Connect with us

    STATE

    ಅಜ್ಜಿ ಮೇಲೆ ಅ*ತ್ಯಾಚಾರ ಯತ್ನ; ಮೊಮ್ಮಗನಿಂದಲೇ ವೃದ್ಧ ದಂಪತಿ ದಾ*ರುಣ ಅಂ*ತ್ಯ

    Published

    on

    ಚಿಕ್ಕಮಂಗಳೂರು : ವೃದ್ಧ ದಂಪತಿಯ ಕೊ*ಲೆ ಪ್ರಕರಣ ಚಿಕ್ಕಮಂಗಳೂರು ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ನಡೆದಿದ್ದು, ಇದೀಗ ಅಸಲಿ ಕಾರಣ ಬಯಲಾಗಿದೆ. ಮೊಮ್ಮಗ ತನಗಿರುವ ಕಾಯಿಲೆ ಹುಷಾರಾಗಲಿ ಎಂದು ತನ್ನ ಅಜ್ಜಿಯ ಮೇಲೆ ಅ*ತ್ಯಾಚಾರಕ್ಕೆ ಯತ್ನಿಸಿ, ಅಜ್ಜ ಅಜ್ಜಿ ಇಬ್ಬರನ್ನು ಕೊ*ಲೆ ಮಾಡಿದ್ದಾನೆ.

    ನ.21 ರಂದು ಕೊಳಗಾಮೆ ಗ್ರಾಮದಲ್ಲಿ ಕರಿಬಸವಯ್ಯ (65) ಅವರ ಪತ್ನಿ ಲಲೀತಮ್ಮ (60) ಎಂಬವರ ಕೊ*ಲೆಯಾಗಿತ್ತು. ದಂಪತಿ ಮೊಮ್ಮಗ ನಿಶಾಂತ್ ಕೊ*ಲೆ ಆರೋಪಿ ಎಂದು ಗುರುತಿಸಲಾಗಿದೆ. ಜೋಡಿ ಕೊ*ಲೆ ನಡೆದ ಹಿನ್ನಲೆ, ಮಲ್ಲಂದೂರು ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ಕೊ*ಲೆಗೆ ಅಸಲಿ ಕಾರಣ ಏನು ಎಂಬುದನ್ನು ಬಾಯಿ ಬಿಡಿಸಿದ್ದಾರೆ.

    ಮೂಲತಃ ನಿಶಾಂತ್ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಹಿಳೆಯರ ಚಟ ಹೊಂದಿದ್ದ. ಆದರೆ ಇತ್ತೀಚೆಗೆ ಆತನ ಮೈನಲ್ಲಿ ಸಾಕಷ್ಟು ಕಜ್ಜಿಗಳಾಗಿದ್ದವು. ಅದಕ್ಕಾಗಿ ಆತನ ಸ್ನೇಹಿತರು, ‘ನೀನು ಮಹಿಳೆಯರ ಬಳಿ ಹೋದಾಗ ಕಾಂ*ಡೋಮ್ ಬಳಸಬೇಡ. ಆಗ ಕಜ್ಜಿ ಹೋಗುತ್ತೆ’ ಎಂದು ಹೇಳಿದ್ದರಂತೆ. ಅದರೆ ಬೆಂಗಳೂರಿನಲ್ಲಿ ಕಾಂ*ಡೋಮ್ ಹಾಕದೆ ಸೆ*ಕ್ಸ್ ಮಾಡಲು ಮಹಿಳೆಯರು ಒಪ್ಪದ ಕಾರಣ ಅಜ್ಜ-ಅಜ್ಜಿಯ ಮನೆಗೆ ಬಂದಿದ್ದನು.

    ಅಲ್ಲಿ ಅಜ್ಜಿಯ ಮೇಲೆ ಅ*ತ್ಯಾಚಾರ ಮಾಡುವುದು ಆತನ ಮೂಲ ಉದ್ದೇಶವಾಗಿತ್ತು. ಹಾಗಾಗಿ, ಮೊದಲಿಗೆ ಅಜ್ಜನನ್ನ ಕಲ್ಲಿನಿಂದ ಚ*ಚ್ಚಿ, ಕೊ*ಲೆ ಮಾಡಿ ನಂತರ ಅಜ್ಜಿಯ ಮೇಲೆ ಅ*ತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅಜ್ಜಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಬಾಯಿಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಆಕೆಯು ಸಾ*ವನ್ನಪ್ಪಿದ್ದಳು ಎಂದು ತಿಳಿದು ಬಂದಿದೆ.

    ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

    LATEST NEWS

    ಐಪಿಎಲ್ 2025: ಮೊದಲ ಪಂದ್ಯದಿಂದ ಮುಂಬೈ ಪಡೆಯ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾನ್

    Published

    on

    ಮುಂಬೈ: ಐಪಿಎಲ್ 2025ಕ್ಕಾಗಿ ಎಲ್ಲಾ ತಂಡಗಳು ಸಿದ್ಧಗೊಂಡಿವೆ. ಈ ಬಾರಿಯೂ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಆದರೆ ಅವರನ್ನು ಮೊದಲ ಪಂದ್ಯದಿಂದ ಬ್ಯಾನ್ ಮಾಡಲಾಗಿದೆ.

    ಹೌದು ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್‌ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.

    ಈ ಒಂದು ಪಂದ್ಯದ ನಿಷೇಧದ ಶಿಕ್ಷೆ ಐಪಿಎಲ್ ಸೀಸನ್ 18ರಲ್ಲಿ ಮುಂದುವರೆಯಲಿದೆ. ಅದರಂತೆ ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ತಂಡವನ್ನು ಜಸ್‌ಪ್ರೀತ್ ಬುಮ್ರಾ ಅಥವಾ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.

    Continue Reading

    LATEST NEWS

    ಶುಕ್ರವಾರದಂದು ಉಪ್ಪು ಖರೀದಿಸುವ ಅಭ್ಯಾಸ ನಿಮಗಿದೆಯೇ? ಜೊತೆಗೆ ಈ ವಸ್ತು ಖರೀದಿಸಿ, ಅದೃಷ್ಟವೋ ಅದೃಷ್ಟ

    Published

    on

    ಹಣದ ಅಧಿಪತಿಯಾಗಬಲ್ಲ ಮಾತೆ ಮಹಾಲಕ್ಷ್ಮಿಯು ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುವಂತೆ ನಾವು ಅನೇಕ ಪರಿಹಾರಗಳನ್ನು ಮತ್ತು ಅನೇಕ ಪೂಜೆಗಳನ್ನು ಮಾಡುತ್ತಿದ್ದೇವೆ. ತಾಯಿ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ಖಾಯಂ ಆಗಿ ನೆಲೆಸಿದರೆ ಆದಾಯ ಹೆಚ್ಚುತ್ತದೆ, ಸಾಲದ ಬಾಧೆಯಿಂದ ಪಾರಾಗುತ್ತದೆ, ದುಂದು ವೆಚ್ಚ ತಡೆಯುತ್ತದೆ ಎಂದು ಹೇಳಲಾಗುತ್ತದೆ. ಶುಕ್ರವಾರದಂದು ಉಪ್ಪನ್ನು ಖರೀದಿಸುವುದು ನಾವು ಮಾಡುವ ಪರಿಹಾರಗಳಲ್ಲಿ ಒಂದಾಗಿದೆ. ನೀವು ಈ ರೀತಿ ಉಪ್ಪನ್ನು ಖರೀದಿಸಿದರೆ, ಆಧ್ಯಾತ್ಮಿಕತೆಯ ಬಗ್ಗೆ ನಾವು ಈ ಪೋಸ್ಟ್‌ನಲ್ಲಿ ನೋಡಲಿದ್ದೇವೆ, ಆ ಉಪ್ಪಿನೊಂದಿಗೆ ನೀವು ಖರೀದಿಸುವ ಮೂರು ವಸ್ತುಗಳು ನಿಮಗೆ ಅನಿರೀಕ್ಷಿತ ಅದೃಷ್ಟವನ್ನು ತರುತ್ತವೆ.

    ಅನೇಕ ವಸ್ತುಗಳನ್ನು ಮಾತೆ ಮಹಾಲಕ್ಷ್ಮಿಯ ಸುಗಂಧ ದ್ರವ್ಯಗಳೆಂದು ಪರಿಗಣಿಸಲಾಗುತ್ತದೆ. ಸಮುದ್ರ ಉತ್ಪನ್ನಗಳು, ಮಂಗಳಕರ ವಸ್ತುಗಳು, ಬಿಳಿ ಬಣ್ಣದ ವಸ್ತುಗಳು ಮತ್ತು ಪರಿಮಳಯುಕ್ತ ವಸ್ತುಗಳಲ್ಲಿ ತಾಯಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಆ ವಸ್ತುಗಳನ್ನಿಟ್ಟು ಪೂಜಿಸಿದರೆ ಆಕೆಯ ಕೃಪೆ ಪರಿಪೂರ್ಣವಾಗಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಆಧರಿಸಿಯೇ ಸಮುದ್ರದಿಂದ ಉತ್ಪತ್ತಿಯಾಗುವ ಕಲ್ಲು ಉಪ್ಪು, ಶಂಖ ಇತ್ಯಾದಿಗಳಲ್ಲಿ ಮಾತೆ ಮಹಾಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.

    ಶುಕ್ರವಾರ ಬೆಳಗ್ಗೆ ಆದಷ್ಟು ಮನೆಯಲ್ಲಿ ಕುಟುಂಬದ ಯಜಮಾನರು ಹತ್ತಿರದ ಅಂಗಡಿಗೆ ಹೋಗಿ ಕಲ್ಲು ಉಪ್ಪು, ಅರಿಶಿನ ಪುಡಿ, ಅರಿಶಿನ ಪುಡಿ, ಏಲಕ್ಕಿಯನ್ನು ಖರೀದಿಸಬೇಕು. ನಾವು ಈ ವಸ್ತುಗಳನ್ನು ಸರಿಯಾಗಿ ಪೂಜಿಸಿದಾಗ, ಆ ಪೂಜೆಯಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆಯುತ್ತೇವೆ. ಮಹಾಲಕ್ಷ್ಮಿಯ ಅನುಗ್ರಹ ಪರಿಪೂರ್ಣವಾಗಿದೆ.

    ಗಾಜಿನ ಪಾತ್ರೆ ಅಥವಾ ಮಣ್ಣಿನ ಪಾತ್ರೆ ಖರೀದಿಸಬೇಕು. ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಗುರುವಾರವೇ ಸಿದ್ಧವಾಗಿಟ್ಟುಕೊಳ್ಳಿ. ಶುಕ್ರವಾರ ಬೆಳಿಗ್ಗೆ ನಾವು ಅಂಗಡಿಯಿಂದ ಆ ನಾಲ್ಕು ವಸ್ತುಗಳನ್ನು ಖರೀದಿಸಿದ ನಂತರ, ನಾವು ಈ ಗಾಜಿನ ಪಾತ್ರೆಯನ್ನು ತೆಗೆದುಕೊಂಡು ಅದನ್ನು ಪೂಜಾ ಕೋಣೆಯಲ್ಲಿ ಇರಿಸಿ ಮತ್ತು ಆ ಗಾಜಿನ ಪಾತ್ರೆಯಲ್ಲಿ ಬಹಳಷ್ಟು ಉಪ್ಪನ್ನು ಸುರಿಯಬೇಕು. ನಂತರ ಅದರ ಮೇಲೆ ಅರಿಶಿನ ಪುಡಿ, ಅರಿಶಿನ ಮತ್ತು ಏಲಕ್ಕಿ ಹಾಕಿ. ಅದರೊಂದಿಗೆ ಒಂದು ರೂಪಾಯಿ ನಾಣ್ಯವನ್ನೂ ಇಟ್ಟುಕೊಳ್ಳಬೇಕು.

    ಈ ಗಾಜಿನ ಪಾತ್ರೆಯನ್ನು ಮನೆಯ ಯಾವುದೋ ಮೂಲೆಯಲ್ಲಿ ಯಾರಿಗೂ ಕಾಣದಂತೆ ಇಡಬೇಕು. ಅಶಕ್ತರು ಅದನ್ನು ಪೂಜಾ ಕೋಣೆಯ ಮೂಲೆಯಲ್ಲಿ ಇಡಬಹುದು. ಮರುದಿನ ಶನಿವಾರ ಬೆಳಿಗ್ಗೆ ಪೂಜೆಯ ನಂತರ, ನಾವು ಈ ಗಾಜಿನ ಪಾತ್ರೆಯಲ್ಲಿ ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ಅಡುಗೆಮನೆಗೆ ಹೋಗಿ ಅಡುಗೆಗೆ ಬಳಸಬೇಕು. ಗಾಜಿನ ಸಾಮಾನುಗಳನ್ನು ಸ್ವಚ್ಛವಾಗಿಡಿ. ಮಹಿಳೆಯರು ಸ್ನಾನ ಮಾಡುವಾಗ ಮುಖಕ್ಕೆ ಹಚ್ಚಿಕೊಳ್ಳಲು ಅರಿಶಿನವನ್ನು ಬಳಸಬಹುದು. ಅಂತಹ ಅಭ್ಯಾಸವಿಲ್ಲದವರು ಮನೆಗೆ ಬರುವ ಸುಮಂಗಲಿಯರಿಗೆ ಈ ಹಳದಿ ಗಡ್ಡೆಯನ್ನು ದಾನ ಮಾಡಬಹುದು.

    ಪ್ರತಿ ಶುಕ್ರವಾರ ಈ ವಸ್ತುಗಳನ್ನು ಖರೀದಿಸಿ ನಮ್ಮ ಅಡುಗೆಯಲ್ಲಿ ಬಳಸುವುದನ್ನು ಮುಂದುವರೆಸಿದರೆ, ತಾಯಿ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಮತ್ತು ಅದೃಷ್ಟವು ನಮಗೆ ಬರುತ್ತದೆ.

    Continue Reading

    LATEST NEWS

    ಶಬರಿಮಲೆಯ 18 ಮೆಟ್ಟಿಲುಗಳ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ ಪೊಲೀಸರಿಗೆ ಬಿಗ್‌ಶಾಕ್

    Published

    on

    Sabarimala Temple: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯ 18 ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಫೋಟೋಶೂಟ್ ಮಾಡಿಸಿರುವುದು ಇದೀಗ ತೀವ್ರ ವಿವಾದಕ್ಕೀಡಾಗಿದೆ. ಈ ಘಟನೆ ಕುರಿತು ಕೇರಳದ ಎಡಿಜಿಪಿ, ದೇವಸ್ಥಾನದ ವಿಶೇಷ ಅಧಿಕಾರಿ ಬಳಿ ವರದಿ ಕೇಳಿದ್ದಾರೆ.

    ದೇವಸ್ಥಾನದಲ್ಲಿ ತಮ್ಮ ಕರ್ತವ್ಯದ ನಂತರ ಮೊದಲ ಬ್ಯಾಚ್‌ನ ಪೊಲೀಸರು 18 ಮೆಟ್ಟಿಲುಗಳ ಮೇಲೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಕ್ತರಿಂದ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ವಿವಾದ ಭುಗಿಲೆದ್ದಿದೆ. ಸರ್ಕಾರಕ್ಕೆ ಭಕ್ತರ ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಯ ಬಳಿ ವರದಿ ಕೇಳಿದೆ.

    ಪೊಲೀಸರ ಫೋಟೋಶೂಟ್ ವಿರುದ್ಧ ವಿಶ್ವ ಹಿಂದು ಪರಿಷತ್ ಹರಿಹಾಯ್ದಿದೆ. ಹದಿನೆಂಟು ಮೆಟ್ಟಿಲನ್ನು ಅಯ್ಯಪ್ಪ ಭಕ್ತರು ಆಶೀರ್ವಾದ ಎಂದು ಪರಿಗಣಿಸುತ್ತಾರೆ. ಒಂದೊಂದು ಮೆಟ್ಟಿಲಿಗೂ ಒಂದೊಂದು ಅರ್ಥವಿದೆ. 18 ಮೆಟ್ಟಿಲನ್ನು ಇಳಿಯುವಾಗಲೂ ಭಕ್ತರು ದೇವರಿಗೆ ಬೆನ್ನು ತೋರುವುದಿಲ್ಲ. ಪತಿತಂಪಾಡಿ ವಿಧಿವಿಧಾನದಲ್ಲಿರುವಾಗಲೂ ಅಯ್ಯಪ್ಪನಿಗೆ ಬೆನ್ನು ತೋರಿಸಿ ಅಯ್ಯಪ್ಪ ಭಕ್ತರು ಫೋಟೋಶೂಟ್ ಮಾಡುವಂತಿಲ್ಲ. ಹೀಗಿರುವಾಗ ಪೊಲೀಸರು ಈ ರೀತಿ ಮಾಡಬಹುದೇ ಎಂದು ವಿಶ್ವ ಹಿಂದು ಪರಿಷತ್ ಕೇರಳ ಘಟಕ ಸ್ಪಷ್ಟಪಡಿಸಿದೆ.

    ವಿಶ್ವ ಹಿಂದು ಪರಿಷತ್‌ ರಾಜ್ಯಾಧ್ಯಕ್ಷ ವಿ.ಜಿ.ತಂಪಿ, ಪ್ರಧಾನ ಕಾರ್ಯದರ್ಶಿ ವಿ.ಆರ್.ರಾಜಶೇಖರನ್‌ ಮಾತನಾಡಿ, ಪೊಲೀಸ್ ಅಧಿಕಾರಿಗಳಿಗೆ ಬೆಂಬಲ ನೀಡಿದ ಮುಖ್ಯಮಂತ್ರಿಗಳ ಮೊದಲ ಆರೋಪಿಯಾಗಿದ್ದಾರೆ ಎಂದು ಕಿಡಿಕಾರಿದರು. ಈ ಘಟನೆ ಕುರಿತು ವರದಿ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಕೇರಳದ ಎಡಿಜಿಪಿ ಸೂಚನೆ ನೀಡಿದ್ದಾರೆ.

    Continue Reading

    LATEST NEWS

    Trending