LATEST NEWS
ALERT : ಮಕ್ಕಳಿಗೆ `ಜೆಲ್ಲಿ ಕ್ಯಾಂಡಿ’ ನೀಡುವ ಪೋಷಕರೇ ಎಚ್ಚರ : ಗಂಟಲಲ್ಲಿ ಸಿಲುಕಿ 4 ವರ್ಷದ ಬಾಲಕ ದುರಂತ ಸಾ*ವು!
ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಚೂಯಿಂಗ್ ಗಮ್ ತಿಂದು ನಾಲ್ಕು ವರ್ಷದ ಬಾಲಕಿ ಮೃ*ತಪಟ್ಟಿರುವ ಘಟನೆ ನಡೆದಿದೆ.
ಬಾರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ರಾ ಜರೌಲಿ ಹಂತ -1 ರಲ್ಲಿ ನವೆಂಬರ್ 3 ರಂದು ಸಂಜೆ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, 4 ವರ್ಷದ ಮಗು ಫ್ರುಟೊಲಾ ಕ್ಯಾಂಡಿ ಎಂಬ ಕಣ್ಣಿನ ಆಕಾರದ ಬಬಲ್ ಗಮ್ ತಿನ್ನುತ್ತಿದ್ದಾಗ, ಅನಿರೀಕ್ಷಿತವಾಗಿ ಬಬಲ್ ಗಮ್ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಮಗು ತನ್ನ ಮನೆಯ ಹತ್ತಿರದ ಸ್ಥಳೀಯ ಅಂಗಡಿಯಲ್ಲಿ ಈ ಸಿಹಿತಿಂಡಿಯನ್ನು ಖರೀದಿಸಿದೆ.
ಮಗುವಿನ ಗಂಟಲಿನಲ್ಲಿ ಬಬಲ್ ಗಮ್ ಸಿಲುಕಿಕೊಂಡಿದೆ ಎಂದು ಗೊತ್ತಾದ ತಕ್ಷಣ ಮಗುವಿನ ತಾಯಿ ಬಾಲಕಿಗೆ ನೀರು ಕುಡಿಸಿದ್ದಾರೆ. ಆಗ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡ ಬಬಲ್ ಗಮ್ ಗಂಟಲಿನಲ್ಲಿ ಆಳವಾಗಿ ಜಾರಿ ಹೆಚ್ಚು ಜಟಿಲವಾಗಿದ್ದು, ಮಗುವಿಗೆ ಉಸಿರಾಟದ ತೊಂದರೆ ಶುರುವಾಗಿದೆ.
ಮಗುವಿನ ಸಂಬಂಧಿಕರು ತಕ್ಷಣ ಆಕೆಯನ್ನ ಚಿಕಿತ್ಸೆಗಾಗಿ ಮನೆಯ ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದಾಗ್ಯೂ, ಮಗುವಿನ ಗಂಟಲಿನಿಂದ ಬಬಲ್ ಗಮ್ ತೆಗೆದುಹಾಕಲು ವೈದ್ಯರಿಗೆ ಸಾಧ್ಯವಾಗಿಲ್ಲ. ದೀಪಾವಳಿಗಾಗಿ ಹೆಚ್ಚಿನ ಸ್ಥಳೀಯ ಆಸ್ಪತ್ರೆಗಳು ಮುಚ್ಚಲ್ಪಟ್ಟಿದ್ದರಿಂದ ತುರ್ತು ಸಂದರ್ಭದಲ್ಲಿ ವೈದ್ಯರು ಲಭ್ಯವಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಅವರು ಮಗುವನ್ನು ಸತತವಾಗಿ ನಾಲ್ಕು ವಿಭಿನ್ನ ಆಸ್ಪತ್ರೆಗಳಿಗೆ ಕರೆದೊಯ್ದರು. ಆದರೆ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಸುಮಾರು ಮೂರು ಗಂಟೆಗಳ ಕಾಲ ಹೋರಾಡಿದ ನಂತರ ಮಗು ಸಾ*ವನ್ನಪ್ಪಿದೆ. ಮಗುವಿನ ಸಾವಿನ ಬಗ್ಗೆ ಟಾಫಿ ಮಾದರಿಯ ಚಾಕೊಲೇಟ್ ತಯಾರಕರಿಂದ ಉತ್ತರವನ್ನ ಮೃ*ತರ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.
DAKSHINA KANNADA
ಉಪ್ಪಿನಂಗಡಿ: ರಸ್ತೆ ಬದಿ ಪ*ಲ್ಟಿಯಾದ ಕಂಟೈನರ್ ಲಾರಿ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ಮಾರೇನಹಳ್ಳಿ ಸಮೀಪ ಕಂಟೈನರ್ ಲಾರಿಯೊಂದು ಸೋಮವಾರ (ನ.4) ರಾತ್ರಿ ಉಪ್ಪಿನಂಗಡಿ ರಸ್ತೆ ಬದಿ ಪ*ಲ್ಟಿಯಾದ ಘಟನೆ ಸಂಭವಿಸಿದೆ.
ಲಾರಿಯಲ್ಲಿದ್ದ ಹೊಸ ಕಾರುಗಳು ನ*ಜ್ಜುಗುಜ್ಜಾಗಿವೆ.
ಬದಿಗೆ ಬಿದ್ದ ಲಾರಿಯನ್ನು ಮಂಗಳವಾರ (ನ.5) ಕ್ರೇನ್ ಮೂಲಕ ಮೇಲಕ್ಕೆತ್ತುವ ವೇಳೆ ಕೆಲವು ತಾಸು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಇದರ ಪರಿಣಾಮ ಕೆಲವು ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸ ಬೇಕಾಗಿತ್ತು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
BIG BOSS
BBK11: ಅಸಹ್ಯವಾಗಿ ಟ್ರೋಲ್ ಮಾಡಿದವರಿಗೆ ಬಿಗ್ಬಾಸ್ ಮಾನಸ ಸಖತ್ ಟಾಂಗ್; ಹೇಳಿದ್ದೇನು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಐದನೇ ವಾರಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ವೀಕ್ಷಕರು ಅತಿ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.
ಹೌದು, ಬಿಗ್ಬಾಸ್ ಮನೆಯಿಂದ ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಮಾನಸ 4ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ತಮಾಷೆ ಮಾಡುತ್ತಲೇ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಮಾನಸ 4ನೇ ಸ್ಪರ್ಧಿಯಾಗಿ ಆಚೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಪಕ್ಕಾ ಹಳ್ಳಿ ಹುಡುಗಿ. ಬಿಗ್ಬಾಸ್ ಮನೆಯಲ್ಲೂ ಹಳ್ಳಿ ಭಾಷೆಯಲ್ಲೇ ಮಾತಾಡು ತ್ತಿದ್ದರು. ಹೀಗಾಗಿ ಸಾಕಷ್ಟು ವೀಕ್ಷಕರಲ್ಲಿ ಕೆಲವರಿಗೆ ಮಾನಸ ಮಾತನಾಡುವ ಶೈಲಿ ಮತ್ತು ಡ್ರೆಸ್ಸಿಂಗ್ ಬಗ್ಗೆ ಕೊಂಕು ಮಾತಾಡಿದ್ದರು. ಅಲ್ಲದೇ ನನ್ನ ಮಾತಿನಿಂದ ಬೇಸರ ಆಗಿದ್ದರೇ ಕ್ಷಮಿಸಿ ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ ಹೊರಗಡೆ ಟ್ರೋಲಿಗರು ಅದನ್ನು ಫೋಕಸ್ ಮಾಡಿ ಅವರನ್ನು ಕೇಳ ಮಟ್ಟದಲ್ಲಿ ಟ್ರೋಲ್ ಮಾಡಿದ್ದರು.
ಬೇರೆ ಬೇರೆ ಪ್ರಾಣಿಗಳ ಪಕ್ಕ ಮಾನಸ ಅವರ ಫೋಟೋವನ್ನು ಹಾಕಿ ಟ್ರೋಲ್ ಮಾಡಿದ್ದರು. ಆ ಟ್ರೋಲ್ ಮಾಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದ್ದವು. ಇದೇ ವಿಚಾರವಾಗಿ ಬಿಗ್ಬಾಸ್ ಮನೆಯಿಂದ ಆಚೆ ಬಂದ ಮೇಲೆ ಬೇಸರ ಹೊರ ಹಾಕಿದ್ದಾರೆ.
ಇನ್ನೂ ಈ ಬಗ್ಗೆ ಸಂದರ್ಶನದಲ್ಲಿ ಮಾತಾಡಿದ ಅವರು, ಒಂದು ಕಡೆ ಹಂದಿ ಫೋಟೋ ಹಾಕಿ, ಮತ್ತೊಂದು ಕಡೆ ನನ್ನ ಫೋಟೋ ಹಾಕಿದ್ದರು. ನನಗೆ ಬೇಸರ ಆಗಿಲ್ಲ. ಆದ್ರೆ ನನಗಾಗಿ ಟೈಮ್ ಕೊಟ್ಟು ಫೋಟೋ ಹಾಕಿದ್ದಾರೆ. ಮೊದ ಮೊದಲು ನನಗೆ ಫೋಟೋ ನೋಡಿ ಜಿಗುಪ್ಸೆ ಬಂತು. ಅದನ್ನೂ ನೋಡಿ ಅಳ್ತಾ ಇದ್ದೆ. ಆಮೇಲೆ ಸಂತು ನನಗೆ ಸಮಾಧಾನ ಮಾಡಿದ್ದರು. ಆದರೆ ಕೆಲವರು ತುಂಬಾ ಅಸಹ್ಯವಾಗಿ ಟ್ರೋಲ್ ಮಾಡಿದವರ ಮನೆಯವರು ಸುಂದರವಾಗಿ ಇದ್ದಾರಾ? ಪ್ರಪಂಚದಲ್ಲಿ ಚೆನ್ನಾಗಿ ಇಲ್ಲದೇ ಇರೋರು ಕೂಡ ಇರ್ತಾರೆ ಅಲ್ವಾ ಅದಕ್ಕಾಗಿ ನಾನು ಅತ್ತಿದ್ದೆ.
ಇದೇ ವಿಚಾರದ ಬಗ್ಗೆ ಮಾನಸ ಪತಿ, ನನ್ನ ಹೆಂಡತಿ ಸೋಷಿಯಲ್ ಮೀಡಿಯಾದಲ್ಲಿ ಇಷ್ಟೊಂದು ಫೇಮಸ್ ಆಗೋದಕ್ಕೆ ಟ್ರೋಲರ್ಸ್ಗಳೇ ಕಾರಣ. ಅವರು ಆತರ ಮಾಡಿದ್ದರಿಂದ ನಾವು ಎಚ್ಚರವಾಗಿ ಇರಲು ಸಾಧ್ಯ. ನಮಗೆ ಯಾರಾದರೂ ದೇವರು ಅಂತ ಇದ್ರೆ ಅದು ಟ್ರೋಲರ್ಸ್ ಹಾಗೂ ಸೋಷಿಯಲ್ ಮೀಡಿಯಾ ಅಂತ ಹೇಳಿಕೊಂಡಿದ್ದಾರೆ.
LATEST NEWS
ಉಡುಪಿ : ಅಪರಿಚಿತರಿಂದ ಅಧಿಕ ಲಾಭಾಂಶದ ಆಮಿಷ : ಬ್ಯಾಂಕ್ ಮ್ಯಾನೇಜರ್‌ಗೆ ವಂಚನೆ
ಉಡುಪಿ: ಬ್ಯಾಂಕ್ ಮ್ಯಾನೇಜರ್‌ವೊಬ್ಬರಿಗೆ ಅಧಿಕ ಲಾಭಾಂ ಶದ ಆಮಿಷವೊಡ್ಡಿದ ಆನ್‌ಲೈನ್ ವಂಚಕರು ಅವರ ಖಾತೆಯಿಂದಲೇ 14 ಲಕ್ಷ ರೂ.ಗಳನ್ನು ಹಂತ-ಹಂತವಾಗಿ ವರ್ಗಾಯಿಸಿಕೊಂಡ ಘಟನೆ ನಡೆದಿದೆ ಉಡುಪಿಯಲ್ಲಿ ನಡೆದಿದೆ.
ದೊಂಡೇರಂಗಡಿಯಲ್ಲಿರುವ ಬ್ಯಾಂಕೊಂದರ ಮ್ಯಾನೇಜರ್ ಪವನ್ ಕುಮಾರ್ ವಂಚನೆಗೆ ಒಳಗಾದವರು.
ಯಾರೋ ಅಪರಿಚಿತರು ಪವನ್ ಕುಮಾರ್ ಅವರನ್ನು C22 Investment Alliance Trading ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆ ಮಾಡಿದ್ದರು.
ಅನಂತರ ಅವರ ಮೊಬೈಲ್‌ನಿಂದ ಷೇರು ಮಾರುಕಟ್ಟೆಯ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪವನ್ ಕುಮಾರ್ ಅವರನ್ನು ನಂಬಿಸಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂಬ ಆಸೆ ತೋರಿಸಿದ್ದಾರೆ. ಬಳಿಕ Causeway App ಮೂಲಕ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಾರೆ.
ಇದನ್ನು ನಂಬಿದ ಅವರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗ ಳಿಗೆ ಅ.7ರಿಂದ 19ರವರೆಗೆ ಹಂತ ಹಂತವಾಗಿ 14,00,000 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಗಳು ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೆ ವಂಚನೆ ಎಸಗಿದ್ದಾರೆ.
ಉಡುಪಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- DAKSHINA KANNADA4 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS2 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್
- DAKSHINA KANNADA2 days ago
ದಕ್ಷಿಣ ಕನ್ನಡ : ಹೆಬ್ಬಾವಿನ ಬಾಯಿಂದ ಬೆಕ್ಕಿನ ರಕ್ಷಣೆಗಾಗಿ ಶೋಭಕ್ಕನ ಹರಸಾಹಸ; ವೀಡಿಯೋ ವೈರಲ್
- LATEST NEWS4 days ago
ಬಲಗೈ ಬಿಟ್ಟು ಎಡಕೈಗೆಯೇ ಯಾಕೆ ವಾಚ್ ಕಟ್ಟುವುದು ಗೊತ್ತಾ ?