LATEST NEWS
ಬಂಪರ್ ಆಫರ್ ! 1444 ರೂ.ಗೆ ವಿಮಾನ ಪ್ರಯಾಣ…!
Published
1 week agoon
By
NEWS DESK2ಬಸ್ ಟಿಕೆಟ್ ದರದಲ್ಲಿ ವಿಮಾನ ಟಿಕೆಟ್ ನೀಡುವ ಬಂಪರ್ ಆಫರ್ ಅನ್ನು ಏರ್ ಇಂಡಿಯಾ ಘೋಷಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಫ್ಲಾಶ್ ಸೇಲ್ ಆರಂಭಿಸಲಾಗಿದೆ. ಈ ವಿಶೇಷ ಮಾರಾಟದ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಈ ಸೇಲ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ರೂ.1444ಕ್ಕೆ ವಿಮಾನ ಪ್ರಯಾಣ ಮಾತ್ರವಲ್ಲ ಮುಂದಿನ ವರ್ಷ ಏಪ್ರಿಲ್‌ವರೆಗೆ ಯಾವುದೇ ಸಮಯದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೋಸ್ ಮಾರಾಟದ ಟಿಕೆಟ್‌ಗಳ ಬುಕಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ.
ಈ ಫ್ಲ್ಯಾಶ್ ಸೇಲ್ ನಲ್ಲಿ ನವೆಂಬರ್ 13ರವರೆಗೆ ವಿಮಾನ ಟಿಕೆಟ್ ಬುಕ್ ಮಾಡಲು ಏರ್ ಇಂಡಿಯಾ ಅವಕಾಶ ಕಲ್ಪಿಸಿದೆ. ಈ ವಿಶೇಷ ಮಾರಾಟದ ಮೂಲಕ ನೀವು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ಈ ತಿಂಗಳ 19 ರಿಂದ ಮುಂದಿನ ವರ್ಷ ಏಪ್ರಿಲ್ 30 ರವರೆಗೆ ಯಾವುದೇ ಸಮಯದಲ್ಲಿ ಪ್ರಯಾಣಿಸಬಹುದು.
ಸಮಯವು ಆರು ತಿಂಗಳವರೆಗೆ ಇರುತ್ತದೆ. ಈ ಚಳಿಗಾಲದಲ್ಲಿ ಹಾಗೂ ಮುಂದಿನ ಬೇಸಿಗೆಯಲ್ಲಿ ಪ್ರವಾಸ ಮಾಡಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲೈಟ್ ದರಗಳ ಭಾಗವಾಗಿ, ಎಕ್ಸ್‌ಪ್ರೆಸ್ ಲೈಟ್ ಮೂಲಕ ವಿಮಾನ ಪ್ರಯಾಣವು ವಿಶೇಷ ರಿಯಾಯಿತಿಗಳೊಂದಿಗೆ ರೂ.1444 ಆಗಿರುತ್ತದೆ. ಅಲ್ಲದೆ, ನೀವು ಕೆಲವು ಮಾರ್ಗಗಳಲ್ಲಿ ಎಕ್ಸ್‌ಪ್ರೆಸ್ ಮೌಲ್ಯದ ಕೊಡುಗೆಯ ಮೂಲಕ ರೂ.1599 ಕ್ಕೆ ಟಿಕೆಟ್‌ಗಳನ್ನು ಪಡೆಯಬಹುದು.
airindiaexpress.com ನಲ್ಲಿ ಲಾಗ್ ಇನ್ ಮಾಡುವವರಿಗೆ ಶೂನ್ಯ ಅನುಕೂಲಕರ ಶುಲ್ಕವನ್ನು ಏರ್ ಇಂಡಿಯಾ ಘೋಷಿಸಿದೆ. ಸಾಮಾನು ಸರಂಜಾಮುಗಳಿಗೂ ವಿಶೇಷ ಶುಲ್ಕ ವಿಧಿಸಲಾಗುತ್ತದೆ. ಎಕ್ಸ್‌ಪ್ರೆಸ್ ಲೈಟ್ ದರಗಳಲ್ಲಿ 3 ಕೆಜಿಯವರೆಗಿನ ಹೆಚ್ಚುವರಿ ಲಗೇಜ್ ಭತ್ಯೆಯನ್ನು ಸಾಗಿಸಬಹುದು. 15 ಕೆಜಿಗಿಂತ ಹೆಚ್ಚು ಇದ್ದರೆ ರೂ. 1000 ಪಾವತಿಸಬೇಕು.
DAKSHINA KANNADA
ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?
Published
7 minutes agoon
21/11/2024By
NEWS DESK3ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.
ಇದನ್ನು ಓದಿ:ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ
ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.
LATEST NEWS
ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ
Published
41 minutes agoon
21/11/2024By
NEWS DESK2ಮಂಗಳೂರು: ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ ಗುರುವಾರ ಬೆಳಗ್ಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಮಾತಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, “ತುಳು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ವಿಶ್ವದಗಲ ಮೆಚ್ಚಿಕೊಂಡ ಅಸಂಖ್ಯ ಜನರಿದ್ದಾರೆ. ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕ, ಸಿನಿಮಾ ಮತ್ತು ತುಳು ಕಲಾವಿದರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಪಡುಬಿದ್ರಿಯ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ಸಿನಿಮಾ ಯಶಸ್ಸು ಕಾಣಲಿ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸವಾಗುತ್ತಿದೆ“ ಎಂದು ಶುಭ ಹಾರೈಸಿದರು.
ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ತುಳು ಚಿತ್ರರಂಗಕ್ಕೆ ಈಗ ಪರ್ವಕಾಲ. ಮಂಗಳೂರಿನಲ್ಲಿ 9 ಸಿನಿಮಾಗಳಿಗೆ ಚಿತ್ರೀಕರಣ ನಡೆಯುತ್ತಿವೆ. ಒಳ್ಳೊಳ್ಳೆ ಸಿನಿಮಾಗಳನ್ನು ಜನರು ಖಂಡಿತ ಸ್ವೀಕರಿಸುತ್ತಾರೆ. ಸಿನಿಮಾ ತಂಡದ ಪ್ರಯತ್ನಕ್ಕೆ ತುಳುವರು ಬೆಂಬಲ ನೀಡಬೇಕು, ಚಿತ್ರತಂಡಕ್ಕೆ ಶುಭವಾಗಲಿ“ ಎಂದರು.
ಕುಸೆಲ್ದರಸೆ ನವೀನ್ ಡಿ. ಪಡೀಲ್ ಮಾತನಾಡಿ, ”ಸಿನಿಮಾ ಯಶಸ್ಸು ಕಾಣಲಿ. ತುಳುನಾಡಿನಲ್ಲಿ ಸಿನಿಮಾ ಒಳ್ಳೆಯ ಹೆಸರು ಮಾಡಲಿ“ ಎಂದರು.
ನಾಯಕ ನಟ ಶೋಧನ್ ಶೆಟ್ಟಿ ಮಾತನಾಡಿ, ”2019ರಲ್ಲಿಯೇ ಸಿನಿಮಾ ಮಾಡಲು ತಯಾರಿ ಮಾಡಿದ್ದೆ. ಆದರೆ ಕಾರಣಾಂತರದಿಂದ ವಿಳಂಬವಾಯಿತು. ಈಗ ಕಾಲ ಕೂಡಿಬಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬರಲಿದೆ. ಭಾಗ 1ರ ಚಿತ್ರೀಕರಣ ಮುಗಿದ ಬಳಿಕ ಟೈಟಲ್ ಲಾಂಚ್ ಮಾಡಲಿದ್ದೇವೆ“ ಎಂದರು.
ದೇವಸ್ಥಾನದ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಉಮೇಶ್ ಶೆಟ್ಟಿ, ನಟ ಶೋಧನ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಡಾ ಪ್ರತೀಕ್ಷಾ, ಡಾ ನಿಖಿಲ್ ಶೆಟ್ಟಿ, ಸಂಜಯ್ ಶೆಟ್ಟಿ ಗೋಣಿಬೀಡು, ಡಾ ವೈಎನ್ ಶೆಟ್ಟಿ, ಮಿಥುನ್, ನವೀನ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಕುಳಾಯಿ, ವಿಠಲ್ ಶೆಟ್ಟಿ ಕನಕಪಾಡಿ, ಶಾಂತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಮಿ ಪಲ್ಲವಿ ಸಂತೋಷ್ ಶೆಟ್ಟಿ ಕೆಮರಾ ಚಾಲನೆ ಮಾಡಿದರು. ಶಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಿನಿಮಾ ಕುರಿತು:
ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಧನರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಸಂದೀಪ್ ಉಡುಪಿ ಕೆಮರಾ ಕಣ್ಣಲ್ಲಿ ಸಿನಿಮಾ ಮೂಡಿಬರಲಿದೆ. ರವಿರಾಜ್ ಗಾಣಿಗ ಎಡಿಟರ್, ಪ್ರಸಾದ್ ಕೆ.ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಕ್ಕಿರಲಿದೆ.
ಕಲಾವಿದರಾಗಿ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ರಮೇಶ್ ಶೆಟ್ಟಿ, ಸೂರಜ್ ಸನಿಲ್, ನಿತೇಶ್ ಶೆಟ್ಟಿ, ಕೀರ್ತನಾ ಸಾಲಿಯಾನ್, ಶೋಭಾ ಪ್ರಿಯಾ ನಾಯರ್, ಸಂದೀಪ್ ಪೂಜಾರಿ ಬಣ್ಣ ಹಚ್ಚಲಿದ್ದಾರೆ. ಕಟೀಲು, ಪಡುಬಿದ್ರಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.
LATEST NEWS
ಪ್ರತಿವರ್ಷ ಅಯ್ಯಪ್ಪ ಮಾಲೆ ಹಾಕುವ ಸ್ವಾಮಿಗಳ ಹೆಸರು ಯಾವುದು ಗೊತ್ತಾ ??
Published
1 hour agoon
21/11/2024‘ಶಬರಿಮಲೆ’ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಭಕ್ತಿಯಿಂದ ಮಾಲೆ ಧರಿಸುವ ಭಕ್ತರು. ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಜನ ಅಯ್ಯಪ್ಪ ಮಾಲೆಯನ್ನು ಧರಿಸುತ್ತಾರೆ. ಕೆಲವರು ಮಂಡಲ ದೀಕ್ಷಾ, ಇನ್ನು ಕೆಲವರು ಅರ್ಥ ಮಂಡಲ ದೀಕ್ಷಾ ತೆಗೆದುಕೊಳ್ಳುತ್ತಾರೆ. 41 ದಿನಗಳ ದೀಕ್ಷೆ ಪಡೆದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದ ಬಳಿಕ ಪೂಜೆಯೊಂದಿಗೆ ಅಯ್ಯಪ್ಪ ಮಾಲೆಯನ್ನು ತೆಗೆಯುತ್ತಾರೆ.
ಪ್ರತಿವರ್ಷ ಭಕ್ತಿಯಿಂದ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಸ್ವಾಮಿಗಳಿಗೆ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ ಎಂಬ ವಿಷಯ ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಸಾಮಾನ್ಯವಾಗಿ ಐದಕ್ಕಿಂತ ಹೆಚ್ಚು ಬಾರಿ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದವರನ್ನು ‘ಗುರು ಸ್ವಾಮಿ’ ಎನ್ನಲಾಗುತ್ತದೆ.
ಇದಕ್ಕೆ ಹೊರತಾಗಿ ಪ್ರತಿವರ್ಷ ಮಾಲೆ ಹಾಕಿದವರನ್ನು ಒಂದೊಂದು ಹೆಸರುಗಳಿಂದ ಕರೆಯಲಾಗುತ್ತದೆ. ಆ ಹೆಸರುಗಳು ಯಾವುದ್ಯಾವುದು ಎಂಬ ವಿವರ ಇಲ್ಲಿವೆ.
18 ವರ್ಷಗಳಿಂದ ಮಾಲೆ ಹಾಕುವ ಸ್ವಾಮಿಗಳ ಹೆಸರು :
ಮೊದಲನೇ ಬಾರಿಗೆ ದೀಕ್ಷೆ ಪಡೆದುಕೊಂಡ ಸ್ವಾಮಿಗಳನ್ನು ಕನ್ನೆಸ್ವಾಮಿ ಎಂದು ಕರೆಯಲಾಗುತ್ತದೆ. ಎರಡನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಕತ್ತಿಸ್ವಾಮಿ, ಮೂರನೇ ಬಾರಿಗೆ ಮಾಲೆ ಹಾಕಿದವರನ್ನು ಗಂಟ ಸ್ವಾಮಿ, ನಾಲ್ಕನೇ ಬಾರಿಗೆ ಮಾಲೆ ಹಾಕಿದರೇ ಅವರನ್ನು ಗದಸ್ವಾಮಿ, ಆ ಬಳಿಕ ಮಾಲೆ ಹಾಕುವ ಸ್ವಾಮಿಗಳನ್ನು ಬಿಲ್ಲು ಸ್ವಾಮಿ, ಆರನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಜ್ಯೋತಿ ಸ್ವಾಮಿ, ಏಳನೇ ಬಾರಿಗೆ ಸೂರ್ಯ ಸ್ವಾಮಿ, ಎಂಟನೇ ಬಾರಿಗೆ ಚಂದ್ರ ಸ್ವಾಮಿ, ಒಂಬತ್ತನೇ ಬಾರಿಗೆ ಮಾಲೆ ಹಾಕಿದವರನ್ನು ವೇಲು ಸ್ವಾಮಿ, ಹತ್ತನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ವಿಷ್ಣು ಚಕ್ರ ಸ್ವಾಮಿ ಎಂದು ಕರೆಯಲಾಗುತ್ತದೆ. ಹನ್ನೊಂದನೇ ಬಾರಿಗೆ ಮಾಲೆ ಹಾಕಿದರೆ ಶಂಖಾದರ ಸ್ವಾಮಿ, ಹನ್ನೆರಡನೇ ಬಾರಿಗೆ ಮಾಲೆ ಹಾಕಿದವರನ್ನು ನಾಗಾಭರಣ ಸ್ವಾಮಿ, ಬಳಿಕ ಹದಿಮೂರನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಶ್ರೀಹರಿ ಸ್ವಾಮಿ, ಹದಿನಾಲ್ಕನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಪದ್ಮಸ್ವಾಮಿ, ಹದಿನೈದನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ತ್ರಿಶೂಲಸ್ವಾಮಿ ಎಂದು ಹೇಳಲಾಗುತ್ತದೆ.ಹದಿನಾರನೇ ಬಾರಿಗೆ ಮಾಲೆ ಹಾಕಿದರೆ ಅಂತಹ ಸ್ವಾಮಿಯನ್ನು ಶಬರಿಗಿರಿಸ್ವಾಮಿ, ಹದಿನೇಳನೇ ಬಾರಿಗೆ ಮಾಲೆ ಹಾಕುವ ಸ್ವಾಮಿಯನ್ನು ಓಂಕಾರ ಸ್ವಾಮಿ, ಹದಿನೆಂಟನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ನಾರಿಕೇಳಸ್ವಾಮಿ ಎಂದು ಕರೆಯಲಾಗುತ್ತದೆ.
LATEST NEWS
‘ಓಲಾ ಎಲೆಕ್ಟ್ರಿಕ್ ಕಂಪನಿ’ಯಿಂದ 500 ಉದ್ಯೋಗಿಗಳು ವಜಾ
ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷೀ ಹಣ ?
ನೀವು ಹೀಗೆ ಮಾಡಿದ್ರೆ ‘ಗೂಗಲ್ ಪೇ’ನಲ್ಲಿ ಸುಲಭವಾಗಿ 1,000 ರೂಪಾಯಿ ಪಡೆಯಬಹುದು
ತಾಯಂದಿರಿಂಲೇ ಮಕ್ಕಳ ಅ*ಪಹರಣ; ಉದ್ದೇಶ ಕೇಳಿದ್ರೆ ನೀವೆ ಶಾಕ್ ಆಗ್ತೀರ !!
ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ
ಎಕ್ಸ್‌ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ
Trending
- LATEST NEWS3 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- LATEST NEWS1 day ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- BIG BOSS4 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS1 day ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ