ಉಡುಪಿ: ಇವತ್ತು ಪದ್ಮವಿಭೂಷಣ ಗೌರವ ಉಡುಪಿ ಪೇಜಾವರ ಸ್ವಾಮಿಜಿಯವರನ್ನು ಹುಡಕಿಕೊಂಡು ಬಂದಿದೆ. ಈ ಹಿಂದೆ ಅರ್ಜಿ ಹಾಕಿದವರಿಗೆ ಮಾತ್ರ ಪ್ರಶಸ್ತಿ ಕೊಡುವ ಕ್ರಮ ಇತ್ತು ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ನರೇಂದ್ರ ಮೋದಿಯವರನ್ನು ಬಹಿರಂಗವಾಗಿ ಗುಣಗಾನ ಮಾಡಿದ್ದಾರೆ.
ಪೇಜಾವರ ಸ್ವಾಮೀಜಿ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ಯವರಿಗೆ ಸಂದ ಪದ್ಮವಿಭೂಷಣ ಪ್ರಶಸ್ತಿಯ ಸ್ವಾಗತ ಸಮಾರಂಭದಲ್ಲಿ ನಿನ್ನೆ ಮಾತನಾಡಿದ ಅವರು “ಇಂದು ನರೇಂದ್ರ ಮೋದಿಯವರ ಸರಕಾರ ಬಂದ ಮೇಲೆ ಪ್ರಶಸ್ತಿಯೇ ಅರ್ಹ ಸಾಧಕರನ್ನು ಹುಡುಕಿಕೊಂಡು ಬಂದಿದೆ.
ಗುಣಕ್ಕೆ ಮತ್ಸರ ಇಲ್ಲ. ಯಾರಾದ್ರು ಉತ್ತಮ ಕೆಲಸ ಮಾಡಿದ್ರೆ ಪ್ರಶಂಸೆ ಮಾಡ್ಲೇ ಬೇಕು. ನಾನು ಇನ್ನೊಂದು ಪಕ್ಷದಲ್ಲಿ ಇದ್ದರೂ ಕೂಡ ಅವರ ಒಳ್ಳೆಯ ಕೆಲಸಗಳನ್ನು ಶ್ಲಾಘಿಸುತ್ತೇನೆ ಅಂದ್ರು. ಪ್ರಮೋದ್ ಅವರ ಮೋದಿಯವರನ್ನು ಮಾಡಿರುವ ಗುಣಗಾನ ಕೆಲವರನ್ನು ಆಶ್ಚರ್ಯಚಕಿತಗೊಳಿಸಿತು.
ಪ್ರಮೋದ್ ಮಧ್ವರಾಜ್ ಮಾತಿಗೆ ಚಪ್ಪಾಳೆ ತಟ್ಟಿ ಮೆಚ್ಚಿಗೆ ಸೂಚಿಸಿದರು. ವಿಶ್ವೇಶತೀರ್ಥ ಸ್ವಾಮೀಜಿಗೆ ನಿರ್ಯಾಣೋತ್ತರವಾಗಿ ನೀಡಿದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಗುರುಗಳ ಪರವಾಗಿ ಸ್ವೀಕರಿಸಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಡುಪಿಯಲ್ಲಿ ಗುರುವಾರ ಭಕ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದರು. ಬಳಿಕ ಹಿರಿಯ ಶ್ರೀಗಳ ಕುರಿತು ಹಾಗೂ ಪ್ರಶಸ್ತಿ ಸ್ವಾಗತ ಸಮಾರಂಭದ ಏರ್ಪಡಿಸಲಾಗಿತ್ತು.