Connect with us

  DAKSHINA KANNADA

  ಆಟಿದ ನೆಂಪು ಕಾರ್ಯಕ್ರಮ: ತುಳುನಾಡಿನ ಆಚಾರ, ವಿಚಾರ, ವಿಶಿಷ್ಠತೆ ವಿಭಿನ್ನ – ಡಾ ಸರಳಾ ರಮೇಶ್

  Published

  on

  ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ, ರಜಕ ಯೂತ್ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಮಹಿಳಾ ಘಟಕ, ಬಂಟ್ವಾಳ ತಾಲೂಕು ಮಡಿವಾಳ ಸಮಾಜಸೇವಾ ಸಂಘ ಹಾಗೂ ಮಡಿವಾಳ ಯುವಬಳಗ ಬಂಟ್ವಾಳ ಸಹಯೋಗದಲ್ಲಿ ನಗರದ ಬಂಗ್ರ ಕುಳೂರುನಲ್ಲಿರುವ ಜಿಲ್ಲಾ ಮಡಿವಾಳರ ಸಂಘದ ಅಮೃತ ಸಭಾಂಗಣದಲ್ಲಿ ಆಟಿದ ನೆಂಪು ಕಾರ್ಯಕ್ರಮ  ನಡೆಯಿತು. 

  ಮಂಗಳೂರು: ತುಳುನಾಡಿನ ಆಚಾರ, ವಿಚಾರ, ಪರಂಪರೆ ಅನೇಕ ವಿಶಿಷ್ಠತೆ ಮತ್ತು ಜೀವನ ಸಂದೇಶಗಳನ್ನು ಹೊಂದಿದ್ದು, ಇದನ್ನು ಸಂರಕ್ಷಿಸಿ ಮುಂದಿನಿ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ  ಆಟಿದ ನೆಂಪು ಕಾರ್ಯಕ್ರಮ ಪೂರಕ ಎ0ದು ಹುಬ್ಬಳ್ಳಿಯ ಹೊಟೇಲ್ ಉದ್ಯಮಿ ಡಾ. ಸರಳಾ ರಮೇಶ್ ಅಭಿಪ್ರಾಯಪಟ್ಟರು.

  ಅವರು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ, ರಜಕ ಯೂತ್ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಮಹಿಳಾ ಘಟಕ, ಬಂಟ್ವಾಳ ತಾಲೂಕು ಮಡಿವಾಳ ಸಮಾಜಸೇವಾ ಸಂಘ ಹಾಗೂ ಮಡಿವಾಳ ಯುವಬಳಗ ಬಂಟ್ವಾಳ ಸಹಯೋಗದಲ್ಲಿ ನಗರದ ಬಂಗ್ರ ಕುಳೂರುನಲ್ಲಿರುವ ಜಿಲ್ಲಾ ಮಡಿವಾಳರ ಸಂಘದ ಅಮೃತ ಸಭಾಂಗಣದಲ್ಲಿ ಜರಗಿದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಮಾತನಾಡಿದರು.

  ಶ್ರೀನಿವಾಸ ವಿಶ್ವವಿದ್ಯಾನಿಲಯದ ಪ್ರೊ. ಎಂ. ಎಸ್. ಕೋಟ್ಯಾನ್ ಅವರು ಆಟಿ ತಿಂಗಳ ಮಹತ್ವ ಬಗ್ಗೆ ವಿವರಿಸಿ ಮುಂದಿನ ಪೀಳಿಗೆಗೆ ಆಚಾರ, ವಿಚಾರಗಳ ಮಹತ್ವವನ್ನು ತಿಳಿಸುವ ಕಾರ್ಯ ಅಗತ್ಯ ಎಂದರು.

  ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಬಿ ಎನ್ ಅಧ್ಯಕ್ಷತೆ ವಹಿಸಿದ್ದರು.

  ಮುಖ್ಯ ಅತಿಥಿ, ಉದ್ಯಮಿ ಕೃಷ್ಣ ಸಾಲಿಯಾನ್ ಆಟಿದ ನೆಂಪು ಕಾರ್ಯಕ್ರಮ ನಿರಂತರ ನಡೆಯಲಿ ಎಂದರು.

  ಸಂಘದ ಅಧ್ಯಕ್ಷ ರಾಮಚಂದ್ರ ಕುಡುಪು ಆಟಿದ ನೆಂಪು ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

  ತುಳುನಾಡ ದೈವರಾಧಾನಾ ರಕ್ಷಣಾ ಚಾವಡಿಯ ಮಾಜಿ ಅಧ್ಯಕ್ಷ ದೇವರಾಜ ಡಿ.ಬಾಳ ಅವರು ಸಾಮಾಜಿಕ ವ್ಯವಸ್ಥೆಯಲ್ಲಿ ಮಡಿವಾಳ ಸಮುದಾಯದ ಮಹತ್ವವನ್ನು ವಿವರಿಸಿದರು. ರಾಕೇಶ್ ಸಾಲಿಯಾನ್‌ ಪಚ್ಚನಾಡಿ ಆಟಿ ತಿಂಗಳ ವಿಶೇಷತೆ, ದೈವರಾಧನೆಯ ಮಹತ್ವದ ಬಗ್ಗೆ ವಿವರಿಸಿದರು.

  ರಜಕ ಯೂತ್ ಅಧ್ಯಕ್ಷ ಸಂಪತ್ ಕೊಂಡಾಣ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಮಹಿಳಾ ಘಟಕದ ಅಧ್ಯಕ್ಷೆ ವೀಣಾ0ಜಲಿ ನಾರಾಯಣ್‌ ಬಿಜೈ, ಬಂಟ್ವಾಳ ತಾಲೂಕು ಮಡಿವಾಳ ಸಮಾಜಸೇವಾ ಸಂಘದ ಅಧ್ಯಕ್ಷ ಎನ್. ಕೆ. ಶಿವ ಹಾಗೂ ಮಡಿವಾಳ ಯುವಬಳಗ ಬಂಟ್ವಾಳ ಅಧ್ಯಕ್ಷ ದೀಲಿಪ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಆಶೋಕ್ ಪೊಳಲಿ ಸ್ವಾಗತಿಸಿದರು.

  ದ.ಕ.ಜಿಲ್ಲಾ ಮಡಿವಾಳರ ಮಹಿಳಾ ಘಟಕ,ಪ್ರಧಾನ ಕಾರ್ಯದರ್ಶಿ ಆಶಾ ಜಿನೇಂದ್ರ ಮಾಣಿ ವಂದಿಸಿದರು. ಸಮುದಾಯದ ಸದಸ್ಯರಿಂದ ತುಳುನಾಡಿನ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನೆರವೇರಿತು.

  ತುಳುನಾಡಿನ ಕೃಷಿ ಬದುಕು, ತಿಂಡಿ ತಿನಸುಗಳು, ವೈವಿಧ್ಯಮಯ ಪರಿಕರಗಳ ಪ್ರದರ್ಶನ ಜರಗಿತು.

  ಬೆಳ್ತ0ಗಡಿ ,ಮೂಲ್ಕಿ, ಮೂಡುಬಿದಿರೆ,ಕಾಸರಗೋಡು ತಾಲೂಕು ಮಡಿವಾಳರ ಸಂಘಗಳ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

  ಪದಾಧಿಕಾರಿಗಳಾದ ಭಾಸ್ಕರ್ ಬೇಕಲ್, ಮೋಹನ್ ಅಳಪೆ, ಜಿನೇಂದ್ರ ಮಾಣಿ, ಶಶಿಧರ ಕೊಂಡಾಣ, ಬಿ.ಎಂ.ಸಾಲಿಯಾನ್, ಕಸ್ತೂರಿ ಭಾಸ್ಕರ ಸಾಲಿಯಾನ್, ಪ್ರೇಮಾ ಆಶೋಕ್ ಪೊಳಲಿ, ಅರುಣ್ ಕುಮಾರ್ ಕದ್ರಿ, ಪ್ರವೀಣ್ ಸಾಲಿಯಾನ್, ರಾಮ ಬಂಗೇರ ಮಂಕುಡೆ, ಪ್ರದೀಪ್ ಸಾಲ್ಯಾನ್, ಸುಜಾತ ಪ್ರದೀಪ್ ಸಾಲ್ಯಾನ್, ಲತಾ ಪ್ರಕಾಶ್ ಸಾಲ್ಯಾನ್, ಆನ0ದ ತೊಕ್ಕೊಟ್ಟು, ಶ್ವೇತಾ ರವಿ ಕಕ್ಕೆಬೆಟ್ಟು, ಜಲಜ ಗುರುಪುರ, ವಸುಧ ತಿಲಕ್, ರಜಕ ಯೂತ್, ಮಡಿವಾಳರ ಮಹಿಳಾ ಘಟಕ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

  DAKSHINA KANNADA

  ಮಂಗಳೂರು: ವಾಹನಗಳಲ್ಲಿ ಕಣ್ಣು ಕುಕ್ಕುವ ದೀಪ ಬಳಕೆ: 1,170 ಪ್ರಕರಣ ದಾಖಲು

  Published

  on

  ಮಂಗಳೂರು: ಕಣ್ಣು ಕುಕ್ಕುವಂತಹ ದೀಪಗಳನ್ನು ಅಳವಡಿಸಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಚಲಾಯಿಸಿರುವ ವಾಹನಗಳ ಮಾಲೀಕರ ವಿರುದ್ಧ ಪೊಲೀಸರು ಜೂನ್ 15ರಿಂದ ಇದುವರೆಗೆ ಒಟ್ಟು 1,170 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ₹ 5.86 ಲಕ್ಷ ದಂಡ ವಿಧಿಸಿದ್ದಾರೆ.

  ‘ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಬೀದಿ ದೀಪಗಳನ್ನು ಹೊಂದಿರುವ ಎಲ್ಲಾ ರಸ್ತೆಗಳಲ್ಲಿ ಹೆಚ್ಚು ಪ್ರಖರ ಬೆಳಕಿನ ದೀಪ ಬಳಸಿದ ವಾಹನ ಚಾಲಕರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿದ್ದೇವೆ. ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ದ ಕ್ರಮ ಕೈಗೊಂಡಿದ್ದೇವೆ. ಈ ವಿಶೇಷ ಕಾರ್ಯಾಚರಣೆಯು ಇನ್ನೂ ಮುಂದುವರೆಯಲಿದೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

  ‘ಕಣ್ಣೂ ಕುಕ್ಕುವಂತಹ ದೀಪಗಳನ್ನು ವಾಹನಗಳಲ್ಲಿ ಅಳವಡಿಸದಂತೆ ವಾಹನಗಳ ಚಾಲಕರು ಹಾಗೂ ವಾಹನ ಮಾಲೀಕರಲ್ಲಿ ಜೂನ್ 15ರಿಂದ ಜಾಗೃತಿ ಮೂಡಿಸುತ್ತಿದ್ದೇವೆ. ವಾಹನಗಳ ದೀಪವು 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಗೊತ್ತುಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿರಬೇಕು. ಈ ಕಾಯ್ದೆಯಡಿ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚು ಹೆಡ್ ಲೈಟ್ ಅಳವಡಿಸುವುದು, ಹೆಡ್ ಲೈಟ್ಗಳನ್ನು ಮಾರ್ಪಡಿಸುವುದಕ್ಕೆ, ವಾಹನದಲ್ಲಿ ಹೆಚ್ಚುವರಿಯಾಗಿ ಎಲ್.ಇ.ಡಿ ಅಳವಡಿಸುವುದಕ್ಕೆ, ಕಣ್ಣಿಗೆ ಕುಕ್ಕುವಂತಹ ಪ್ರಖರ ಬೆಳಕು ಸೂಸುವ ದೀಪಗಳನ್ನು ಅಳವಡಿಸುವುದಕ್ಕೆ ಅವಕಾಶವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  Continue Reading

  DAKSHINA KANNADA

  “ಪತ್ರಕರ್ತರಿಂದ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆ ಪಡುವಂತಹ ಕೆಲಸ”- ಡಿಸಿ ಮುಲ್ಲೈ ಮುಗಿಲನ್

  Published

  on

  ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.

  ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.

  ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, “ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ“ ಎಂದು ಬೆನ್ನುತಟ್ಟಿದರು.

  ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ,ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಅಧ್ಯಕ್ಷ ವಸಂತ್ ಎನ್. ಕೊಣಾಜೆ, ಗಣೇಶ್ ತಲಪಾಡಿ ಉಪಸ್ಥಿತರಿದ್ದರು.

  Continue Reading

  DAKSHINA KANNADA

  ವಿಶ್ವದ ಟಾಪ್‌ 100 ಐಕಾನಿಕ್‌ ಐಸ್‌ಕ್ರೀಮ್‌ ಪಟ್ಟಿಗೆ ಸೇರಿದ ಮಂಗಳೂರಿನ ಪಬ್ಬಾಸ್‌ನ ‘ಗಡ್‌ಬಡ್ ಐಸ್‌ಕ್ರೀಮ್‌’

  Published

  on

  ಮಂಗಳೂರು: ಐಸ್‌ಕ್ರೀಮ್‌ ಎಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರು ಬಾಯಿ ಚಪ್ಪರಿಸಿಕೊಂಡು ಐಸ್‌ಕ್ರೀಮ್‌ ಸವಿಯುತ್ತಾರೆ. ನಮ್ಮಲ್ಲಿ ಅನೇಕ ರೀತಿಯ ಬ್ರ್ಯಾಂಡ್‌ ಐಸ್‌ಕ್ರೀಮ್‌ಗಳು ಲಭ್ಯವಿದೆ. ಆದ್ರೆ ಈ ಐಸ್‌ಕ್ರೀಮ್‌ಗಳು ರುಚಿಕರವಾಗಿರುವುದಿಲ್ಲ, ಅವುಗಳಲ್ಲಿ ಕೆಲವೇ ಕೆಲವು ಬ್ರ್ಯಾಂಡ್‌ಗಳು ಅತ್ಯುತ್ತಮ ರುಚಿಯ ಜೊತೆಗೆ ಹೆಚ್ಚಿನ ಖ್ಯಾತಿಯನ್ನು ಪಡೆದಿರುತ್ತವೆ.

  ನಮ್ಮ ಕರ್ನಾಟಕದಲ್ಲಿ ಬೆಸ್ಟ್‌ ಐಸ್‌ಕ್ರೀಮ್‌ ಎಂದಾಗ ಹೆಚ್ಚಿನವರಿಗೆ ನೆನಪಾಗುವುದು ಮಂಗಳೂರಿನ ಐಡಿಯಲ್‌ ಪಬ್ಬಾಸ್‌ನ ʼಗಡ್‌ಬಡ್‌ʼ ಐಸ್‌ಕ್ರೀಮ್.‌ ಈ ಐಸ್‌ಕ್ರೀಮ್‌ ಇದೀಗ ವಿಶ್ವದ ಟಾಪ್‌ 100 ಐಕಾನಿಕ್‌ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

  ಆನ್‌ಲೈನ್‌ ಟ್ರಾವೆಲ್‌ ಮತ್ತು ಫುಡ್‌ ಗೈಡ್‌ ʼಟೇಸ್ಟ್‌ ಅಟ್ಲಾಸ್‌ʼ ವಿಶ್ವದ ಟಾಪ್‌ 100 ಐಕಾನಿಕ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ನಮ್ಮ ಕರ್ನಾಟಕದ ಮಂಗಳೂರಿನ ಐಡಿಯಲ್‌ ಪಬ್ಬಾಸ್‌ನ ಫೇಮಸ್‌ ಐಸ್‌ಕ್ರೀಮ್‌ಗಳಲ್ಲಿ ಒಂದಾದ ಗಡ್‌ಬಡ್‌ ಮತ್ತು ಬೆಂಗಳೂರಿನ ಕಾರ್ನರ್‌ ಹೌಸ್‌ನ ಡೆತ್‌ ಬೈ ಚಾಕೊಲೇಟ್‌ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

  ಒಟ್ಟಾರೆಯಾಗಿ ಟಾಪ್‌ ಐಕಾನಿಕ್‌ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಭಾರತದ ಒಟ್ಟು ಐದು ಐಸ್‌ಕ್ರೀಮ್‌ಗಳು ಸ್ಥಾನವನ್ನು ಪಡೆದಿವೆ.

  Continue Reading

  LATEST NEWS

  Trending