Wednesday, December 1, 2021

ಆಫ್ಘಾನಿಸ್ತಾನದಲ್ಲಿ ಸಿನಿಮಾ ಚಿತ್ರೀಕರಣದ ದಿನಗಳನ್ನ ನೆನಪಿಸಿಕೊಂಡ ಅಮಿತಾಭ್‌ ಬಚ್ಚನ್‌..!

ಮುಂಬೈ : ಬಾಲಿವುಡ್ ಚಲನಚಿತ್ರಗಳಿಗೆ ಜಗತಿನಾದ್ಯಂತ ಪ್ರೇಕ್ಷಕರಿದ್ದು, ಅನೇಕ ಚಿತ್ರಗಳು ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿಯೇ ಚಿತ್ರೀಕರಣ ಮಾಡುವುದು ತುಂಬಾ ಹಳೆಯ ವಾಡಿಕೆಯಾಗಿದೆ.

ಆಫ್ಘಾನಿಸ್ತಾನದಲ್ಲಿಯೂ ಜನರು ಭಾರತದ ಅದರಲ್ಲೂ ಬಾಲಿವುಡ್ ಸಿನೆಮಾಗಳನ್ನು ತುಂಬಾ ಇಷ್ಟಪಡುತ್ತಾರೆ. ಆಫ್ಘಾನಿಸ್ತಾನದ ವಿವಿಧ ಭಾಗಗಳಲ್ಲಿ ಅನೇಕ ಚಲನ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.

ಇಂತಹುದೇ ಸಾಲಿಗೆ ಸೇರಿದೆ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿ ಅಭಿನಯದ ‘ಖುದಾ ಗವಾ’.  ಇಂದು ಆಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ.

ಆದರೂ ಅಲ್ಲಿನ ಜನರು ಅಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಮುಕುಲ್ ಆನಂದ್ ಅವರ ‘ಖುದಾ ಗವಾ’ ಚಿತ್ರವನ್ನು ಆಫ್ಘಾನಿಸ್ತಾನದಲ್ಲಿ ಚಿತ್ರೀಕರಿಸಿದಾಗ ಅಂದಿನ ಸರ್ಕಾರವು ಭದ್ರತಾ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದು, ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ನಜೀಬುಲ್ಲಾ ಅಹ್ಮದ್‌ಝಾಹಿ ಅವರು ಹಿಂದಿ ಚಲನಚಿತ್ರಗಳ ದೊಡ್ಡ ಅಭಿಮಾನಿಯಾಗಿದ್ದರು.

ಮಾಜಿ ಅಧ್ಯಕ್ಷ ನಜೀಬುಲ್ಲಾ ಅಹ್ಮದ್‌ಝಾಹಿ ಅಮಿತಾಭ್‌ ಬಚ್ಚನ್ ಅವರ ಭದ್ರತೆಗಾಗಿ ತಮ್ಮ ದೇಶದ ಅರ್ಧದಷ್ಟು ವಾಯುಸೇನೆಯನ್ನೇ ನಿಯೋಜಿಸಿದ್ದರಂತೆ. ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಅಮಿತಾಭ್‌ ಆಫ್ಘಾನಿಸ್ತಾನದಲ್ಲಿ ತಮ್ಮ ‘ಖುದಾ ಗವಾ’ ಚಿತ್ರದ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅದು ತನ್ನ ಜೀವನದ ಅತ್ಯಂತ ಸ್ಮರಣೀಯ ಪ್ರವಾಸವಾಗಿತ್ತು ಎಂದು ಅಮಿತಾಭ್‌ ಉಲ್ಲೇಖಿಸಿದ್ದಾರೆ. ಒಂದು ಘಟನೆಯನ್ನು ಹಂಚಿಕೊಳ್ಳುತ್ತಾ, ಒಮ್ಮೆ ಅವರನ್ನು ಡ್ಯಾನಿ ಮತ್ತು ಮುಕುಲ್ ಜೊತೆಗೆ ಒಂದು ಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೊರಟಾಗ ಸುಮಾರು 5 ಹೆಲಿಕಾಪ್ಟರ್‌ಗಳು ತಮ್ಮ ಹೆಲಿಕಾಪ್ಟರ್‌ನೊಟ್ಟಿಗೆ ಹಾರುತ್ತಿದ್ದವು ಮತ್ತು ಇದು ಮರೆಯಲಾಗದ ಕ್ಷಣವಾಗಿತ್ತು ಎಂದು ಅಮಿತಾಭ್‌ ಹೇಳಿದ್ದಾರೆ.

ವೈಮಾನಿಕ ನೋಟ ಅದ್ಭುತವಾಗಿತ್ತು. ಬೆಟ್ಟಗಳು ಕೆಲವೊಮ್ಮೆ ಗುಲಾಬಿ ಮತ್ತು ಕೆಲವೊಮ್ಮೆ ನೇರಳೆ ಬಣ್ಣದಲ್ಲಿ ಕಾಣುತ್ತಿದ್ದು, ಅದನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬಿಗ್ ಬಿ ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ.

ಹೆಲಿಕಾಪ್ಟರ್ ಅನ್ನು ಕಣಿವೆಯಲ್ಲಿ ಇಳಿಸಿದಾಗ, ಸಮಯ ಒಂದು ಕ್ಷಣ ನಿಂತಂತೆ ಭಾಸವಾಯಿತು. ಅಲ್ಲಿನ ಸ್ಥಳೀಯ ಜನರು ಅವರನ್ನು ನೋಡಿದ ತಕ್ಷಣ ಅವರ ಪಾದಗಳನ್ನು ನೆಲಕ್ಕೆ ಸಹ ತಾಕಿಸದೆ ಅವರನ್ನು ತಮ್ಮ ಭುಜದ ಮೇಲೆ ಕೂರಿಸಿಕೊಂಡು ಕರೆದೊಯ್ದರಂತೆ. ಅರಮನೆಯಲ್ಲಿ ಶಾಪಿಂಗ್ ಮಾಡಿದ ನಂತರ ಅವರನ್ನು ಮೈದಾನಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗಾಗಿ ಸಾಂಪ್ರದಾಯಿಕ ಕ್ರೀಡೆಯಾದ ಬುಜ್ಕಾಶಿ ಪಂದ್ಯಾವಳಿ ಆಯೋಜಿಸಲಾಗಿತ್ತು ಎಂದು ಬಚ್ಚನ್ ವಿವರಿಸಿದ್ದಾರೆ.
ತುಂಬಾ ಮೋಜು ಮಸ್ತಿ ಮಾಡಿದ ನಂತರ ನಾವೆಲ್ಲ ಆ ರಾತ್ರಿ ಅಲ್ಲೇ ಉಳಿದುಕೊಂಡೆವು. ಮರುದಿನ ಮನೆಗೆ ಹಿಂತಿರುಗುವಾಗ ಅವರಿಗೆ ಜನರಿಂದ ತುಂಬಾ ಉಡುಗೊರೆಗಳು ಬಂದಿದ್ದವಂತೆ.ಬಚ್ಚನ್ ಕಾಬೂಲ್‌ನಿಂದ ಭಾರತಕ್ಕೆ ಹಿಂತಿರುಗುತ್ತಿದ್ದಾಗ ಅವರನ್ನು ರಾಜಮನೆತನದ ಔತಣಕೂಟಕ್ಕಾಗಿ ಅಧ್ಯಕ್ಷರ ನಿವಾಸಕ್ಕೆ ಆಹ್ವಾನಿಸಲಾಯಿತು. ಆಫ್ಘಾನಿಸ್ತಾನದ ಜನರು ಅಮಿತಾಭ್‌ ಬಚ್ಚನ್ ಅವರನ್ನು ತುಂಬಾ ಪ್ರೀತಿಯಿಂದ ಮತ್ತು ಗೌರವದಿಂದ ಕಂಡಿದ್ದರಂತೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...