STATE
ಶಾಲೆಯಲ್ಲಿ ಅ*ಪ್ರಾಪ್ತೆಯರ ಜೊತೆ ಮೃ*ಗೀಯ ವರ್ತನೆ ತೋರಿದ ಶಿಕ್ಷಕ ಅರೆಸ್ಟ್!!
Published
2 hours agoon
ಮಂಗಳೂರು/ಬೆಂಗಳೂರು: ವಿದ್ಯೆ- ಬುದ್ಧಿ ಹೇಳಿ ಮಕ್ಕಳ ಭವಿಷ್ಯ ರೂಪಿಸಿಕೊಡಬೇಕಿದ್ದ ಶಿಕ್ಷಕನೇ ವಿ*ಕೃತ ಮನಸ್ಥಿತಿ ಹೊಂದಿದ್ದರೆ ವಿದ್ಯಾರ್ಥಿಗಳ ಪರಿಸ್ಥಿತಿ ಏನಾಗಬಹುದು ? ಶಿಕ್ಷಕನೊಬ್ಬ ಅ*ಪ್ರಾಪ್ತ ಮಕ್ಕಳ ಮೇಲೆ ಕಾ*ಮದೃಷ್ಟಿ ಬೀರಿದ ಘಟನೆ ಬೆಂಗಳೂರಿನ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. 6 ವಿದ್ಯಾರ್ಥಿನಿಯರಿಗೆ ಶಿಕ್ಷಕ ಮಾನಸಿಕ ಒತ್ತಡ ಹೇರಿದ್ದಾನೆ ಮಾತ್ರವಲ್ಲದೆ, ಚಾಕಲೇಟ್ ತೋರಿಸಿ ಮಕ್ಕಳ ಜೊತೆ ಮೃ*ಗೀಯ ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಶಿಕ್ಷಕನ ಕಾ*ಮುಕತನಕ್ಕೆ ವಿದ್ಯಾರ್ಥಿನಿಯರು ಭಯದ ಮಡುವಿನಲ್ಲಿದ್ದಾರೆ.
5 ರೂಪಾಯಿ ಚಾಕಲೇಟ್ ತೋರಿಸಿ, ಕೃ*ತ್ಯ ಮುಚ್ಚಿ ಹಾಕಲು ಯತ್ನ :
ಅ*ಪ್ರಾಪ್ತೆಯರ ಜೊತೆ ಅನುಚಿತವಾಗಿ ವರ್ತಿಸಿ, 5 ರೂ. ಚಾಕಲೇಟ್ ಕೊಟ್ಟು ಕೃ*ತ್ಯ ಮುಚ್ಚಿ ಹಾಕಲು ಯತ್ನಸಿದ್ದಾನೆ ಎನ್ನಲಾಗುತ್ತಿದೆ. ಅ*ಪ್ರಾಪ್ತ ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗುವಾಗ ಕದ್ದು ನೋಡುತ್ತಿದ್ದ ದುರುಳ ಬಳಿಕ ‘ಯಾರಿಗೂ ಹೇಳಬೇಡಿ ಚಾಕಲೇಟ್ ಕೊಡ್ತೀನಿ ಬನ್ನಿ’ ಎಂದು ಹೇಳಿ ಮನ ಬಂದ ಕಡೆ ಸ್ಪರ್ಶಿಸಿದ್ದಾನೆ ಎನ್ನುವ ಆರೋಪ ಶಿಕ್ಷಣ ವಿರುದ್ಧ ಕೇಳಿಬಂದಿದೆ.
ಆತಂಕದಲ್ಲಿ ಪೋಷಕರು :
ಮತ್ತೊಂದೆಡೆ ಆತಂಕದಲ್ಲಿರುವ ಪೋಷಕರು, ‘ಬುದ್ಧಿ ಹೇಳಿ ಕೊಡುವ ಶಿಕ್ಷಕರೇ ಹಿಂಗಾದ್ರೆ, ಯಾರನ್ನ ನಂಬಬೇಕು? ಯಾರನ್ನ ನಂಬಿ ಮಕ್ಕಳನ್ನ ಸ್ಕೂಲ್ ಗೆ ಕಳಿಸೋದು’ ಅಂತ ಭಯಪಡುತ್ತಿದ್ದಾರೆ.
ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ FIR ದಾಖಲು :
ಶಿಕ್ಷಕನ ಕಾ*ಮುಕತನಕ್ಕೆ ವಿದ್ಯಾರ್ಥಿನಿಯರು ಭಯದ ಮಡುವಿನಲ್ಲಿದ್ದಾರೆ. ಈ ಬಗ್ಗೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಕರೆಯ ನಂತರ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಂದು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ FIR ದಾಖಲು ಮಾಡಿಸಿದ್ದಾರೆ.
LATEST NEWS
ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಪ್ರಕರಣ – 8 ಜನರ ಬಂಧನ
Published
3 hours agoon
26/11/2024By
NEWS DESK2ಬೆಳಗಾವಿ: ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ಫೋಟೊಗ್ರಾಫರ್ ಕಿಡ್ನ್ಯಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫೋಟೋಗ್ರಾಫರ್ ಉಮೇಶ್ ಹೊಸೂರು ಎಂಬುವವರು ಅಪಹರಣವಾಗಿ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಬೆಳಗಾವಿ ನಗರಕ್ಕೆ ಬಂದಿದ್ದರು. ಕಿಡ್ನಾಪ್ ಮಾಡಿ ಕಾರು ನಿಲ್ಲಿಸಿ ರಾಡ್ನಿಂದ ಹಲ್ಲೆ ಮಾಡಿ ಬಿಟ್ಟು ಹೋಗಿದ್ದಾರೆ. ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಫೋಟೋಗ್ರಾಫರ್ ಉಮೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಸ್ ದಾಖಲಾಗ್ತಿದ್ದಂತೆ ಇಬ್ಬರು ಮಹಿಳೆಯರು ಸೇರಿ ಎಂಟು ಜನರನ್ನು ಬಂಧಿಸಲಾಗಿದೆ. ವೃತ್ತಿ ವೈಷಮ್ಯದಿಂದ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಾದ ವಿಕ್ಕಿ, ಪ್ರವೀಣ್ ಉಮರಾಣಿ, ಬಸವರಾಜ ನರಟ್ಟಿ ಸೇರಿ ಎಂಟು ಜನರ ಬಂಧನವಾಗಿದೆ.
LATEST NEWS
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
Published
4 hours agoon
26/11/2024By
NEWS DESK2ಚೆನ್ನೈ: ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ್ ದಾಸ್ಗೆ ಅನಾರೋಗ್ಯ ಉಂಟಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಶಕ್ತಿಕಾಂತ್ ದಾಸ್ ಅವರಿಗೆ ಆ್ಯಸಿಡಿಟಿ ಸಮಸ್ಯೆಯಾಗಿದ್ದು, ಅವರು ಆರೋಗ್ಯವಾಗಿದ್ದಾರೆ, ಮುಂದಿನ 23 ಗಂಟೆಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
1960 ರ ನಂತರ ಸುದೀರ್ಘ ಸೇವೆ ಸಲ್ಲಿಸಿದ RBI ಮುಖ್ಯಸ್ಥರೆಂಬ ಖ್ಯಾತಿ ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ, RBI ಹಣದುಬ್ಬರದ ಒತ್ತಡಗಳು ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಸೇರಿದಂತೆ ವಿವಿಧ ಆರ್ಥಿಕ ಸವಾಲುಗಳನ್ನು ನ್ಯಾವಿಗೇಟ್ ಮಾಡಿದೆ.
ಶಕ್ತಿಕಾಂತ್ ದಾಸ್ ಅವರನ್ನು RBI ಗವರ್ನರ್ ಆಗಿ ಮೂರು ವರ್ಷದ ಅವಧಿಗೆ ಕೇಂದ್ರ ಸರ್ಕಾರ 2021ರಲ್ಲಿ ಮರು ನೇಮಕ ಮಾಡಿತ್ತು.ಶಕ್ತಿಕಾಂತ ದಾಸ್‌ರವರು 2018ರ ಡಿಸೆಂಬರ್‌ನಲ್ಲಿ RBI ಗವರ್ನರ್ ಆಗಿ ನೇಮಕಗೊಂಡಿದ್ದರು. ಇದೇ ಡಿಸೆಂಬರ್‌ಗೆ ಅವರ ಅಧಿಕಾರವಧಿ ಮುಕ್ತಾಯವಾಗಲಿದ್ದ ಹಿನ್ನೆಲೆಯಲ್ಲಿ ಅವರನ್ನು ಮರುನೇಮಕ ಮಾಡಲಾಗಿತ್ತು.ಎನ್‌ಡಿಎ ಸರ್ಕಾರದಲ್ಲಿ ಎರಡನೇ ಬಾರಿಗೆ RBI ಗವರ್ನರ್ ಆಗಿ ನೇಮಕಗೊಂಡ ಮೊದಲ ವ್ಯಕ್ತಿ ಶಕ್ತಿಕಾಂತ ದಾಸ್ ಆಗಿದ್ದಾರೆ.
LATEST NEWS
ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ನ್ಯೂಸ್..!
Published
7 hours agoon
26/11/2024By
NEWS DESK2ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ. ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಹೊಸ ಡೆಡ್ ಲೈನ್ ನೀಡಿದೆ. ಇದೇ ನವೆಂಬರ್ 28ರವರೆಗೆ ಸರಿಪಡಿಸಲು ಸಮಯಾವಕಾಶವನ್ನು ಆಹಾರ ಸಚಿವ ಮುನಿಯಪ್ಪ ನೀಡಿದ್ದಾರೆ.
ಅರ್ಹರಾಗಿದ್ದು ಬಿಪಿಎಲ್ ಕಾರ್ಡ್ ವಂಚಿತರಾದವರು ಚಿಂತೆ ಮಾಡಬೇಕಾಗಿಲ್ಲ. ಇನ್ನೂ 3 ದಿನದೊಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವರು ಹೇಳಿದ್ದಾರೆ. ಪರಿಶೀಲನೆ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ಆಗಲಿದೆ. ನವೆಂಬರ್ 28ರೊಳಗೆ ಸಮಸ್ಯೆಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಬಿಪಿಎಲ್ ಕಾರ್ಡ್ಗಳ ಗೊಂದಲ ನಿವಾರಣೆ ಆಗಿದೆ. ಒಂದು ವಾರದಲ್ಲಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದೆ. ನವೆಂಬರ್ 28 ರ ನಂತರ ಹಿಂದಿನಂತೆ ಬಿಪಿಎಲ್ ಕಾರ್ಡ್‌ನವರು ಪಡಿತರ ಪಡೆಯಬಹುದು. ಬಿಪಿಎಲ್ ಕಾಡ್೯ ಪರಿಷ್ಕರಣೆಯಲ್ಲಿ ನಾವು ಕೇಂದ್ರ ಸರ್ಕಾರದ ಮಾನದಂಡಗಳು ಅನುಸರಿಸಿದ್ದೇವೆ ಹೊರತು ಯಾವುದೇ ಅವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದಿದ್ದಾರೆ.
LATEST NEWS
ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಪ್ರಕರಣ – 8 ಜನರ ಬಂಧನ
ಉಡುಪಿ: ಕಾಲಿವುಡ್ ಸ್ಟಾರ್ ನಟ ಸೂರ್ಯ ದಂಪತಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ
ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ
ಏಲಿಯನ್ಗಳು ನಿಜಕ್ಕೂ ಇದೆಯಾ? ಡಾ.ಸೋಮನಾಥ್ರಿಂದ ಅಚ್ಚರಿಯ ಮಾಹಿತಿ !!
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ: ಮುಂದಿನ ಸಿಎಂ ಇವರೇ ?
Trending
- LATEST NEWS6 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru4 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION5 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS3 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!