Wednesday, December 1, 2021

ಕೋಮುವಿರೋಧಿ ವಾತಾವರಣದ ವೇಳೆ ಕ್ರೈಸ್ತ ಮಿಷನರಿಗಳ ಸರ್ವೆ ಮಾಡುವುದು ಅಪಾಯಕಾರಿ: ಡಾ.ಪೀಟರ್ ಮಚಾದೋ

ಬೆಂಗಳೂರು: ರಾಜ್ಯದಲ್ಲಿನ ಕ್ರೈಸ್ತ ಮಿಷನರಿಗಳ ಸರ್ವೆ ಕೋಮುವಿರೋಧಿ ವಾತಾವರಣ ತೀವ್ರವಾಗಿರುವ ವೇಳೆ ಇಂತಹ ಗಣತಿ ಮಾಡುವುದು ಅತ್ಯಂತ ಅಪಾಯಕಾರಿ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಪ್ರತಿಕ್ರಿಯಿಸಿದ್ದಾರೆ.


ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಜ್ಯದಲ್ಲಿನ ಕ್ರೈಸ್ತ ಮಿಷನರಿಗಳ ಗಣತಿ ಮಾಡಲು ಆದೇಶಿಸಿದೆ ಎಂಬುದನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಇದೊಂದು ಅನಗತ್ಯ ಕ್ರಮವೆಂದೇ ನಾವು ಭಾವಿಸುತ್ತೇವೆ.

ಈ ಸರ್ವೆಯಿಂದ ರಾಜ್ಯಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ. ಕೋಮುವಿರೋಧಿ ವಾತಾವರಣ ತೀವ್ರವಾಗಿರುವ ವೇಳೆ ಇಂತಹ ಗಣತಿ ಮಾಡುವುದು ಅತ್ಯಂತ ಅಪಾಯಕಾರಿ.
ಮತಾಂತರ ಮಿಥ್ಯ ಹಾಗೂ ಕೋಮುವಿರೋಧಿ ವಾತಾವರಣವು ತೀವ್ರವಾಗಿರುವ ಸಮಯದಲ್ಲಿ ಇಂತಹ ಒಂದು ಗಣತಿಯನ್ನು ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ.

ಈ ಗಣತಿಯನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಚರ್ಚುಗಳು, ಪಾದ್ರಿಗಳು ಮತ್ತು ಕ್ರೈಸ್ತ ಸನ್ಯಾಸಿನಿಯರನ್ನು ಕೋಮುವಾದಿ ಶಕ್ತಿಗಳು ಅನಗತ್ಯವಾಗಿ ಟಾರ್ಗೆಟ್ ಮಾಡುವುದನ್ನೂ ಸಹ ನಾವು ತಳ್ಳಿಹಾಕುವಂತಿಲ್ಲ.
ಈ ರೀತಿಯ ಹಲವು ಘಟನೆಗಳು ಉತ್ತರ ಭಾರತ ಹಾಗೂ ಕರ್ನಾಟಕದಲ್ಲಿಯೂ ಸಹ ಈಗಾಗಲೇ ನಡೆದಿರುವುದು ಅದಾಗಲೇ ನಮ್ಮ ಗಮನಕ್ಕೆ ಬಂದಿದೆ.

ಕ್ರೈಸ್ತ ಸಮುದಾಯದ ಚರ್ಚುಗಳು ಹಾಗೂ ಧಾರ್ಮಿಕ ವ್ಯಕ್ತಿಗಳ ಗಣತಿಯನ್ನು ಮಾತ್ರ ಮಾಡಲು ಸರ್ಕಾರ ಆಸಕ್ತಿ ತೋರಿಸುತ್ತಿರುವುದೇಗೆ? ನಾವು ಬಹಳ ಗೌರವಿಸುವ ವಿಶಾಲ ದೃಷ್ಟಿಯ ನಾಯಕ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಸಹ ಸಮಾಜವನ್ನು ಧಾರ್ಮಿಕವಾಗಿ ವಿಭಜಿಸಿ,

ಶಾಂತಿ ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಕೋಮುವಾದಿ ಗುಂಪುಗಳ ಒತ್ತಡಕ್ಕೆ ಮಣಿದಿರುವುದು ಅತ್ಯಂತ ಖೇದಕರ ಹಾಗೂ ಬೇಸರದ ಸಂಗತಿಯಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...