Connect with us

    LATEST NEWS

    ಬಾಂಗ್ಲಾ ಪ್ರತಿಭಟನೆ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ರಾಜಿನಾಮೆ

    Published

    on

    ಢಾಕಾ/ಮಂಗಳೂರು: ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ವಿದ್ಯಾರ್ಥಿ ಸಂಘಟನೆಗಳು ಆರಂಭಿಸಿದ ಪ್ರತಿಭಟನೆಗೆ ದೇಶದ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿ ದೇಶದಿಂದ ಪಲಾಯಾನ ಮಾಡಿದ್ದಾರೆ. ಇದೀಗ ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಒಬೈದುಲ್‌ ಹಸನ್‌ ಕೂಡಾ ರಾಜಿನಾಮೆ ನೀಡಿದ್ದಾರೆ.

    ಢಾಕಾದಲ್ಲಿರುವ ಸುಪ್ರೀಂ ಕೋರ್ಟ್‌ ಅನ್ನು ಪ್ರತಿಭಟನಾ ವಿದ್ಯಾರ್ಥಿಗಳು, ವಕೀಲರು, ಸ್ಥಳೀಯ ಸಂಸ್ಥೆಗಳ ಸದಸ್ಯರನ್ನೊಳಗೊಂಡ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಸುಪ್ರೀಂ  ಕೋರ್ಟ್‌ ಮುಖ್ಯ ನ್ಯಾಯಾಧೀಶ ಒಬೈದುಲ್ ಹಸನ್ ಮತ್ತು ಮೇಲ್ಮನವಿ ವಿಭಾಗದ ಇತರ ನ್ಯಾಯಾಧೀಶರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಒಬೈದುಲ್‌ ಹಸನ್ ಬಂಗ್ಲಾ ಮಾಜಿ ಪ್ರಧಾನಿ ಹಸೀನಾ ರವರಿಗೆ ನಿಷ್ಠಾವಂತರಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ರಾಜಿನಾಮೆಗೆ ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳು, ವಕೀಲರು ಅನೇಕ ಸಂಘಟನೆಗಳು ಸುಪ್ರೀಂ ಕೋರ್ಟ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ರಾಜಿನಾಮೆ ನೀಡಲು ಕೇವಲ ಒಂದು ಗಂಟೆಯ ಸಮಯಾವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶ ರಾಜಿನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಅಧ್ಯಕ್ಷ ಶಹಾಬುದ್ದೀನ್ ಅವರ ಭೇಟಿ ಬಳಿಕ ಈ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.

    ವಯನಾಡಿಗೆ ಪ್ರಧಾನಿ ಮೋದಿ ಭೇಟಿ; ವೈಮಾನಿಕ ಸಮೀಕ್ಷೆ  

    International news

    ನಿನ್ನೆಯ ಹರಾಜಿನಲ್ಲಿ ಆರ್ ಸಿಬಿ ಖರೀದಿಸಿದ ಆಟಗಾರರು ಇವರೇ !

    Published

    on

    ಮಂಗಳೂರು/ಸೌದಿ ಅರೇಬಿಯಾ: ಐಪಿಎಲ್ ಸೀಸನ್ 18ರ ಹರಾಜು ಪ್ರಕ್ರಿಯೆ ನಿನ್ನೆಯಿಂದಲೇ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿದೆ. ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 72 ಆಟಗಾರರು ಹರಾಜಾಗಿದ್ದು, ಅದರಲ್ಲಿ ಆರ್ ಸಿಬಿಗೆ ಯಾರೆಲ್ಲಾ ಆಟಗಾರರು ಬಂದಿದ್ದಾರೆ ಇಲ್ಲಿದೆ ನೋಡಿ.


    ಮೆಗಾ ಹರಾಜು ಪ್ರಕ್ರಿಯೆ ಇವತ್ತು ಕೂಡ ಮುಂದುವರಿಯಲ್ಲಿದ್ದು, ನಿನ್ನೆಯ ಹರಾಜಿನಲ್ಲಿ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆದರೆ ಆರ್ ಸಿಬಿಯ ಅಭಿಮಾನಿಗಳಿಗೆ ಶಾಕ್ ಎದುರಾಗಿತ್ತು. ಕನ್ನಡಿಗ ಕೆ. ಎಲ್ ರಾಹುಲ್ ಈ ಬಾರಿಯಾದರು ಆರ್ ಸಿಬಿಗೆ ಬರಬಹುದು ಎಂಬ ನಿರೀಕ್ಷೆ ಈಡೆರಲಿಲ್ಲ.
    ಅಲ್ಲದೆ, ಪ್ರಮುಖ ಆಟಗಾರರದ ರಿಷಭ್ ಪಂತ್, ಜೋಸ್ ಬಟ್ಲರ್, ಮಾಜಿ ಆಟಗಾರ ಯಜುವೇಂದ್ರ ಚಹಲ್ ರವರನ್ನು ಖರೀದಿಸಲು ವಿಫಲವಾಯಿತು. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಅವರನ್ನು ಆರ್ ಟಿಎಂ ಬಳಸಿ ಉಳಿಸಿಕೊಳ್ಳದ ಆರ್ ಸಿಬಿ ಮ್ಯಾನೆಜ್ ಮೆಂಟ್ ನಿರ್ಧಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.

    ಇನ್ನೂ ಮೊದಲನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ 6 ಆಟಗಾರರನ್ನು ಖರೀದಿಸಿತು. ಅದರಲ್ಲಿ ಮೂವರು ವಿದೇಶಿಯರು ಹಾಗೂ ಉಳಿದ ಮೂವರು ಭಾರತೀಯ ಆಟಗಾರರಾಗಿದ್ದಾರೆ.

    ಇದನ್ನೂ ಓದಿ: ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!

    ಮೊದಲ ದಿನದ ಹರಾಜಿನಲ್ಲಿ ಆರ್ ಸಿಬಿ ಖರೀದಿಸಿದ ಆಟಗಾರರು ಇವರೇ :

    1.ಲಿಯಾಮ್ ಲಿವಿಂಗ್ ಸ್ಟೋನ್- ರೂ 8.75 ಕೋಟಿ
    2.ಫಿಲ್ ಸಾಲ್ಟ್- ರೂ. 11.5 ಕೋಟಿ
    3.ಜಿತೇಶ್ ಶರ್ಮಾ- ರೂ. 11 ಕೋಟಿ
    4.ಜೋಶ್ ಹ್ಯಾಜಲ್ ವುಡ್- ರೂ. 12.5 ಕೋಟಿ
    5.ಅನೂಜ್ ರಾವತ್- ರೂ. 30 ಲಕ್ಷ
    6.ರಾಸಿಖ್ ಸಲಾಮ್ ದಾರ್-ರೂ. 6ಕೋಟಿ
    7.ಸುಯಾಶ್ ಶರ್ಮಾ-ರೂ. 2.6ಕೋಟಿ

    Continue Reading

    International news

    ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!

    Published

    on

    ಮಂಗಳೂರು : ಎಲನ್ ಮಸ್ಕ್ ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿ. ಮಸ್ಕ್ ಅಮೆರಿಕಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿ, ಭಾರತದ ಚುನಾವಣಾ ಪ್ರಕ್ರಿಯೆಯನ್ನು ಹೊಗಳಿದ್ದಾರೆ.


    ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಮಸ್ಕ್, ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಅದ್ಬುತವಾಗಿ ನಡೆಯುತ್ತದೆ. ಒಂದೇ ಒಂದು ದಿನದಲ್ಲಿ ಇಡೀ ಲೋಕಸಭಾ ಚುನಾವಣೆಯ ಮತ ಎಣಿಕೆ ಮಾಡಿದ ಶ್ರೇಯಸ್ಸು ಭಾರತದ್ದು ಎಂದಿದ್ದಾರೆ.

    ಇದನ್ನೂ ಓದಿ: ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !
    ಕ್ಯಾಲಿಫೋರ್ನಿಯಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿರುವ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಈ ಪೊಸ್ಟ್ ಹಾಕಿದ್ದಾರೆ. ಅದರ ಅಡಿಬರಹದಲ್ಲಿ, ಭಾರತದಲ್ಲಿ ಚುನಾವಣೆ ಎಂದರೆ ವಂಚನೆಯೇ ಮೊದಲ ಗುರಿ ಇರುವಲ್ಲಿ ಒಂದೇ ಒಂದು ದಿನದಲ್ಲಿ 64 ಕೋಟಿ ಮತಗಳನ್ನು ಎಣಿಕೆ ಮಾಡಿದ್ದಾರೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಕೂಡ ಮತಗಳು ಎಣಿಕೆ ಆಗುತ್ತಲೇ ಇವೆ ಎಂದು ಬರೆದಿದ್ದಾರೆ.

    ಕ್ಯಾಲಿಫೋರ್ನಿಯಾದಲ್ಲಿ ಮತ ಎಣಿಕೆ ಕಾರ್ಯ ವಿಳಂಬ ಯಾಕೆ :
    ಅಮೆರಿಕಾದಲ್ಲಿ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದೆ. ಇದನ್ನು ಎಣಿಕೆ ಮಾಡುವ ಅನೇಕ ರೀತಿಯ ಪ್ರಕ್ರಿಯೆಗಳನ್ನು ಮಾಡುವ ಕಾರಣ ಚುನಾವಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಈ ಮೇಲ್ ಇನ್ ವೋಟಿಂಗ್ ಗಳು ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ವಿಳಂಬ ನೀತಿಯನ್ನು ಎಲನ್ ಮಸ್ಕ್ ಟೀಕಿಸಿ ಭಾರತವನ್ನು ಹೊಗಳಿದ್ದಾರೆ.
    ಅಮೇರಿಕಾದಲ್ಲಿ ಹಿಂದಿನಿಂದಲೂ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದ್ದು, ಈಗಲೂ ಮುಂದುವರಿದುಕೊಂಡು ಬಂದಿದೆ.

    Continue Reading

    LATEST NEWS

    ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !

    Published

    on

    ಮಂಗಳೂರು: ತಮಿಳಿನ ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ಅಮರನ್’ ಚಿತ್ರ ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದಾಗಲೇ ಸಾಯಿ ಪಲ್ಲವಿಯವರ ಮುಂದೆ ಸಾಲು ಸಾಲು ಸಿನಿಮಾಗಳು ಕಾಯುತ್ತಿದೆ.


    ನಟಿ ಸಾಯಿ ಪಲ್ಲವಿಯವರು ದಕ್ಷಿಣ ಭಾರತದ ಜನಪ್ರಿಯ ನಟಿ ಹಾಗೂ ತನ್ನ ಪ್ರತಿಭೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ. ಸದಾ ಒಂದಲ್ಲಾ ಒಂದು ಸಿನಿಮಾದಲ್ಲಿ ಕಾರ್ಯನಿರತರಾಗಿರುವ ಸಾಯಿ ಪಲ್ಲವಿಯವರ ಮುಂದೆ ಸಾಲು ಸಾಲು ಸಿನಿಮಾಗಳು ಕಾಯುತ್ತಿದೆ.

    ಇದನ್ನೂ ಓದಿ: ಹಾಸಿಗೆ ಹಿಡಿದಿದ್ದ 80ರ ಅಜ್ಜಿ ಮೇಲೆಯೂ ವರದಕ್ಷಿಣೆ ಕೇಸ್‌: ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌
    ರಣಬೀರ್ ಕಪೂರ್, ಯಶ್ ನಟನೆಯ ಹಿಂದಿಯ ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ನಂತರ ಅಮೀರ್ ಖಾನ್ ನಿರ್ಮಾಣ ಮಾಡಿ ಅವರ ಮಗ ನಟಿಸುತ್ತಿರುವ ಹೊಸ ಹಿಂದಿ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ.
    ಈಗಾಗಲೇ, ನಟ ನಾಗಚೈತನ್ಯ ನಟಿಸಿರುವ ‘ತಾಂಡೇಲ್’ ಸಿನಿಮಾದಲ್ಲೂ ಸಾಯಿ ಪಲ್ಲವಿಯವರು ನಟಿಸಿದ್ದಾರೆ. ಇದರ ಚಿತ್ರೀಕರಣ ಮುಗಿದಿದ್ದು, ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಸುಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲೂ ಸಾಯಿ ಪಲ್ಲವಿ ನಟಿಸಲಿದ್ದಾರೆ. ಇದರಲ್ಲಿ ನಾಯಕನಾಗಿ ರಾಮ್ ಚರಣ್ ಅಭಿನಯಿಸಲಿದ್ದಾರೆ.
    ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ, ಪಕ್ಕಾ ಫ್ಯಾಮಿಲಿ ಗರ್ಲ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಿಯೇ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

    Continue Reading

    LATEST NEWS

    Trending