ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಐಎಸ್‌ಐ, ಉಗ್ರರು ಮತ್ತು ಮೂಲಭೂತವಾದಿಗಳಿಂದ ಬೆದರಿಕೆಗಳು ಬಂದಿದ್ದು ಭದ್ರತೆ ಹೆಚ್ಚಿಸಲಾಗಿದೆ.
ಭಾಗಲ್ಪುರ : ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಐಎಸ್‌ಐ, ಉಗ್ರರು ಮತ್ತು ಮೂಲಭೂತವಾದಿಗಳಿಂದ ಬೆದರಿಕೆಗಳು ಬಂದಿದ್ದು ಭದ್ರತೆ ಹೆಚ್ಚಿಸಲಾಗಿದೆ.
ಜಿಲ್ಲಾಡಳಿತದಿಂದ ಜಿಲ್ಲೆಯ ಪೊಲೀಸರನ್ನು ಅಲರ್ಟ್ ಮಾಡಲಾಗಿದೆ.
ಭಾಗವತ್ ಅವರ ಭೇಟಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎಸ್ಎಸ್ಪಿ ಆನಂದ್ ಕುಮಾರ್ ಮತ್ತು ಉಪವಿಭಾಗಾಧಿಕಾರಿ ಧನಂಜಯ್ ಕುಮಾರ್ ಅವರು ಅಲರ್ಟ್ ಆಗಿದ್ದು, ಮಹಾಸಭಾದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಅದೇ ಸಮಯದಲ್ಲಿ, ಮೋಹನ್ ಭಾಗವತ್ ಭೇಟಿ ನೀಡಲಿರುವ ಮಹರ್ಷಿಯ ಗುಹೆಯನ್ನು ಸಹ ಎಸ್‌ಎಸ್ಪಿ ಪರಿಶೀಲಿಸಿದ್ದಾರೆ.
ನಾವು ಅಲರ್ಟ್ ಆಗಿದ್ದೇವೆ, ಎಸ್ಎಸ್ಪಿ ಕೂಡ ಪರಿಶೀಲನೆ ನಡೆಸಿದ್ದಾರೆ.
ಭದ್ರತೆಗೆ ಸಂಬಂಧಿ ಸಿದಂತೆ, ವಿವಿಧ ಸ್ಥಳಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಸ್ಥಳ ಗಳಲ್ಲಿ ಪಡೆಗಳ ನಿಯೋಜನೆ ಇರುತ್ತದೆ.
ಸಮಿತಿಯೊಂದಿಗೆ ನಿರಂತರ ಸಂವಾದ ನಡೆಯುತ್ತಿದೆ. ಸಿಸಿಟಿವಿ ಕಣ್ಗಾವಲು ಇರುತ್ತದೆ, ಜೊತೆಗೆ ಪೊಲೀಸ್ ಪಡೆಗಳನ್ನು ಸಿವಿಲ್ ಡ್ರೆಸ್ ನಲ್ಲಿ ನಿಯೋಜಿಸಲಾಗುವುದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.