Connect with us

  BELTHANGADY

  ಬೆಳ್ತಂಗಡಿಯಲ್ಲಿ ದನ ಸಾಗಾಟದ ಆರೋಪ : ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ : ನಾಲ್ವರು ವಶಕ್ಕೆ..!

  Published

  on

  ಬೆಳ್ತಂಗಡಿ : ದನ ಸಾಗಾಟದ ಆರೋಪ ಹೊರಿಸಿ ಇಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.


  ಸುಮಾರು 12 ಮಂದಿಯ ತಂಡ ಈ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  ಶರೀಫ್ ಮತ್ತು ಹಕೀಂ ಹಲ್ಲೆಗೊಳಗಾದವರು. ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
  ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಪಿಕಪ್ ವಾಹನ ಹೊಂದಿರುವ ಶರೀಫ್ ನಿನ್ನೆ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ಬಾಡಿ ಕೆಲಸ ಮಾಡಿಸಲು ಬಂದಿದ್ದು, ಜೊತೆಗೆ ಹಕೀಂರನ್ನು ಕರೆದುಕೊಂಡು ಬಂದಿದ್ದರೆನ್ನಲಾಗಿದೆ.
  ಆದರೆ ಕೆಲಸ ಆಗದ ಕಾರಣ ಶರೀಫ್ ಸವಣಾಲಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿ ಊಟ ಮಾಡಿ ರಾತ್ರಿ 11 ಗಂಟೆ ಸುಮಾರಿಗೆ ವಾಪಸ್ ಬರುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ.
  ಇವರ ಪಿಕಪ್ ಅನ್ನು ಸವಣಾಲಿನಿಂದ ಕೆಲ ವ್ಯಕ್ತಿಗಳು ಬೈಕ್, ಕಾರುಗಳಲ್ಲಿ ಬೆನ್ನಟ್ಟಿದ್ದಾರೆ ಮತ್ತು ಮೇಲಂತಬೆಟ್ಟು ತಲುಪುತ್ತಿದ್ದಂತೆ ಬೈಕ್ ನಲ್ಲಿ ಬಂದು ಪಿಕಪ್ ಅನ್ನು ಅಡ್ಡಗಟ್ಟಿದ್ದಾರೆ.
  ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು “ನೀವು ದನ ಕಳ್ಳರು, ನಮ್ಮ ಊರಿನಿಂದ ದನ ಕಳ್ಳತನ ಮಾಡಲು ಬಂದಿದ್ದಿರಿ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಶರೀಫ್ ಹಾಗೂ ಹಕೀಂರನ್ನು ಪಿಕಪ್ ನಿಂದ ಹೊರಗೆಳೆದು ರಾಡ್, ದೊಣ್ಣೆಗಳಿಂದ ಮನಸ್ಸೋ ಇಚ್ಛೆ ಥಳಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದ್ದು ಈಗಾಗಲೇ ನಾಲ್ವರನ್ನು ಬಂಧಿಸಿರುವ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

  Click to comment

  Leave a Reply

  Your email address will not be published. Required fields are marked *

  BELTHANGADY

  ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನ..! ಬಿಜೆಪಿ ಮುಖಂಡ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

  Published

  on

  ಬೆಳ್ತಂಗಡಿ:  ಗಲಾಟೆ ವೇಳೆ ಅಪ್ರಾಪ್ತೆ ಬಾಲಕಿ ಮೇಲೆ ಮಾನಭಂಗ ಯತ್ನಿಸಿದ್ದಾನೆ ಎಂದು ಆರೋಪಿಸಿ ಬೆಳ್ತಂಗಡಿ ಬಿಜೆಪಿ ಮಂಡಲದ ಎಸ್ ಟಿ ಮೋರ್ಚಾದ ಅಧ್ಯಕ್ಷನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಮುಂದೆ ಓದಿ..; ಬೈಕ್ – ಕಾರು ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃ*ತ್ಯು
  ಬೆಳ್ತಂಗಡಿ ಕಳೆಂಜ ಗ್ರಾಮದ ನಿವಾಸಿ ಬೆಳ್ತಂಗಡಿ ಬಿಜೆಪಿ ಮಂಡಲದ ಎಸ್ ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಮ್ ಕೆ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಪೋಕ್ಸೋ ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  Continue Reading

  BANTWAL

  ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ನೋಟಾಗೆ ದಾಖಲೆಯ ಮತ ಚಲಾವಣೆ

  Published

  on

  ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹೊರತುಪಡಿಸಿ ನೋಟಾಗೆ ಅತೀ ಹೆಚ್ಚು ಮತ ಚಲಾವಣೆಯಾಗಿದೆ. ಈ ಮೂಲಕ ಉಭಯ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ನೋಟಾ ಮೂರನೇ ಸ್ಥಾನ ಪಡೆದುಕೊಂಡಿದೆ.

  ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನೋಟಾಗೆ 23,576 ಮತಗಳು ಚಲಾವಣೆಯಾಗಿದೆ. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ನೋಟಾಗೆ 11,269 ಮತಗಳು ಬಿದ್ದಿದೆ.

  ದಕ್ಷಿಣ ಕನ್ನಡ ಕ್ಷೇತ್ರದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. ಬೆಳ್ತಂಗಡಿಯಲ್ಲಿ 7,691 ಮತ, ಮೂಡುಬಿದಿರೆ 2,166, ಮಂಗಳೂರು ನಗರ ಉತ್ತರ 2,019, ಮಂಗಳೂರು ನಗರ ದಕ್ಷಿಣ 1,551, ಮಂಗಳೂರು 892, ಬಂಟ್ವಾಳ 2,353, ಪುತ್ತೂರು 2302, ಸುಳ್ಯ 4,541 ಮತಗಳು ನೋಟಾಕ್ಕೆ ಬಿದ್ದಿದೆ. ಅಂಚೆ ಮತದಾನದಲ್ಲೂ 61 ಮತಗಳು ನೋಟಾಕ್ಕೆ ಬಂದಿದೆ.

  ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕುಂದಾಪುರ 1,578, ಉಡುಪಿ 1,778, ಕಾಪು 1,523, ಕಾರ್ಕಳ 2,780, ಶೃಂಗೇರಿ 943, ಮೂಡಿಗೆರೆ 1,135, ಚಿಕ್ಕಮಗಳೂರು 814, ತರಿಕೆರೆ 684 ನೋಟ ಮತ ಚಲಾವಣೆಯಾಗಿರುತ್ತದೆ.

  Continue Reading

  BANTWAL

  ಬೆಳ್ತಂಗಡಿ:ಉಪ ತಹಶೀಲ್ದಾರ್ ಸುನಿಲ್ ಹೃದಯಾಘಾತದಿಂದ ನಿಧನ

  Published

  on

  ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸಿ, ಉಪ ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿದ್ದ ಸುನಿಲ್ (42ವ) ಹೃದಯಾಘಾತದಿಂದ ನಿಧನರಾದ ಘಟನೆ ವರದಿಯಾಗಿದೆ.

  ಬೆಳ್ತಂಗಡಿ ಆಡಳಿತ ಕಂದಾಯ ಇಲಾಖೆಯಲ್ಲಿ ಗ್ರಾಮ ಕಾರಣಿಕರಾಗಿ ಬಳಿಕ ಆಡಳಿತ ಸೌಧದಲ್ಲಿ ಭೂಮಿ ಶಾಖೆಯ ನಿರ್ವಹಖರಾಗಿ ಸೇವೆ ಸಲ್ಲಿಸಿದ ಇವರು ಬಳಿಕ ಪದೋನ್ನತ್ತಿ ಹೊಂದಿ ಉಪ ತಹಸಿಲ್ದಾರ್ ಆಗಿ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

  ಇದನ್ನು ಓದಿ: ‘ಹೊಡಿಬೇಡಿ ಪ್ಲೀಸ್’ ಎಂದು ಅಂಗಲಾಚಿದ ಕೆಜಿಎಫ್ ನಟಿ; ಕುಡಿದ ಮತ್ತಿನಲ್ಲಿ ನಡೀತಾ ಗಲಾಟೆ? ವೀಡಿಯೋ ವೈರಲ್

  Continue Reading

  LATEST NEWS

  Trending