Sunday, March 26, 2023

ಬಜ್ಪೆ: 5 ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: 5 ವರ್ಷಗಳ ಹಿಂದೆ ನಡೆದಿದ್ದ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇದೀಗ ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಿವಾಸಿ ಜಾಕೀರ್ ಹುಸೈನ್ (29) ಬಂಧಿತ ಆರೋಪಿ.


ಈತನ ವಿರುದ್ಧ ಕೊಲೆ ಮತ್ತು ದರೋಡೆ ಸೇರಿ ಒಟ್ಟು 3 ಪ್ರಕರಣಗಳು ಮತ್ತು ಬಂದರು ಠಾಣೆಯಲ್ಲಿ 2 ಪ್ರಕರಣಗಳು ಹಾಗೆಯೇ ಪಾಂಡೇಶ್ವರ ಠಾಣೆಯಲ್ಲಿ 2 ಪ್ರಕರಣಗಳು ಮತ್ತು ಮೂಡುಬಿದ್ರೆ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಬಜ್ಪೆ ಠಾಣೆ ಪಿಎಸ್‌ಐ ಗುರುಕಾಂತಿ, ಹೆಡ್‌ಕಾನ್‌ಸ್ಟೇಬಲ್ ರೋಹಿತ್ ಪಾವಂಜೆ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಪಾಲ್ಗೊಂಡಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ವಶ

ಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ಹಣವನ್ನು ಪೊಲೀಸರು ನಿನ್ನೆ ವಶಪಡಿಸಿಕೊಂಡ ಘಟನೆ ಉಡುಪಿಯ ಮೂಡುತೋನ್ಸೆ ಗ್ರಾಮದ ನೇಜಾರು ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.ಉಡುಪಿ ಪೊಲೀಸ್ ಠಾಣೆಯ ಪಿಎಸ್‌ಐ ಸುಷ್ಮಾ...

ಉಳ್ಳಾಲ ಕುಂಪಲದಲ್ಲಿ ನೇಣಿಗೆ ಕೊರಳೊಡ್ಡಿದ ಯುವಕ :ಸರಣಿ ಸಾವು ನೋವು- ಆತ್ಮಹತ್ಯೆಗಳಿಂದ ಜನ ಕಂಗಾಲು..!  

ಮಂಗಳೂರು ಹೊರವಲಯದ ಉಳ್ಳಾಲ ಕುಂಪಲ ಆಶ್ರಯ ಕಾಲನಿಯ ರೂಪದರ್ಶಿ ಪ್ರೇಕ್ಷಳ ಸಾವಿನ ನಂತರ ಈ ಪ್ರದೇಶದಲ್ಲಿ ಸರಣಿ ಸಾವುಗಳು ಸಂಭವಿಸುತ್ತಿದ್ದು ಜನ ಕಂಗಲಾಗಿದ್ದಾರೆ.ಉಳ್ಳಾಲ: ಮೊಬೈಲ್ ಷೋರೂಂ ನಲ್ಲಿ ಕೆಲಸಕ್ಕಿದ್ದ ಕುಂಪಲ ಮೂರು ಕಟ್ಟೆ...

ಸುಳ್ಯ : ಮನೆ ಕೊಟ್ಟಿಗೆ ಕಾಮಗಾರಿಯ ವೇಳೆ ಘೋರ ದುರಂತ – ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತ್ಯು..!

ಮನೆ ಕೊಟ್ಟಿಗೆಯ ಕಾಮಗಾರಿಯ ವೇಳೆ ಘೋರ ದುರಂತ ನಡೆದು ಮೂವರು ಕಾರ್ಮಕರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸಂಭವಿಸಿದೆ.ಸುಳ್ಯ : ಮನೆ ಕೊಟ್ಟಿಗೆಯ ಕಾಮಗಾರಿಯ ವೇಳೆ ಘೋರ...