Connect with us

LATEST NEWS

ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು

Published

on

ಪುತ್ತೂರು: ಬಲ್ನಾಡು ಉಜ್ರುಪ್ಪಾದೆ ಶಿವಪ್ರಸಾದ್ ಭಟ್‌ರವರ ಮನೆಯಿಂದ ಫೆ.26 ರಂದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


ಬಂಧಿತರನ್ನು ತಾರಿಗುಡ್ಡೆ ಮಹಮ್ಮದ್ ಅಶ್ರಫ್(42), ಸಾಲ್ಮರ ನಿವಾಸಿ ಮೊಹಮ್ಮದ್ ಸಲಾಂ ಎನ್ನಲಾಗಿದೆ.

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಲ್ನಾಡು ಉಜ್ರುಪ್ಪಾದ ಶಿವಪ್ರಸಾದ್ ಭಟ್ ಇವರ ಮನೆಯಿಂದ ಫೆ.26 ರಂದು ರಾತ್ರಿ ಯಾರೂ ಇಲ್ಲದ ಸಮಯ ಮನೆಯ ಬೀಗವನ್ನು ಮುರಿದು ಸುಮಾರು 160 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದರ ಪತ್ತೆಯ ಬಗ್ಗೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ವಿಶೇಷ ಪತ್ತೆ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಈ ಬಗ್ಗೆ ವಿಶೇಷ ಪತ್ತೆ ತಂಡವು ತನಿಖೆ ಮಾಡಿದಾಗ ಇವರು ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಅಜ್ಜನಡ್ಕ ಮಹಮ್ಮದ್ ಅಲಿ ಎಂಬವರ ಮನೆ ಕಳ್ಳತನ, ಬಲ್ನಾಡು ಗ್ರಾಮದ ವಿಷ್ಣು ಮೂರ್ತಿ ದೈವಸ್ಥಾನ ಕಳ್ಳತನ ಪ್ರಕರಣ, ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿ ಕಳ್ಳತನ, ಉತ್ತರ ಕನ್ನಡ ಜಿಲ್ಲೆ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ ಹಾಗೂ ಕೇರಳ ರಾಜ್ಯದ ಕಾಸರಗೋಡು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಳ ದಲ್ಲಿ ಎರಡು ಮನ ಕಳ್ಳತನ ಪ್ರಕರಣಗಳ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿತರಿಂದ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಲ್ಯಾಪ್ ಟಾಪ್, ಸಿಸಿ ಕ್ಯಾಮೆರಾ ಡಿವಿಆರ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಮೋಟಾರು ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಈ ಹಿಂದೆ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಹಲವು ಮನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಇವರುಗಳ ಮೇಲೆ ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆ, ಸುಳ್ಯ ಪೊಲೀಸ್ ಠಾಣೆ, ಪುತ್ತೂರು ನಗರ ಠಾಣೆ, ಬೆಳ್ಳಾರೆ ಪೊಲೀಸ್ ಠಾಣೆ, ಬಂಟ್ವಾಳ ಪೊಲೀಸ್ ಠಾಣೆ, ಧರ್ಮಸ್ಥಳ ಪೊಲೀಸ್ ಠಾಣೆ, ವಿಟ್ಲ ಪೊಲೀಸ್ ಠಾಣೆ, ಕೇರಳ ರಾಜ್ಯದ ಮಲಪ್ಪುರಂ ಕೊಂಡೆಟ್ಟಿ ಪೊಲೀಸ್ ಠಾಣೆ, ಆದೂರೂ ಪೊಲೀಸ್ ಠಾಣೆ, ಕೊಡಗಿನ ಸೋಮಾವಾರ ಪೇಟೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರುಗಳ ಮೇಲೆ ವಾರಂಟ್ ಜ್ಯಾರಿಯಾಗಿದ್ದು ತಲೆಮರೆಸಿಕೊಂಡಿದ್ದು ವಿಶೇಷ ತಂಡವು ಪತ್ತೆ ಮಾಡಿರುತ್ತದೆ.

ಪತ್ತೆ ತಂಡದಲ್ಲಿ ಪೊಲೀಸು ಅಧೀಕ್ಷಕರು ಋಷೀಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸು ಅದೀಕ್ಷಕರು ಕುಮಾರ ಚಂದ್ರ ರವರ ಮಾರ್ಗದರ್ಶನದಲ್ಲಿ, ಪೊಲೀಸು ಉಪಾಧೀಕ್ಷಕರು ಡಾ. ಗಾನ ಪಿ ಕುಮಾರ್ ಪುತ್ತೂರು ರವರ ನೇತೃತ್ವದಲ್ಲಿ, ಉಮೇಶ್ ಯು, ಪೊಲೀಸು ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ, ಉದಯರವಿ ಎಂ, ಅಮೀನ್ ಸಾಬ್ ಅತ್ತಾರ್‌ ಪಿಎಸ್‌ಐ ಪುತ್ತೂರು ಗ್ರಾಮಾಂತರ ಠಾಣೆ ರವರ ವಿಶೇಷ ತಂಡದ ಸಿಬಂದಿಗಳಾದ ಎಎಸ್‌ಐ ಮುರುಗೇಶ್, ಶಿವರಾಮ ಗೌಡ, ಧರ್ಣಪ್ಪ ಗೌಡ, ವರ್ಗಿಸ್, ಕೃಷ್ಣಪ್ಪ ಗೌಡ, ದೇವರಾಜ್, ಧರ್ಮಪಾಲ್, ಅದ್ರಾಮ್, ಪ್ರವೀಣ್ ರೈ ಪಾಲ್ತಾಡಿ, ಜಗದೀಶ್ ಅತ್ತಾಜೆ, ಹರ್ಷೀತ್, ಗಿರೀಶ್, ಗುಡದಪ್ಪ ತೋಟದ್, ವಿನೋದ್ ಹಾಗೂ ಮಪಿಸಿ ಗಾಯತ್ರಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ ರವರು ಭಾಗವಹಿಸಿರುತ್ತಾರೆ.

ಪ್ರಕರಣ ನಡೆದ ಒಂದೇ ತಿಂಗಳಿನಲ್ಲಿ ಪ್ರಕಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ಟಿ ಆರ್ ಪಿ ಪಟ್ಟಿಯಲ್ಲಿ ಯಾವ ಧಾರಾವಾಹಿಗೆ ಸಿಕ್ಕಿದೆ ಮೊದಲ ಸ್ಥಾನ?

Published

on

ಬೆಂಗಳೂರು : ‘ಕಿರುತೆರೆ’ ಜನರ ನೆಚ್ಚಿನ ಮನರಂಜನಾ ತಾಣ. ಇಲ್ಲಿ ಸಾವಿರಾರು ಧಾರಾವಾಹಿಗಳು, ರಿಯಾಲಿಟಿ ಶೋ ಗಳದೇ ದರ್ಬಾರು. ಮನೆಮಂದಿಯೆಲ್ಲಾ ಕಿರುತೆರೆಯನ್ನು ನೆಚ್ಚಿಕೊಂಡಿದ್ದಾರೆ. ದೈನಂದಿನ ದಿನಚರಿಯಲ್ಲಿ ಧಾರಾವಾಹಿಗಳೂ ಸೇರಿಕೊಂಡಿವೆ. ತಮ್ಮ ನೆಚ್ಚಿನ ಧಾರಾವಾಹಿಗಳನ್ನು ನೋಡಲು ಕಾಯುತ್ತಿರುತ್ತಾರೆ.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಧಾರಾವಾಹಿ ಪ್ರಿಯರು. ಮಧ್ಯಾಹ್ನ, ರಾತ್ರಿ ಪ್ರಸಾರವಾಗುವ ಧಾರಾವಾಹಿಗಳನ್ನು ಬಿಡದೆ ನೋಡುವ ವರ್ಗವಿದೆ. ಆಯಾ ಧಾರಾವಾಹಿಗೆ ಆಯಾ ವೀಕ್ಷಕ ವರ್ಗವಿದೆ. ಹೀಗಿರುವ ಯಾವ ಧಾರಾವಾಹಿ ಎಷ್ಟು ಟಿ ಆರ್ ಪಿ ಹೊಂದಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ.

ಟಾಪ್ 5 ಧಾರಾವಾಹಿಗಳು :

ಪುಟ್ಟಕ್ಕನ ಮಕ್ಕಳು


ಮೂವರು ಹೆಣ್ಣುಮಕ್ಕಳ ತಾಯಿಯಾಗಿ ಕಷ್ಟ ಕಾರ್ಪಣ್ಯಗಳಿಂದ ಬೆಂದಿರುವ ಮಹಿಳೆಯ ಪ್ರಧಾನ ಕಥೆ ಒಳಗೊಂಡಿರುವ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’. ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 17ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಹಿರಿಯ ನಟಿ ಉಮಾಶ್ರೀ, ಹಿರಿಯ ನಟ ರಮೇಶ್‌ ಪಂಡಿತ್‌, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಪಾತ್ರವಾಗಿದೆ.

ಲಕ್ಷ್ಮೀ ನಿವಾಸ

ಇತ್ತೀಚೆಗೆ ಆರಂಭಗೊಂಡ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಟಿಆರ್‌ಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದ ಮೊದಲು ಮೊದಲ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಈ ವಾರ ಕೆಲವೇ ಕೆಲವು ಪಾಯಿಂಟ್‌ ಅಂತರದಲ್ಲಿ ಎರಡನೇ ಸ್ಥಾನದದಲ್ಲಿದೆ. ಕೌಟುಂಬಿಕ ಕಥಾಹಂದರವುಳ್ಳ ಈ ಧಾರಾವಾಹಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನವಿರಾದ ಪ್ರೇಮಕಥೆ, ಸಂಸಾರದ ತಲ್ಲಣಗಳಿವೆ.

ಸೀತಾ ರಾಮ


ನವಿರಾದ ಪ್ರೇಮಕಥೆ ಇರುವ ಸೀತಾ ರಾಮ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಜನಮನ ಗೆದ್ದಿರುವ ಈ ಧಾರಾವಾಹಿಯಲ್ಲಿ ಪುಟಾಣಿ ಸಿಹಿ ಎಲ್ಲರಿಗೂ ಅಚ್ಚುಮೆಚ್ಚು. ದಿನದಿಂದ ದಿನಕ್ಕೆ ಸೀತಾ ರಾಮ ಧಾರಾವಾಹಿ ಕುತೂಹಲ ಪೂರ್ಣವಾಗಿ ಸಾಗುತ್ತಿದೆ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

ಶ್ರಾವಣಿ ಸುಬ್ರಮಣ್ಯ


ಇತ್ತೀಚೆಗೆ ಆರಂಭಗೊಂಡ ವಿಭಿನ್ನ ಕಥಾ ಹಂದರ ಹೊಂದಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಟಿಆರ್​ಪಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಿನಿಸ್ಟರ್‌ ಮಗಳು ಶ್ರಾವಣಿಯ ತರಲೆ, ಮಿನಿಸ್ಟರ್‌ ಬಲಗೈ ಬಂಟ ಸುಬ್ರಮಣ್ಯನ ಕಥೆ ಧಾರಾವಾಹಿಯಲ್ಲಿದೆ. ಮಗಳನ್ನು ದ್ವೇಷಿಸುವ ತಂದೆ, ತಂದೆಯನ್ನು ಪ್ರೀತಿಸುವ ಮಗಳು, ಒಂದಷ್ಟು ಸಸ್ಪೆನ್ಸ್ ಧಾರಾವಾಹಿಯ ಜೀವಾಳ.

ರಾಮಾಚಾರಿ :


ವಿಭಿನ್ನ ಕತೆಯನ್ನೊಳಗೊಂಡ ರಾಮಾಚಾರಿ ಆರಂಭದಿಂದಲೂ ಜನಮನ ಗೆದ್ದಿತ್ತು. ಟಿಆರ್​ಪಿ ಪಟ್ಟಿಯಲ್ಲಿ ರಾಮಾಚಾರಿ ಐದನೇ ಸ್ಥಾನದಲ್ಲಿದೆ. ಸದ್ಯ ಧಾರಾವಾಹಿ ಬೇರೆಯೇ ಆದ ಆಯಾಮಕ್ಕೆ ಹೊರಳಿದೆ. ರಾಮಾಚಾರಿಗೊಬ್ಬ ತಮ್ಮನೂ ಎಂಟ್ರಿ ಕೊಟ್ಟಾಗಿದೆ. ಅಣ್ಣ-ತಮ್ಮ ಹಾಗೂ ಚಾರು ಒಂದಾಗಿ ಶತ್ರುಗಳ ವಿರುದ್ಧ ಗೆಲ್ಲುವ ಹೋರಾಟಕ್ಕೆ ಇಳಿದಿದ್ದಾರೆ.

Continue Reading

LATEST NEWS

ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

Published

on

ಕಿನ್ನಿಗೋಳಿ: ಮುಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರದ ತಾಕೊಡೆ ಮರ ಶುಕ್ರವಾರ(ಎ.3) ಮದ್ಯಾಹ್ನ ಬುಡಸಹಿತ ಧರೆಗುರುಳುವುದರೊಂದಿಗೆ ಇತಿಹಾಸದ ಜೀವಂತ ಸಾಕ್ಷಿಯೊಂದು ಅಂತ್ಯ ಕಂಡಂತಾಗಿದೆ.

ಸುಮಾರು 800 ರಿಂದ 1000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢವಾಗಿದೆ. ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿದ್ದ ಅವಳಿ ವೀರರಾದ  ಕಾಂತಬಾರೆ-ಬೂದಬಾರೆಯರು. ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ಬಟ್ಟೆಯ ತೊಟ್ಟಿಲು ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ ಕೊಂಬೆ ಅನ್ನುವುದು ಉಲ್ಲೇಖನೀಯ. ಬೃಹದಾಕಾರದ ಈ ಮರದ ಪಡ್ದಾಯಿ ಗೆಲ್ಲು ಕೆಲ ವರ್ಷಗಳ ಹಿಂದೆ ಭಾರೀ ಗಾಳಿಮಳೆಯ ಸಂದರ್ಭ ಬಿದ್ದಿತ್ತು.

kanthabare

ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

ಸುಮಾರು 2ರಿಂದ 3 ಮೀಟರ್‌ಗಳಷ್ಟು ವ್ಯಾಸವಿದ್ದ ಈ ಮರದ ಉತ್ತರ ದಿಕ್ಕಿನ ಗೆಲ್ಲು ಕೆಲ ದಿನಗಳ ಹಿಂದೆ ಬಿದ್ದಿತ್ತು. ಸುದೀರ್ಘ ಕಾಲಮಾನದಲ್ಲಿ ಅದರಷ್ಟೇ ಆದ ಯಾವುದೇ ಗಿಡ ಚಿಗುರಿದರೂ ಜೀವಂತ ಉಳಿದಿರಲಿಲ್ಲ. ಆದರೆ ಇದೀಗ ಪರ್ಯಾಯವಾಗಿ ಪಕ್ಕದಲ್ಲಿ ತಾಕೊಡೆಯ ಗಿಡವೊಂದು ಭವಿಷ್ಯದ ಸಾಕ್ಷಿಯಾಗಿ ಗೋಚರವಾಗಿದೆ. ಧಾರ್ಮಿಕ ಮಹತ್ವದ ಧರೆಗುರುಳಿದ ಮರದ ತೆರವಿಗೆ ಪೂರ್ವಭಾವಿಯಾಗಿ ಧಾರ್ಮಿಕ ಪ್ರಕ್ರಿಯೆ ಸಹಿತ ಪ್ರಶ್ನಾಚಿಂತನೆ ನಡೆಸಿ ಆ ಪ್ರಕಾರ ಮುಂದುವರಿಯಲು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಟ್ರಸ್ಟ್ ತೀರ್ಮಾನಿಸಿದೆ.

Continue Reading

FILM

ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

Published

on

ಮುಂಬೈ : ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪಠಾಣ್, ಜವಾನ್, ಡಂಕಿ ಸಿನಿಮಾದ ನಂತರ ಹೊಸ ಸಿನಿಮಾ ಘೋಷಣೆ ಮಾಡದೇ ಉಳಿದಿದ್ದ ಅವರು, ಅಭಿಮಾನಿಗಳಿಗೆ ಹೊಸ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ತಮ್ಮ ಹೊಸ ಸಿನಿಮಾ ಜುಲೈ ಅಥವಾ ಆಗಸ್ಟ್ ನಿಂದ ಶುರುವಾಗಲಿದೆ ಎಂದಿದ್ದಾರೆ. ಉಳಿದಂತೆ ಅವರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

 

ಈ ನಡುವೆ ಶಾರುಖ್ ಖಾನ್ ಕುರಿತಾಗಿ ದಕ್ಷಿಣದ ಹೆಸರಾಂತ ನಟ ಕಮಲ್ ಹಾಸನ್ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ.  ಪುತ್ರಿ ಶ್ರುತಿ ಹಾಸನ್ ಜೊತೆಗಿನ ಮಾತುಕತೆಯಲ್ಲಿ ಶಾರುಕ್ ಆಸೆಗಳನ್ನು ಅವರು ರಿವೀಲ್ ಮಾಡಿದ್ದಾರೆ.

ತಂದೆಗೆ ಇನ್ನೂ ಏನಾದರೂ ಆಸೆಗಳು ಉಳಿದಿದ್ದವಾ? ಎಂದು ಶ್ರುತಿ ಕೇಳ್ತಾರೆ. ಆಗ ಯಾವುದೇ ಆಸೆಗಳು ಇಲ್ಲ ಎಂದು ಹೇಳುವ ಕಮಲ್ ಹಾಸನ್, ಈ ಸಮಯದಲ್ಲಿ ಶಾರುಖ್ ಆಸೆಯನ್ನು ಹೊರ ಹಾಕುತ್ತಾರೆ. ಮಣಿರತ್ನಂ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಶಾರುಖ್ ಆಸೆ. ಅದಕ್ಕಾಗಿ ಅವರು ಪ್ರೈವೆಟ್ ಜೆಟ್ ತಗೆದುಕೊಳ್ಳೊ ಕನಸು ಕಂಡಿದ್ದಾರೆ ಎಂದಿದ್ದಾರೆ ಕಮಲ್.

ಶಾರುಖ್ ಅವರಿಗೆ ವಿಮಾನ ಖರೀದಿಸುವ ಮತ್ತು ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿರುವ ವಿಚಾರ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಅಚ್ಚರಿ ತರಿಸಿದೆ. ವಿಮಾನ ಏನೋ ಖರೀದಿಸಬಹುದು. ಆದರೆ, ಮಣಿರತ್ನಂ ಅವರನ್ನು ಖರೀದಿಸೋಕೆ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Continue Reading

LATEST NEWS

Trending