Connect with us

    DAKSHINA KANNADA

    ರಾಜ್ಯ ಸರ್ಕಾರ ವಜಾಕ್ಕೆ ರಾಷ್ಟ್ರಪತಿಗೆ ಮನವಿ : ಬಿ.ವೈ.ವಿಜಯೇಂದ್ರ

    Published

    on

    ಮಂಗಳೂರು : ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಶೂನ್ಯ ಸರ್ಕಾರವಾಗಿದ್ದು, ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಕೇವಲ ಭ್ರಷ್ಟಾಚಾರದಲ್ಲೇ ಮುಳುಗಿರುವ ಸರ್ಕಾರವನ್ನು ವಜಾ ಮಾಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

    ಪರಿಷತ್ ಉಪಚುನಾವಣೆಯ ಹಿನ್ನಲೆಯಲ್ಲಿ ಬಂಟ್ವಾಳದ ಬಂಟರ ಭವನದಲ್ಲಿ ನಡೆದಿದ್ದ ಮತದಾರರ ಸಮಾವೇಶಕ್ಕೆ ಆಗಮಿಸಿದ್ದ ಅವರು ಪತ್ರಿಕಾಗೋಷ್ಟಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.

    ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ದಿ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ಅನುದಾನ ಬಿಡುಗಡೆಯಾಗದೆ ಶಾಸಕರು ಗುದ್ದಲಿ ಪೂಜೆ ಮಾಡಲು ಕೂಡ ಸಾಧ್ಯವಾಗಿಲ್ಲ. ಈ ಬಗ್ಗೆ ಸ್ವತಃ ಕಾಂಗ್ರೆಸ್‌ ಶಾಸಕರೇ ಅನುದಾನ ಸಿಗದೆ ಕ್ಷೇತ್ರಕ್ಕೆ ಹೋಗಲು ಅಸಾಧ್ಯವಾಗಿದೆ ಎಂದು ಆರೋಪ ಮಾಡಿದ್ದಾರೆ.

    ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿ ನಿರತವಾಗಿದ್ದು, ಸ್ವತಃ ಸಿಎಂ ಸಿದ್ಧರಾಮಯ್ಯ ಅವರೇ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತೊಗೆಯುವ ತನಕ ಬಿಜೆಪಿ ನಿರಂತರ ಹೋರಾಟ ಮಾಡಲಿದೆ ಎಂದು ವಿಜಯೇಂದ್ರ ಗುಡುಗಿದ್ದಾರೆ.

    ಇದನ್ನೂ ಓದಿ : ಮದ್ವೆ ಆದ್ಮೇಲೆ ಹೆಣ್ಣು ಮಕ್ಕಳು ಆಕರ್ಷಕವಾಗಿ ಕಾಣುವುದು ಏಕೆ? ಇದೆ ಕಾರಣವಂತೆ

    ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್‌, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ , ಪಕ್ಷದ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.

     

     

    DAKSHINA KANNADA

    WATCH : ಓವರ್ ಟೇಕ್ ಮಾಡಲು ಹೋಗಿ ಬೈಕ್ ಗಳ ನಡುವೆ ಅಪಘಾ*ತ; ಭ*ಯಾನಕ ವೀಡಿಯೋ ವೈರಲ್

    Published

    on

    ಬೆಳ್ತಂಗಡಿ : ಗುರುವಾಯನ ಕೆರೆಯ ಬಳಿ ಇರುವ ಶೆಣೈ ಹೊಟೇಲ್ ಮುಂಭಾಗದಲ್ಲಿ ಎರಡು ಬೈಕ್ ನಡುವೆ ಅಪಘಾ*ತ ಸಂಭವಿಸಿದೆ.  ಓವರ್ ಟೇಕ್ ಮಾಡಲು ಹೋಗಿ ಈ ದುರಂ*ತ ನಡೆದಿದೆ.

    ಘಟನೆಯಲ್ಲಿ ಇಬ್ಬರಿಗೆ ಗಾ*ಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾ*ತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

     

    Continue Reading

    DAKSHINA KANNADA

    ಜಿಲ್ಲೆಗಳಲ್ಲಿ ಬೆಲೆ ಇಳುವರಿ ಕುಸಿತ: ಕರಾವಳಿಗೆ ಹೊರ ರಾಜ್ಯದ ಅಕ್ಕಿ ಅನಿವಾರ್ಯ

    Published

    on

    ಉಡುಪಿ/ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಹವಮಾನದ ಬದಲಾವಣೆಗಳಿಂದಾಗಿ ಉತ್ಪಾದನೆಯ ಮೇಲೆ ಭಾರೀ ಹೊಡೆತ ಬಿದ್ದಿದೆ. ಹೊರ ರಾಜ್ಯದ ಅಕ್ಕಿ ಅನಿವಾರ್ಯವಾಗುವ ಸ್ಥಿತಿ ಉದ್ಭವಿಸಿದೆ. ಇದರಿಂದ ಸ್ಥಳೀಯ ಕುಚ್ಚಲಕ್ಕಿ ದರ ಏರಿಕೆಯೂ ಉಂಟಾಗಬಹುದು ಎಂದು ವರದಿಯಅಗಿದೆ.

     

    2023ರ ಮುಂಗಾರಿನಲ್ಲಿ ಜಿಲ್ಲಾದ್ಯಂತ 38 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಸಕಾಲದಲ್ಲಿ ಮಳೆ ಬಾರದೇ ಇದ್ದುದ್ದರಿಂದ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಪಡೆದಿರಲಿಲ್ಲ. ಈ ವರ್ಷ ಮಳೆ ಚೆನ್ನಾಗಿ ಬಂದಿದ್ದರೂ ಬಿತ್ತನೆ 35 ಸಾವಿರ ಹೆಕ್ಟೇರ್‌ ದಾಟಿರಲಿಲ್ಲ. ಕಳೆದ ವರ್ಷಕ್ಕಿಂತ ಸುಮಾರು 3 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಕಡಿಮೆಯಾಗಿದೆ. ಹಿಂಗಾರಿನಲ್ಲಿ ಕಳೆದ ವರ್ಷ 5000 ಹೆ. ಬಿತ್ತನೆ ಮಾಡಲಾಗಿತ್ತು. ಈ ವರ್ಷ 5179 ಹೆ. ಏರಿಕೆಯಾಗಿದೆ.

     

    ಇಳುವರಿ ಕುಸಿತ :

    ಮುಂಗಾರು ಮತ್ತು ಹಿಂಗಾರು ಸೇರಿಸಿ ಕಳೆದ ವರ್ಷ 43 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ವರ್ಷ ಅದು 40191 ಹೆ. ಇಳಿದಿದೆ. ಕಳೆದ ವರ್ಷ ಮುಂಗಾರಿನಲ್ಲಿ 1.52 ಲಕ್ಷ ಟನ್‌ ಹಾಗೂ ಹಿಂಗಾರಿನಲ್ಲಿ 0.2 ಲಕ್ಷ ಟನ್‌ ಭತ್ತದ ಇಳುವರಿ ಪಡೆಯಲಾಗಿತ್ತು. ಈ ವರ್ಷ ಮುಂಗಾರಿನಲ್ಲಿ 1.40 ಲಕ್ಷ ಟನ್‌ ಹಾಗೂ ಹಿಂಗಾರಿನಲ್ಲಿ 0.21 ಲಕ್ಷ ಮೆಟ್ರಿಕ್‌ ಇಳುವರಿ ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ 1.72 ಲಕ್ಷ ಟನ್‌ ಭತ್ತದ ಉತ್ಪಾದನೆಯಾಗಿತ್ತು. ಈ ಬಾರಿ 1.61 ಲಕ್ಷ ಟನ್‌ಗೆ ಇಳಿಯುವ ಸಾಧ್ಯತೆಯಿದೆ. ಸುಮಾರು 11 ಲಕ್ಷ ಟನ್‌ ಇಳುವರಿ ಕಡಿಮೆಯಾಗಲಿದೆ ಎನ್ನುತ್ತದೆ ಕೃಷಿ ಇಲಾಖೆ ಲೆಕ್ಕಾಚಾರ.

    ಅಕ್ಕಿ ಉತ್ಪಾದನೆ ಇಳಿಕೆ:

    ಭತ್ತದ ಒಟ್ಟು ಉತ್ಪಾದನೆಯ ಸರಿ ಸುಮಾರು ಶೇ.65ರಷ್ಟು ಅಕ್ಕಿಯಾಗಲಿದೆ. ಉಳಿದ ಶೇ.35ರಷ್ಟು ಕಚ್ಚಾ ರೂಪದಲ್ಲಿ ಸಿಗಲಿದ್ದು, ಪಶು ಆಹಾರಕ್ಕೆ ಹೆಚ್ಚು ಬಳಸಲಾಗುತ್ತದೆ. ಕಳೆದ ವರ್ಷದ ಒಟ್ಟು ಭತ್ತದ ಉತ್ಪಾದನೆಯಲ್ಲಿ 0.98 ಲಕ್ಷ ಟನ್‌ ಅಕ್ಕಿ ಲಭ್ಯವಾಗಿತ್ತು. ಈ ವರ್ಷದ ಅಂದಾಜಿನಲ್ಲಿ 91 ಲಕ್ಷ ಟನ್‌ ಅಕ್ಕಿ ದೊರೆಯಲಿದೆ. ಅಂದರೆ ಅಕ್ಕಿ ಉತ್ಪಾದನೆಯಲ್ಲೂ ಸರಿ ಸುಮಾರು 7 ಲಕ್ಷ ಟನ್‌ ಕಡಿಮೆಯಾಗಲಿದೆ.

    Continue Reading

    DAKSHINA KANNADA

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: 2024ನೇ ಸಾಲಿನ ಗೌರವ ಪ್ರಶಸ್ತಿ , ಪುಸ್ತಕ ಪುರಸ್ಕಾರ

    Published

    on

    ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ನೀಡುತ್ತಿದ್ದು, 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನ. 10ರಂದು ಹೊನ್ನಾವರದ ಕಾಸರಕೋಡಿನಲ್ಲಿ ನಡೆಯಲಿದೆ.


    ಮೀನುಗಾರಿಕೆ ಸಚಿವ ಮಂಕಾಳ ಎಸ್‌.ವೈದ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕರಾದ ಸತೀಶ್‌ ಸೈಲ್‌, ದಿನಕರ ಶೆಟ್ಟಿ, ಕಾಸರಕೋಡು ಪಂಚಾಯತ್‌ ಅಧ್ಯಕ್ಷರಾದ ಮಂಕಾಳಿ ಪ್ರಕಾಶ್‌ ಹರಿಜನ್‌ ಭಾಗವಹಿಸಲಿದ್ದಾರೆ.

     

    ಪ್ರಶಸ್ತಿ ಪುರಸ್ಕೃತ ಸಾಧಕರು :

    ಕೊಂಕಣಿ ಸಾಹಿತ್ಯ ವಿಭಾಗ-ಮಾರ್ಸೆಲ್‌ ಎಂ. ಡಿ’ಸೋಜಾ ಮಂಗಳೂರು, ಕಲಾ ವಿಭಾಗ-ಹ್ಯಾರಿ ಫೆರ್ನಾಂಡಿಸ್‌ ಮುಂಬಯಿ, ಜಾನಪದ-ಅಶೋಕ್‌ ದಾಮು ಕಾಸರಕೋಡ ಆಯ್ಕೆಯಾಗಿದ್ದಾರೆ. ಪುಸ್ತಕ ಪುರಸ್ಕಾರಕ್ಕಾಗಿ ಕವನ ವಿಭಾಗ-ಬಂಟ್ವಾಳದ ಮೇರಿ ಸಲೋಮಿ ಡಿ’ಸೋಜಾ ಅವರ “ಅಟ್ವೋ ಸುರ್‌’, ಸಣ್ಣಕತೆ ವಿಭಾಗ-ಫಾ| ರೊಯ್ಸನ್‌ ಫೆರ್ನಾಂಡಿಸ್‌ ಹಿರ್ಗಾನ್‌ ಅವರ “ಪಯ್ಲಿ ಭೆಟ್‌’ ಹಾಗೂ ಭಾಷಾಂತರ ವಿಭಾಗ-ಸ್ಟೀಫನ್‌ ಮಸ್ಕರೇನ್ಹಸ್‌(ಹೇಮಾಚಾರ್ಯ) ಅವರ “ಎಕ್ಲೊ ಎಕ್ಸುರೊ’ ಕೃತಿಗಳು ಆಯ್ಕೆಯಾಗಿವೆ. ಗೌರವ ಪ್ರಶಸ್ತಿ 50,000 ರೂ. ಹಾಗೂ ಪುಸ್ತಕ ಪುರಸ್ಕಾರ 25,000 ರೂ. ನಗದು ಒಳಗೊಂಡಿದೆ.

    Continue Reading

    LATEST NEWS

    Trending