Connect with us

    LATEST NEWS

    ಓರ್ವನನ್ನು ತಬ್ಬಲಿ ಮಾಡಿ ಇಡೀ ಕುಟುಂಬವನ್ನು ಬಲಿ ಪಡೆಯಿತೇ ಭೀಕರ ಕೊರೊನಾ ಸೋಂಕು..!

    Published

    on

    ಬಳ್ಳಾರಿ: ಮಹಾಮಾರಿ ಕೊರೊನಾದಿಂದ ನಾಶವಾದ ಕುಟುಂಬಗಳು ಅದೆಷ್ಟೋ..? ಅದೆಷ್ಟೋ ಜನ ಅನಾಥರಾಗಿ ಬಿಟ್ಟಿದ್ದಾರೆ.  ಇಂಥಹುದೇ ಘಟನೆ ಗಣಿನಾಡಿನಲ್ಲಿ ಸಂಭವಿಸಿದೆ.

    ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದ ಮಗನಿಗೆ ಕೊರೊನಾ ಬಂತೆಂದು ಆತನನ್ನು ಮನೆಗೆ ಕರೆಸಿಕೊಂಡು ಗುಣಮುಖವಾಗುವಂತೆ ಮಾಡಿದ್ದ ತಾಯಿ, ತಂಗಿ ಮತ್ತು ತಂದೆಗೆ ಕೊರೊನಾ ಸೋಂಕು ತಗುಲಿ ಮೂವರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಕುರುಗೋಡು ತಾಲೂಕಿನಲ್ಲಿ ನಡೆದಿದೆ.

    ಕುರಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ. ತಿಪ್ಪೇಸ್ವಾಮಿ ಹೆಸರಿನ ಯುವಕ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದು, ಆತನಿಗೆ ಕರೊನಾ ಸೋಂಕು ದೃಢವಾಗಿತ್ತು.

    ಆತನನ್ನು ಮನೆಯಲ್ಲೇ ಕ್ವಾರಂಟೈನ್​ ಮಾಡಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ಈ ಮಧ್ಯೆ ಆತನಿಂದಾಗಿ ಆತನ ತಾಯಿ ಸುನೀತಮ್ಮ ಮತ್ತು ತಂಗಿ ನಂದಿನಿಗೂ ಸೋಂಕು ತಗುಲಿದೆ.

    ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ತಂದೆ ರುದ್ರಪ್ಪ  ಕೂಡ ಸೋಂಕಿಗೆ ತುತ್ತಾಗಿದ್ದಾರೆ.ರುದ್ರಪ್ಪನೂ ಸೋಂಕಿನಿಂದಾಗಿ ತೀವ್ರವಾಗಿ ಬಳಲಿ ಸಾವನ್ನಪ್ಪಿದ್ದಾರೆ.

    ಇದೀಗ ಗುಣಮುಖವಾಗಿರುವ ತಿಪ್ಪೇಸ್ವಾಮಿ ಮನೆಯಲ್ಲಿ ಏಕಾಂಗಿಯಾಗಿದ್ದಾನೆ.

    LATEST NEWS

    ಮೂರು ತಿಂಗಳ ಹಿಂದೆ ಪ್ರೀತಿಸಿ ಮದುವೆ.. ಮಗಳು ಕೈಹಿಡಿದ ಅಳಿಯನ ಜೀವವನ್ನೇ ತೆಗೆದ ಪೋಷಕರು..!

    Published

    on

    ಪ್ರೀತಿಗೆ ಜಾತಿ-ಧರ್ಮ..ಅಲ್ಲದೇ ವಯಸ್ಸಿನ ಅಂತರವಿಲ್ಲ ಅಂತಾ ಹೇಳ್ತಾರೆ.. ಅವರಿಬ್ರೂ ವಯಸ್ಸಿನ ಎಲ್ಲೆ ಮೀರಿ ಪೋಷಕರ ವಿರೋಧದ ನಡುವೆಯೂ ಸತಿ-ಪತಿಗಳಾಗಿದ್ದರು. ಊರಿನಲ್ಲಿ ನೆಮ್ಮದಿ ಜೀವನ ಮಾಡ್ಬೇಕು ಅನ್ಕೊಂಡಿದ್ದ ಇವರಿಗೆ ಯುವತಿಯ ಪೋಷಕರೇ ವಿಲನ್ ಆಗಿ ಬಿಟ್ಟಿದ್ದಾರೆ. ಸ್ವಚ್ಛಂದವಾಗಿ ಹಾರುತ್ತಿದ್ದ ಹಕ್ಕಿಗಳು ಗೂಡಿಗೆ ಸೇರುವ ಮೊದಲೇ ಕುಟುಂಬಸ್ಥರೇ ದಾಂಪತ್ಯ ಬದುಕಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

    ಚಿತ್ರದುರ್ಗದ ಕೋಣನೂರು ಗ್ರಾಮದಲ್ಲಿ ಇಂತಹದೊಂದು ಕೃತ್ಯ ನಡೆದಿದೆ. ಮಂಜುನಾಥ ಹಾಗೂ ರಕ್ಷಿತಾ ಅನ್ನೋರು ಪರಸ್ಪರ ಪ್ರೀತಿಸುತ್ತಿದ್ದರು. ಮಂಜುನಾಥನ ವಯಸ್ಸು 42. ರಕ್ಷಿತಾ ವಯಸ್ಸು ಕೇವಲ 19. ಇಬ್ಬರಿಗೆ ಅದು ಹೇಗೆ ಪ್ರೀತಿಯಾಯ್ತೋ ಗೊತ್ತಿಲ್ಲ. ಮೂರು ವರ್ಷದಿಂದ ಪ್ರೀತಿ ಮಾಡ್ತಿದ್ದ ಇವರು, ಮೂರು ತಿಂಗಳ ಹಿಂದೆಷ್ಟೇ ಓಡೋಗಿ ಮದ್ವೆ ಆಗಿದ್ದರು.

    ಮುಂದೆ ಏನಾಯ್ತು?

    3 ತಿಂಗಳ ಹಿಂದೆ ಮಂಜುನಾಥ ಹಾಗೂ ರಕ್ಷಿತಾ ಚಿತ್ರದುರ್ಗಕ್ಕೆ ಬಂದಿದ್ರು. ಹಿರಿಯರೆಲ್ಲ ಚಿತ್ರದುರ್ಗ ಡಿವೈಎಸ್‌ಪಿ ಕಚೇರಿಯಲ್ಲಿ ರಾಜಿ ಪಂಚಾಯಿತಿ ಕೂಡ ಆಗಿತ್ತು. ಮೇಜರ್ ಆಗಿರೋ ಕಾರಣಕ್ಕೆ ಇಬ್ಬರಿಗೂ 15 ದಿನಗಳಲ್ಲಿ ಮದ್ವೆ ಮಾಡ್ತೀವಿ ಅಂತಾ ರಕ್ಷಿತಾ ಕುಟುಂಬಸ್ಥರು ಮಗಳನ್ನ ಮನೆಗೆ ಕರ್ಕೋಂಡು ಹೋಗಿದ್ರು. ಸಮಸ್ಯೆ ಬಗೆಹರಿತು ಸದ್ಯ ಅನ್ಕೊಂಡಿದ್ದ ಮಂಜುನಾಥ ನಿನ್ನೆ ಕೋಣನೂರಿಗೆ ಹೋದವನು ಜೀವ ಕಳೆದುಕೊಂಡಿದ್ದಾನೆ. ಅಲ್ಲಿ ನಡೆದ ಗಲಾಟೆಯಲ್ಲಿ ಮಂಜುನಾಥ ಉಸಿರು ನಿಲ್ಲಿಸಿದ್ದಾನೆ. ಮಂಜುನಾಥ್​ನ ಕುಟುಂಬಸ್ಥರು ಕೈ-ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ.

    15 ದಿನದೊಳಗೆ ಮದುವೆ ಮಾಡಿಕೊಡ್ತೀನಿ ಎಂದು ಹೇಳಿದ್ದರು. ನನ್ನ ಮಗ ಇಲ್ಲೇ ಇದ್ದ. ನಾನು ಅವರ ಊರಿಗೆ ಹೋಗ್ತಿದ್ದಂತೆಯೇ ಸುಮಾರು 35 ಜನರು ಒಂದೇ ಸಮನೆ ನುಗ್ಗಿ ಬಂದರು. ಏನು ಆಗ್ತಿದೆ ಅನ್ನುವಷ್ಟರಲ್ಲಿ ನಮ್ಮ ಮೇಲೆ ಅಟ್ಯಾಕ್ ಮಾಡಿಬಿಟ್ಟರು ಎಂದು ಮಂಜುನಾಥ ತಂದೆ ಚಂದ್ರಪ್ಪ ಹೇಳಿದ್ದಾರೆ.

    ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಘಟನಾಸ್ಥಳಕ್ಕೆ ಎಸ್​ಪಿ ರಂಜಿತ್​ ಕುಮಾರ್​ ಬಂಡಾಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ತಲೆ ಮರೆಸಿಕೊಂಡಿರುವ ಆರೋಪಿಗಳಾಗಿ ಬಲೆ ಬೀಸಿದ್ದಾರೆ. ಇದೇ ವೇಳೆ ಮಂಜುನಾಥ್​ನ ಲವ್​ಸ್ಟೋರಿಗೂ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಈಗಾಗಲೇ ಒಂದು ಹುಡುಗಿಯನ್ನು ಪ್ರೀತಿಸಿದ್ದ ಮಂಜುನಾಥ, ಆಕೆಯನ್ನು ದಾವಣಗೆರೆಗೆ ಕರೆದುಕೊಂಡು ಹೋಗಿದ್ನಂತೆ. ಆದ್ರೆ ಮಂಜುನಾಥನ ಮೊದಲ ಪ್ರೇಯಸಿ ದಾವಣಗೆರೆಯಲ್ಲಿ ಜೀವ ತೆಗೆದುಕೊಂಡಿದ್ದಳು. ಈ ಪ್ರಕರಣದಲ್ಲಿ ಮಂಜುನಾಥ್​ ಜೈಲಿಗೆ ಹೋಗಿ ಬೇಲ್​ ಮೇಲೆ ಹೊರ ಬಂದಿದ್ದ.. ಬಳಿಕ ರಕ್ಷಿತಾ ಮಂಜುನಾಥ್​ನ ಹಿಂದೆ ಬಿದ್ದಿದ್ದಳು ಎನ್ನಲಾಗಿದೆ.

    Continue Reading

    LATEST NEWS

    ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !

    Published

    on

    ಮಂಗಳೂರು/ಮುಂಬೈ : ಇತ್ತಿಚೇಗೆ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಸಣ್ಣ ಸಣ್ಣ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಾಯ್ ಫ್ರೆಂಡ್‌ ನಾನ್ ವೆಜ್ ತಿನ್ನಬೇಡ ಎಂದಿದ್ದಕ್ಕೆ ಏರ್ ಇಂಡಿಯಾ ಪೈಲಟ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


    25 ವರ್ಷದ ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ ಅವರು ಸೋಮವಾರ ಅಂಧೇರಿಯ ಮರೋಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೃಷ್ಟಿ ಬಾಯ್ ಫ್ರೆಂಡ್, 27 ವರ್ಷದ ಆದಿತ್ಯ ಪಂಡಿತ್ ನನ್ನು ಪೊವೈ ಪೋಲಿಸರು ಮಂಗಳವಾರ ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ಅಂಧೇರಿಯಲ್ಲಿರುವ ಮರೋಲ್ ಪೋಲಿಸ್ ಕ್ಯಾಂಪ್ ನ ಹಿಂಭಾಗದ ಬಾಡಿಗೆ ನಿವಾಸದಲ್ಲಿ ತುಲಿ ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಬಾಯ್ ಫ್ರೆಂಡ್ ಜೊತೆಗಿನ ಜಗಳದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಬಂಟ್ವಾಳ: ಕಲಿಯುಗದಲ್ಲೂ ಕಾರ್ಣಿಕ ಮೆರೆಯುತ್ತಿರುವ ದೈವಸ್ಥಾನ
    ‘ನೀನು ಮಾಂಸಾಹಾರ ಸೇವಿಸುವುದನ್ನು ನಿಲ್ಲಿಸಬೇಕು’, ಆಹಾರ ಕ್ರಮ ಬದಲಿಸಿಕೊಳ್ಳುವಂತೆ ಒತ್ತಡ ಹೇರಿ ಆದಿತ್ಯ ಆಗಾಗ್ಗೆ ಸಾರ್ವಜನಿಕವಾಗಿ ನಿಂದಿಸುವ ಮೂಲಕ ಕಿರುಕುಳ ನೀಡುತ್ತಿದ್ದಾನೆ ಎಂದು ತುಲಿ ತಮ್ಮ ಬಳಿ ಹೇಳಿಕೊಂಡಿದ್ದಾಗಿ ಅವರ ಚಿಕ್ಕಪ್ಪ ಪೋಲಿಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದಿತ್ಯ ಪಂಡಿತ್ ಸೃಷ್ಟಿಯನ್ನು ಕೊಲೆ ಮಾಡಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋರಖ್ ಪುರ ಮೂಲದ ಸೃಷ್ಟಿ ತುಲಿ ಅವರ ಕುಟುಂಬ ಆರೋಪಿಸಿದೆ.

    ತುಲಿ ಚಿಕ್ಕಪ್ಪ ನೀಡಿರುವ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೃಷ್ಟಿ ಬಾಯ್ ಫ್ರೆಂಡ್ ಪಂಡಿತ್ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಬಂಧಿಸಲಾಗಿದೆ.

    ಎರಡು ವರ್ಷಗಳ ಹಿಂದೆ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಗಾಗಿ ತರಬೇತಿ ಪಡೆಯುತ್ತಿರುವಾಗ ಆದಿತ್ಯ ಮತ್ತು ಸೃಷ್ಟಿ ದೆಹಲಿಯಲ್ಲಿ ಭೇಟಿಯಾಗಿದ್ದರು. ತರಬೇತಿಯ ನಂತರ, ಸೃಷ್ಟಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು. ಆದರೆ ಆದಿತ್ಯ ಪಂಡಿತ್ ಪೈಲಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.

    Continue Reading

    LATEST NEWS

    ಲಿವ್ ಇನ್ ಗೆಳತಿಯ ಮೇಲೆ ರೇಪ್; 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕಿರಾತಕ

    Published

    on

    ರಾಂಚಿ: ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 25 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಂದು ಆಕೆಯ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯನ್ನು ನರೇಶ್ ಭೆಂಗ್ರಾ ಎಂದು ಗುರುತಿಸಲಾಗಿದೆ. ನವೆಂಬರ್ 24 ರಂದು ಜರಿಯಾಗಢ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ಬಳಿ ಬೀದಿ ನಾಯಿಯೊಂದು ಮಾನವ ದೇಹದ ಭಾಗಗಳೊಂದಿಗೆ ಪತ್ತೆಯಾದಾಗ ಹತ್ಯೆಯಾದ ಹದಿನೈದು ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ.

    ನವೆಂಬರ್ 8 ರಂದು ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ ಆರೋಪಿಗಳು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಇಷ್ಟಪಡದ ಕಾರಣ ಅವರು ಖುಂಟಿಗೆ ತಲುಪಿದಾಗ ಕ್ರೂರ ಘಟನೆ ಸಂಭವಿಸಿದೆ. ಬದಲಿಗೆ, ಜರಿಯಾಗಢ್ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ತನ್ನ ಮನೆಯ ಸಮೀಪವಿರುವ ಕಾಡಿಗೆ ಕರೆದೊಯ್ದು ಶವವನ್ನು ಕೊಯ್ದಿದ್ದಾನೆ. ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಖುಂಟಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

    ಪ್ರಕರಣದ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಅಶೋಕ್ ಸಿಂಗ್ ಅವರು ತಮಿಳುನಾಡಿನ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೋಳಿಯನ್ನು ಕತ್ತರಿಸುವುದರಲ್ಲಿ ನಿಪುಣರಾಗಿದ್ದ. ಕಾಡಿನಲ್ಲಿ ಕಾಡು ಪ್ರಾಣಿಗಳನ್ನು ತಿನ್ನಲು ಬಿಡುವ ಮೊದಲು ಮಹಿಳೆಯ ದೇಹದ ಭಾಗಗಳನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿದ್ದನ್ನು ಅವನು ಒಪ್ಪಿಕೊಂಡಿದ್ದಾನೆ. ನವೆಂಬರ್ 24 ರಂದು ಆ ಪ್ರದೇಶದಲ್ಲಿ ನಾಯಿಯೊಂದು ಕೈಯಿಂದ ಕಾಣಿಸಿಕೊಂಡ ನಂತರ ಪೊಲೀಸರು ಹಲವಾರು ಭಾಗಗಳನ್ನು ವಶಪಡಿಸಿಕೊಂಡರು” ಎಂದು ಸಿಂಗ್ ಹೇಳಿದರು.

    Continue Reading

    LATEST NEWS

    Trending