LATEST NEWS
ಪುತ್ತೂರು: ಚಡ್ಡಿ ಗ್ಯಾಂಗ್ ನಿಂದ ದರೋಡೆ ನಡೆದಿದೆ ಎಂದು ಕಥೆ ಕಟ್ಟಿದ ಮಹಿಳೆ !! ಆಮೇಲೇನಾಯ್ತು?
ಪುತ್ತೂರು: “ಚಡ್ಡಿ ಗ್ಯಾಂಗ್’ ದರೋಡೆಕೋರರು ಮಂಗಳವಾರ ರಾತ್ರಿ ನaನ್ನ ಮನೆಗೆ ಬಂದು ತಲವಾರು ತೋರಿಸಿ ನಗದು ನೀಡುವಂತೆ ಬೆದರಿಕೆ ಒಡ್ಡಿದ್ದು, ಈ ವೇಳೆ ನಾನು ಕಿಟಕಿಯ ಮೂಲಕ ತಪ್ಪಿಸಿಕೊಂಡಿರುವೆ” ಎಂಬ ಫೋಟೋವೊಂದನ್ನು ಮಹಿಳೆ ವೈರಲ್ ಮಾಡಿದ್ದ ಪರಿಣಾಮ ಕೆಯ್ಯೂರು ಗ್ರಾಮದೆಲ್ಲೆಡೆ ಆತಂಕ ಮನೆ ಮಾಡಿ ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ಸಂದರ್ಭ ಮಹಿಳೆಯ ಕಟ್ಟುಕಥೆ ಬೆಳಕಿಗೆ ಬಂದಿದೆ. ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ್ದ ಮಹಿಳೆ ಕೇರಳ ಮೂಲದಿಂದ ಬಂದು ನೆಲೆಸಿರುವ ಮಾರ್ಗರೇಟ್. ಈ ರೀತಿ ಸುಳ್ಳು ಕಥೆ ಹೆಣೆದದ್ದು ಏಕೆ ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಪುತ್ತೂರು ಗ್ರಾಮಾಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.
ಕಟ್ಟು ಕಥೆ :
ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ಮನೆಮಂದಿಯ ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ ಇದು ಕಟ್ಟು ಕಥೆ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಮಹಿಳೆ ವೈರಲ್ ಮಾಡಿದ ಫೋಟೋಗಳು 2 ವರ್ಷಗಳ ಹಿಂದೆ ಕೇರಳದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಫೋಟೋ ಆಗಿದ್ದು, ಕೊಟ್ಟಾಯಂನಲ್ಲಿ ನಡೆದಿದ್ದ ವೀಡಿಯೋ ಶೂಟಿಂಗ್ ಸಂಬಂಧಿಸಿದ ಫೋಟೋ ಎನ್ನುವ ಅಂಶ ತನಿಖೆಯ ಸಂದರ್ಭ ಬಯಲಿಗೆ ಬಂದಿದೆ. ಪರಿಶೀಲನೆ ಸಂದರ್ಭ ದಲ್ಲಿ ಡಿವೈಎಸ್‌ಪಿ ಅರುಣ್ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಸ್‌ಐ ಸುಷ್ಮಾ ಭಂಡಾರಿ, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು ಮೊದಲಾದವರಿದ್ದರು.
ಮಹಿಳೆಯ ಮೊಬೈಲ್ ಪರಿಶೀಲನೆ ಸಂದರ್ಭದಲ್ಲಿ ಆಕೆ ಕ್ರೈಂ ಸಂಬಂಧಿತ ವೀಡಿಯೋಗಳನ್ನು ಅತೀ ಹೆಚ್ಚಾಗಿ ನೋಡುತ್ತಿರುವುದು ಗೊತ್ತಾಗಿದೆ. ಚಡ್ಡಿ ಗ್ಯಾಂಗ್ ಕಥೆ ಎಂದು ನಂಬಿಸಿ ಹರಿಯಬಿಟ್ಟ ಫೋಟೋಗಳು ಕೇರಳದ ಕಾಡು ಜನಾಂಗದ ಕಥೆಯ ವೀಡಿಯೋದಿಂಂದ ತೆಗೆದ ಸ್ಕ್ರೀನ್ ಶಾಟ್ ಆಗಿದೆ. ಈ ಫೋಟೋವನ್ನು ಮೊದಲಿಗೆ ಬಾಡಿಗೆ ಮನೆಯ ಮಾಲಕನಿಗೆ ಕಳುಹಿಸಿ ‘ಮನೆಗೆ ದರೋಡೆಕೋರರು ಬಂದಿದ್ದಾರೆ’ ಎಂದು ಆಕೆ ಹೇಳಿದ್ದರಳು.
ಮನೆ ಮಾಲಕನಿಗೆ ಮಹಿಳೆಯ ಮೇಲೆ ಮೂಡಿತ್ತು ಅನುಮಾನ :
ಮಹಿಳೆ ಕಳುಹಿಸಿದ ಫೋಟೋ ನೋಡಿ ಮನೆ ಮಾಲಕ ಬಾತೀಷ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾರ್ಗರೇಟ್ ತೋರಿಸಿದ ಫೋಟೋದ ಮೇಲೆ ಬಾತೀಷ್‌ಗೂ ಸಂಶಯ ಮೂಡಿತ್ತು. ಹಿಂದೊಮ್ಮೆ ಮಾರ್ಗರೇಟ್ ತನಗೆ ಹಾವು ಕಚ್ಚಿದೆ ಎಂದು ಮಾಲಕನ ಬಳಿ ಸುಳ್ಳು ಹೇಳಿದ್ದರು. ಈ ಕಾರಣಕ್ಕಾಗಿ ಮಹಿಳೆ ಹೆಣೆದ ಚಡ್ಡಿ ಗ್ಯಾಂಗ್ ಕಥೆಯನ್ನು ಮಾಲಕ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸುಳ್ಳು ಕಥೆ ಎಲ್ಲೆಡೆ ಪ್ರಚಾರ ಪಡೆದು ಇಡೀ ಗ್ರಾಮದಲ್ಲಿ ಆತಂಕ ಮೂಡಿದ ಕಾರಣ ಬಾಡಿಗೆ ಮನೆಯನ್ನು ತೊರೆಯುವಂತೆ ಮನೆಮಂದಿಗೆ ಮಾಲಕ ಸೂಚಿಸಿದ್ದಾರೆ.
ಮಹಿಳೆಯ ಹಿನ್ನಲೆ :
ಕೇರಳದಿಂದ ಬಂದಿದ್ದ ಮಹಿಳೆ ಕಳೆದ 40 ದಿನಗಳಿಂದ ತನ್ನ ಪತಿ ಸೈಂಟ್ ಜಾರ್ಜ್ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳದ ಬಾತೀಷ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ಜಾರ್ಜ್ ಅವರು ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಹಾಲು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಚಡ್ಡಿ ಗ್ಯಾಂಗ್ ಮೇಲೆ ಪೊಲೀಸ್ ಫೈರಿಂಗ್..!
ಚಡ್ಡಿಗ್ಯಾಂಗ್ ದರೋಡೆ ಆರೋಪ ಪೂರ್ತಿ ಕಟ್ಟುಕಥೆಯಾಗಿದ್ದು, ಮಹಿಳೆ ಹಂಚಿಕೊಂಡ ಫೋಟೋಗಳು ಕೊಟ್ಟಾಯಂನಲ್ಲಿ ನಡೆದ ಒಂದು ವೀಡಿಯೋ ಸ್ಟೋರಿಯ ಫೋಟೋಗಳಾಗಿವೆ. ಕೆಯ್ಯೂರು ಸಣಂಗಳಕ್ಕೆ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ತಿಳಿಸಿದ್ದಾರೆ.
“ಕೆಯ್ಯೂರು ಗ್ರಾಮಕ್ಕೆ ಯಾವುದೇ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ. ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸ್ ಇಲಾಖೆ ಭೇದಿಸಿ ಜನರ ಭಯ ದೂರಗೊಳಿಸಿದೆ” ಎಂದು ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು ತಿಳಿಸಿದ್ದಾರೆ. ಸಧ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನ9ಇಕೆ ನಡೆಸುತ್ತಿದ್ದಾರೆ.
FILM
ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕ್ರಿಕೆಟಿಗ ಕೆ.ಎಲ್.ರಾಹುಲ್
ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.
ದಂಪತಿ Instagram ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿದ್ದಾರೆ. ‘ದೇವರ ಸುಂದರ ಆಶೀರ್ವಾದ 2025ರಲ್ಲಿ ಬರಲಿದೆ’ ಎಂದು ಅಥಿಯಾ ದಂಪತಿ ಪೋಷಕರಾಗುತ್ತಿರುವ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ಕಳೆದ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಹಲವು ವರ್ಷಗಳ ಪ್ರೀತಿಗೆ ವಿವಾಹದ ಬೆಸುಗೆ ಬೆಸೆದಿದ್ದರು.
ಇದನ್ನು ಓದಿ:ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!
DAKSHINA KANNADA
ನೆಲ್ಯಾಡಿ : ಜಾಗದ ವಿಷಯಕ್ಕೆ ಜಗಳ; ಕತ್ತಿಯಿಂದ ವ್ಯಕ್ತಿಯ ಕಡಿದು ಗಲಾಟೆ ಅಂತ್ಯ
ನೆಲ್ಯಾಡಿ : ಜಾಗದ ವಿಷಯಕ್ಕೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಕೃಷಿಕರೋರ್ವನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ದ.ಕ.ಜಿಲ್ಲೆ ನೆಲ್ಯಾಡಿ ಸಮೀಪ ಗೋಳಿತೊಟ್ಟುವಿನ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.
ಪ್ರಗತಿಪರ ಕೃಷಿಕ ರಮೇಶ ಗೌಡ (51) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ರಮೇಶ್ ನ ಹತ್ತಿರದದ ಸಂಬಂಧಿ ಹರೀಶ್ ಆರೋಪಿಯಾಗಿದ್ದು, ಇಂದು (ನ.8) ಮುಸ್ಸಂಜೆ ಸರಿಸುಮಾರು 7 ಗಂಟೆ ವೇಳೆ ಕೃತ್ಯ ಎಸಗಿದ್ದಾನೆ.
ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
LATEST NEWS
ಎತ್ತಿನಹೊಳೆ ಕಾಮಗಾರಿ ನಾಲೆಯ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾ*ವು
ಮಂಗಳೂರು/ತಿಪಟೂರು : ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂ*ಡಿಗೆ ಬಿ*ದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಹಾಗೂ ಮನೋಹರ್ (10) ಮೃ*ತ ಬಾಲಕರು.
ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿ*ದ್ದು ಸಾ*ವನ್ನಪ್ಪಿದ್ದಾರೆ ಎಂಬ ಹೇಳಲಾಗಿದೆ.
ಇದನ್ನೂ ಓದಿ : BBK11: ಬಿಗ್ಬಾಸ್ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್ ಸುರೇಶ್ ಗೆ ಈ ವಾರದ ಕಳಪೆ
ಗುರುವಾರ(ನ.7) ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಕ್ಕಳು, ನಂತರ ಹೊರ ಹೋಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ(ನ.8) ಬೆಳಿಗ್ಗೆ ಬಾಲಕರ ಶ*ವ ಪತ್ತೆಯಾಗಿದೆ.
- DAKSHINA KANNADA7 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS3 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- FILM3 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್