Connect with us

    kerala

    ದೇಹ ಸುಖಕ್ಕಾಗಿ 65ರ ಮಲಯಾಳಂ ನಟನನ್ನು ಮದುವೆಯಾದ ನಟಿ; ಫೋಟೋಸ್ ಫುಲ್ ವೈರಲ್

    Published

    on

    ಮಂಗಳೂರು/ಕೇರಳ: ಮಲಯಾಳಂ ಕಿರುತೆರೆಯ ಜನಪ್ರಿಯ ನಟ ವೇಣುಗೋಪಾಲ್‌ ಅವರ ಮದುವೆ ನಟಿ ದಿವ್ಯಾ ಶ್ರೀಧರ್‌ ಜೊತೆ ನಡೆದಿದೆ. ಇತ್ತೀಚೆಗೆ ಗುರುವಾಯೂರು ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ನಡೆದಿದ್ದು, ಅದರ ಫೋಟೋಸ್ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಸ್ ನೋಡಿದ ಅನೇಕರು ಈ ಜೋಡಿಯ ಬಗ್ಗೆ ಕೆಟ್ಟದಾಗಿ ಕಮಂಟ್ ಮಾಡಿದ್ದಾರೆ. ಇದೊಂದು ಸೆಕ್ಸ್ ಆಸಕ್ತಿಗಾಗಿ ಬೆಸೆದ ಸಂಬಂಧ ಎಂದು ಸಾಕಷ್ಟು ಜನರು ಟೀಕೆ ಮಾಡಿದ್ದಾರೆ.

    ನೂತನವಾಗಿ ಮದುವೆಯಾದ ಜೋಡಿ ಸಿನೆಮಾ ಹಿನ್ನಲೆಯವರಾಗಿದ್ದು, ನಟನೆಯ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಇದೇ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಪ್ತಪದಿ ತುಳಿದಿದ್ದಾರೆ. ಗುರುವಾಯೂರು ಶ್ರೀಕೃಷ್ಣನ ಸನ್ನಿದಿಯಲ್ಲಿ ತಮ್ಮ ಅತ್ಯಾಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ.

    ನಟಿ ದಿವ್ಯಾ ಶ್ರೀಧರ್ ಅವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಮಕ್ಕಳೂ ಕೂಡಾ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕ್ರಿಸ್‌ ವೇಣುಗೋಪಾಲನ್‌ ಅವರು ಮದುವೆಯಲ್ಲಿ ಉದ್ದನೆಯ ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡಿದ್ದು, ನಟಿ ದಿವ್ಯಾ ಅವರಿಗಿಂತ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವರಂತೆ ಕಾಣುತ್ತಿದ್ದಾರೆ. ಹೀಗಾಗಿ ಈ ಫೋಟೋ ವೀಕ್ಷಿಸಿದ ಹಲವರು ಕೆಟ್ಟ ಕಮೆಂಟ್ ಮಾಡಿದ್ದಾರೆ.
    ಜನರ ಕಮೆಂಟ್ ಬಗ್ಗೆ ತೀಕ್ಷ್ಣವಾಗಿ ಉತ್ತರ ನೀಡಿರುವ ನಟಿ ದಿವ್ಯಾ ಶ್ರೀಧರ್ ಮದುವೆ ಹಾಗೂ ವಯಸ್ಸಿನ ಬಗ್ಗೆ ಮಾತನಾಡಿದವರಿಗೆ ತಿರುಗೇಟು ನೀಡಿದ್ದಾರೆ. “ನಾನು ನನ್ನ ಮಕ್ಕಳನ್ನು ಸುರಕ್ಷಿತವಾಗಿ ಬೆಳೆಸಲು ಬಯಸುತ್ತೇನೆ ಹಾಗೂ ಮಕ್ಕಳಿಗೆ ತಂದೆ ಮತ್ತು ನನಗೆ ಗುರುತು ಹೇಳಿಕೊಳ್ಳಲು ಪತಿ ಬೇಕು” ಎಂದು ಮದುವೆಯ ಉದ್ದೇಶ ತಿಳಿಸಿದ್ದಾರೆ. ಅದೇ ರೀತಿ ಸೆಕ್ಸ್‌ ವಿಚಾರ ಮಾತನಾಡಿದ ಜನರಿಗೆ ಖಾರವಾಗಿ ಉತ್ತರಿಸಿರುವ ದಿವ್ಯಾ ಶ್ರೀಧರ್ “ಲೈಂಗಿಕತೆಯ ಬಗ್ಗೆ ಎಲ್ಲಾದರೂ ಬರೆಯಲಾಗಿದೆಯೇ ? ಲೈಂಗಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲವೇ ? ಲೈಂಗಿಕತೆಯು ಜೀವನದ ಒಂದು ಭಾಗವಾಗಿದೆ. ನನ್ನ ಪತಿಗೆ 49 ವರ್ಷ ಹಾಗೂ ನನಗೆ 40 ವರ್ಷ ಪ್ರಾಯವಾಗಿದೆ. ನಮ್ಮ ವಯಸ್ಸಿನ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಮಾತನಾಡಿ. 60 ವರ್ಷ ಅಥವಾ 70 ವರ್ಷವಾದ್ರೂ ಮದುವೆಯಾದರೆ ತಪ್ಪೇನಿದೆ” ? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ, ಆಡಿಕೊಳ್ಳುವ ಬಾಯಿಯನ್ನು ಮುಚ್ಚಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

    kerala

    ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ

    Published

    on

    ಮಂಗಳೂರು/ಕೇರಳ : ರೈಲು ಹಳಿ ದಾಟುವಾಗ ವಿದ್ಯಾರ್ಥಿನಿಯೊಬ್ಬಳಿಗೆ ರೈಲು ಡಿ*ಕ್ಕಿಯಾಗಿ ಮೃ*ತಪಟ್ಟ ದಾರುಣ ಘಟನೆ ಮಯನಾಡು ರೈಲು ನಿಲ್ದಾಣದಲ್ಲಿ ನಡೆದಿದೆ.

    ಮೃ*ತಪಟ್ಟ ವಿದ್ಯಾರ್ಥಿನಿ ದೇವಾನಂದ (17) ಎಂದು ಗುರುತಿಸಲಾಗಿದೆ.

    ಮಯನಾಡು ಹೈಯರ್ ಸೆಕೆಂಡರಿ ಶಾಲೆಯ ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ದೇವಾನಂದ ಮಾಯನಾಡು ರೈಲು ನಿಲ್ದಾಣದಲ್ಲಿ ಹಳಿ ದಾಟಿ ಪ್ಲಾಟ್‌ಫಾರ್ಮ್ಗೆ ಹತ್ತಲು ಯತ್ನಿಸುತ್ತಿದ್ದಾಗ ಈ ದು*ರ್ಘಟನೆ ನಡೆದಿದೆ.

    ಮಯನಾಡು ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್ನಲ್ಲಿ ನಿಲುಗಡೆಗೊಂಡಿದ್ದ ನಾಗರ್‌ಕೋಯಿಲ್-ಕೊಟ್ಟಾಯಂ ಪ್ಯಾಸೆಂಜರ್ ರೈಲು ಅದರ ಮುಂಭಾಗದ ಹಳಿಯನ್ನು ದಾಟಿ ಎರಡನೇ ಪ್ಲಾಟ್‌ಫಾರ್ಮ್ಗೆ ಪ್ರವೇಶಿಸಿದಾಗ ನೇತ್ರಾವತಿ ಎಕ್ಸ್ಪ್ರೆಸ್ ಬಂದಿದೆ.

    ದೇವಾನಂದ ತನ್ನ ಸಹಪಾಠಿಗಳೊಂದಿಗೆ ರೈಲ್ವೇ ಪ್ರವೇಶಿಸಿ ಜೊತೆಯಲ್ಲಿದ್ದ ಇತರ ವಿದ್ಯಾರ್ಥಿಗಳು ಪ್ಲಾಟ್‌ಫಾರ್ಮ್ಗೆ ಎಳೆದೊಯ್ದರು, ಆದರೆ ದೇವಾನಂದ ರೈಲಿಗೆ ಡಿ*ಕ್ಕಿ ಹೊಡೆದು ಜೀ*ವ ಕಳೆದುಕೊಂಡಿದ್ದಾರೆ. ಮಕ್ಕಳು ರೈಲಿನ ಮುಂದೆ ಇರುವುದನ್ನು ತಿಳಿದ ರೈಲಿನ ಲೊಕೊ ಪೈಲಟ್ ನಿಲ್ಲಿಸದೆ ಹಾರ್ನ್ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.

    Continue Reading

    kerala

    ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ : ರಂಗ ಕಲಾವಿದರಿಬ್ಬರ ದಾ*ರುಣ ಸಾವು..!

    Published

    on

    ಕೇರಳ : ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿ ಬಸ್ವೊಂದು ಅ*ಪಘಾತಕ್ಕೆ ಒಳಗಾಗಿ, ಇಬ್ಬರು ದಾ*ರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರಿನ ಸಮೀಪದ ಕೆಲಕಮ್  ಬಳಿ ನಿನ್ನೆ (ನ.15) ಬೆಳಿಗ್ಗೆ ಸಂಭವಿಸಿದೆ.

    ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದ ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾ*ವನ್ನಪ್ಪಿರುವ ದು*ರ್ದೈವಿಗಳು.

    ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅ*ನಾಹುತ ನಡೆದಿದೆ. ಘಟನೆಯಲ್ಲಿ 9 ಮಂದಿ ಗಾ*ಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂ*ಭೀರವಾಗಿದೆ. ಅ*ಪಘಾತದ ಶಬ್ಧ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

    ‘ಕಯಂಕುಮಂ ದೇವ ಕಮ್ಯೂನಿಕೇಷ’ನ್ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್‌ನ ಸುಲ್ತಾನ್ ಬಥೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್ ಟೌನ್ ರಸ್ತೆ ಮಾರ್ಗವಾಗಿ ಕೆಲಕಮ್ ಪರ್ಯಾಯ ಮಾರ್ಗವನ್ನು ಮ್ಯಾಪ್ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ಎಸ್ ತಿರುಗಳಿಂದಾಗಿ ಮಿನಿ ಬಸ್ ಅ*ಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಾ*ಯಗೊಂಡವರನ್ನು ಕಾಯಂಕುಲಂನ ಉನ್ನಿ, ಉಮೇಶ್, ಸುರೇಶ್ ಮತ್ತು ಶಿಬು, ಎರ್ನಾಕುಲಂನ ಬಿಂಧು, ಕಲ್ಲುವತುಕ್ಕಲ್ನ ಚೆಲ್ಲಪ್ಪನ್ ಮತ್ತು ಕೊಲ್ಲಂನ ಶ್ಯಾಮ್ ಹಾಗೂ ಅಥಿರುಂಗಲ್ನ ಸುಭಾಶ್ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    Continue Reading

    kerala

    ವಿದ್ಯಾರ್ಥಿ ಖಾ*ಸಗಿ ಅಂಗಕ್ಕೆ ಮೆಣಸಿನ ಪುಡಿ ಹಾಕಿ, ಐರನ್ ಬಾಕ್ಸ್ ನಿಂದ ಬರೆ ; ಶಿಕ್ಷಕ ಅರೆಸ್ಟ್

    Published

    on

    ಮಂಗಳೂರು/ಕೇರಳ : ಶಿಕ್ಷಕನೊಬ್ಬ ವಿದ್ಯಾರ್ಥಿಯ ಖಾ*ಸಗಿ ಅಂಗಕ್ಕೆ ಮೆಣಸಿನ ಪುಡಿ ಹಾಕಿ, ಐರನ್ ಬಾಕ್ಸ್ ನಿಂದ ಬರೆ ಎಳೆದ ಅಪರೂಪದ ದುರ್ಘಟನೆ ಉತ್ತರ ಕೇರಳದಲ್ಲಿ ನಡೆದಿದೆ.

    ಪೊಲೀಸರ ಪ್ರಕಾರ, ಮದರಸಾ ಮೂಲದ ಶಿಕ್ಷಕನು ಬಾಲಕನ ಖಾ*ಸಗಿ ಭಾ*ಗಕ್ಕೆ ಮೆಣಸಿನ ಪುಡಿ ಹಚ್ಚಿ ಬಳಿಕ . ಐರನ್ ಬಾಕ್ಸ್ ನಿಂದ ಬರೆ ಎಳೆದಿದ್ದಾನೆ ಎಂದಿದ್ದಾರೆ. ಆರೋಪಿ ಮಲಪ್ಪುರಂ ಜಿಲ್ಲೆಯ ತಾನೂರ್ ಮೂಲದ ಉಮೈರ್ ಅಶ್ರಫಿ ಎಂದು ಗುರುತಿಸಲಾಗಿದೆ.

    ಈ ಘಟನೆಯ ಕುರಿತು ವಿದ್ಯಾರ್ಥಿಯು ಪೊಲೀಸರಿಗೆ ದೂರು ನೀಡಿದ್ದು, ತನಿಖೆಯ ವೇಳೆ ಅಶ್ರಫಿ ಕೇರಳ ರಾಜ್ಯದಿಂದ ಪರಾರಿಯಾಗಿರುವುದು ತಿಳಿಯಿತು. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಅಡಗಿಕೊಂಡಿದ್ದ ಆತನಿಗಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ತಮಿಳುನಾಡಿನ ಕೊಯಮತ್ತೂರಿನಿಂದ ಅಶ್ರಫಿ ತನ್ನ ತವರು ಜಿಲ್ಲೆಗೆ ಮರಳಲಿದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸ್ ತಂಡ ಗುರುವಾರ (ನ.7) ತಾನೂರಿನಲ್ಲಿ ಬೀಡುಬಿಟ್ಟಿದ್ದು, ಶೋಧ ಕಾರ್ಯ ನಡೆಸಿದೆ. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಅಶ್ರಫಿಯನ್ನು ಕೊನೆಗೂ ಬಂಧಿಸಲಾಯಿತು.

    ಇದನ್ನೂ ಓದಿ : ಪುಟ್ಟ ಮಗುವಿನ ಕೈ ಮುರಿದ ಕ್ರೂ*ರಿ ಟೀಚರ್ !!

    ಶಿಕ್ಷಕನ ಬಂಧನದ ಬಳಿಕ, ಕನ್ನವಂ ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಯಾಕಾಗಿ ಹಾಗೆ ಮಾಡಿದ? ಅವನ ಉದ್ದೇಶವೇನು? ಎಂಬುವುದು ತನಿಖೆಯ ಬಳಿಕ ತಿಳಿದು ಬರಬೇಕಷ್ಟೇ. ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಶುಕ್ರವಾರ (ನ.8) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    Continue Reading

    LATEST NEWS

    Trending