DAKSHINA KANNADA
ಮಂಗಳೂರು NMPA ಗೆ ಆಗಮಿಸಿತು ಮತ್ತೊಂದು ಬೃಹತ್ ಪ್ರಯಾಣಿಕ ಹಡಗು ‘ಎಂ ಎಸ್ ನಾಟಿಕಾ’..!
ಕರಾವಳಿ ಬಂದರು ನಗರಿ ಮಂಗಳೂರು ವಿದೇಶಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದು ಪಸಕ್ತ ಋತುವಿನ ಐದನೇ ಪ್ರಯಾಣಿಕರ ಹಡಗು ‘ಎಂಎಸ್ ನಾಟಿಕಾ’ ನವ ಮಂಗಳೂರು ಬಂದರಿಗೆ ಆಗಮಿಸಿತು.
ಮಂಗಳೂರು: ಕರಾವಳಿ ಬಂದರು ನಗರಿ ಮಂಗಳೂರು ವಿದೇಶಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದು ಪಸಕ್ತ ಋತುವಿನ ಐದನೇ ಪ್ರಯಾಣಿಕರ ಹಡಗು ‘ಎಂಎಸ್ ನಾಟಿಕಾ’ ನವ ಮಂಗಳೂರು ಬಂದರಿಗೆ ಆಗಮಿಸಿತು.
550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನು ಒಳಗೊಂಡ ಹಡಗನ್ನು ನವಮಂಗಳೂರು ಬಂದರು ಪ್ರಾಧಿಕಾರದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಬರಮಾಡಿಕೊಂಡರು.
ಈ ಹಡಗಿನ ಒಟ್ಟು ಉದ್ದ 180.5 ಮೀಟರ್. ಇದು 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಈ ಹಡಗು ಮಸ್ಕತ್‌ನಿಂದ ಮಾಲೆ (ಮಾಲ್ಡಿವ್ಸ್) ಮೂಲಕ ಭಾರತಕ್ಕೆ ಆಗಮಿಸಿದೆ.
ಈ ಹಡಗು ಹಿಂದೆ ಮುಂಬೈ ಹಾಗೂ ಮುರ್ಮುಗೋವಾ ಬಂದರಿನಲ್ಲಿ ನಿಂತಿತ್ತು.
ಈ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಯಕ್ಷಗಾನ ಹಾಗೂ ಚೆಂಡೆಯಂತಹ ಸಾಂಪ್ರದಾಯಿಕ ಕಲೆಗಳ ಮೂಲಕ ಸ್ವಾಗತಿಸಲಾಯಿತು.
ಪ್ರಯಾಣಿಕರು 2 ಸೆಟಲ್ ಬಸ್‌ಗಳು ಸೇರಿದಂತೆ 15 ಬಸ್‌ಗಳಲ್ಲಿ ಮಂಗಳೂರಿನ ವಿವಿಧ ಪ್ರವಾಸಿ ಸ್ಥಳ, ದೇವಾಲಯ, ಚರ್ಚ್, ಸ್ಥಳೀಯ ಮಾರುಕಟ್ಟೆ ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿದರು.
DAKSHINA KANNADA
Sullia: ನದಿಗೆ ಸ್ನಾನಕ್ಕೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ..!
ಸುಳ್ಯ: ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂದು ಗುರುತಿಸಲಾಗಿದೆ.
ಸುಳ್ಯದಲ್ಲಿರುವ ಆರಂಬೂರು ಸೇತುವೆ ಬಳಿಯ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿಯು ಕಾಣೆಯಾಗಿದ್ದಾರೆ. ಬಳಿಕ ಅವರ ಹುಡುಕಾಟ ನಡೆಸಲಾಗಿದೆ. ಆದರೆ ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಆ ಕಾರಣದಿಂದ ಸುಳ್ಯದ ಪೈಚಾರ್ ನ ಮುಳುಗು ತಜ್ಞರ ತಂಡವು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೇಳಕ್ಕೆತ್ತುವಲ್ಲಿ ಯಶಸ್ವಿಯಾಗಿದೆ. ಸುಳ್ಯ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ
DAKSHINA KANNADA
Sullia: ಮದ್ಯ ಸೇವಿಸಿ ಅಡ್ಡಾದಿಡ್ಡಿ ವಾಹನ ಚಲಾವಣೆ- ಎಪಿಎಂಸಿ ಕಾರ್ಯದರ್ಶಿ ಅಮಾನತು
ಸುಳ್ಯ: ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸರಕಾರಿ ವಾಹನ ಚಲಾಯಿಸಿದ ಪ್ರಕರಣದ ಆರೋಪಿ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್‌ನನ್ನು ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.
ನವೀನ್ ಕುಮಾರ್ ಮಂಗಳವಾರ ರಾತ್ರಿ ಅರಂಬೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸರಕಾರಿ ಇಲಾಖೆಯ ನಾಮಫಲಕವಿರುವ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸಿದ್ದನೆಂದು ಆರೋಪಿಸಲಾಗಿದೆ. ಅಡ್ಡಾದಿಡ್ಡಿಯಾಗಿ ವಾಹನ ಚಲಾಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನವನ್ನು ಬೆನ್ನಟ್ಟಿ ಅಡ್ಡಗಟ್ಟಿ ವಿಚಾರಿಸಿದ್ದರು. ಈ ಸಂದರ್ಭ ತಾನು ಸುಳ್ಯ ಎಪಿಎಂಸಿ ಕಾರ್ಯದರ್ಶಿ, ನನ್ನದು ತಪ್ಪಾಯಿತು ಎಂದು ಕ್ಷಮೆ ಯಾಚಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಎಪಿಎಂಸಿ ಕಾರ್ಯದರ್ಶಿಯವರನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ. ಬೆಳ್ತಂಗಡಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಅವರಿಗೆ ಸುಳ್ಯ ಎಪಿಎಂಸಿ ಪ್ರಭಾರ ವಹಿಸಲಾಗಿದೆ.
DAKSHINA KANNADA
ಕಟೀಲು ಕ್ಷೇತ್ರಕ್ಕೆ ಮಾಜಿ ಸಚಿವ, ಶಾಸಕ ಶ್ರೀರಾಮುಲು ಭೇಟಿ
ಕಿನ್ನಿಗೋಳಿ: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಾಜಿ ಸಚಿವ, ಶಾಸಕ ಶ್ರೀರಾಮುಲು ಭೇಟಿ ನೀಡಿದರು.
ದೇವಳದ ವತಿಯಿಂದ ಶ್ರೀ ರಾಮುಲು ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ವೆಂಕಟರಮಣ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಅವರು ಅನ್ನಪ್ರಸಾದವನ್ನು ಸ್ವೀಕರಿಸಿ ಸರಳತೆ ಮೆರೆದರು. ಬಳಿಕ ಕ್ಷೇತ್ರದ ಕುರಿತಂತೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.
- bangalore4 days ago
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಯಾದ ಈ ಸ್ಪರ್ಧಿಗಳು ಯಾರು..?
- FILM3 days ago
ಆಲಿಯಾ ಭಟ್ ಡೀಫ್ ಫೇಕ್ ವಿಡಿಯೋ ವೈರಲ್ – ವಿಡಿಯೋ ನೋಡಿದ್ರಾ..?
- bangalore6 days ago
ಬೆಂಗಳೂರು ಕಂಬಳಕ್ಕೆ ಚಾಲನೆ ನೀಡಿದ ಅಶ್ವಿನಿ ಪುನಿತ್ ರಾಜ್ ಕುಮಾರ್
- DAKSHINA KANNADA6 days ago
Puttur: ಮಹಿಳೆಗೆ ಅಮಲು ಬರಿಸುವ ಪಾನೀಯ ಕುಡಿಸಿ ಅತ್ಯಾಚಾರ..!