Connect with us

    LATEST NEWS

    ಬಿಜೆಪಿ ಶಾಸಕನ ಕಾರು ಚಾಲಕ ಆತ್ಮಹ*ತ್ಯೆ!

    Published

    on

    ಮಂಗಳೂರು/ಗದಗ : ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯ ಕಾರು ಚಾಲಕ ನೇ*ಣಿಗೆ ಶರಣಾಗಿದ್ದಾರೆ. ಸುನಿಲ್ ಲಮಾಣಿ(25) ಆತ್ಮಹ*ತ್ಯೆ ಮಾಡಿಕೊಂಡವರು. ಸುನಿಲ್ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುನೀಲ್ ಲಮಾಣಿ ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಶಾಸಕ ಚಂದ್ರು ಲಮಾಣಿ ಇತ್ತೀಚೆಗೆ ಖರೀದಿಸಿದ್ದ ಮನೆಯಲ್ಲಿ ಸುನೀಲ್ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಆತ ಚಂದ್ರು ಅವರ ಸಂಬಂಧಿ ಎಂದು ತಿಳಿದುಬಂದಿದೆ . ಮನೆ ಕಟ್ಟುವ ವಿಚಾರದಲ್ಲಿ ಸಹೋದರರ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಸುನಿಲ್ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

    ಇದನ್ನೂ ಓದಿ : ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!

    ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹ*ತ್ಯೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

    LATEST NEWS

    ಚಾಹಲ್ ದಾಖಲೆ ಮುರಿದು ಹೊಸ ದಾಖಲೆ ಬರೆದ ಅರ್ಶದೀಪ್ ಸಿಂಗ್

    Published

    on

    ಮಂಗಳೂರು/ಕೋಲ್ಕತ್ತಾ : ಪ್ರವಾಸಿ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತವು ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದೆ.

    ಇಂಗ್ಲೆಂಡ್ ನೀಡಿದ 133 ರನ್ ಗುರಿ ಬೆನ್ನತ್ತಿದ ಭಾರತವು ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 132 ರನ್‌ಗಳಿಗೆ ಆಲೌಟಾದರೆ, ಭಾರತವು ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಸಹಾಯದಿಂದ 12.5 ಓವರ್‌ಗಳಲ್ಲಿ ಗುರಿ ತಲುಪಿತು.

    ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಭಾಗಿಯಾದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್

    ಅರ್ಶದೀಪ್ ಸಿಂಗ್ ದಾಖಲೆ
    ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ಎಡಗೈ ಪೇಸರ್ ಅರ್ಶದೀಪ್ ಸಿಂಗ್ ದಾಖಲೆ ಬರೆದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.

    61 ಪಂದ್ಯವಾಡಿರುವ ಅರ್ಶದೀಪ್ ಸಿಂಗ್ 97 ವಿಕೆಟ್ ಕಿತ್ತಿದ್ದಾರೆ. ಈ ಹಿಂದೆ ಈ ದಾಖಲೆ ಯುಜುವೇಂದ್ರ ಚಾಹಲ್ ಹೆಸರಿನಲ್ಲಿತ್ತು. 80 ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿರುವ ಲೆಗ್ ಸ್ಪಿನ್ನರ್ ಯುಜಿ ಚಾಹಲ್, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

    110 ಪಂದ್ಯಗಳಲ್ಲಿ 91 ವಿಕೆಟ್‌ಗಳನ್ನು ಪಡೆದಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ.

     

    Continue Reading

    LATEST NEWS

    ಸುಳ್ಳು ಸುದ್ದಿ ನಂಬಿ ಚಲಿಸುತ್ತಿರುವ ರೈಲಿನಿಂದ ನೆ*ಗೆದ 12 ಜನರ ದೇ*ಹ ಛಿ*ದ್ರ ಛಿ*ದ್ರ

    Published

    on

    ಮಂಗಳೂರು/ಮುಂಬೈ: ರೈಲಿನಡಿ ಸಿಲುಕಿ 11 ಜನರ ದು*ರಂತವಾಗಿ ಸಾ*ವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್​​ನ ಪರಾಂಡ ನಿಲ್ದಾಣದಲ್ಲಿ ನಡೆದಿದೆ.

    ರೈಲಿನಲ್ಲಿ ಬೆಂ*ಕಿ ಕಾಣಿಸಿಕೊಂಡ ವದಂತಿ ಹರಡಿತ್ತು. ಇದರಿಂದ ಹೆದರಿದ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಿಂದ ಜಿ*ಗಿದಿದ್ದರು. ಪಕ್ಕದ ಹಳಿ ಮೇಲೆ ನಿಂತಾಗ ಮತ್ತೊಂದು ರೈಲು ಡಿ*ಕ್ಕಿಯಾಗಿ ದು*ರಂತ ಸಂಭವಿಸಿ 11 ಜನ ಸಾ*ವನ್ನಪ್ಪಿದ್ದಾರೆ.

    ಜಲಗಾಂವ್‌ನ ಪಚೋರಾ ರೈಲು ನಿಲ್ದಾಣದಲ್ಲಿ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿ ಗೊಂದಲ ಸೃಷ್ಟಿಯಾಯಿತು. ಹಾಗಾಗಿ ಪ್ರಯಾಣಿಕರು ರೈಲಿನ ಚೈನ್​ ಎಳೆದು ರೈಲು ನಿಲ್ಲಿಸಿ ಪಕ್ಕದ ಹಳಿಗೆ 30-40 ಜನ ಜಿಗಿದಿದ್ದಾರೆ. ಕೆಲವರು ದೂರ ಓಡಿಹೋದರೆ ಇನ್ನು ಕೆಲವರು ಪಕ್ಕದ ಹಳಿ ಮೇಲೆ ನಿಂತಿದ್ದರು. ಈ ವೇಳೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್​ಪ್ರೆಸ್ ರೈಲು ಡಿ*ಕ್ಕಿಯಾಗಿದೆ.

    ಬ್ರೇಕ್‌ಗಳನ್ನು ಹಾಕುತ್ತಿದ್ದಂತೆ, ರೈಲಿನ ಚಕ್ರಗಳಿಂದ ಕಿ*ಡಿಗಳು ಹೊರಹೊಮ್ಮಿದವು. ಇದರಿಂದ ರೈಲಿನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿತು. ಚಲಿಸುವ ರೈಲಿನಿಂದ ಜಿ*ಗಿದಿದ್ದರಿಂದ ಹಲವರಿಗೆ ಗಾ*ಯಗಳಾಗಿವೆ. ಗಾ*ಯಾಳು ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಯಿತು. ಕೂಡಲೇ ಮುಂಬೈ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಭ್ರೂಣ ಲಿಂಗ ಕಾಯ್ದೆ ಉಲ್ಲಂಘಿಸಿದರೆ ಕಠಿಣ ಕ್ರಮ

    Published

    on

    ಮಂಗಳೂರು : ಆರೋಗ್ಯ ಇಲಾಖೆಯ ಜಿಲ್ಲಾ ಸಲಹಾ ಸಮಿತಿ ಮತ್ತು ಜಿಲ್ಲಾ ಮೇಲ್ವಿಚಾರಣಾ ಹಾಗೂ ತಪಾಸಣಾ ಸಮಿತಿಯ ಸಭೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ. ಅಮೃತ ಭಂಡಾರಿಯ ಅಧ್ಯಕ್ಷತೆಯಲ್ಲಿ ನಡೆಯಿತು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸಂಸ್ಥೆಗಳಿಗೆ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು. ಪಿಸಿ ಪಿಎನ್‌ಡಿಟಿ ಕಾಯ್ದೆ ಮತ್ತು ಕಾನೂನು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಇದನ್ನೂ ಓದಿ: ಕಳ್ಳತನ ನಡೆದ 7 ಗಂಟೆಯೊಳಗೆ ಆರೋಪಿ ದಂಪತಿ ಅಂದರ್ 

    ಸರಕಾರಿ/ಖಾಸಗಿ ಆಸ್ಪತ್ರೆಗೆ ಸ್ಕ್ಯಾನಿಂಗ್ ಮಾಡಿಸಲು ಬರುವ ಪ್ರತಿ ಗರ್ಭಿಣಿಯರು ಕಡ್ಡಾಯವಾಗಿ ತಾಯಿ ಕಾರ್ಡ್ ತರಲು ಮಾಹಿತಿ ನೀಡಬೇಕು. ಹೆಣ್ಣು ಭ್ರೂಣ ಮತ್ತು ಶಿಶು ಹತ್ಯೆ ತಡೆಯುವ ನಿಟ್ಟಿನಲ್ಲಿ ಜ.24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಎಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಪಿಂಕ್ ಲೈಟ್ ಹಾಕಿ ಆಚರಿಸಬೇಕು.

    ಪೂರ್ವಲಿಂಗ ಪತ್ತೆ ಮತ್ತು ಹತ್ಯೆಯನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಡಾ. ತಿಮ್ಮಯ್ಯ ಸೂಚಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದೀಪಾ ಪ್ರಭು ಕಾರ್ಯಸೂಚಿಯನ್ನು ಸಭೆಯ ಗಮನಕ್ಕೆ ತಂದರು. ಜಿಲ್ಲಾ ಸಲಹಾ ಸಮಿತಿಯ ಸದಸ್ಯರು ಮತ್ತು ಜಿಲ್ಲಾ ಮೇಲ್ವಿಚಾರಣಾ ಮತ್ತು ತಪಾಸಣಾ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

    Continue Reading

    LATEST NEWS

    Trending