Connect with us

    DAKSHINA KANNADA

    ಪ್ರತಿಪಕ್ಷ ಸ್ಥಾನ ನೀಡದೆ ಭ್ರಷ್ಟಾಚಾರ ಆಡಳಿತಕ್ಕೆ ಬಿಜೆಪಿ ಹುನ್ನಾರ; ಮಾಜಿ ಶಾಸಕ ಲೋಬೋ ಆರೋಪ..!

    Published

    on

    ಮಂಗಳೂರು:  ಮಹಾನಗರ ಪಾಲಿಕೆಯಲ್ಲಿ ಒಂದು ಸಮರ್ಥ ಪ್ರತಿಪಕ್ಷವಾಗಿ ಕಾಂಗ್ರೆಸ್‌ ಕೆಲಸ ಮಾಡಿಕೊಂಡು ಬಂದಿದ್ದು , ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ ನೀತಿಯನ್ನು ಜನತೆ ಮುಂದೆ ಸಮರ್ಥವಾಗಿ ಬಿಚ್ಚಿಟ್ಟಿದೆ.ಆದರೆ ನಿನ್ನೆ ನಡೆದ ಪಾಲಿಕೆಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ಗೆ ಪ್ರತಿಪಕ್ಷದ ನಾಯಕನ ಸ್ಥಾನವನ್ನು ನೀಡಲು ಹಿಂದೇಟು ಹಾಕಿರುವುದು ಖಂಡನೀಯವಾಗಿದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೋ ಟೀಕಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಪಾಲಿಕೆ ಸದನದಲ್ಲಿ ನಡೆದ ಬಿಜೆಪಿ ವರ್ತನೆಯನ್ನು ಖಂಡಿಸಿದರು. ಕೌನ್ಸಿಲ್‌ನ ಸಭೆ ನಡೆಯುವ ಸಂದರ್ಭದಲ್ಲಿ ವಿನಯರಾಜ್‌ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಆಡಳಿತಾರೂಢ ಬಿಜೆಪಿ ಪಕ್ಷ ಹಾಗೂ ಅಲ್ಲಿದ್ದ ಬಿಜೆಪಿ ಸದಸ್ಯರು ಹೇಳಿದ್ದಾರೆ.

    ಇದನ್ನು ಖಂಡಿಸಿ ಕಾಂಗ್ರಸ್‌ನ ಎಲ್ಲಾ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಮಂಗಳೂರು  ಮಹಾನಗರ ಪಾಲಿಕೆಯಲ್ಲಿ ಎಷ್ಟು ಸಂಖ್ಯೆಯಲ್ಲಿ ಪ್ರತಿಪಕ್ಷದವರು ಇದ್ದರೂ ಕೂಡಾ   ಸಾಂಪ್ರದಾಯಿಕವಾಗಿ ಹೆಚ್ಚು ಸಂಖ್ಯೆಯಲ್ಲಿದ್ದ ಪ್ರತಿಪಕ್ಷಕ್ಕೆ ನಾಯಕನ ಸ್ಥಾನವನ್ನು ನೀಡಿದೆ.

    ಕಾಂಗ್ರೆಸ್‌ ಪಕ್ಷ 1984-88ರವರೆಗೆ ಸದಾಶಿವ ಭಂಡಾರಿ ಮೇಯರ್ ಆಗಿದ್ದ ಸಂದರ್ಭ ಕಾಂಗ್ರೆಸ್‌ಗೆ 42 ಸ್ಥಾನಗಳಿದ್ದವು. ಬಿಜೆಪಿಗೆ ಕೇವಲ 6 ಸ್ಥಾನಗಳಿದ್ದರೂ ಬಿಜೆಪಿಯ ನಾರಾಯಣ ಶೆಟ್ಟಿಯವರಿಗೆ ಪ್ರತಿಪಕ್ಷ ಸ್ಥಾನವನ್ನು ಕಾಂಗ್ರೆಸ್ ನೀಡಿತ್ತು.

    90ರಿಂದ 95ರವರೆಗೆ ಮತ್ತೆ ಭಂಡಾರಿ ಮೇಯರ್ ಆದಾಗಲೂ ಕಾಂಗ್ರೆಸ್‌ಗೆ 34 ಬಿಜೆಪಿಗೆ 10 ಸ್ಥಾನಗಳಿದ್ದಾಗಲೂ ನಾರಾಯಣ ಶೆಟ್ಟಿಯವರಿಗೆ ಪ್ರತಿಪಕ್ಷ ಸ್ಥಾನ ನೀಡಿದ್ದೇವೆ.

    ಶಶಿಧರ ಹೆಗ್ಡೆ ಅವಧಿಯಲ್ಲಿ ಕಾಂಗ್ರೆಸ್ ಗೆ43, ಬಿಜೆಪಿಗೆ 14 ಸ್ಥಾನಗಳಿದ್ದವು ಆದರೂ ಬಿಜೆಪಿಯ ಶಂಕರ್ ಭಟ್‌, ರಜನಿ ದುಗ್ಗಣ್ಣ ಪ್ರತಿಪಕ್ಷ ನಾಯಕನ ಸ್ಥಾನ ಕೊಟ್ಟಿದ್ದೇವೆ.

    ಆದರೆ ಈಗ ಕಾಂಗ್ರೆಸ್ ಅದಕ್ಕಿಂತಲೂ ಕಡಿಮೆ ಸ್ಥಾನ ಪಡೆದಿದೆ ಎಂದು ಜೆ ಆರ್ ಲೋಬೋ ವಾಗ್ದಾಳಿ ನಡೆಸಿದರು.ಇದೀಗ ಬಿಜೆಪಿಗೆ ಪ್ರತಿಪಕ್ಷವೇ ಬೇಡವಾಗಿದೆ.

    ಅವರು ಸರ್ವಾಧಿಕಾರ ನಡೆಸುವ ಹನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಆಭಯಚಂದ್ರ ಜೈನ್, ಎ.ಸಿ ವಿನಯ್ ರಾಜ್ , ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು.

    DAKSHINA KANNADA

    ಲಾರಿಯ ಟಯರ್‌ ಬದಲಿಸುವಾಗ ಹೊರಚಿಮ್ಮಿದ ಡಿಸ್ಕ್; ವ್ಯಕ್ತಿಗೆ ಗಂಭೀ*ರ ಗಾ*ಯ

    Published

    on

    ಪುತ್ತೂರು : ಲಾರಿಯೊಂದರ ಟಯರ್‌ ಬದಲಿಸುವಾಗ ಡಿಸ್ಕ್ ಚಿಮ್ಮಿ ಟಯರ್‌ ಸಮೇತ ಕಾಂಪೌಂಡ್‌ ಗೆ ಎಸೆಯಲ್ಪಟ್ಟು, ವ್ಯಕ್ತಿಯೊಬ್ಬರು ಗಂಭೀ*ರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ(ಜು.22) ರಾತ್ರಿ ನಡೆದಿದೆ.

    ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿ ನಿವಾಸಿ ರಶೀದ್ ಗಂಭೀರವಾಗಿ ಗಾಯಗೊಂಡವರು. ತನ್ನ ಬಾವನಿಗೆ ಸೇರಿದ ಕಲ್ಲು ಸಾಗಾಟದ ಲಾರಿಯ ಟಯರ್‌ ಪಂಚರ್ ಆದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.

    ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್‌ ತಂದಿದ್ದರು. ಟಯರ್‌ ಬದಲಿಸುವ ವೇಳೆ ಒಮ್ಮೆಲೇ ಟಯರ್‌ನ ರಿಂಗ್ ಹೊರಚಿಮ್ಮಿದೆ. ರಭಸಕ್ಕೆ ಟಯರ್‌ ಸಹಿತ ರಶೀದ್ ಅವರು ತುಸು ದೂರ ಕಾಂಪೌಂಡ್ ಗೆ ಎಸೆಯಲ್ಪಟ್ಟಿದ್ದಾರೆ.

    ಇದನ್ನೂ ಓದಿ :‘ಕೊಹ್ಲಿ’ ಜೊತೆಗಿನ ನಿಮ್ಮ ಸಂಬಂಧ ಹೇಗಿದೆ? ಎಂದು ಪ್ರಶ್ನಿಸಿದಕ್ಕೆ ‘ಗಂಭೀರ್’ ಖಡಕ್ ಉತ್ತರವೇನು ಗೊತ್ತಾ?
    ತೀವ್ರ ಗಾಯಗೊಂಡ ರಶೀದ್‌ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

    Continue Reading

    DAKSHINA KANNADA

    ಸೊಳ್ಳೆ ಉತ್ಪತ್ತಿ ತಾಣವಾಗಿರುವ ಹೃದಯಭಾಗದ ಕಟ್ಟಡ; ಕಟ್ಟಡ ಮಾಲಕರಿಗೆ ನೊಟೀಸ್‌.!!

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಡೆಂಗ್ಯೂ ನಿರ್ಮೂಲನೆಗೆ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇದೆ. ಹಲವು ಜಾಗೃತಿ ಕಾರ್ಯಕ್ರಮದ ಮೂಲಕ ಲಾರ್ವಾ ಉತ್ಪತ್ತಿ ಸ್ಥಳಗಳನ್ನು ನಾಶ ಮಾಡುವ ಪ್ರಯತ್ನ ಕೂಡಾ ನಡೆಯುತ್ತಿದೆ. ಆದರೆ ನಗರದ ಹೃದಯಭಾಗದಲ್ಲೇ ಇರುವ ಬೃಹತ್ ವಾಣಿಜ್ಯ ಕಟ್ಟಡವೊಂದು ಸೊಳ್ಳೆ ಉತ್ಪತ್ತಿ ತಾಣವಾಗಿದೆ. ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಇರುವ ಸಹಕಾರಿ ಭವನ ಹೆಸರಿನ ಕಟ್ಟಡ ಇಡೀ ನಗರಕ್ಕೇ ಡೆಂಗ್ಯೂ ಮಲೇರಿಯ ಹರಡಿಸ್ತಾ ಇದೆ. ಬಾವಾ ಬಿಲ್ಡರ್ಸ್ ಗೆ ಸೇರಿರುವ ಈ ಕಟ್ಟಡ ಸದ್ಯ ಕಮಿಟಿಯೊಂದರ ಪಾಲಾಗಿದೆ ಎಂಬ ಮಾಹಿತಿ ಇದೆ.

    ಈ ಕಟ್ಟಡದ ಬೇಸ್ಮೆಂಟ್ ನಲ್ಲಿ ಏಳಡಿಯಷ್ಟು ಸೊಳ್ಳೆಗಳು ಸಂಗ್ರಹವಾಗಿ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಗಲೀಜು ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲಿ ಇರದ ಕಾರಣ ಡ್ರೈನೇಜ್ ನಲ್ಲಿ ಹರಿಯಬೇಕಾದ ನೀರು ಇಲ್ಲಿ ಸಂಗ್ರಹವಾಗಿದೆ. ಕಟ್ಟಡದ ಅಕ್ಕ ಪಕ್ಕದಲ್ಲಿ ಹೊಟೇಲ್ ಹಾಗೂ ಫಾಸ್ಟ್ ಫುಡ್ ಅಂಗಡಿಗಳ ಜೊತೆಗೆ ಸಾಕಷ್ಟು ಜನನಿಬಿಡ ಪ್ರದೇಶ ಇದಾಗಿದೆ. ಹೀಗಾಗಿ ಈ ಡ್ರೈನೇಜ್ ನೀರಿನ ಸಂಗ್ರಹದಿಂದ  ಜನರಿಗೆ ರೋಗ ಹರಡುವ ಆತಂಕ ಎದುರಾಗಿದೆ.  ವಾರಗಳ ಹಿಂದೆ  ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಎಚ್ಚರಿಕೆ ನೋಟಿಸ್ ನೀಡಿದ್ದರು.

    ಮಂಗಳೂರಿನಲ್ಲಿ ಮತ್ತೆ ಭೀತಿ ಹುಟ್ಟಿಸುತ್ತಿರುವ ಕಳ್ಳರ ಕಾಟ..!!

    ಡ್ರೈನೇಜ್ ನೀರು ನಿಲ್ಲದಂತೆ ಕ್ರಮಕ್ಕೆ ಸೂಚಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ವಿಚಾರಕ್ಕೆ ಫೈನ್ ಕೂಡಾ ವಿಧಿಸಿದ್ದರು. ಆದರೆ  ಎಚ್ಚರಿಕೆ ನೋಟಿಸಿಗೂ ಕ್ಯಾರೇ ಅನ್ನದ ಕಟ್ಟಡದ ಕಮಿಟಿ ಫೈನ್‌ ಕೂಡಾ ಕಟ್ಟಿಲ್ಲ. ಇನ್ನು ಇಲ್ಲಿ ಸಂಗ್ರಹವಾಗಿರೋ ಡ್ರೈನೇಜ್ ನೀರು ಖಾಲಿ ಮಾಡೋ ಕೆಲಸಕ್ಕೂ ಕೈ ಹಾಕಿಲ್ಲ. ಹೀಗಾಗಿ ಇಂದು ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಕುಮಾರ್ ಶೆಟ್ಟಿ, ಕಟ್ಟಡ ಸಮಿತಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಟ್ಟಡ ಮಾಲೀಕರಾದ ಬಾವ ಬಿಲ್ಡರ್ಸ್ ಹಾಗೂ ಕಟ್ಟಡದ ಸಮಿತಿಗೆ ನೋಟೀಸ್ ಜಾರಿ ಮಾಡಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳವಾದಾಗ ಜಿಲ್ಲೆಯಿಂದಲೇ ಲಾರ್ವಾ ನಿರ್ಮೂಲನಾ ಕೇಂದ್ರಕ್ಕೆ ಆರೋಗ್ಯ ಸಚಿವರು ಚಾಲನೆ ನೀಡಿದ್ದರು. ಇದಾದ ಬಳಿಕ ಸಾಕಷ್ಟು ಕಡೆಯಲ್ಲಿ ಲಾರ್ವ ನಿರ್ಮೂಲನೆ ಮಾಡುವ ಕೆಲಸ ಕೂಡಾ ಆಗಿತ್ತು. ಆದ್ರೆ ಈ ಸಹಕಾರಿ ಭವನದ ಬೇಸ್ಮೆಂಟ್ ನಲ್ಲಿ ನಿಂತಿರೋ ಡ್ರೈನೇಜ್ ನೀರಿನಿಂದ ಇಡೀ ನಗರಕ್ಕೇ ಹಲವು ಕಾಯಿಲೆ ಹರಡುವ ಅಪಾಯ ಇದೆ. ಹೀಗಾಗಿ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    Continue Reading

    DAKSHINA KANNADA

    ಮಂಗಳೂರಿನಲ್ಲಿ ಮತ್ತೆ ಭೀತಿ ಹುಟ್ಟಿಸುತ್ತಿರುವ ಕಳ್ಳರ ಕಾಟ..!!

    Published

    on

    ಮಂಗಳೂರು: ಮಂಗಳೂರು ನಗರದ ಹೊರವಲಯದ  ಪದವಿನಂಗಡಿ ಸಮೀಪದ ಮಹಾತ್ಮನಗರ ಬಡಾವಣೆಯ ಮನೆಯೊಂದರ ಮುಖ್ಯಗೇಟ್ ತೆಗೆದು ಒಳನುಗ್ಗಿರುವ ಕಳ್ಳರು ಬಾಗಿಲಿನ ಬಳಿ ಇದ್ದ ಇನ್ನೊಂದು ಸ್ಟೀಲ್ ಗೇಟ್‌ನ್ನು ತೆರೆದು ಮನೆಯ ಬಾಗಿಲನ್ನು ರಾಡ್‌ನಿಂದ  ಒಡೆಯಲು ಯತ್ನಿಸಿರುವ ಘಟನೆ ಶನಿವಾರ(ಜು.20) ತಡ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.

    ಸ್ನಾನ ಮಾಡುತ್ತಿದ್ದಾಗ ವೀಡಿಯೋ ಮಾಡಿದ ಕಿಡಿಗೇಡಿ..! ಅರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!!

    ಕಳ್ಳರು ಕಳವು ಯತ್ನದಲ್ಲಿರುವಾಗ  ಎಚ್ಚರಗೊಂಡ  ಮನೆ ಮಂದಿ ಕೂಗಿದಾಗ ಕಳ್ಳರು ಓಡಿ ಹೋಗಿದ್ದಾರೆ. ಮನೆಯವರು ಪೊಲೀಸರು ಹಾಗೂ ನೆರೆಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕಾವೂರು ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ತಡರಾತ್ರಿ ನಾಲ್ವರ ತಂಡ ಪದವಿನಂಗಡಿಯ ಪೆರ್ಲಗುರಿಯ ಪ್ರಸನ್ನ ಗಣಪತಿ ದೇವಸ್ಥಾನದಿಂದ ಕಳವಿಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ದೇವಸ್ಥಾನದ ಬಳಿ ಓಡಾಡುತ್ತಿದ್ದ ಕಳ್ಳರ ಕೈಯಲ್ಲಿದ್ದ ಟಾರ್ಚ್ ಬೆಳಕು ದೇವಸ್ಥಾನದ ಪಕ್ಕದ ಮನೆಯವರಿಗೆ ಕಂಡು ಅವರು ಎಚ್ಚರಗೊಂಡರು ಎನ್ನಲಾಗಿದೆ.  ಮನೆಯ ಹೊರಭಾಗದ ಲೈಟ್‌ಗಳನ್ನು ಅವರು ಹಾಕಿದಾಗ ಕಳ್ಳರು ಪರಾರಿಯಾಗಿದ್ದಾರೆ  ಎಂದು ತಿಳಿದು ಬಂದಿದೆ. ಇದು ಚಡ್ಡಿ ಗ್ಯಾಂಗಿನವರ ಕೃತ್ಯ ಇರಬಹುದೇ ಎನ್ನುವ ಗುಮಾನಿ ಹುಟ್ಟಿದೆ. ಕೆಲವು ದಿನಗಳ ಹಿಂದೆ ಖತರ್ನಾಕ್ ಚಡ್ಡಿ ಗ್ಯಾಂಗಿನ ಕಳ್ಳರನ್ನು ಪೊಲೀಸರು ಬಂಧಿಸಿ, ಅವರು ಕಳವು ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದರು.

    Continue Reading

    LATEST NEWS

    Trending