LATEST NEWS
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ: 38 ಮಂದಿಗೆ ಮರಣದಂಡನೆ-11 ಜನರಿಗೆ ಜೀವಾವಧಿ ಶಿಕ್ಷೆ
Published
3 years agoon
By
Adminಅಹಮದಾಬಾದ್: 2008ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ವಿಶೇಷ ಕೋರ್ಟ್ ಮರಣದಂಡನೆ ವಿಧಿಸಲಾಗಿದೆ. 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಜುಲೈ 26, 2008 ರಂದು 70 ನಿಮಿಷಗಳ ಅವಧಿಯಲ್ಲಿ ಅಹಮದಾಬಾದ್‌ನ ವಿವಿಧ ಪ್ರದೇಶಗಳಲ್ಲಿ 20 ಬಾಂಬ್‌ಗಳು ಸ್ಫೋಟಗೊಂಡಿದ್ದವು.
ಸ್ಫೋಟಗಳಲ್ಲಿ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಸದಸ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು.
2002ರ ಗೋಧ್ರಾ ನಂತರದ ಗಲಭೆಗೆ ಪ್ರತೀಕಾರವಾಗಿ ಐಎಂ ಭಯೋತ್ಪಾದಕರು ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಜುಲೈ 26, 2008 ರಂದು ಅಹಮದಾಬಾದ್ ನಗರದಲ್ಲಿ ಸರಣಿ ಸ್ಫೋಟ ನಡೆದಿತ್ತು. ಅದರಲ್ಲಿ 56 ಜನರು ಮೃತರಾಗಿದ್ದರೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಫೆಬ್ರವರಿ 8, 2022 ರಂದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.
2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ 77 ಆರೋಪಿಗಳ ಪೈಕಿ 28 ಮಂದಿಯನ್ನು ಗುಜರಾತ್‌ನ ವಿಶೇಷ ನ್ಯಾಯಾಲಯ ಫೆಬ್ರವರಿ 8ರಂದು ಖುಲಾಸೆಗೊಳಿಸಿತ್ತು. ಉಳಿದ 49 ಜನರನ್ನು ಅಪರಾಧಿಗಳೆಂದು ಘೋಷಿಸಲಾಗಿತ್ತು.
ಇಸ್ಲಾಮಿಕ್ ಭಯೋತ್ಪಾದಕ ಗುಂಪು, ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಈ ಹಿಂದೆ 85 ಜನರನ್ನು ಬಂಧಿಸಿದ್ದರು. ಆದರೆ, 78 ಜನರ ವಿರುದ್ಧ ಮಾತ್ರ ವಿಚಾರಣೆ ಪ್ರಾರಂಭವಾಗಿತ್ತು.
ಆರೋಪಿಗಳ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಹೊರಿಸಲಾಗಿತ್ತು.
LATEST NEWS
ಕದ್ದ ಚಿನ್ನಾಭಾರಣಗಳನ್ನು ಮನೆಯ ಜಗಲಿಯ ಮೇಲೆ ಇಟ್ಟು ಹೋದ ಕಳ್ಳರು !
Published
2 minutes agoon
25/11/2024By
NEWS DESK3ಮಂಗಳೂರು/ಮಂಡ್ಯ: ರಾಜ್ಯದಲ್ಲಿ ಕಳ್ಳತನ ಎನ್ನುವುದು ಸಾಮಾನ್ಯವಾಗಿದೆ. ಕಳ್ಳರು ಕದ್ದ ಚಿನ್ನಾಭಾರಣಗಳನ್ನು ಎಲ್ಲಿಯಾದರೂ ಮಾರಿ ಬಿಡುತ್ತಾರೆ. ಆದರೆ ಕಳ್ಳರಲ್ಲೂ ಪ್ರಾಮಾಣಿಕತೆ ಇದೆ ಎಂದು ಮಂಡ್ಯದಲ್ಲಿ ಸಾಕ್ಷಿಯಾಗಿದೆ.
ಈ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವವರ ಕುಟುಂಬ ಮನೆದೇವರ ಪೂಜೆಗೆಂದು ಹೋಗಿದ್ದರು. ಈ ವೇಳೆ ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು ಬೀರುವನ್ನು ಒಡೆದು ಕಳ್ಳತನ ಮಾಡಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂನ ಮೂರು ಜೊತೆ ಓಲೆಗಳು ಸೇರಿ ಒಟ್ಟು 75 ಗ್ರಾಂನಷ್ಟು ಚಿನ್ನಾಭರಣ ಕದ್ದಿದ್ದರು.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ
ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಕಳ್ಳರಿಗೆ ಪೊಲೀಸರ ಭಯವೋ ಅಥವಾ ಮನೆದೇವರ ಆಶೀರ್ವಾದವೋ ಗೊತ್ತಿಲ್ಲ, ಪೊಲೀಸರಿಗೆ ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಮನೆಯ ಮುಂಭಾಗದ ಜಗಲಿಯ ಮೇಲೆ ಚಿನ್ನಾಭರಣಗಳನ್ನು ಇಟ್ಟು ಹೋಗಿದ್ದಾರೆ.
ಚಿನ್ನಾಭರಣ ವಾಪಸ್ಸು ಸಿಕ್ಕ ಖುಷಿಯಲ್ಲಿ ಸಿದ್ದೇಗೌಡರ ಕುಟುಂಬ ನಿರಾಳವಾಗಿದೆ.
LATEST NEWS
WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ
Published
34 minutes agoon
25/11/2024By
NEWS DESK4ಮಂಗಳೂರು/ಕಾನ್ಪುರ : ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತುವ ವೇಳೆ ಅಥವಾ ಇಳಿಯುವ ವೇಳೆ ಆಯತಪ್ಪಿ ಬಿದ್ದ ಘಟನೆಗಳು ಸಂಭವಿಸಿವೆ. ಕೆಲವೊಮ್ಮೆ ಅದೃಷ್ಟವಶಾತ್, ಪಾರಾಗಿರುವುದಿದೆ. ರೈಲ್ವೇ ಸಿಬ್ಬಂದಿ ರಕ್ಷಿಸಿರುವ ಘಟನೆಗಳೂ ಇವೆ. ಇಂತಹ ಹಲವು ವೀಡಿಯೋಗಳು ವೈರಲ್ ಆಗಿವೆ. ಇದೀಗ ಮತ್ತೊಂದು ಅಂತಹುದೇ ವೀಡಿಯೋ ವೈರಲ್ ಆಗಿದೆ.
ರೈಲು ಬಂದು ನಿಂತಿತ್ತು. ಮಹಿಳೆ ರೈಲು ಹತ್ತಿದ್ದರು. ಆದರೆ, ಮಕ್ಕಳು ಪ್ಲಾಟ್ ಫಾರ್ಮ್ ನಲ್ಲಿಯೇ ಉಳಿದಿದ್ದರು. ಮಕ್ಕಳು ಅಲ್ಲೇ ಇರುವುದನ್ನು ನೋಡಿ ಮಹಿಳೆ ಮಕ್ಕಳನ್ನು ಕರೆದಿದ್ದಾರೆ. ಅವರು ಬರದೇ ಇದ್ದಾಗ ರೈಲಿನಿಂದ ಕೆಳಗೆ ಹಾರಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ರೈಲು ಹಾಗೂ ಪ್ಲಾರ್ಟ್ ಫಾರ್ಮ್ ನಡುವೆ ಸಿಲುಕಿಕೊಂಡಿದ್ದಾರೆ. ತಕ್ಷಣ ರೈಲ್ಬೇ ಪೊಲೀಸರು ಆಕೆಯನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಸದ್ಯ ಘಟನೆಯ ವೀಡಿಯೋ ವೈರಲ್ ಆಗಿದ್ದು, ಇದು ಕಾನ್ಪುರ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮಹಿಳೆಯನ್ನು ಜಿಆರ್‌ಪಿ ಸಬ್‌ಇನ್ಸ್‌ಪೆಕ್ಟರ್ ಶಿವ ಸಾಗರ್ ಶುಕ್ಲಾ ಮತ್ತು ಕಾನ್‌ಸ್ಟೇಬಲ್ ಅನೂಪ್ ಕುಮಾರ್ ಪ್ರಜಾಪತಿ ರಕ್ಷಿಸಿದ್ದಾರೆ.
ಇದನ್ನೂ ಓದಿ : ಚಾರ್ಜರ್ ಕೇಬಲ್ ಗೆ ಗಮ್ ಟೇಪ್ ಸುತ್ತಿ ಚಾರ್ಜ್ ಮಾಡುವವರು ಇದನ್ನು ಓದಲೇ ಬೇಕು !
11 ಸೆಕೆಂಡುಗಳಈ ವೀಡಿಯೋದಲ್ಲಿ ಇಬ್ಬರು ರೈಲ್ವೆ ಸಿಬ್ಬಂದಿ ರೈಲಿನಿಂದ ಜಿಗಿದ ಮಹಿಳೆಯನ್ನು ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ಆಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜಿಆರ್‌ಪಿ ಸಿಬ್ಬಂದಿ ಆಕೆಯನ್ನು ಹಿಡಿದು ರಕ್ಷಿಸಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದೆ.
DAKSHINA KANNADA
ಮಸ್ಕತ್ ನಲ್ಲಿ ಬಿರುವ ಜವನೆರ್ ಸಂಯೋಜನೆಯ ಕ್ರೀಡಾಕೂಟ
Published
1 hour agoon
25/11/2024By
NEWS DESK4ಮಂಗಳೂರು/ಮಸ್ಕತ್ : ಬಿರುವ ಜವನೆರ್ ಮಸ್ಕತ್ ಆಯೋಜಿಸಿದ ಕರ್ನಾಟಕ ಪ್ರೀಮಿಯಾರ್ ಲೀಗ್ ನ 2024 ನೇ ಸಾಲಿನ ಕ್ರೀಡಾಕೂಟ ಮಸ್ಕತ್ ನ ಅಲ್ ಹೈಲ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಓಮನ್ ಕ್ರಿಕೆಟ್ ನ ಟಿ20 ತಂಡದ ನಾಯಕ ವಿನಾಯಕ್ ಶುಕ್ಲ ನೆರವೇರಿಸಿದರು.
ಈ ಸಂದರ್ಭ ಉತ್ತಮ್ ಕೋಟ್ಯಾನ್, ಮುಸ್ತಫಾ, ರಮಾನಂದ್ ಬಂಗೇರ, ಚಂದ್ರಕಾಂತ್ ಕೋಟ್ಯಾನ್, ದಾಮೋದರ್ ಶೆಟ್ಟಿ, ಪದ್ಮಾಕರ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಪುದರ್ ದೀತಿಜಿ ನಾಟಕದ ಪೋಸ್ಟರ್ ಬಿಡುಗಡೆ :
ಇದೇ ಸಂದರ್ಭದಲ್ಲಿ ಜನವರಿ 10 ರಂದು ಮಸ್ಕತ್ ನ ಆಲ್ ಫಾಜಾಜ್ ಹೋಟೆಲ್ ನಲ್ಲಿ ನಡೆಯಲಿರುವ ಕಾಪಿಕಾಡ್ ಅವರ ಚಾ ಪರ್ಕ ತಂಡದ ” ಪುದರ್ ದೀತಿಜಿ ” ನಾಟಕದ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರ ಅಭಿಯಾನಕ್ಕೆ ಡಾ. ದೇವದಾಸ್ ಕಾಪಿಕಾಡ್ ಹಾಗೂ ಅರ್ಜುನ್ ಕಾಪಿಕಾಡ್ ಚಾಲನೆ ನೀಡಿದರು.
LATEST NEWS
ಚಾರ್ಜರ್ ಕೇಬಲ್ ಗೆ ಗಮ್ ಟೇಪ್ ಸುತ್ತಿ ಚಾರ್ಜ್ ಮಾಡುವವರು ಇದನ್ನು ಓದಲೇ ಬೇಕು !
ಕಾಮೆಂಟ್ ಮೂಲಕ ಹಿಂದೂ ಧರ್ಮದ ದೇವರುಗಳ ಬಗ್ಗೆ ಅವಹೇಳನ: ದೂರು ದಾಖಲು
ಬಿಗ್ ಬಾಸ್ ನಿಂದ ಧರ್ಮ ಎಲಿಮಿನೆಟ್ ಆಗಿದ್ದು ಯಾಕೆ ಗೊತ್ತಾ ?
ಸ್ನೇಹಿತನಿಗೆ ಥಳಿಸಿ ಅ*ಪ್ರಾಪ್ತೆ ಮೇಲೆ ಅ*ತ್ಯಾಚಾ*ರ ಎಸಗಿದ ಟ್ರಕ್ ಚಾಲಕ
ನಿನ್ನೆಯ ಹರಾಜಿನಲ್ಲಿ ಆರ್ ಸಿಬಿ ಖರೀದಿಸಿದ ಆಟಗಾರರು ಇವರೇ !
ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!
Trending
- LATEST NEWS5 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru3 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION4 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS7 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!