಯಾಂಕ್‌ಗಳಾದ ಕಾರ್ಪೋರೇಶನ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಆಸ್ತಿತ್ವ ಕಳೆದುಕೊಂಡಿದ್ದು, ಇನ್ನೇನಿದ್ದರೂ ನೆನಪು ಮಾತ್ರ. ಕೇಂದ್ರ ಸರಕಾರ ತೀರ್ಮಾನದಂತೆ ಕಾರ್ಪೋರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ಹಾಗೂ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನೊಂದಿಗೆ ಅಧಿಕೃತವಾಗಿ ವಿಲೀನವಾಗುತ್ತಿದೆ. ಈ ಹಿಂದೆ ವಿಜಯಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲಿನೀಕರಣಗೊಂಡಿತ್ತು.
ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಮಧ್ಯೆ ಸಾರ್ವಜನಿಕ ಬ್ಯಾಂಕ್ ಗಳ ಪೈಕಿ ಕೆನರಾ ಬ್ಯಾಂಕ್ ಮಾತ್ರ ಉಳಿದುಕೊಳ್ಳಲಿದೆ. ಕೆನರಾ ಹಾಗೂ ಸಿಂಡಿಕೇಟ್ ಬ್ಯಾಂಕ್ ಗಳ ವಿಲೀನದಿಂದ ಕೆನರಾ ಬ್ಯಾಂಕ್ ದೇಶದ 4 ನೇ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಣಿಸಿಕೊಳ್ಳಲಿದೆ.
ಕೊರೊನಾ ಆತಂಕದ ನಡುವೆ ಜನ ಮನೆಯಿಂದ ಹೊರ ಬರಲಾಗದೆ ಕುಳಿತುಕೊಂಡಿದ್ದರೆ ಕೇಂದ್ರ ಸರಕಾರ ಇತ್ತ ಬ್ಯಾಂಕ್‌ಗಳ ವಿಲಿನೀಕರಣ ಮಾಡಲು ಏಪ್ರಿಲ್ 1ರಿಂದಲೇ ಅನ್ವಯ ಮಾಡಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಯಾಕೆಂದರೆ ತಮ್ಮ ಅಸಮಾಧಾನವನ್ನು ತೋರಿಸಲು ಅವರು ಮನೆಯಿಂದ ಹೊರ ಬಂದು ಪ್ರತಿಭಟನೆಯನ್ನೂ ಮಾಡಲಾಗದ ಅಸಹಾಯ ಸ್ಥಿತಿಯಲ್ಲಿದ್ದಾರೆ. ಆದರೆ ಇದೇ ಅವಧಿಯಲ್ಲಿ ಸರಕಾರದ ಈ ವಿಲಿನೀಕರಣ ನಿರ್ಣಯ ಅವರನ್ನು ಸಹಜವಾಗಿಯೂ ಒಂದೆಡೆ ಗೊಂದಲಕ್ಕೆ ದೂಡಿದ್ರೆ, ಇನ್ನೊಂದೆಡೆ ಆಕ್ರೋಶಕ್ಕೂ ಕಾರಣವಾಗಿದೆ.
You may like
DAKSHINA KANNADA
ರಾಜ್ಯ ಮಟ್ಟದ ತ್ರೋಬಾಲ್ : ದರ್ಬೆ ಬೆಥನಿ ಶಾಲೆ ದ್ವಿತೀಯ
Published
11 hours agoon
10/01/2025By
NEWS DESK4ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿ ಜ. 8 ಮತ್ತು 9 ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ, ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನವನ್ನು ನೀಡಿ ಗೆಲುವಿಗೆ ಕಾರಣೀಭೂತರಾದರು. ಹಿಬಾ ಉತ್ತಮ ಆಟಗಾರ್ತಿಯಾಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ಇದನ್ನೂ ಓದಿ : ಕಾಲೇಜು ಕಾರ್ಯಕ್ರಮದಲ್ಲಿ ಅಶ್ವಿನ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಫ್ಯಾನ್ಸ್
ತಂಡಕ್ಕೆ ದೈಹಿಕ ಶಿಕ್ಷಕರಾದ ನಿರಂಜನ್ ಹಾಗೂ ಅಕ್ಷಯ್ ತರಬೇತಿಯನ್ನು ನೀಡಿದ್ದಾರೆ. ತಂಡದ ವ್ಯವಸ್ಥಾಪಕಿಯಾಗಿ ಅನಿತಾಸಿಯ ಗೋನ್ಸಲ್ವಸ್ ಇವರು ತಂಡವನ್ನು ಮುನ್ನಡೆಸಿದರು ಎಂಬುದಾಗಿ ಶಾಲಾ ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರ ಮಾಹಿತಿ ನೀಡಿದ್ದಾರೆ.
ಮಂಗಳೂರು/ಗದಗ : ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯ ಕಾರು ಚಾಲಕ ನೇ*ಣಿಗೆ ಶರಣಾಗಿದ್ದಾರೆ. ಸುನಿಲ್ ಲಮಾಣಿ(25) ಆತ್ಮಹ*ತ್ಯೆ ಮಾಡಿಕೊಂಡವರು. ಸುನಿಲ್ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುನೀಲ್ ಲಮಾಣಿ ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಶಾಸಕ ಚಂದ್ರು ಲಮಾಣಿ ಇತ್ತೀಚೆಗೆ ಖರೀದಿಸಿದ್ದ ಮನೆಯಲ್ಲಿ ಸುನೀಲ್ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಆತ ಚಂದ್ರು ಅವರ ಸಂಬಂಧಿ ಎಂದು ತಿಳಿದುಬಂದಿದೆ . ಮನೆ ಕಟ್ಟುವ ವಿಚಾರದಲ್ಲಿ ಸಹೋದರರ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಸುನಿಲ್ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ : ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹ*ತ್ಯೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
LATEST NEWS
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
Published
11 hours agoon
10/01/2025By
NEWS DESK2ನೀವು ಚಿಕ್ಕವರಾಗಿರಲಿ ಅಥವಾ ವಯಸ್ಸಾದವರಾಗಿರಲಿ ಸಿಹಿತಿಂಡಿ ಸೇವಿಸಿದ ನಂತರ ಹಲ್ಲುಗಳನ್ನ ಸ್ವಚ್ಛಗೊಳಿಸುವಲ್ಲಿನ ಅಜಾಗರೂಕತೆಯು ಹಲ್ಲುಗಳಿಗೆ ಸೋಂಕು ತಗುಲಿಸಬಹುದು. ಇದು ಇಡೀ ಹಲ್ಲನ್ನು ಹಾನಿಗೊಳಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಜನರು ದಂತವೈದ್ಯರ ಬಳಿಗೆ ಹೋಗುತ್ತಾರೆ ಮತ್ತು ಆಗಾಗ್ಗೆ ಹಲ್ಲುಗಳನ್ನ ಕೀಳಬೇಕಾಗುತ್ತದೆ. ಯಾಕಂದ್ರೆ, ಇದು ಇತರ ಹಲ್ಲುಗಳಿಗೆ ಹಾನಿ ಮಾಡುವ ಅಪಾಯವನ್ನ ಹೆಚ್ಚಿಸುತ್ತದೆ.
ಇಂದಿಗೂ ಸಹ ನಾವು ನಮ್ಮ ಹಿರಿಯರ ಹಳೆಯ ಪರಿಹಾರಗಳನ್ನ ಅನುಸರಿಸುವ ಮೂಲಕ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು. ಇಂದು ನಾನು ನಿಮಗೆ ಅಂತಹ ಮನೆಮದ್ದನ್ನ ಹೇಳಲಿದ್ದೇನೆ, ಅದನ್ನು ಬಳಸಿಕೊಂಡು ನೀವು ದಂತವೈದ್ಯರ ಬಳಿಗೆ ಹೋಗದೆ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು.
ಚಾಕೊಲೇಟ್ ತಿನ್ನುವುದರಿಂದ ಮಕ್ಕಳ ಹಲ್ಲುಗಳು ಹಾನಿಗೊಳಗಾಗುತ್ತವೆ. ಆಹಾರ ಅಥವಾ ಸಿಹಿತಿಂಡಿಗಳನ್ನು ಸೇವಿಸಿದ ನಂತರ ನಾವು ತೊಳೆಯುವುದಿಲ್ಲ. 10 ರಿಂದ 12 ವರ್ಷ ವಯಸ್ಸಿನಲ್ಲಿ, ಕುಳಿಗಳಿಂದಾಗಿ ಮಕ್ಕಳ ಹಲ್ಲುಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ.
ಇದನ್ನು ತಡೆಗಟ್ಟಲು ಸುಲಭ ಮಾರ್ಗವಿದೆ. ಯಾರಿಗಾದರೂ ಹಲ್ಲಿನಲ್ಲಿ ಕುಳಿ ಇದ್ದರೆ, ನೀವು ಅದನ್ನು ಮನೆಯಲ್ಲಿಯೇ ತೆಗೆದುಹಾಕಬಹುದು. ಮೊದಲಿಗೆ, ಈರುಳ್ಳಿ ಬೀಜಗಳನ್ನ ಮಾರುಕಟ್ಟೆಯಿಂದ ತರಬೇಕು. ನಂತರ ಬೆಂಕಿಯನ್ನ ಹೊತ್ತಿಸಿ ಕೆಂಡದ ಮೇಲೆ ಈರುಳ್ಳಿ ಬೀಜಗಳನ್ನ ಹಾಕಿ ಬಂದ ಹೊಗೆಯನ್ನ ಬಾಯಿಯಲ್ಲಿ ಶೇಖರಿಸಿ ನಂತ್ರ ಮುಚ್ಚಿ. ಈ ಪ್ರಕ್ರಿಯೆಯನ್ನ ಎರಡರಿಂದ ಮೂರು ಬಾರಿ ಮಾಡಿ. ಈಗ ನಿಮ್ಮ ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸಿ ಆ ಬಟ್ಟಲಿನಲ್ಲಿ ಉಗುಳಿ. ಈಗ ಆ ಬಟ್ಟಲಿನಲ್ಲಿರುವ ನೀರಿನಲ್ಲಿ ಎಲ್ಲಾ ಹುಳುಗಳು ಗೋಚರಿಸುತ್ತವೆ.