ತಲಪಾಡಿ: ರಸ್ತೆಯಲ್ಲಿ ಬಿದ್ದಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಬ್ರಾಸ್ಲೆಟ್ ಅನ್ನು ವಾರಿಸುದಾರರಿಗೆ ತಲುಪಿಸಿದ ಘಟನೆ ತಲಪಾಡಿಯಲ್ಲಿ ನಡೆದಿದೆ.
ತಲಪಾಡಿ ಗ್ರಾಮದ ತಚ್ಚಾನಿ ರಸ್ತೆಯಲ್ಲಿ ಬಶೀರ್ ಅಹ್ಮದ್ ಉದ್ಯಾವರ ಎಂಬುವವರಿಗೆ ಸುಮಾರು ಒಂದು ಲಕ್ಷದ ಹತ್ತು ಸಾವಿರ ಮೌಲ್ಯದ ಚಿನ್ನದ ಬ್ರಾಸ್ಲೆಟ್ ಒಂದು ಬಿದ್ದು ಸಿಕ್ಕಿತ್ತು.
ಇದನ್ನು ವಾಟ್ಸಾಪ್ ಮೂಲಕ ಪ್ರಚಾರಪಡಿಸಿ ಅದರ ಮೂಲ ವಾರಿಸುದಾರರಾದ ಮೋಹನ್ ಮಾಡ ಅವರನ್ನು ಪತ್ತೆ ಹಚ್ಚಿ ಇಂದು ತಲಪಾಡಿ ಗ್ರಾಮದ ಎಸ್.ಡಿ.ಪಿ.ಐ ಪಕ್ಷದ ಕಚೇರಿಯಲ್ಲಿ ಈ ಬ್ರಾಸ್ಲೆಟ್ ಅನ್ನು ಹಸ್ತಾಂತರಿಸಲಾಯಿತು.
ಬಶೀರ್ ಅಹ್ಮದ್ ರವರ ಮಾನವೀಯ ಗುಣವನ್ನು ಮೆಚ್ಚಿ ಮೋಹನ್ ಮಾಡ ಅವರು ಬಶೀರ್ ಅಹ್ಮದ್ ಉದ್ಯಾವರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬಹುಮಾನವನ್ನು ನೀಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ಬ್ಲಾಕ್ ಸಮಿತಿ ಅಧ್ಯಕ್ಷ ಹಕೀಮ್ ಕೆಸಿ ನಗರ, ಸ್ಥಳೀಯ ಮುಖಂಡ ಇಸ್ಮಾಯಿಲ್ ಸೇಠ್ ಉಪಸ್ಥಿತರಿದ್ದರು.