Connect with us

LATEST NEWS

ಅ.10ರಿಂದ ಪಚ್ಚನಾಡಿ ರಸ್ತೆ ಸಂಚಾರದಲ್ಲಿ ಬದಲಾವಣೆ

Published

on

ಮಂಗಳೂರು: ಕುಲಶೇಖರ ಸಮೀಪದ ಪಚ್ಚನಾಡಿ ಯಲ್ಲಿ ರೈಲ್ವೇ ರಸ್ತೆ ಮೇಲ್ಸೇತುವೆ (ಆರ್‌ಒಬಿ) ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ

ಅ.10ರಿಂದ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಿ ಸದರ್ನ್ ರೈಲ್ವೇ ಸೂಚನೆ ನೀಡಿದೆ.

ಲಘು ಚತುಷ್ಕಕ್ರದ ವಾಹನಗಳು ಪಚ್ಚನಾಡಿಯಿಂದ ಪಿಡಬ್ಲ್ಯುಡಿ ರಸ್ತೆಯಲ್ಲಿ ಮತ್ತು ಬಸ್, ಟ್ರಕ್ ಇತ್ಯಾದಿ ಭಾರಿ ವಾಹನಗಳು ಬೋಂದೆಲ್‌ನಿಂದ ಕುಲಶೇಖರ ಮೂಲಕ ವಾಮಂಜೂರು ತಲುಪಬೇಕು ಎಂದು ಪ್ರಕಟಣೆ ತಿಳಿಸಿದೆ.

FILM

ಶೈನ್‌ ಶೆಟ್ಟಿ, ಅಂಕಿತಾ ಜಸ್ಟ್ ಮ್ಯಾರೀಡ್..!! ಅಭಿಮಾನಿಗಳಿಗೆ ಖುಷಿ

Published

on

ಬೆಂಗಳೂರು: ಬಿಗ್‌ಬಾಸ್ ಖ್ಯಾತಿ ಶೈನ್ ಶೆಟ್ಟಿ ಹಾಗೂ ಕಿರುತೆರೆ ನಟಿ ಅಂಕಿತಾ ಅಮರ್‌ ಜೊತೆಯಾಗಿ ನಟಿಸಿರುವ ಜಸ್ಟ್ ಮ್ಯಾರೇಜ್‌ ಬಿಗ್‌ಸ್ಕ್ರೀನ್‌ಗೆ ಎಂಟ್ರಿಯಾಗಲು ಸಿದ್ಧವಾಗಿದೆ. ಇಲ್ಲಿವರೆಗೂ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಅಜನೀಶ್ ಲೋಕನಾಥ್‌ ರವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನೆಮಾ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

Just married

ಬಿಗ್‌ಬಾಸ್ ಖ್ಯಾತಿಯ ಕರಾವಳಿ ಹುಡುಗ ಶೈನ್‌ ಶೆಟ್ಟಿ ಹಾಗೂ ಕಿರುತೆರೆ ನಟಿ ಅಂಕಿತಾ ಅಮರ್‌ ಇವರಿಬ್ಬರ ಜೋಡಿಯನ್ನು ತೆರೆ ಮೇಲೆ ಕಾಣಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಸಿ ಆರ್ ಬಾಬಿ ಅವರು ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲೂ ಸಂಗೀತದಿಂದ ಮೋಡಿ ಮಾಡಿದ್ದ ಅಜನೀಶ್ ರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಿಂದ ಜನರು ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸಿನೆಮಾ ತಂಡ ಕಂಪ್ಲೀಟ್ ಶೂಟಿಂಗ್‌ ಮುಗಿಸಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ತೆರೆಗೆ ಸಿದ್ಧಗೊಂಡ ಸಿನೆಮಾ..

ಜಸ್ಟ್ ಮ್ಯಾರೀಡ್’ ಸಿನಿಮಾಗೆ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ. ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬಿರುಸಿನಿಂದ ಸಾಗಿದ್ದು,  ಸಿ.ಆರ್.ಬಾಬಿ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಅಜನೀಶ್​ಗೆ ಸಾಥ್ ನೀಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದ ಸಿ.ಆರ್. ಬಾಬಿ ಅವರು ತನ್ನ ಚೊಚ್ಚಲ ನಿರ್ದೇಶನದ ಮೂಲಕ ಅಜನೀಶ್ ರವರಿಗೆ ಸಾಥ್ ನೀಡಿದ್ದಾರೆ.

ಸಿನೆಮಾದಲ್ಲಿದೆ ಸೂಪರ್ ಹಿಟ್ ಹಾಡುಗಳು:

ಈ ಸಿನೆಮಾದಲ್ಲಿ ಅಜನೀಶ್ ಲೋಕನಾಥ್‌ರವರ ಆರು ಸುಮಧುರ ಹಾಡುಗಳಿವೆ. ಈಗಾಗಲೇ ಅವುಗಳ ಪೈಕಿ ‘ಅಭಿಮಾನಿಯಾಗಿ ಹೋದೆ..’ ಗೀತೆ ಇತ್ತೀಚಿಗೆ ರಿಲೀಸ್​ ಆಗಿ ಮೆಚ್ಚುಗೆ ಪಡೆದಿದೆ. ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿಗೂಡಿಸಿದ್ದಾರೆ.

Read More..; ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!

ಚಿತ್ರದಲ್ಲಿದೆ ದೊಡ್ಡ ತಾರಾಗಣ:

ಈ ಚಿತ್ರದಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಅಚ್ಯುತ್​ ಕುಮಾರ್, ದೇವರಾಜ್, ಅನೂಪ್ ಭಂಡಾರಿ, ಮಾಳವಿಕಾ ಅವಿನಾಶ್, ಶ್ರುತಿ ಹರಿಹರನ್, ಸಾಕ್ಷಿ ಅಗರವಾಲ್, ಶ್ರುತಿ ಕೃಷ್ಣ, ರವಿಶಂಕರ್ ಗೌಡ, ಶ್ರೀಮಾನ್, ರವಿ ಭಟ್, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ಕುಮುದಾ, ವೇದಿಕಾ ಕಾರ್ಕಳ, ಜಯರಾಮ್ ಮುಂತಾದ ನಟಿಸಿದ್ದು ದೊಡ್ಡ ತಾರಾಗಣವೆ ಇದೆ.  ಸಿ.ಆರ್. ಬಾಬಿ ಕಥೆ ಬರೆದಿದ್ದಯ,  ಧನಂಜಯ್ ರಂಜನ್ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದ ಸಂಭಾಷಣೆ ರಘು ನಿಡುವಳ್ಳಿ , ಪಿ.ಜಿ. ಛಾಯಾಗ್ರಹಣ, ಶ್ರೀಕಾಂತ್ ಹಾಗೂ ಅಶಿಕ್ ಕುಸುಗೊಳ್ಳಿ ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ. ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

 

Continue Reading

LATEST NEWS

ಮುಸ್ಲಿಂ ಬಾಲಕನಿಂದ ಬದಲಾಯ್ತು ದೇವಸ್ಥಾನದ ಹೆಸರು…!

Published

on

ಮಂಗಳೂರು ( ಕೇರಳ ): ಮಂಚ್ ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲಿ ಹೇಳಿ. ಸಣ್ಣ ಮಕ್ಕಳಿಗಂತೂ ಈ ಚಾಕೊಲೇಟ್ ಅಚ್ಚುಮೆಚ್ಚು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಹಾಗೂ ಗೋವಾದ ನೆಸ್ಲೆ ಫ್ಯಾಕ್ಟರಿಯಲ್ಲಿ ಈ ಮಂಚ್ ತಯಾರಾಗುತ್ತದೆ. ಬಿಸ್ಕೆಟ್‌ಗಳಿಂದ ಕೂಡಿದ ಅದರ ಮೇಲ್ಭಾಗದಲ್ಲಿ ಚಾಕೋ ಕ್ರೀಮ್ ಇರುವ ಮಂಚ್ ತಿನ್ನಲು ಎಲ್ಲರೂ ಇಷ್ಟ ಪಡ್ತಾರೆ. ಇಂತಹ ಮಂಚ್‌ ಚಾಕಲೋಟ್‌ ಈಗ ದೇವರಿಗೆ ನೈವೇದ್ಯವಾಗುತ್ತಿದೆ.

ಹೌದು ಭಾರತದಲ್ಲಿ ದೇವಾಲಯಗಳ ವಿಶೇಷತೆ ಹಾಗೂ ಮಹಿಮೆಯ ಬಗ್ಗೆ ಜನರಿಗೆ ಹೆಚ್ಚಾಗಿ ಹೇಳಬೇಕಿಲ್ಲ. ದೇವರ ನಂಬಿ ವಿವಿಧ ಹರಕೆಗಳನ್ನು ಕಟ್ಟಿಕೊಳ್ಳುವ ಜನರು ಸಹ ಬಹಳಷ್ಟಿದ್ದಾರೆ. ಸಾಮಾನ್ಯವಾಗಿ ನಾವು ದೇವರಿಗೆ ಸಿಹಿ ಪದಾರ್ಥ, ಹೂವು, ಹಣ್ಣು ಈ ರೀತಿ ಪದಾರ್ಥಗಳನ್ನು ನೈವೇದ್ಯ ಮಾಡುತ್ತೇವೆ. ಆದರೆ ದೇವರಿಗೆ ಮಂಚ್ ಚಾಕೊಲೇಟ್ ಹರಕೆ ನೀಡುವ ದೇವಲಾಯದ ಬಗ್ಗೆ ನಿಮಗೆ ಗೊತ್ತಾ? ಹೌದು, ಅದೊಂದು ದೇವಸ್ಥಾನದಲ್ಲಿ ಮಂಚ್ ಚಾಕೊಲೇಟ್  ಹರಕೆಯ ರೂಪದಲ್ಲಿ ದೇವರಿಗೆ ಸಮರ್ಪಣೆಯಾಗುತ್ತದೆ. ಯಾವುದು ಈ ದೇವಸ್ಥಾನ ಎನ್ನುವುದರ ಬಗ್ಗೆ ತಿಳಿಯೋಣ.

ಕೇರಳದ ದೇವಾಲಯ ಇದು

ಕೇರಳದ ಒಂದು ಸಣ್ಣ ಮೂಲೆಯಲ್ಲಿರುವ ಈ ದೇವಸ್ಥಾನ ಆಧುನಿಕತೆಯ ಮತ್ತೊಂದು ರೂಪ ಎನ್ನಬಹುದು. ಸಾಮಾನ್ಯವಾಗಿ ಅಯ್ಯಪ್ಪನಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡು ಹೀಗೆ ಅರ್ಪಣೆ ಮಾಡುತ್ತೇವೆ. ಆದರೆ ಅಲಪ್ಪುಳದ ಬಾಲಮುರುಗನ್ ದೇವರಿಗೆ ಮಂಚ್ ಚಾಕೋಲೇಟ್ ಅಂದ್ರೆ ಇಷ್ಟವಂತೆ. ಕಳೆದ ಆರು ವರ್ಷಗಳಿಂದ ಇಲ್ಲಿ ಬಾಲಮುರಗ ದೇವರಿಗೆ ಬಹುತೇಕ ಎಲ್ಲಾ ಸೇವೆಗಳು ಮಂಚ್‌ ಚಾಕೋಲೇಟ್‌ನಿಂದಲೇ ನಡೆಯುತ್ತದೆ.  ಹೀಗಾಗಿ ಹಿಂದೆ ಬಾಲಮುರುಗ ಅಂತ ಹೆಸರಿದ್ದ ಈ ದೇವಸ್ಥಾನ ಈಗ ಮಂಚ್ ಮುರುಗನ್ ದೇವಸ್ಥಾನ ಎಂದೇ ಫೇಮಸ್ ಆಗಿದೆ.

ವಿಶೇಷವಾಗಿ ಬಾಲಮುರುಗ ದೇವಸ್ಥಾನ ಅಂದ್ರೆ ಮಕ್ಕಳಿಗೆ ಬಹಳ ಇಷ್ಟವಾದ ದೇವಸ್ಥಾನವಾಗಿದೆ. ಪರೀಕ್ಷೆಯ ಸಮಯದಲ್ಲಿ ಮಕ್ಕಳು ಹೆಚ್ಚಾಗಿ ಈ ದೇವಾಲಯಕ್ಕೆ ಬಂದು ದೇವರಿಗೆ ಒಂದು ಮಂಚ್ ಕೊಟ್ಟು ಪರೀಕ್ಷೆ ಸುಲಭ ಇರಲಿ ಎಂದು ಪ್ರೀತಿಯಿಂದ ಬೇಡುತ್ತಾರೆ. ಹೀಗೆ ಮಕ್ಕಳು ಇಲ್ಲಿ ಹೆಚ್ಚಾಗಿ ಬರಲು, ದೇವರಿಗೆ ಮಂಚ್ ಚಾಕೋಲೇಟ್ ಹರಕೆ ನೀಡಲೂ ಒಂದು ಕಾರಣ ಇದೆ. ಹಿಂದೆ ಸಾಮಾನ್ಯ ಎಲ್ಲಾ ದೇವಾಲಯದಂತೆ ಇಲ್ಲೂ ಬೇರೆಯೇ ಹರಕೆ ಸೇವೆ ನಡೆಯುತ್ತಿದ್ದರೂ ಅದೊಂದು ಕಾರಣದಿಂದ ಇತ್ತೀಚಿನ ವರ್ಷದಲ್ಲಿ ಇದು ಮಂಚ್‌ ಸೇವೆಗೆ ಬದಲಾಗಿದೆ.

ಏನಿದು ಮಂಚ್ ಮುರುಗನ್ ಕಥೆ?

ಸುಮಾರು 6 ವರ್ಷಗಳ ಹಿಂದೆ ಆಟವಾಡುತ್ತಿದ್ದ ಒಬ್ಬ ಪುಟ್ಟ ಮುಸ್ಲಿಂ ಬಾಲಕ ಈ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ್ದ ಎಂಬ ಕಾರಣಕ್ಕೆ ಪೋಷಕರು ಆತನಿಗೆ ಹೆದರಿಸಿದ್ದರಂತೆ. ಆದರೆ ಆ ರಾತ್ರಿಯೇ ಬಾಲಕನ ಆರೋಗ್ಯ ಹದಗೆಡುತ್ತದೆ. ಕನಸಿನಲ್ಲಿ ಸಹ ಆ ಬಾಲಕ ಮುರುಗನ್ ಹೆಸರು ಕನವರಿಸುತ್ತಿದ್ದ. ಹಾಗಾಗಿ ಪೋಷಕರು ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ. ಆಗ ಅಲ್ಲಿನ ಅರ್ಚಕರು ಇವರ ಕಥೆ ಕೇಳಿ ದೇವರಿಗೆ ಏನಾದರೂ ನೈವೇದ್ಯ ಮಾಡಿ ಎನ್ನುತ್ತಾರೆ. ಆ ಬಾಲಕ ತನ್ನ ಕೈಯಲ್ಲಿದ್ದ ಮಂಚ್ ಚಾಕೊಲೇಟ್ ಅರ್ಪಣೆ ಮಾಡುವುದಾಗಿ ಹಠ ಮಾಡುತ್ತಾರೆ. ಅವನ ಆಸೆಯಂತೆ ಮಂಚ್ ಅರ್ಪಣೆ ಮಾಡಿದ ಕೆಲವೇ ಸಮಯದಲ್ಲಿ ಆ ಬಾಲಕನ ಆರೋಗ್ಯ ಸುಧಾರಿಸುತ್ತದೆ. ಈ ಸುದ್ದಿ ಗಾಳಿಯಂತೆ ಇಡೀ ಊರಿಗೆ ಹರಡುತ್ತದೆ. ಈ ಘಟನೆಯ ನಂತರ ಈ ದೇವರಿಗೆ ಮಂಚ್ ಮುರುಗನ್ ಎಂದು ಕರೆಯಲು ಆರಂಭಿಸುತ್ತಾರೆ.

ಭಕ್ತರಿಗೂ ಮಂಚ್ ಪ್ರಸಾದ

ಈ ದೇವಾಲಯದ ವಾರ್ಷಿಕ ಜಾತ್ರೆಯಂದು ಕೇರಳದ ವಿವಿಧ ಭಾಗಗಳಿಂದ ಭಕ್ತರು ಮಂಚ್ ಚಾಕೊಲೇಟ್‌ಗಳನ್ನು ಬಾಕ್ಸ್ ಬಾಕ್ಸ್‌ನಲ್ಲಿ ತಂದು ದೇವರಿಗೆ ಸಮರ್ಪಿಸುತ್ತಾರೆ. ಅದೇ ಮಂಚನ್ನು ದೇವರಿಗೆ ನೈವೇದ್ಯ ರೂಪಲ್ಲಿ ಇಟ್ಟು ಬಳಿಕ ಅದನ್ನು ಪ್ರಸಾದದ ರೂಪವಾಗಿ ಜನರಿಗೆ ನೀಡಲಾಗುತ್ತದೆ. ಒಟ್ಟಾರೆಯಾಗಿ 300 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವರ ಆಶೀರ್ವಾದವನ್ನು ಪಡೆಯಲು ಜಾತಿ, ಮತ ಮತ್ತು ಧರ್ಮದ ಭೇದವಿಲ್ಲದೆ ಜನರು ಚಾಕೊಲೇಟ್ಗಳ ಬಾಕ್ಸ್ ಹಿಡಿದು ದೇಗುಲಕ್ಕೆ ಬರುತ್ತಾರೆ ಎಂಬುದು ವಿಶೇಷ.

Continue Reading

LATEST NEWS

ಅಂಗಡಿಯಿಂದ ಕಬಾಬ್‌ ಕದ್ದು ತಿಂದು ಸಿಕ್ಕಿಬಿದ್ದ ಪಾಕಿಸ್ತಾನಿ ಯುವತಿ..! ವೀಡಿಯೋ ವೈರಲ್

Published

on

ನಾವೆಲ್ಲರೂ ಚಿನ್ನ, ಹಣ ಹೀಗೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡೋರನ್ನ ನೋಡಿದ್ದೇವೆ.. ಕೇಳಿದ್ದೇವೆ. ಆದ್ರೆ ಇಲ್ಲೊಂದು ಯುವತಿ ಅಂಗಡಿಯಿಂದ ಕಬಾಬ್ ಕದ್ದು ಮಾಲಕನ ಕೈಗೆ ಸಿಕ್ಕಿಬಿದ್ದ ಘಟನೆ ಲಂಡನ್‌ನಲ್ಲಿ ನಡದಿದೆ. ಪಾಕಿಸ್ತಾನದ ಯುವತಿಯೊಬ್ಬಳು ಅಂಗಡಿಯೊಳಗೆ ಹೋಗಿ ಕಬಾಬ್‌ ತಿಂದು ಇನ್ನೊಂದು ಅಂಗಡಿಗೆ ನುಗ್ಗಿದ್ದಾಳೆ. ಅನುಮಾನಕೊಂಡ ಅಂಗಡಿ ಮಾಲೀಕ ಆಕೆಯನ್ನು ಅಂಗಡಿ ಒಳಗಡೆ ಕೂಡಿ ಹಾಕಿದ್ದಾನೆ. ಇದೀಗ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

pakisthani lady

ಅಂಗಡಿಯಿಂದ ಕಬಾಬ್‌ ಕದ್ದಿರುವ ಪಾಕಿಸ್ತಾನ ಮೂಲದ ಯುವತಿ ಒಳ್ಳೆ ಗೆಟಪ್‌ನಲ್ಲಿ ಡ್ರೆಸ್ಸಿಂಗ್ ಮಾಡಿದ್ದಳು. ಅಂಗಡಿ ಮಾಲೀಕ ಅವಳನ್ನು ಕೂಡಿ ಹಾಕಿದ್ದು, ಇದರಿಂದ ತಪ್ಪಿಸಲು ಯುವತಿ ಹರಸಾಹಸ ಪಡುತ್ತಿರುವುದು ವೀಡಿಯೋದಲ್ಲಿ ಕಾಣಬಹುದು.

Read More..; ಪ್ರಾಣ ಸಂಕಟದಲ್ಲಿದ್ದ ಹೆಬ್ಬಾವು..! ರಕ್ಷಣೆ ವೇಳೆ ದೇಹದಲ್ಲಿ 11 ಬುಲ್ಲೆಟ್ ಪತ್ತೆ..!

ಈ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು”ಲಂಡನ್‌ನಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳು ಕಬಾಬ್‌ ಕದ್ದು ಸಿಕ್ಕಿ ಬಿದ್ದಿದ್ದಾಳೆ” ಎಂದು ಶೀರ್ಷೆಕೆಯಡಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

 

Continue Reading

LATEST NEWS

Trending