Tuesday, October 19, 2021

ಹೆಣ್ಮಕ್ಕಳಿರುವ ಜಾಹೀರಾತಿಗೆ ಮಸಿ ಬಳಿದ ತಾಲಿಬಾನಿಗಳು

ಕಾಬೂಲ್‌: ತಾಲಿಬಾನಿಗಳು ಕಾಬೂಲ್‌ ನಗರ ವಶಪಡಿಸಿಕೊಂಡ ಬೆನ್ನಲ್ಲೇ ಬ್ಯೂಟಿ ಪಾರ್ಲರ್‌, ಫ್ಯಾನ್ಸಿ ಅಂಗಡಿ, ಜ್ಯುವೆಲ್ಲರಿಯ ಅಂಗಡಿಗಳ ಮೇಲೆ ಇರುವ ಮಹಿಳೆಯರ ಚಿತ್ರಗಳಿಗೆ ಕಪ್ಪು ಬಣ್ಣ ಬಳಿದು, ಮುಚ್ಚುತ್ತಿದ್ದಾರೆ. ಈ ಮೂಲಕ ಷರಿಯಾಕಾನೂನು ಜಾರಿಗೊಳಿಸುತ್ತಿದ್ದಾರೆ.


2001ರಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಕೊನೆಗೊಂಡು, ಅಮೆರಿಕ ನೇತೃತ್ವದ ರಕ್ಷಣಾ ಪಡೆಗಳು, ಈ ದೇಶದ ರಕ್ಷಣೆಗೆ ನಿಂತ ಮೇಲೆ ಕಾಬೂಲ್‌ನಾದ್ಯಂತ ನೂರಾರು ಬ್ಯೂಟಿ ಪಾರ್ಲರ್‌ಗಳು ಆರಂಭವಾಗಿದ್ದವು.

ಮಹಿಳೆಯರ ಮೇಕಪ್‌ ಮತ್ತು ಮಿನಿಕ್ಯೂರ್‌ಗೆ ಸಂಬಂಧಿಸಿದ ಪರಿಕರಗಳ ವ್ಯಾಪಾರ ವಹಿವಾಟು ನಡೆಯುತ್ತಿತ್ತು.


ಬ್ಯೂಟಿಪಾರ್ಲರ್‌, ಸಲೂನ್‌ಗಳ ಹಾಗೂ ಮತ್ತಿತರ ಅಂಗಡಿಗಳ ಹೊರಾಂಗಣದ ಗೋಡೆಯ ಮೇಲಿರುವ ರೂಪದರ್ಶಿಯರ ಚಿತ್ರವನ್ನು ವಿರೂಪಗೊಳಿಸಲಾಗುತ್ತಿದೆ.

ಕಾಬೂಲ್‌ ನಗರದ ಪ್ರಮುಖ ರಸ್ತೆಯಲ್ಲಿ ಚಿನ್ನಾಭರಣ ಮಳಿಗೆಯೊಂದರ ಗೋಡೆಯ ಮೇಲಿದ್ದ ವಧುವನಂತೆ ಅಲಂಕೃತಗೊಂಡು, ನಗುತ್ತಿರುವ ಮಹಿಳೆಯೊಬ್ಬರ ಚಿತ್ರಗಳನ್ನು ತಾಲಿಬಾನಿ ಉಗ್ರನೊಬ್ಬ ಕಪ್ಪು ಬಣ್ಣವನ್ನು ಬಳಿದಿದ್ದಾನೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...