Monday, July 4, 2022

ಲಾಡ್ಜ್‌ನಲ್ಲಿ ಯುವಕನ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

ಮಂಗಳೂರು: ನಗರದ ಖಾಸಗಿ ಲಾಡ್ಜ್‌ನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜೋಯ್ಸನ್‌ (21), ಪ್ರಮೀತ್‌ (24), ಕಾರ್ತಿಕ್ (21), ಪ್ರಜ್ವಲ್‌ (22), ದುರ್ಗೇಶ್‌ (22) ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ
ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌,

ಅ. 15ರಂದು ನಗರದ ಕಪಿತಾನಿಯೋ ಬಳಿಯ ಲಾಡ್ಜ್‌ನಲ್ಲಿ ಜೋಯ್ಸನ್, ಪ್ರಮೀತ್, ಕಾರ್ತಿಕ್, ಪ್ರಜ್ವಲ್, ದುರ್ಗೇಶ್ ಪಾರ್ಟಿ ಮಾಡುತ್ತಿದ್ದರು. ಇವರಿಗೆ ಮತ್ತು ಮೃತ ಧನುಷ್ ನೊಂದಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿರುವ ಹಳೆ ದ್ವೇಷವಿದ್ದು,

ಈ ಬಗ್ಗೆ ರಾಜಿ ಪಂಚಾಯ್ತಿ ಮಾಡಲು ಲಾಡ್ಜ್ ನ ರೂಮಿಗೆ ದುರ್ಗೇಶ್‌ ಮೂಲಕ ಕರೆಸಿಕೊಂಡಿದ್ದು, ರಾಜಿ ಪಂಚಾಯ್ತಿ ನಡೆಯುವಾಗ ಅಲ್ಲಿ ಮಾತಿಗೆ ಮಾತು ಬೆಳೆದು ಆರೋಪಿತರು ಬೈದಾಡಿ ಹಲ್ಲೆ ನಡೆಸಿ,

ಇವರಲ್ಲಿ ಜೋಯ್ಸನ್ ಎಂಬಾತನು ಚೂರಿಯಿಂದ ಧನುಷ್ ನ ಎದೆಗೆ ಚುಚ್ಚಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದನು.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಎಕ್ಕೂರಿನಲ್ಲಿ ಲೈಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು-ಮೂವರಿಗೆ ಗಾಯ

ಮಂಗಳೂರು: ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಎಕ್ಕೂರು ಬಳಿ ನಿನ್ನೆ ತಡರಾತ್ರಿ ನಡೆದಿದೆ.ನಿನ್ನೆ ಮಧ್ಯರಾತ್ರಿ...

ಅಕ್ರಮ ಗೋಸಾಗಾಟ ತಡೆಯಲು ಖಡಕ್‌ ಖಾಕಿಗೆ ಖಡಕ್‌ ಸೂಚನೆ ಕೊಟ್ಟ ಶಾಸಕ ಕಾಮತ್‌

ಮಂಗಳೂರು: ನಗರದಲ್ಲಿ ಅಕ್ರಮ ಗೋಸಾಗಾಟ ಹಾಗೂ ಗೋವಧೆ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್‌ ಕಾಮತ್ ಸೂಚನೆ ನೀಡಿದ್ದಾರೆ.ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದರೂ ಅಕ್ರಮವಾಗಿ ಗೋಹತ್ಯೆ...

ವಿಟ್ಲ: ಬಕ್ರೀದ್ ಹಬ್ಬ ಹಿನ್ನೆಲೆ ಜಿಲ್ಲಾ ಗಡಿಪ್ರದೇಶದಲ್ಲಿ ಬಂದೋಬಸ್ತ್‌

ವಿಟ್ಲ: ಬಕ್ರೀದ್ ಹಬ್ಬದ ಪ್ರಯುಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೊಡಂಗೆ ಚೆಕ್ ಪೋಸ್ಟ್‌ನಲ್ಲಿ ದಿನದ 24 ಗಂಟೆಯು ಸಿಬ್ಬಂದಿಗಳು ಇರಲಿದ್ದು, ವಾಹನ ತಪಾಸಣೆ ನಡೆಯಲಿದೆ...