Connect with us

    DAKSHINA KANNADA

    ದೇವಸ್ಥಾನದ ಆವರಣದಲ್ಲಿ ಅ*ನ್ಯಕೋಮಿನ ಯುವಕನೊಂದಿಗೆ ಯುವತಿ ಪತ್ತೆ !!

    Published

    on

    ಬೆಳ್ತಂಗಡಿ: ಸೌತಡ್ಕ ದೇವಾಲಯದ ಬಳಿ ಅ*ನ್ಯಕೋಮಿನ ಯುವಕನೊಂದಿಗೆ ಯುವತಿಯೊಬ್ಬಳು ಪತ್ತೆಯಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

    ಕೊಪ್ಪಳ ಮೂಲದ ಅಂತರ್‌ ಧರ್ಮೀಯ ಯುವಕ ಸಲೀಮ್ ಮತ್ತು ಬೆಂಗಳೂರು ಮೂಲದ ಹಿಂದೂ ಯುವತಿ ಕೊಕ್ಕಡದಿಂದ ರಿಕ್ಷಾದ ಮೂಲಕ ಸೌತಡ್ಕ ದೇವಸ್ಥಾನಕ್ಕೆ ಬಂದು ರಿಕ್ಷಾದಿಂದ ಇಳಿದು ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಹುಡುಗನ ಹೆಸರು ಸಲೀಮ್ ಎಂದು ತಿಳಿದು ಕೂಡಲೇ ರಿಕ್ಷಾ ಚಾಲಕ ಹಿಂದೂ ಸಂಘಟನೆಗಳ ಗಮನಕ್ಕೆ ತಂದಿದ್ದಾನೆ. ಅ*ನ್ಯಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

    ಧರ್ಮಸ್ಥಳ ಠಾಣೆಯ ಪೊಲೀಸರು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸುತ್ತಿದ್ದು ಪೊಲೀಸರು ಯುವಕ ಮತ್ತು ಯುವತಿಯ ಮನೆಯವರನ್ನು ಕರೆಯಿಸಿದ ನಂತರವೇ ಅವರನ್ನು ಬಿಟ್ಟು ಕಳುಹಿಸಬೇಕು ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    Published

    on

    ಮಂಗಳೂರು/ಮಧ್ಯಪ್ರದೇಶ: ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಜತ್ ಪಾಟಿದಾರ್ ಅವರಿಗೆ ನಾಯಕತ್ವ ಒದಗಿ ಬಂದಿದೆ.


    ರಜತ್ ಪಟಿದಾರ್ ಆರ್ ಸಿಬಿ ತಂಡದಲ್ಲಿ ಪ್ರಮುಖ ಆಟಗಾರ ಹಾಗೂ ಈ ಬಾರಿ ತಂಡ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ. ಇದೀಗ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ರಜತ್ ಪಾಟಿದಾರ್ ಗೆ ರಾಜ್ಯ ತಂಡದ ನಾಯಕತ್ವ ನೀಡಲಾಗಿದೆ.
    ನವೆಂಬರ್ 23 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ 15 ಸದಸ್ಯರ ಮಧ್ಯಪ್ರದೇಶ ತಂಡವನ್ನು ಘೋಷಿಸಲಾಗಿದೆ.

    ಇದನ್ನು ಓದಿ: ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ

    ಮಧ್ಯಪ್ರದೇಶ ತಂಡದ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಒಂದು ವೇಳೆ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವು ಫೈನಲ್ ಗೆ ತಲುಪಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ರೇಸ್ ನಲ್ಲಿ ರಜತ್ ಪಾಟಿದಾರ್ ಕೂಡ ತೀವ್ರ ಪೈಪೋಟಿ ಕೊಡಲಿದ್ದಾರೆ.


    ಆರ್ ಸಿಬಿ ಪರ 24 ಇನ್ನಿಂಗ್ಸ್ ಆಡಿರುವ ರಜತ್ ಪಾಟಿದಾರ್ 1 ಶತಕ 7 ಅರ್ಧಶತಕಗಳೊಂದಿಗೆ ಒಟ್ಟು 799 ರನ್ ಕಲೆಹಾಕಿದ್ದಾರೆ. ಈಗಗಾಲೇ ಆರ್ ಸಿ ಬಿ ತಂಡದಿಂದ ನಾಯಕ ಫಾಫ್ ಡುಪ್ಲೆಸಿಸ್ ತಂಡದಿಂದ ಹೊರಬಿದಿದ್ದಾರೆ. ಇದರಿಂದ ನಾಯಕತ್ವ ಯಾರ ಪಾಲಾಗಲಿದೆ ಎಂಬುವುದು ತ್ರೀವ್ರ ಕುತೂಹಲ ಮೂಡಿಸಿದೆ.

    Continue Reading

    DAKSHINA KANNADA

    ಖ್ಯಾತ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ ಲವ್ ಸ್ಟೋರಿ ಗೊತ್ತಾ ??

    Published

    on

    ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೀಡಿದ್ದಾರೆ. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ದಂಪತಿಗಳಿಗೆ ಗೌರವಾರ್ಪಣೆ ಮಾಡಲಾಯಿತು.

    ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ  ಈಗ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಸುದ್ದಿಯಾಗಲು ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿರುವುದು. ಟಿ20 ವಿಶ್ವಕಪ್​ಗೂ ಮುನ್ನ ಭಾರತ ತಂಡ ಟ್ರೋಫಿ ಗೆಲ್ಲಲು ವಿಶೇಷ ಹರಕೆ ಹೊತ್ತಿದ್ದರು. ಅದಕ್ಕಾಗಿ, ಟೀಮ್ ಇಂಡಿಯಾ ವಿಶ್ವಕಪ್​ ಗೆದ್ದ ಬಳಿಕ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಸೂರ್ಯಕುಮಾರ್ ಯಾದವ್​ಗೆ ವಿಶೇಷ ನಂಟು ಬೆಳೆಯಲು ಮುಖ್ಯ ಕಾರಣ ಪತ್ನಿ ದೇವಿಶಾ ಶೆಟ್ಟಿ.

    ದೇವಿಶಾ ಶೆಟ್ಟಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬೈನಲ್ಲಿ ಹುಟ್ಟಿ ಬೆಳೆದ ದೇವಿಶಾ ಪೊದ್ದಾರ್ ಪದವಿ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದ್ದು, ಸೂರ್ಯಕುಮಾರ್ ಯಾದವ್ ಕೂಡ ಅಲ್ಲಿಯೇ ಓದಿದ್ದರು. 2012 ರಲ್ಲಿ ಕಾಲೇಜ್​ನಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಸೂರ್ಯಕುಮಾರ್ ಯಾದವ್, ದೇವಿಶಾ ಶೆಟ್ಟಿ ಅವರನ್ನು ಮೊದಲು ನೋಡಿದ್ದಾರೆ. ಇದೇ ವೇಳೆ ದೇವಿಶಾ ಮಾಡಿದ ನೃತ್ಯಕ್ಕೆ ಫಿದಾ ಆಗಿದ್ದರು. ಸೂರ್ಯಕುಮಾರ್ ಸೀನಿಯರ್ ಆಗಿದ್ದು, ದೇವಿಶಾ ಜೂನಿಯರ್ ವಿದ್ಯಾರ್ಥಿನಿ.

    ನಿಧಾನವಾಗಿ ಆವರಿಬ್ಬರ ಸ್ನೇಹ ಬೆಳೆದಿದ್ದು, ಬಳಿಕ ಪ್ರೇಮವಾಗಿ ಬದಲಾಗಿದೆ. ಸೂರ್ಯನ ಪ್ರೇಮ ನಿವೇದನೆಯನ್ನು ದೇವಿಶಾ ಶೆಟ್ಟಿ ಒಪ್ಪಿಕೊಂಡಿದ್ದರು. ಅಲ್ಲದೆ 2012 ರಿಂದ 2016 ರವರೆಗೆ ಇಬ್ಬರು ಪ್ರೇಮಪಕ್ಷಿಗಳಾಗಿ ತಿರುಗಾಡಿದ್ದು, 2016 ರಲ್ಲಿ ತಮ್ಮ ಪ್ರೇಮ ವಿಚಾರವನ್ನು ಮನೆಯವರಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ, ಅದಾಗಲೇ ಐಪಿಎಲ್​ ಮೂಲಕ ಸದ್ದು ಮಾಡಿದ್ದ ಸೂರ್ಯನನ್ನು ದೇವಿಶಾ ಕುಟುಂಬದವರು ಒಪ್ಪಿದ್ದು, ಇತ್ತ ಸೂರ್ಯಕುಮಾರ್ ಯಾದವ್ ಅವರ ಕುಟುಂಬದವರಿಗೂ ದೇವಿಶಾ ಇಷ್ಟವಾಗಿದ್ದರು.

    ಮೇ 29, 2016 ರಲ್ಲಿ ಇಬ್ಬರ ನಿಶ್ಚಿತಾರ್ಥ ನೆರವೇರಿದ್ದು, ದಕ್ಷಿಣ ಭಾರತದ ಸಂಪ್ರದಾಯದಂತೆ ಜುಲೈ 7, 2016 ರಂದು ವಿವಾಹವಾದಗಿದ್ದು. ಇದೀಗ ಇಬ್ಬರು ಮಾದರಿ ದಂಪತಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮುಂಬೈನಲ್ಲೇ ಬೆಳೆದರೂ ತವರಿನ ನಂಟು ಬಿಟ್ಟುಕೊಳ್ಳದ ದೇವಿಶಾ ಶೆಟ್ಟಿ ಪತಿಯ ಜೊತೆ ಆಗಾಗ ತುಳುನಾಡಿಗೆ ಬರುವ ಮೂಲಕ ಸುದ್ದಿಯಾಗುತ್ತಿದ್ದಾರೆ.

    Continue Reading

    DAKSHINA KANNADA

    ತೃತೀಯ ಲಿಂಗಿ ತಾಯಿಯ ಹೋರಾಟ ; ಅಪ್ಪನ ಹೆಸರಿಲ್ಲದೆ ಪಾಸ್‌ಪೋರ್ಟ್ ಪಡೆದ ಮಗ .. !

    Published

    on

    ಮಂಗಳೂರು/ಬೆಂಗಳೂರು: ಅಕ್ಕೈ ಪದ್ಮಶಾಲಿ ತೃತೀಯ ಲಿಂಗಿಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ವೀರ ಹೋರಾಟಗಾರ್ತಿಯಾಗಿದ್ದು. ಈಗ ಅವರ ಮಗ ಅವಿನ್‌ಗೆ ತನ್ನ ತಂದೆಯ ಹೆಸರಿಲ್ಲದೆ ಪಾಸ್‌ಪೋರ್ಟ್‌ ದೊರಕಿದೆ. ಅಪ್ಪನ ಹೆಸರಿಲ್ಲದೆ, ಟ್ರಾನ್ಸ್‌ಜೆಂಡರ್‌ ತಾಯಿಯ ಹೆಸರಿನಲ್ಲಿ ಪಾಸ್‌ಪೋರ್ಟ್‌ ನೀಡಿರುವುದು ಇದೇ ಮೊದಲಾಗಿದೆ.

    “ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ತೃತೀಯಲಿಂಗಿ ಮಾನವ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಅವರ ಪುತ್ರ ಐದು ವರ್ಷದ ಅವಿನ್ ಅಕ್ಕೈ ಪದ್ಮಶಾಲಿಗೆ ತಂದೆಯ ಹೆಸರನ್ನು ನಮೂದು ಮಾಡದೆ ಪಾಸ್‌ಪೋರ್ಟ್ ನೀಡಿದೆ” ಎಂದು ವರದಿಯಾಗಿದೆ.

    ತಂದೆಯ ಹೆಸರನ್ನು ನಮೂದಿಸದೆ, ತೃತೀಯ ಲಿಂಗಿ ತಾಯಿಯ ಹೆಸರಿನಲ್ಲಿ ಪಾಸ್‌ಪೋರ್ಟ್‌ ನೀಡಿರುವುದು ಭಾರತದಲ್ಲಿ ಐತಿಹಾಸಿಕವೂ ಹೌದು. ಈ ಪಾಸ್‌ಪೋರ್ಟ್‌ನಲ್ಲಿ ಅಕ್ಕೈ ಪದ್ಮಶಾಲಿಯನ್ನು ಪೋಷಕರು ಎಂದು ನಮೂದಿಸಲಾಗಿದೆ.

    ಮಗುವಿನ ಪಾಸ್‌ಪೋರ್ಟ್‌ನಲ್ಲಿ ಮಹಿಳೆಯ ಹೆಸರನ್ನು ಮಾತ್ರ ‘ಪೋಷಕ’ ಎಂದು ನಮೂದಿಸಲಾಗಿದೆ. ಅಕ್ಕೈ ಪದ್ಮಶಾಲಿ ತಮ್ಮ ಸಿಸ್ಜೆಂಡರ್ ಪತಿ ವಾಸುದೇವ್ ವಿ. ಅವರಿಮದ ಡಿವೋರ್ಸ್‌ ಪಡೆದಿದ್ದಾರೆ. ಅಕ್ಕೈ ಪದ್ಮಶಾಲಿ “ವಿಚ್ಛೇದಿತ, ಏಕ-ಪೋಷಕ ಟ್ರಾನ್ಸ್ ವುಮನ್ ಎದುರಿಸುತ್ತಿರುವ ಸವಾಲನ್ನು ಸರಕಾರ ಒಪ್ಪಿಕೊಂಡಿದೆ. ಹೀಗಾಗಿ, ಈ ಮಹತ್ವದ ಕ್ರಮ ಕೈಕೊಂಡಿದೆ” ಎಂದು ಹೇಳಿದ್ದಾರೆ.

    ಅಕ್ಕೈ ಪದ್ಮಶಾಲಿ ಮತ್ತು ವಾಸುದೇವ್‌ ಅವರು 2017ರಲ್ಲಿ ಮದುವೆಯಾಗಿದ್ದರು. 2018ರಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿದ್ದರು. 2019ರಲ್ಲಿ ಇವರಿಬ್ಬರು ಮಗುವೊಂದನ್ನು ದತ್ತು ಪಡೆದಿದ್ದರು. ಕಾನೂನುಬದ್ಧವಾಗಿ ವಿವಾಹವನ್ನು ನೋಂದಣಿ ಮಾಡಿರುವ ಭಾರತದ ಮೊದಲ ಟ್ರಾನ್ಸ್‌ಜೆಂಡರ್‌ ಮಹಿಳೆಯೂ ಇವರಾಗಿದ್ದಾರೆ. ಇದೀಗ ತಂದೆಯ ಹೆಸರಿಲ್ಲದೆ ಪಾಸ್‌ಪೋರ್ಟ್‌ ನೀಡಿರುವುದು ದೇಶದಲ್ಲಿ ತೃತೀಯ ಲಿಂಗಿಯ ಪೋಷಕರ ಹಕ್ಕುಗಳು ಗುರುತಿಸುವಲ್ಲಿ ಪ್ರಗತಿಶೀಲ ಬೆಳವಣಿಗೆ ಎನ್ನಲಾಗುತ್ತಿದೆ.

    ಅಕಾಡೆಮಿ ನೇಮಕ ನಿರಾಕರಿಸಿದ ಅಕ್ಕೈ :

    ಈ ವರ್ಷ ಮಾರ್ಚ ತಿಂಗಳಲ್ಲಿ ಅಕ್ಕೈ ಪದ್ಮಶಾಲಿಗೆ ರಾಜ್ಯ ಸರಕಾರವು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ನೇಮಿಸಿತ್ತು. ಆದರೆ, ಅಕಾಡೆಮಿ ಹುದ್ದೆಯಿಂದ ತಮ್ಮ ಹೆಸರನ್ನು ಕೈಬಿಡುವಂತೆ ಅಕ್ಕೈ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಮನವಿ ಮಾಡಿದ್ದರು. “ತಮ್ಮನ್ನು ಅಕಾಡೆಮಿಗೆ ನೇಮಿಸಿದ್ದಕ್ಕೆ ಧನ್ಯವಾದಗಳು. ತೃತೀಯ ಲಿಂಗಿಗಳ ಮೇಲಿರುವ ಸಾಮಾಜಿಕ ಕಳಂಕದ ವಿರುದ್ಧ ಹೋರಾಟ ನಡೆಯಲು ಆದ್ಯತೆ ನೀಡುತ್ತಿದ್ದೇನೆ. ನನ್ನನ್ನು ಕರ್ನಾಟಕ ಶಾಸಕಾಂಗ ಅಥವಾ ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಿ” ಎಂದು ಒತತಾಯಿಸಿದ್ದರು.

    Continue Reading

    LATEST NEWS

    Trending