Connect with us

    International news

    ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು ಈ ದೇಶಗಳಲ್ಲಿ ಗಾಡಿ ಓಡಿಸಬಹುದು!

    Published

    on

    ಮಂಗಳೂರು : ಭಾರತದಲ್ಲಿ ಹಾಗೂ ವಿಶ್ವದ ಯಾವುದೇ ದೇಶವಾದರೂ ಗಾಡಿ ಓಡಿಸಬೇಕೆಂದರೆ ಡ್ರೈವಿಂಗ್ ಲೈಸನ್ಸ್ ಹೊಂದಿರುವುದು ಕಡ್ಡಾಯ. ಆದರೆ, ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು 7 ದೇಶಗಳಲ್ಲಿ ವಾಹನ ಚಲಾಯಿಸಬಹುದು.


    ವಿಶ್ವದ 7 ರಾಷ್ಟ್ರಗಳಲ್ಲಿ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಕೂಡ ಅಲ್ಲಿ ಯಾವುದೇ ಭಯವಿಲ್ಲದೆ, ಆರಾಮವಾಗಿ ವಾಹನ ಚಲಾಯಿಸಬಹುದು. ಆದರೆ, ಕೆಲವೊಂದು ಕಾನೂನುಗಳು ಹಾಗೂ ನೀತಿ ನಿಯಮಗಳು ಅನ್ವಯಿಸುತ್ತವೆ.
    1. ಜರ್ಮನಿ
    ಜರ್ಮನ್ ನಲ್ಲಿ ಕೂಡ ಭಾರತದ ಡ್ರೈವಿಂಗ್ ಲೈಸನ್ಸ್ ಇದ್ದರೆ, ಅಲ್ಲಿ ಒಂದು ವರ್ಷಗಳ ಕಾಲ ವಾಹನ ಓಡಿಸಲು ಅವಕಾಶ ಇದೆ.
    2. ನ್ಯೂಜಿಲೆಂಡ್
    ನ್ಯೂಜಿಲೆಂಡ್ ನಲ್ಲೂ ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ವಾಹನ ಚಲಾಯಿಸಬಹುದು. ನಾವು ನ್ಯೂಜಿಲೆಂಡ್ ಗೆ ಭೇಟಿ ನೀಡಿದ ಮೊದಲ ದಿನದಿಂದ ಒಂದು ವರ್ಷದವರೆಗೆ ನ್ಯೂಜಿಲೆಂಡ್ ನ ಯಾವುದೇ ಸಿಟಿಯಲ್ಲಿಯೂ ಕೂಡ ಭಾರತದ ಡ್ರೈವಿಂಗ್ ಲೈಸೆನ್ಸ್ ನಿಂದ ವಾಹನ ಚಲಾಯಿಸಬಹುದು.

    ಇದನ್ನೂ ಓದಿ: ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!
    3. ಸ್ವಿಟ್ಜರ್ ಲೆಂಡ್
    ಸ್ವಿಟ್ಜರ್ ಲೆಂಡ್ ನ್ನು ಪ್ರವಾಸಿಗರ ಸ್ವರ್ಗ ಎಂದು ಕರೆಯುತ್ತಾರೆ. ಇಲ್ಲಿಗೆ ಪ್ರವಾಸಕ್ಕೆ ಹೋಗಬೇಕೆಂಬುದು ಎಷ್ಟೋ ಭಾರತೀಯರ ಕನಸು. ಈ ದೇಶಕ್ಕೆ ಹೋದಾಗ ಸುಮಾರು ಒಂದು ವರ್ಷಗಳ ಕಾಲ ನೀವು ಭಾರತದ ಡ್ರೈವಿಂಗ್ ಲೈಸನ್ಸ್ ಬಳಸಿ ಅಲ್ಲಿ ಕಾರು ಮತ್ತು ಬೈಕ್ ಗಳನ್ನು ಬಾಡಿಗೆಗೆ ಪಡೆದು ಓಡಿಸಬಹುದು.
    4. ಆಸ್ಟ್ರೇಲಿಯಾ
    ಈ ದೇಶದಲ್ಲೂ ಕೂಡ ಭಾರತದ ಡ್ರೈವಿಂಗ್ ಲೈಸನ್ಸ್ ಹೊಂದಿರುವವರು ವಾಹನ ಚಲಾಯಿಸಬಹುದು. ಆಸ್ಟ್ರೇಲಿಯಾಗೆ ಪ್ರವೇಶ ಪಡೆದ ಒಂದು ವರ್ಷದವರೆಗೆ ಮಾತ್ರ ಪರವಾನಿಗೆ ಇದೆ. ಆದರೆ, ನೀವು ಇಲ್ಲಿನ ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ಮಾತ್ರ ಭಾರತದ ಡ್ರೈವಿಂಗ್ ಲೈಸೆನ್ಸ್ ನಿಂದ ವಾಹನ ಚಲಾಯಿಸಬಹುದು.
    5. ಕೆನಡಾ
    ಭಾರತದ ಡ್ರೈವಿಂಗ್ ಲೈಸನ್ಸ್ ಮೂಲಕ ಕೆನಡಾದ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸಬಹುದು. ಈ ದೇಶದಲ್ಲಿ ಕೇವಲ 60 ದಿನಗಳವರೆಗೆ ಮಾತ್ರ ಭಾರತೀಯರು ತಮ್ಮದೇ ಡ್ರೈವಿಂಗ್ ಲೈಸೆನ್ಸ್ ಮೂಲಕ ವಾಹನ ಚಲಾಯಿಸಬಹುದು.
    6. ಇಂಗ್ಲೇಂಡ್
    ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಈ ದೇಶದಲ್ಲಿ ಒಂದು ವರ್ಷದವರೆಗೆ ನಿರಾತಂಕವಾಗಿ ವಾಹನ ಚಲಾಯಿಸಬಹುದು.
    7. ಯುಎಸ್ಎ
    ಅಮೆರಿಕಾದಲ್ಲಿ ನೀವೇನಾದರೂ ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ, ಅಮೆರಿಕಾದ ಐಷಾರಾಮಿ ರೋಡ್ ಗಳಲ್ಲಿ ಆರಾಮವಾಗಿ ವಾಹನ ಚಲಾಯಿಸಬಹುದು. ಆದರೆ, ನೀವು ಅಮೆರಿಕಾಗೆ ಪ್ರವೇಶ ಪಡೆದ ಒಂದು ವರ್ಷದವರೆಗೆ ಭಾರತದ ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ವಾಹನ ಚಲಾಯಿಸಬಹುದು. ನಂತರ ವಾಹನ ಓಡಿಸಬೇಕೆಂದರೆ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ನ್ನು ಹೊಂದಿರಲೇಬೇಕು.

    Click to comment

    Leave a Reply

    Your email address will not be published. Required fields are marked *

    International news

    ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!

    Published

    on

    ಮಂಗಳೂರು: ‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬ ಮಾತು ಕೇಳಿರಬಹುದು. ಮನುಷ್ಯ ಸರಿಯಾಗಿ ನಿದ್ದೆ ಮಾಡಿದರೆ ಉತ್ತಮ ಆರೋಗ್ಯ ಮತ್ತು ದಿನ ಪೂರ್ತಿ ಲವಲವಿಕೆಯಲ್ಲಿ ಇರುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ನಿದ್ದೆ ಮಾಡುವ ಸಮಯ ಕಡಿಮೆಯಾಗುತ್ತಿದ್ದು, ಇದರ ಬದಲು ಮೊಬೈಲ್ ನೋಡುವ ಮೂಲಕ ಸಮಯ ಜಾಸ್ತಿಯಾಗುತ್ತಿದೆ.


    ಗ್ಲೋಬಲ್ ಸ್ಲೀಪ್ ಸಮೀಕ್ಷೆಯ ಪ್ರಕಾರ, ನೆದರ್ಲ್ಯಾಂಡ್ ಹೆಚ್ಚು ನಿದ್ರಿಸುವ ಜನರಲ್ಲಿ ಮೊದಲ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ ಜನರು ಸರಾಸರಿ 8 ಗಂಟೆಗಳ ಕಾಲ ನಿದ್ರಿಸುತ್ತಾರೆ. ಎರಡನೇ ಸ್ಥಾನದಲ್ಲಿ ಫಿನ್ಲ್ಯಾಂಡ್ ಸ್ಥಾನ ಪಡೆದಿದೆ. ಅಲ್ಲಿನ ಜನರು ದಿನಕ್ಕೆ 8 ಗಂಟೆಗಳ ಕಾಲ ನಿದ್ರಿಸುತ್ತಾರೆ. 7 ಗಂಟೆಗಳ ಕಾಲ ನಿದ್ರಿಸುವ ಮೂಲಕ, ಮೂರನೇ ಸ್ಥಾನವನ್ನು ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ದೇಶಗಳು ಪಡೆದಿವೆ.

    ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ನ.25 ಡೆಡ್‌ಲೈನ್
    ಇನ್ನೂ ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಮತ್ತು ಯುನೈಟೆಡ್ ಕಿಂಗ್ ಡಮ್ ಸ್ಥಾನ ಪಡೆದಿವೆ. ಈ ಎರಡು ದೇಶಗಳ ಜನರು 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಐದನೇ ಸ್ಥಾನವನ್ನು ಕೆನಡಾ ಮತ್ತು ಡೆನ್ಮಾರ್ಕ್ ದೇಶಗಳು ಪಡೆದುಕೊಂಡಿದೆ. ಅಲ್ಲಿನ ಜನರು ಸರಾಸರಿ 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಆರನೇ ಸ್ಥಾನದಲ್ಲಿ ಅಮೇರಿಕಾ ಪಡೆದಿದೆ. ಇಲ್ಲಿನ ಜನರು 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಇಟಲಿ ಮತ್ತು ಬೆಲ್ಜಿಯಂ ಏಳನೇ ಸ್ಥಾನ ಪಡೆದಿದೆ. ಇಲ್ಲಿನ ಜನರು ಸರಾಸರಿ 7.5 ಗಂಟೆಗಳ ಕಾಲ ನಿದ್ರಿಸುತ್ತಾರೆ ಎಂದು ಗ್ಲೋಬಲ್ ಸ್ಲೀಪ್ ಸಮೀಕ್ಷೆ ವರದಿ ನೀಡಿದೆ.
    ಭಾರತಕ್ಕೆ ಎಷ್ಟನೇ ಸ್ಥಾನ?
    ಭಾರತಕ್ಕೆ ಎಲ್ಲಾ ವಿಭಾಗದಲ್ಲಿಯೂ ಪ್ರತಿಸ್ಪರ್ಧಿ ದೇಶವೆಂದರೆ ಅದುವೇ ಚೀನಾ. ನಿದ್ದೆ ಮಾಡುವ ವಿಷಯದಲ್ಲೂ ಎರಡು ದೇಶಗಳ ಜನರು ಸರಾಸರಿಯಾಗಿ 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಹೀಗಾಗಿ, ಭಾರತ ಮತ್ತು ಚೀನಾ 11ನೇ ಸ್ಥಾನ ಪಡೆದಿದೆ. ವಯಸ್ಕರಿಗಿಂತ ಮಕ್ಕಳಿಗೆ ನಿದ್ದೆ ಅವಶ್ಯಕ. ವಯಸ್ಕರು ಕೂಡ ಕನಿಷ್ಠ 8 ತಾಸು ನಿದ್ದೆ ಮಾಡಬೇಕು ಎಂದು ಆಧ್ಯಯನ ಹೇಳುತ್ತದೆ.

    Continue Reading

    International news

    ಐಪಿಎಲ್ ಹರಾಜಿನಲ್ಲಿ ಬದಲಾವಣೆ ತಂದ ಬಿಸಿಸಿಐ; ಏನು ಗೊತ್ತಾ!?

    Published

    on

    ಬೆಂಗಳೂರು/ಮುಂಬೈ: ಐಪಿಎಲ್ ಸೀಸನ್ 18ರ ಮೆಗಾ ಹರಾಜು ಪ್ರಕ್ರಿಯೆ ನಾಳೆಯಿಂದ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ. ಆದರೆ ಐಪಿಎಲ್ ಹರಾಜಿನ ನಡುವೆ ಬಿಸಿಸಿಐ ಹೊಸ ಟ್ವಿಸ್ಟ್ ಕೊಟ್ಟಿದೆ.

    ಈ ಬಾರಿಯ ಮೆಗಾ ಹರಾಜಿನಲ್ಲಿ 577 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. 204 ಸ್ಥಾನಗಳಿಗೆ ನಡೆಯುವ ಈ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಹಾಗೂ ವಿದೇಶಿ ಆಟಗಾರರು ಕೋಟಿ-ಕೋಟಿ ಮೌಲ್ಯದಲ್ಲಿ ವಿವಿಧ ತಂಡಗಳಿಗೆ ಸೇರಿಕೊಳ್ಳಲಿದ್ದಾರೆ. 10 ಫ್ರಾಂಚೈಸಿಗಳು ಮುಂಬರುವ ಐಪಿಎಲ್ ಸೀಸನ್ ಗಾಗಿ ತಮ್ಮ ತಂಡಗಳನ್ನು ರೂಪಿಸಿಕೊಳ್ಳಲಿದೆ. ಆದರೆ ಬಿಸಿಸಿಐ ಮೆಗಾ ಹರಾಜಿನ ಸಮಯವನ್ನು ಸ್ವಲ್ಪ ಬದಲಾಯಿಸಿದೆ.

    ಇದನ್ನೂ ಓದಿ :ಜೈಲಲ್ಲಿ ರಜತ್ ಹೊಸ ವರಸೆ.. ಕಂಬಿ ಹಿಂದೆ ಇದ್ದುಕೊಂಡೇ ಎದುರಾಳಿಗಳ ಆಟವಾಡಿಸಿದ ಸ್ಪರ್ಧಿ..!
    ಈಗಗಾಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಪಂದ್ಯಾಟ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆಯುತ್ತಿದೆ. ಅದೇ ದಿನ ಮೊದಲ ಟೆಸ್ಟ್ ನ ಮೂರನೇ ಮತ್ತು ನಾಲ್ಕನೇ ದಿನದ ಆಟ ನಡೆಯಲಿದೆ. ಟೆಸ್ಷ್ ಪಂದ್ಯವು ಮಧ್ಯಾಹ್ನ 2:50ಕ್ಕೆ ಮುಕ್ತಾಯವಾಗಲಿದೆ. ಒಂದು ವೇಳೆ ಬದಲಾದ ಸಂದರ್ಭದಲ್ಲಿ ಪಂದ್ಯ ಮುಂದುವರಿದರೆ ಮಧ್ಯಾಹ್ನ 3:20ರವರೆಗೂ ನಡೆಯಲಿದೆ. ನಿಗದಿಯಂತೆ ಹರಾಜು ಪ್ರಕ್ರಿಯೆ ನಡೆದರೆ ನೇರ ಪ್ರಸಾರಕ್ಕೆ ತೊಂದರೆಯಾಗಲಿದೆ.
    ಪ್ರಸಾರಕರ ಕೋರಿಕೆ ಮೆರೆಗೆ ಬಿಸಿಸಿಐ ಐಪಿಎಲ್ ಹರಾಜಿನ ಸಮಯವನ್ನು ಮಧ್ಯಾಹ್ನ 3ರಿಂದ 3:30ಕ್ಕೆ ಬದಲಾಯಿಸಿದೆ. ಈ ಮೊದಲು ನಿಗಧಿಯಂತೆ 3:30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಬೇಕಿತ್ತು. ಇದರಿಂದ ನಾಳೆಯ ಹರಾಜು ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದೆ.

    Continue Reading

    BIG BOSS

    ಉಪಚುನಾವಣೆಯಲ್ಲಿ ಗೆಲುವು; ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    Published

    on

    ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.

    ‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ‌. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು

    Continue Reading

    LATEST NEWS

    Trending