Connect with us

  LATEST NEWS

  2 ವರ್ಷಗಳ ಕೋವಿಡ್‌ ಬ್ರೇಕ್‌ ಬಳಿಕ ಜೈನಕಾಶಿಯಲ್ಲಿ ರಂಗೇರಲಿದೆ ಆಳ್ವಾಸ್‌ ನುಡಿಸಿರಿ-ವಿರಾಸತ್‌

  Published

  on

  ಮಂಗಳೂರು: ಕೊರೋನಾ ಕಾರಣದಿಂದ ಎರಡು ವರ್ಷ ತೆರೆಬಿದ್ದಿದ್ದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಡಿ.31ರಿಂದ ಜ.2ರವರೆಗೆ ಮತ್ತೆ ಆಳ್ವಾಸ್‌ ವಿರಾಸತ್‌,

  ಆಳ್ವಾಸ್‌ ನುಡಿಸಿರಿ ವೈಭವಿಸಲಿದೆ. ಈ ವರ್ಷ ಎರಡೂ ಕಾರ್ಯಕ್ರಮಗಳು ಜಂಟಿಯಾಗಿ ನಡೆಯುತ್ತಿರುವುದು ಇನ್ನೊಂದು ವಿಶೇಷ.


  ಸಾಂಸ್ಕೃತಿಕ ರಂಗದ ವೈವಿಧ್ಯತೆಯಲ್ಲಿ ತನ್ನದೇ ಛಾಪು ಮೂಡಿಸಿದ ಆಳ್ವಾಸ್‌ ವಿರಾಸತ್‌ ಈಗಾಗಲೇ 25ವರ್ಷ ಪೂರೈಸಿದ್ದು, ನುಡಿಹಬ್ಬವಾದ ಆಳ್ವಾಸ್‌ ನುಡಿಸಿರಿ 17 ವರ್ಷಗಳಿಂದ ನಡೆದುಕೊಂಡು ಬಂದಿದೆ.
  ರಾಷ್ಟ್ರಮಟ್ಟದಿಂದ ಕಲಾವಿದರು, ಸಾಹಿತಿಗಳನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಅಲೆಯಿಂದ ಈ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ.

  ಅದಕ್ಕಾಗಿ ಈ ಬಾರಿ ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ಈ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

  ಡಿ.31ರಿಂದ ಜ.2ರವರೆಗೆ ಜಂಟಿ ಉತ್ಸವ
  ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ 2021ರ ಡಿಸೆಂಬರ್‌ 31ರಂದು ಆಳ್ವಾಸ್‌ ವಿರಾಸತ್‌ ಮತ್ತು ಆಳ್ವಾಸ್‌ ನುಡಿಸಿರಿ ಕಾರ್ಯಕ್ರಮ ಉದ್ಘಾಟನೆಗೊಂಡು, 2022ರ ಜ.2ರವರೆಗೆ ಮುಂದುವರಿಯಲಿದೆ. ಹಗಲಿನ ಹೊತ್ತು ವಿದ್ಯಾಗಿರಿಯಲ್ಲಿ ನುಡಿಸಿರಿ ನಡೆದರೆ, ಸಂಜೆ ವೇಳೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಆಳ್ವಾಸ್‌ ವಿರಾಸತ್‌ ವೈಭವಿಸಲಿದೆ.


  ನುಡಿಸಿರಿ ಸಂದರ್ಭ ಸಾಮಾನ್ಯವಾಗಿ 11ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಆದರೆ ಈ ಬಾರಿ ಸಂಜೆಯ ವೇಳೆ ಪುತ್ತಿಗೆಯಲ್ಲಿರುವ ಬಯಲುರಂಗ ಮಂದಿರ ವಿರಾಸತ್‌ ವೇದಿಕೆಯಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.

  LATEST NEWS

  ಸಂಸದ ಬ್ರಿಜ್ ಭೂಷಣ್ ಪುತ್ರ ಕರಣ್ ಭೂಷಣ್ ಕಾರಿಗೆ ಇಬ್ಬರ ಬ*ಲಿ..!

  Published

  on

  ಮಂಗಳೂರು ( ಉತ್ತರ ಪ್ರದೇಶ ) : ಸಂಸದ ಬ್ರಿಜ್‌ ಭೂಷಣ್ ಪುತ್ರ ಕರಣ್ ಭೂಷಣ್ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪ*ಘಾತವೊಂದು ಸಂಭವಿಸಿದೆ. ಕಾರು ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಅಸು ನೀಗಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

  ಕಳಂಕ ಹೊತ್ತು ಟಿಕೇಟ್ ವಂಚಿತರಾದ ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಪುತ್ರ ಕರಣ್ ಭೂಷಣ್ ಉತ್ತರ ಪ್ರದೇಶದ ಕೈಸರ್ಗಂಜ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಬುಧವಾರ ಉತ್ತರ ಪ್ರದೇಶದ ಗೊಂಡಾದಲ್ಲಿ ತಮ್ಮ ಬೆಂಗಾವಲು ವಾಹನದಲ್ಲಿ ಕರಣ್ ಬೂಷಣ್ ಪ್ರಯಾಣ ಮಾಡುತ್ತಿದ್ದರು. ಆ ವೇಳೆ ಅವರ ಬೆಂಗಾವಲು ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ.

  ಬೈಕ್ ಸವಾರರಾದ ರೆಹಾನ್ ಖಾನ್ (17) ಹಾಗೂ ಶೆಹಜಾದ್ ಖಾನ್‌ (20) ಅವರು ಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಇನ್ನು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೀತಾದೇವಿ (60) ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
  ಅಪಘಾತದ ವೇಳೆ ಕರಣ್ ಭೂಷಣ್‌ ಅವರ ಕಾರು ಕೂಡಾ ಸ್ಥಳದಲ್ಲಿ ಇತ್ತು ಎಂಬುದಾಗಿ ಸ್ಥಳಿಯರು ಹೇಳಿದ್ದು ಪೊಲೀಸರೂ ಕೂಡಾ ದೃಡಪಡಿಸಿದ್ದಾರೆ. ಇಬ್ಬರ ಸಾ*ವಿಗೆ ಕಾರಣವಾದ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಕಾರು ಕರಣ್ ಭೂಷಣ್ ಅವರ ಸಂಸ್ಥೆಯ ನೊಂದಾಯಿತ ಕಾರು ಅನ್ನೋದು ಕೂಡಾ ತನಿಖೆಯಿಂದ ತಿಳಿದು ಬಂದಿದೆ. ಜನರು ಉದ್ರಿಕ್ತವಾಗಿರುವ ಕಾರಣ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

  Continue Reading

  LATEST NEWS

  KSRTC ಬಸ್‌ನಲ್ಲಿ ಹೆರಿಗೆ..! ಡ್ರೈವರ್ ಸಮಯ ಪ್ರಜ್ಞೆಗೆ ಜನರ ಮೆಚ್ಚುಗೆ..!

  Published

  on

  ಕೇರಳ : ಗರ್ಭಿಣಿ ಮಹಿಳೆಯರು ಜಾಗರೂಕರಾಗಿರುವ ಅವಶ್ಯಕತೆ ಬಹಳಷ್ಟಿದೆ. ಹೆರಿಗೆ ಸಮಯ ಹತ್ತಿರವಾಗುತ್ತಿದ್ದಂತೆ ಪ್ರಯಾಣ ಬೆಳೆಸುವುದು ಅಪಾಯವೇ ಸರಿ. ಈ ನಡುವೆ ಕೆಲವೊಮ್ಮೆ ಚಲಿಸುತ್ತಿದ್ದ ಬಸ್ ನಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಮಗುವಿನ ಜನ್ಮವಿತ್ತ ಘಟನೆಗಳು ನಡೆದಿವೆ.
  ಇದೀಗ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬಸ್‌ ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಮಲಪುರಂ ನಿವಾಸಿ ಮಹಿಳೆಗೆ ವೈದ್ಯರು ಬಸ್‌ನಲ್ಲೇ ಹೆರಿಗೆ ಮಾಡಿಸಿದ್ದಾರೆ.

  ಆಸ್ಪತ್ರೆಗೆ ಕೊಂಡೊಯ್ದ ಬಸ್ ಡ್ರೈವರ್ :

  ತುಂಬು ಗರ್ಭಿಣಿಯಾಗಿದ್ದ ಮಹಿಳೆ ವೈದ್ಯರನ್ನು ಭೇಟಿಯಾಗಲೆಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಂಗಮಾಲಿಯಿಂದ ತೊಟ್ಟಿಲ್ ಪಾಲ ಎಂಬಲ್ಲಿಗೆ ಹೋಗುವ ಬಸ್ ಇದಾಗಿದ್ದು, ಮಲಪುರಂ ನಲ್ಲಿ ಪತಿಯ ಜೊತೆ ಮಹಿಳೆ ಬಸ್ ಏರಿದ್ದರು. ಬಸ್‌ ಪೇರಮಂಗಲಂ ಎಂಬಲ್ಲಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರವಾಗಿ ಹೆರಿಗೆ ನೋವು ಕಾಣಸಿಕೊಂಡಿದೆ. ಈ ವಿಚಾರ ಬಸ್‌ ನಿರ್ವಾಹಕನ ಗಮನಕ್ಕೆ ತಂದ ತಕ್ಷಣ ಆತ ಡ್ರೈವರ್‌ಗೆ ಪರಿಸ್ಥಿತಿಯ ಗಂಭೀರತೆ ತಿಳಿಸಿದ್ದಾನೆ. ತಕ್ಷಣ ಬಸ್‌ ತಿರುಗಿಸಿದ ಡ್ರೈವರ್ ನೇರವಾಗಿ ಬಸ್ಸನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡು ಬಂದಿದ್ದಾನೆ.

  ಬಸ್‌ನಲ್ಲಿದ್ದ ಮಹಿಳೆಗೆ ಪ್ರಸವ ವೇದನೆ ಆರಂಭವಾಗಿದೆ ಅನ್ನೋ ವಿಚಾರವನ್ನು ಬಸ್‌ ನಲ್ಲಿದ್ದ ಪ್ರಯಾಣಿಕರೊಬ್ಬರು ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಹೀಗಾಗಿ ಬಸ್‌ ಬರುತ್ತಿದ್ದಂತೆ ಸ್ಟ್ರಚ್ಚರ್‌ ತೆಗೆದುಕೊಂಡು ಸಿದ್ಧವಾಗಿದ್ದ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಲು ರೆಡಿ ಆಗಿದ್ದಾರೆ. ಆದ್ರೆ ಆ ವೇಳೆಗಾಗಲೇ ಸಮಯ ಮೀರಿದ್ದ ಕಾರಣ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಮಹಿಳೆಗೆ ಬಸ್‌ ಒಳಗಡೆಯೇ ಹೆರಿಗೆ ಮಾಡಿಸಿದ್ದಾರೆ.

  ಇದನ್ನು ಓದಿ: ಹೆಗ್ಗಣ ಕಾಟ ತಾಳಲಾಗದೆ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ! ಆಮೇಲೇನಾಯ್ತು?

  ಬಸ್ ಸಿಬ್ಬಂದಿ ಬಗ್ಗೆ ಪ್ರಶಂಸೆ :

  ಮಹಿಳೆಗೆ ಸುಖ ಪ್ರಸವ ಮಾಡಿಸಿದ ಆಸ್ಪತ್ರೆಯ ವೈದ್ಯರು ಬಳಿಕ ಆಕೆಯನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಿಸಿದ್ದಾರೆ. ಮಹಿಳೆಗೆ ಹೆರಿಗೆ ಮಾಡಿಸುವವರೆಗೂ ಬಸ್ ಹಾಗೂ ಪ್ರಯಾಣಿಕರು ಕಾದು ಕುಳಿತಿದ್ದು, ಪ್ರಸವದ ಬಳಿಕ ಬಸ್ ಮುಂದಕ್ಕೆ ಚಲಿಸಿದೆ. ಬಸ್‌ ನಿರ್ವಾಹಕ ಹಾಗೂ ಡ್ರೈವರ್ ಅವರ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಯಾಣ ವಿಳಂಬವಾದ್ರೆ ಸಿಡಿಮಿಡಿಗೊಳ್ಳುವ ಪ್ರಯಾಣಿಕರೂ ಇಲ್ಲಿ ತಾಳ್ಮೆಯನ್ನು ಪ್ರದರ್ಶಿಸಿ ಸುಖ ಪ್ರಸವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು ಕೂಡಾ ವಿಶೇಷವಾಗಿದೆ.

   

  Continue Reading

  LATEST NEWS

  ಡೇಟಿಂಗ್ ಮಾಡಲು ಹುಡುಗಿ ಬೇಕಾ…? ಹಣ ಇದ್ರೆ ಬಾಡಿಗೆಗೆ ಸಿಕ್ತಾಳೆ ಈಕೆ..!

  Published

  on

  ಮಂಗಳೂರು : ಡೇಟಿಂಗ್ ಮಾಡಲು “ನಿಮಗೆ ಗೆಳತಿ ಇಲ್ವಾ ? ಒಂಟಿಯಾಗಿದ್ದೀರಾ ? ಹಾಗೀದ್ರೆ ನಾನು ಬಾಡಿಗೆಗೆ ಇದ್ದೇನೆ”. ಯುವತಿಯೊಬ್ಬಳು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಪೋಸ್ಟ್ ಒಂದು ಈಗ ಸಾಕಷ್ಟು ವೈರಲ್ ಆಗಿದೆ. ದಿವ್ಯಾಗಿರಿ ಎಂಬ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಯುವತಿಯೊಬ್ಬಳು ಇಂತಹ ಪೋಸ್ಟ್‌ ಹಾಕಿದ್ದು ಮಾತ್ರವಲ್ಲದೆ ಯಾವುದಕ್ಕೆಲ್ಲಾ ಎಷ್ಟು ಹಣ ಕೊಡಬೇಕು ಅಂತ ರೇಟ್ ಲಿಸ್ಟ್ ಕೂಡಾ ಹಾಕಿದ್ದಾಳೆ .


  ಜಪಾನ್ ದೇಶದಲ್ಲಿ ಟೈಂ ಪಾಸ್ ಮಾಡಲು ಬಾಡಿಗೆಗೆ ಗೆಳೆಯ ಅಥವಾ ಗೆಳತಿಯನ್ನು ಪಡೆದುಕೊಳ್ಳವ ಪರಿಪಾಟ ಇದೆ. ಅಲ್ಲಿ ಈ ಬಾಡಿಗೆ ಸಂಬಂಧಗಳು ನಿಜವಾದ ಸಂಬಂಧದಂತೆ ತೋರಿಸುವ ವಿದ್ಯಮಾನಗಳು ನಡೆಯುತ್ತದೆ. ಡೇಟಿಂಗ್ ವಿಚಾರ, ಒಟ್ಟಿಗೆ ಊಟ ಮಾಡೋ ವಿಚಾರ, ಪಾರ್ಟಿ ಮತ್ತು ಈವೆಂಟ್‌ಗಳಿಗೆ ಒಟ್ಟಿಗೆ ಹೋಗೋದು ಹೀಗೆ ಹಲವು ಸಮಯದಲ್ಲಿ ಬಾಡಿಗೆಗೆ ಗೆಳೆಯ ಅಥವಾ ಗೆಳತಿಯನ್ನು ಪಡೆದುಕೊಳ್ಳುತ್ತಾರೆ.


  ಇದನ್ನೇ ಅನುಕರಿಸಿದ ದಿವ್ಯಾಗಿರಿ ಎಂಬ ಯುವತಿ ಡೇಟಿಂಗ್‌ಗೆ ಬಾಡಿಗೆ ನೀಡಿ ಅಂತ ಪೋಸ್ಟ್ ಹಾಕಿರುವುದು ಈಗ ಸಾಕಷ್ಟು ವೈರಲ್‌ ಆಗಿದೆ. ಕನ್ನಡಿ ಮುಂದೆ ನಿಂತು ರೀಲ್ಸ್‌ ಮಾಡಿ ಈ ಪೋಸ್ಟ್‌ ಹಂಚಿಕೊಂಡಿದ್ದು, ರೇಟ್ ಲಿಸ್ಟ್‌ ಹಾಕಿ ತನ್ನ ರೇಟ್‌ ಎಷ್ಟು ಅಂತ ಹೇಳಿದ್ದಾಳೆ. ಕಾಫಿ ಕುಡಿಯಲು ಜೊತೆಗೆ ಬರಬೇಕು ಅಂದ್ರೆ 1500 ರೂಪಾಯಿ ಬಾಡಿಗೆಯಾದ್ರೆ, ಊಟಕ್ಕೆ ಹಾಗೂ ಸಿನೆಮಾ ನೋಡಲು ಜೊತೆಯಾಗಿ ಹೋಗಲು 2000 ರೂಪಾಯಿ ಬಾಡಿಗೆ ಕೊಡಬೇಕಂತೆ. ಇನ್ನು ಬೈಕ್‌ನಲ್ಲಿ ಸುತ್ತಾಡಲು 4000 ರೂಪಾಯಿ ಇದ್ರೆ ಡೇಟಿಂಗ್ ಮಾಡಿರೋ ಪೋಸ್ಟ್ ಹಂಚಿಕೊಳ್ಳಲು 6000 ರೂಪಾಯಿ ಚಾರ್ಜ್‌ ಅಂತೆ. ಹೀಗೇ ಈಕೆಯ ಬೇರೆ ಬೇರೆ ವಿಚಾರ ಬರೆದುಕೊಂಡಿದ್ದು ಅತೀ ಹೆಚ್ಚು 10000 ರೂಪಾಯಿ ವರೆಗೆ ರೇಟ್‌ ಲಿಸ್ಟ್‌ ಬಿಡುಗಡೆ ಮಾಡಿದ್ದಾಳೆ.

  ಈಕೆಯ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ‘ಈಕೆ ಜಪಾನ್‌ ದೇಶದವಳೆಂದು ಭಾವಿಸಿದ್ದಾಳೆ. ಹಾಗಾಗಿ ಈ ಪೋಸ್ಟ್ ಹಾಕಿದ್ದಾಳೆ’ ಅಂದಿದ್ರೆ, ಇನ್ನೂ ಕೆಲವರು ಇಂತಹ ಪೋಸ್ಟ್‌ಗಳಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ. ಇನ್ನೂ ಕೆಲವರು ಇದು ಹನಿ ಟ್ರ್ಯಾಪ್ ಆಗಿರಬಹುದು ಸಿಕ್ಕಿ ಬಿದ್ದು ಲಕ್ಷಲಕ್ಷ ಕಳೆದುಕೊಳ್ಳುವಿರಿ ಜೋಕೆ ಎಂದಿದ್ದಾರೆ.

  Continue Reading

  LATEST NEWS

  Trending