LATEST NEWS
ಮರಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರಿಂದಲೇ ಹಲ್ಲೆ-ಮಾನಸಿಕ ಅಸ್ವಸ್ಥ ಸಾವು
ಬೆಳಗಾವಿ: ಮಾನಸಿಕ ಅಸ್ವಸ್ಥ ಯುವಕನೋರ್ವನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೇ ಆತ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ಬಸವನಕುಡಚಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಬಸವನಕುಡಚಿ ಗ್ರಾಮದ ಗಾಂಧಿ ಗಲ್ಲಿಯ ನಿವಾಸಿ ವಿಶಾಲ ಕಲ್ಲಪ್ಪಾ ಪಟಾಯಿ (28) ಮೃತಪಟ್ಟ ವ್ಯಕ್ತಿ.
ಕಳೆದ ನಾಲ್ಕು ದಿನಗಳ ಹಿಂದೆ ಮಾನಸಿಕ ಅಸ್ವಸ್ಥನಂತೆ ಗ್ರಾಮಗಳಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಆ ಕಾರಣಕ್ಕೆ ಗ್ರಾಮದ ಕೆಲ ಜನ ಸೇರಿಕೊಂಡು ಮಾನಸಿಕ ಅಸ್ವಸ್ಥನನ್ನು ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಬಳಿಕ ಆತನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ. ಈ ಕುರಿತು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
FILM
15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಸ್ಟಾರ್ ನಟ..! ಜಯಂ ರವಿ ಜೀವನದಲ್ಲಿ ಆಗಿದ್ದೇನು?
ಚೆನ್ನೈ/ಮಂಗಳೂರು: ತಮಿಳು ನಟ ಜಯಂ ರವಿ ಸೆ.9 ರಂದು ಪತ್ನಿ ಆರತಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಷಯದ ಬಗ್ಗೆ ಜಯಂರವಿ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಕಷ್ಟದ ಸಮಯದಲ್ಲಿ ಗೌಪ್ಯತೆ ಕಾಪಾಡಲು ವಿನಂತಿಸಿದ್ದಾರೆ.
“ಬಹಳಷ್ಟು ಯೋಚನೆ, ಚಿಂತನೆ ಮತ್ತು ಚರ್ಚೆಗಳ ನಂತರ ನಾನು ಆರತಿ ಜೊತೆಗಿನ ದಾಂಪತ್ಯವನ್ನು ಅಂತ್ಯಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ತೆಗೆದುಕೊಂಡಿಲ್ಲ. ಇದು ವೈಯಕ್ತಿಕ ಕಾರಣಗಳಿಂದ ತೆಗೆದುಕೊಂಡ ನಿರ್ಧಾರವಾಗಿದೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಹಾಗೂ ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೂ ಯಾವುದೇ ಊಹಾಪೋಹ, ಆರೋಪಗಳನ್ನು ಮಾಡದಂತೆ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ವಿಷಯ ಖಾಸಗಿಯಾಗಿಯೇ ಉಳಿದುಕೊಳ್ಳಲಿ ” ಎಂಬುದಾಗಿ ಬರೆದುಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು. ಜಯಂರವಿ ಕೂಡ ತಮ್ಮ ಇನ್ಸ್ಟಾಗ್ರಾಂನಿಂದ ಆರತಿ ಜೊತೆಗಿದ್ದ ಫೊಟೋಗಳನ್ನು ಡಿಲೀಟ್ ಮಾಡಿದ್ದರು. ಇನ್ನು 2009ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
FILM
15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟ ಜಯಂರವಿ
ಮಂಗಳೂರು/ಚೆನ್ನೈ : ಸಿನಿಮಾ ರಂಗದಲ್ಲಿ ನಟ-ನಟಿಯರ ಮದುವೆಗಳು ಅದ್ದೂರಿಯಾಗಿ ನಡೆಯುವುದು ಸಾಮಾನ್ಯ. ಅವರುಗಳ ಮದುವೆಯ ವೈಭೋಗವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಸರಳವಾಗಿ ಮದುವೆಯಾಗುವವರು ತೀರ ಕಮ್ಮಿ. ಈ ನಡುವೆ ವಿಚ್ಛೇದನಗಳು ಚಿತ್ರರಂಗಕ್ಕೆ ಹೊಸದಲ್ಲ. ಹೊಂದಾಣಿಕೆಯ ಸಮಸ್ಯೆಯಿಂದಲೋ, ಇನ್ಯಾವುದೋ ಕಾರಣಗಳಿಂದಲೋ ವಿಚ್ಛೇದನ ಪಡೆದು, ನಟ-ನಟಿಯರು ಅಭಿಮಾನಿಗಳಿಗೆ ಶಾಕ್ ಕೊಡುತ್ತಾರೆ.
ಇದೀಗ ಮತ್ತೊಂದು ಶಾಕ್ ಆಗಿದೆ. ತಮಿಳಿನ ಖ್ಯಾತ ನಟ ಜಯಂ ರವಿ ಅವರು ಡಿವೋರ್ಸ್ ಪಡೆದುಕೊಂಡಿದ್ದಾರೆ. ಪತ್ನಿ ಆರತಿ ಜೊತೆಗಿನ ವೈವಾಹಿಕ ಬಂಧವನ್ನು ಕೊನೆಗೊಳಿಸಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್ :
15 ವರ್ಷಗಳ ಹಿಂದೆ ಅಂದರೆ 2009ರಲ್ಲಿ ಜಯಂ ರವಿ ಮತ್ತು ಆರತಿ ಅವರು ಮದುವೆ ಆಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ರವಿ ಮತ್ತು ಆರತಿ ಅವರು ಅಂತ್ಯ ಹಾಡಿದ್ದು, ಅವರ ಅಭಿಮಾನಿಗಳಿಗೆ ಆಶ್ಚರ್ಯ ಉಂಟು ಮಾಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಜಯಂ ರವಿ ಮಾಹಿತಿ ನೀಡಿದ್ದಾರೆ.
‘ಹಲವು ಅಧ್ಯಾಯಗಳನ್ನು ಹೊಂದಿದ ಪಯಣವೇ ಜೀವನ. ಎಲ್ಲ ಅಧ್ಯಾಯಕ್ಕೂ ಅದರದ್ದೇ ಆದ ಅವಕಾಶ ಮತ್ತು ಸವಾಲುಗಳು ಇವೆ. ನೀವು ನನ್ನ ತೆರೆ ಮೇಲಿನ ಮತ್ತು ತೆರೆ ಹಿಂದಿನ ಜೀವನವನ್ನು ಗಮನಿಸುತ್ತಾ ಬಂದಿದ್ದೀರಿ. ನಾನು ಯಾವಾಗಲೂ ಅಭಿಮಾನಿಗಳು ಮತ್ತು ಮಾಧ್ಯಮದವರ ಜೊತೆ ಪಾರದರ್ಶಕವಾಗಿ ನಡೆದುಕೊಳ್ಳಲು ಪ್ರಯತ್ನಿಸಿದ್ದೇನೆ. ಇಂದು ನಾನು ಭಾರವಾದ ಮನಸ್ಸಿನಿಂದ ವೈಯಕ್ತಿಕ ಜೀವನದ ಈ ವಿಷಯ ತಿಳಿಸುತ್ತಿದ್ದೇನೆ’
‘ಸಾಕಷ್ಟು ಯೋಚಿಸಿದ ಬಳಿಕ ಆರತಿ ಜೊತೆ ವಿಚ್ಛೇದನ ಪಡೆಯಲು ನಿರ್ಧರಿಸಿದೆ. ಇದು ಅವಸರದಲ್ಲಿ ತೆಗೆದುಕೊಂಡ ನಿರ್ಧಾರ ಅಲ್ಲ. ಎಲ್ಲರ ಒಳಿತಿಗಾಗಿ ಈ ನಿರ್ಧಾರ. ಈ ಕಷ್ಟದ ಸಂದರ್ಭದಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಖಾಸಗಿತನವನ್ನು ಗೌರವಿಸಬೇಕು ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಯಾವುದೇ ಗಾಸಿಪ್, ವದಂತಿ, ಊಹಾಪೋಹ, ಆರೋಪ ಮಾಡಬೇಡಿ. ಇದು ಖಾಸಗಿಯಾಗಿಯೇ ಇರಲಿ’ ಎಂದು ಜಯಂ ರವಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಗಡಿನಾಡು ಹೊಸೂರಿನಲ್ಲಿ ಗಣೇಶನಿಗೆ ಹೈಕೋರ್ಟ್ ಮಂಟಪ, ಗಣಪನೇ ಜಡ್ಜ್
‘ಅಭಿಮಾನಿಗಳಿಗೆ ಮನರಂಜನೆ ನೀಡುವುದೇ ನನ್ನ ಮೊದಲ ಆದ್ಯತೆ ಆಗಿರುತ್ತದೆ. ನಾನು ಎಂದೆಂದಿಗೂ ನಿಮ್ಮ ಜಯಂ ರವಿ ಆಗಿರುತ್ತೇನೆ. ನಿಮ್ಮ ಬೆಂಬಲವೇ ನನಗೆ ಸರ್ವಸ್ವ. ಈ ಎಲ್ಲ ವರ್ಷಗಳಲ್ಲಿ ನೀವು ನನಗೆ ನೀಡಿದ ಪ್ರೀತಿಗೆ ಚಿರಋಣಿ. ಅರ್ಥ ಮಾಡಿಕೊಂಡು ಬೆಂಬಲ ಮುಂದುವರಿಸಿದ್ದಕ್ಕೆ ಧನ್ಯವಾದಗಳು’ ಎಂದು ಅವರು ಬರೆದುಕೊಂಡಿದ್ದಾರೆ.
LATEST NEWS
ಗಡಿನಾಡು ಹೊಸೂರಿನಲ್ಲಿ ಗಣೇಶನಿಗೆ ಹೈಕೋರ್ಟ್ ಮಂಟಪ, ಗಣಪನೇ ಜಡ್ಜ್
ಕರ್ನಾಟಕದಲ್ಲಿ ಗಣೇಶ ಅಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಂದರವಾದ ಸೆಟ್ಗಳನ್ನು ಹಾಕಿ ಗಣೇಶನನ್ನು ಕೂರಿಸಲಾಗಿದೆ. ಕರ್ನಾಟಕ ಗಡಿಭಾಗ ಹೊಸೂರಿನಲ್ಲಿ ಹೈಕೋರ್ಟ್ ಸೆಟ್ ಹಾಕಿ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ.
ಹೊಸೂರಿನ ಶ್ರೀನಗರದಲ್ಲಿ ಹೈಕೋರ್ಟ್ ಮಾದರಿಯ ಸೆಟ್ ಹಾಕಲಾಗಿದೆ. ಹೈಕೋರ್ಟ್ ಆವರಣದಲ್ಲಿ ಮಹಾತ್ಮ ಗಾಂಧಿ ಮೂರ್ತಿಯನ್ನು ನಿಲ್ಲಿಸಲಾಗಿದೆ. ಮತ್ತು ಪ್ಲೇವುಡ್ನಿಂದ ತಯಾರಿಸಿದ ಪೊಲೀಸ್ ಜೀಪ್ನನ್ನು ಪಾರ್ಕ್ ಮಾಡಲಾಗಿದೆ.
ಹೈಕೋರ್ಟ್ನಲ್ಲಿ ಜಡ್ಜ್, ಗುಮಾಸ್ತ, ಕ್ಲರ್ಕ್, ವಕೀಲರು, ಪೋಲೀಸರು ಎಲ್ಲವೂ ಗಣಪನೇ ಆಗಿದ್ದಾರೆ. ಹೈಕೋರ್ಟ್ ಕಟಕಟೆಯಲ್ಲಿ ಆರೋಪಿಯಾಗಿ ಇಲಿಯನ್ನ ನಿಲ್ಲಿಸಲಾಗಿದೆ. ಶ್ರೀನಗರ ಯುವಕರ ತಂಡ ಒಟ್ಟು 16ಕ್ಕೂ ಹೆಚ್ಚು ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದೆ.
ಬರೊಬ್ಬರಿ ಏಳು ಲಕ್ಷ ರೂಪಾಯಿ ಖರ್ಚು ಮಾಡಿ ಹೈಕೋರ್ಟ್ ಮಾದರಿ ಸೆಟ್ ನಿರ್ಮಾಣ ಮಾಡಲಾಗಿದೆ. ಜಿಗಣಿಯ ಉದಯ್ ಕುಮಾರ್ ತಂಡದಿಂದ ಹೈಕೋರ್ಟ್ ಮಾದರಿ ಸೆಟ್ ನಿರ್ಮಾಣ ಮಾಡಿದೆ. ಇಪ್ಪತ್ತೈದು ದಿನದಲ್ಲಿ ಹೈಕೋರ್ಟ್ ಸೆಟ್ ನಿರ್ಮಾಣ ಮಾಡಲಾಗಿದೆ. ಇದೇ ಶ್ರೀನಗರದಲ್ಲಿ ಕಳೆದ ವರ್ಷ ಪೊಲೀಸ್ ಠಾಣೆ ಸೆಟ್ ಹಾಕಲಾಗಿತ್ತು.
ಹೈಕೋರ್ಟ್ ಮಾದರಿ ಸೆಟ್ ಅನ್ನು ನೋಡಲು ಹೊಸೂರು, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಜನರು ಬರುತ್ತಿದ್ದಾರೆ. ಸೆಟ್ ನಿರ್ಮಾಣ ಮಾಡಿದ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
- LATEST NEWS5 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- DAKSHINA KANNADA4 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM4 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ
- LATEST NEWS7 days ago
ಮೊಸರು ತುಂಬಾ ಹುಳಿಯಾಗಿದೆಯೇ? ಹೀಗೆ ಮಾಡಿದರೆ ತಕ್ಷಣ ಹುಳಿ ಕಡಿಮೆಯಾಗುತ್ತದೆ!