Connect with us

    LATEST NEWS

    ಹೋಂ ವರ್ಕ್ ಮಾಡುತ್ತಿದ್ದಾಗ ತಲೆಗೆ ಪೆನ್ ಚುಚ್ಚಿ ಯುಕೆಜಿ ಮಗು ಸಾ*ವು!

    Published

    on

    ತೆಲಂಗಾಣ : ಸಾವು ಅನ್ನೋದು ಯಾವಾಗ ? ಹೇಗೆ? ಬಂದು ಎದುರು ನಿಲ್ಲುತ್ತೆ ಅಂತ ಹೇಳೋಕೆ ಆಗದು. ಯಾವಾಗ ಬೇಕಾದರೂ ಸಾ*ವು ಸಂಭವಿಸಬಹುದು. ಅದಕ್ಕೆ ವಯಸ್ಸಿನ ಮಿತಿ ಎಂಬುದಿಲ್ಲ. ಇಂತಹುದೇ ಘಟನೆಯೊಂದು ಪುಟ್ಟ ಮಗುವಿನ ಪ್ರಾ*ಣ ತೆಗೆದಿದೆ, ಪೆನ್ ರೂಪದಲ್ಲಿ ಬಂದ ಯಮ ಪುಟ್ಟ ಕಂದಮ್ಮನನ್ನು ಅಪ್ಪಿಕೊಂಡಿದೆ.

    ಈ ಘಟನೆ ನಡೆದಿರೋದು ತೆಲಂಗಾಣದ ಭದ್ರಾಚಲಂ‌ ನಗರದಲ್ಲಿ. ಭದ್ರಾಚಲಂನ ಯುಕೆಜಿ ವಿದ್ಯಾರ್ಥಿನಿ ರಿಯಂಶಿಕಾ ಪೆನ್‌ಗೆ ಬ*ಲಿಯಾದ ಕಂದಮ್ಮ.

    ಜೀವ ಕಸಿದ ಪೆನ್ :

    ಭದ್ರಾಚಲಂ ಖಾಸಗಿ ಸ್ಕೂಲ್‌ನಲ್ಲಿ ಯುಕೆಜಿಯಲ್ಲಿ ರಿಯಂಶಿಕಾ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ(ಜುಲೈ 1) ಶಾಲೆಯಿಂದ ಬಂದು ಮನೆಯಲ್ಲಿ ಹೋಂ ವರ್ಕ್ ಬರೆಯುತ್ತಿದ್ದಳು.‌ ಮಂಚದ ಮೇಲೆ ಕೂತು ಹೋಂವರ್ಕ್ ಬರೆಯುತ್ತಿದ್ದ ರಿಯಂಶಿಕಾ ತುಂಟಾಟವಾಡುತ್ತ ಮಂಚದಿಂದ ಕೆಳಕ್ಕೆ‌ ಬಿದ್ದಿದ್ದಾಳೆ. ಈ ವೇಳೆ ಕೈಯಲ್ಲಿದ್ದ ಪೆನ್ ಆಕೆಯ ತಲೆಗೆ ಚುಚ್ಚಿದೆ.

    ರಿಯಂಶಿಕಾ ಕೈಯಲ್ಲಿ ಹಿಡಿದ ಪೆನ್ ಸಮೇತ ಮಂಚದಿಂದ ರಭಸವಾಗಿ ಕೆಳಕ್ಕೆ ಬಿದ್ದ ಪರಿಣಾಮ, ಆಕೆಯ ಕೈಯಲ್ಲಿದ್ದ ಪೆನ್ ಬಲವಾಗಿ ಆಕೆಯ ಕಪಾಲದ ಭಾಗದಿಂದ ತೂರಿಕೊಂಡು ತಲೆಯೊಳಕ್ಕೆ ಪ್ರವೇಶಿಸಿದೆ ಎನ್ನಲಾಗಿದೆ.

    ಇದನ್ನೂ ಓದಿ :  ಮದುವೆಗೂ ಮೊದಲು ಹುಡುಗರು ಹುಡುಗಿಯ ಬಳಿ ಈ ಪ್ರಶ್ನೆಗಳನ್ನು ಕೇಳಲೇಬೇಕಂತೆ!

    ತಕ್ಷಣ ಪೋಷಕರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳವಾರ(ಜು.2) ರಿಯಂಶಿಕಾಗೆ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿದೆ. ಆದರೆ, ವಿ*ಧಿಯಾಟ ಬೇರೆ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಿಯಂಶಿಕಾ ಇಹಲೋಹ ತ್ಯಜಿಸಿದ್ದಾಳೆ.

    LATEST NEWS

    ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: ತಗ್ಗು ಪ್ರದೇಶಗಳು ಜಲಾವೃತ

    Published

    on

    ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದ್ದು, ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಸುರಿದ ಬಿರುಸಿನ ಮಳೆಗೆ ನಗರ ಹಾಗೂ ಸುತ್ತಮುತ್ತಲಿನ ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

    ಉಡುಪಿ ನಗರದ ಗುಂಡಿಬೈಲು, ಪಾಡಿಗಾರು, ಕರಂಬಳ್ಳಿ ಪ್ರದೇಶದಲ್ಲಿ ಭಾರಿ ಮಳೆಗೆ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಗೊಂಡು ವಾಹನ ಸವಾರರು ಪರದಾಡಿದರು.

    ನದಿಗಳು ತುಂಬಿ ಹರಿಯುತ್ತಿದ್ದು ನೆರೆ ಸ್ಥಿತಿ ಏರ್ಪಟ್ಟಿದೆ. ಉಡುಪಿ ಜಿಲ್ಲಾಡಳಿತ ಶಾಲಾ-ಕಾಲೇಜಿಗೆ ರಜೆ ಘೋಷಿಸಿಲ್ಲ. ಆದರೆ ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ಹಲವು ಶಾಲಾ-ಕಾಲೇಜು ರಜೆ ಘೋಷಿಸಿದೆ.

    Continue Reading

    LATEST NEWS

    ಅಪ್ರಾಪ್ತೆಯ ಪ್ರೀತಿ ನಿರಾಕರಿಸಿದ ಚಿಕ್ಕಪ್ಪ..! ಕೋಪಕ್ಕೆ ಬಲಿಯಾಯ್ತು ಎರಡು ತಿಂಗಳ ಹಸುಗೂಸು..!!

    Published

    on

    ಯಾದಗಿರಿ/ಮಂಗಳೂರು: ಪ್ರೀತಿ ನಿರಾಕರಿಸಿದ ಎಂದು ಸಿಟ್ಟಿಗೆದ್ದ ಅಪ್ರಾಪ್ತೆ ಎರಡು ತಿಂಗಳ ಹಸುಗೂಸುವನ್ನು ಬಾವಿಗೆ ಎಸೆದು ಕೊಲಗೈದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ಅಂಬೇಡ್ಕರ್ ಬಡಾವಣೆಯ ನಾಗೇಶ್, ಚಟ್ಟೆಮ್ಮಎಂಬವರ ಮಗು ಕೊಲೆಗೀಡಾದ ದುರ್ದೈವಿ. ಇವರ ಪಕ್ಕದ ಮನೆಯಲ್ಲಿದ್ದ ಅಪ್ರಾಪ್ತೆ ಚಿಕ್ಕಪ್ಪ ನಾಗೇಶ್‌ರವರನ್ನು ಪ್ರೀತಿಸುತ್ತಿದ್ದಳು. ತನ್ನ ಪ್ರೀತಿಯನ್ನು ನಾಗೇಶ್‌ಗೂ ಆಕೆ ತಿಳಿಸಿದ್ದಳು. ಆದರೆ ನಾಗೇಶ್ ಅಪ್ರಾಪ್ತೆಯ ಪ್ರೀತಿಯನ್ನು ನಿರಾಕರಿಸಿದ್ದಾನೆ.

    ಇದರಿಂದ ಕೋಪಗೊಂಡ ಅಪ್ರಾಪ್ತ ಬಾಲಕಿ ನಾಗೇಶ್, ಚಟ್ಟೆಮ್ಮ ದಂಪತಿಯ ಎರಡು ತಿಂಗಳ ಹಸುಗೂಸುವನ್ನು ಬಾವಿಗೆ ಎಸೆದಿದ್ದಾಳೆ. ಮನೆಯವರು ಮಗು ಕಾಣಿಸುತ್ತಿಲ್ಲ ಎಂದು ಹುಡುಕಾಡಿದ್ದಾರೆ. ಈ ಮಧ್ಯೆ ಮಗುವನ್ನು ನಾಗೇಶ್ ಕೊಲೆ ಮಾಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾಳೆ. ಮನೆಯವರೊಂದಿಗೆ ಆರೋಪಿ ಅಪ್ರಾಪ್ತೆ ಕೂಡಾ ಮಗುವನ್ನು ಹುಡುಕಲು ಆರಂಭಿಸಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಬಾವಿಯಲ್ಲಿ ನೋಡೋಣ ಎಂದು ಹೇಳಿದ್ದಾಳೆ. ಬಾವಿಯಲ್ಲಿ ಪರಿಶೀಲನೆ ಮಾಡಿದಾಗ ಮಗುವಿನ ಶವ ಕಂಡಿದೆ.

    ಕಡಬ: ಕುಮಾರಧಾರ ನದಿ ಮಧ್ಯೆ ಸಿಲುಕಿದ್ದ ಯುವಕನ ರಕ್ಷಣೆ

    ಇನ್ನು ಈ ವಿಚಾರ ತಿಳಿದ ಬಳಿಕ ಯಾದಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ನಿಜಾಂಶ ಬೆಳಕಿಗೆ ಬಂದಿದೆ. ಪೊಲೀಸರು ಅಪ್ರಾಪ್ತೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಪಿಟ್ಟಿದ್ದಾಳೆ. “ಚಿಕ್ಕಪ್ಪ ನಾಗೇಶ್ ನನ್ನು ತಾನು ಪ್ರೀತಿಸುತ್ತಿದ್ದು ಆತ ನನ್ನ ಪ್ರೀತಿಯನ್ನು ನಿರಾಕರಿಸಿದ. ಈ ಕೋಪಕ್ಕೆ ಆತ ಜೈಲಿಗೆ ಹೋಗಲಿ ಎಂದು ಈ ಕೃತ್ಯ ಮಾಡಿದ್ದಾನೆ” ಎಂದು ಹೇಳಿದ್ದಾಳೆ. ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮಗುವನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    Continue Reading

    DAKSHINA KANNADA

    ಅಲ್ಪಕಾಲದ ಅಸೌಖ್ಯದಿಂದ ಉಳ್ಳಾಲ ಖಾಝಿ ಸ್ವರ್ಗಸ್ಥ

    Published

    on

    ಮಂಗಳೂರು : ಉಳ್ಳಾಲದ ಖಾಝಿ ಸಯ್ಯದ ಫಝಲ್ ಕೋಯಮ್ಮ ತಂಙಳ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು. ಕಣ್ಣೂರಿನ ತಮ್ಮ ನಿವಾಸದಲ್ಲಿ ಇಂದು(ಜು.8) ಮುಂಜಾನೆ ಖಾಝಿ ಅವರು ಸ್ವರ್ಗಸ್ಥರಾಗಿದ್ದಾರೆ ಎಂದು ಕುಟುಂಬ ವಲಯ ಮಾಹಿತಿ ನೀಡಿದೆ.

    ಮೂಲತಃ ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿದ್ದ ಖಾಝಿಯವರು ಕೂರ ತಂಙಳ್‌ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಬಹಳಷ್ಟು ವರ್ಷಗಳ ಹಿಂದೆ ಕಾಣಿಯೂರು ಸಮೀಪದ ಕೂರ ಎಂಬಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ‘ಕೂರ ತಂಙಳ್‌’ ಎಂದು ಹೆಸರು ಪಡೆದುಕೊಂಡಿದ್ದರು. ಬಳಿಕ ಉಳ್ಳಾಲ ಖಾಝಿಯಾಗಿ ನೇಮಕವಾದ ಬಳಿಕ ಉಳ್ಳಾಲದಲ್ಲಿ ನೆಲೆಸಲು ಆರಂಭಿಸಿದ ಅವರು ಕೆಲ ಸಮಯದ ಹಿಂದೆ ಅಸ್ವ*ಸ್ಥರಾಗಿದ್ದರು.

    ಇದನ್ನು ಓದಿ : ಚಿರತೆ ಸೆರೆ ಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ; ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ!?

    ಸ್ವರ್ಗಸ್ಥರಾದ ಖಾಝಿ ಅವರು ಪತ್ನಿ ಹಾಗೂ ಮಕ್ಕಳು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಕೂರ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನಡೆಯಲಿದ್ದು, ಸಂಜೆ 5 ಗಂಟೆಗೆ ಮಸೀದಿಯಲ್ಲಿ ಸ್ವರ್ಗಸ್ಥರ ಸದ್ಗತಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಈ ಪ್ರಾರ್ಥನೆಯಲ್ಲಿ ಸುಲ್ತಾನುಲ್ ಉಲೇಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಭಾಗವಹಿಸುವ ನಿರೀಕ್ಷೆ ಇದೆ.

     

     

     

    Continue Reading

    LATEST NEWS

    Trending