Connect with us

    LATEST NEWS

    ರಸ್ತೆ ಮಧ್ಯ ಪ್ರಯಾಣಿಕನಿಗೆ ಹೃ*ದಯಘಾತ ; ಆಸ್ಪತ್ರೆ ಮಾರ್ಗದಲ್ಲಿ ಸಾ*ವು

    Published

    on

    ಮಂಗಳೂರು/ದಾಂಡೇಲಿ: ಪ್ರಯಾಣಿಕರೋರ್ವರಿಗೆ ಹೃ*ದಯಾಘಾತವಾದ ಘಟನೆ ಧಾರವಾಡದಿಂದ ದಾಂಡೇಲಿ ಗೆ ಬರುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಸೋಮವಾರ(ನ.4) ಬೆಳಿಗ್ಗೆ ನಡೆದಿದೆ.


    ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿಯಾಗಿರುವ ಪುಂಡಲಿಕ್ ಚಂದರಗಿ (57) ಮೃ*ತ ವ್ಯಕ್ತಿ.

    ಚಂದರಗಿ ಅವರು ಧಾರವಾಡದಿಂದ ಸಾರಿಗೆ ಬಸ್ಸಿನಲ್ಲಿ ದಾಂಡೇಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಹೃ*ದಯಾಘಾತವಾಗಿದೆ.

    ದಾಂಡೇಲಿಗೆ ಬಸ್ ಬರುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಇನ್ನಿತರ ಪ್ರಯಾಣಿಕರು ನಿರ್ವಾಹಕರಿಗೆ ಮಾಹಿತಿಯನ್ನು ನೀಡಿದ್ದಾರೆ. ಕುಳಿತಲ್ಲೇ ಪ್ರ*ಜ್ಞಾಹೀನ ಸ್ಥಿತಿಯಲ್ಲಿದ್ದ ಇವರು ಏನು ಮಾಡಿದರೂ ಎಚ್ಚರಗೊಳ್ಳದಿದ್ದಾಗ ಬಸ್ಸಿನ ನಿರ್ವಾಹಕ ತಕ್ಷಣವೇ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿಯನ್ನು ನೀಡಿ ಆಂಬುಲೆನ್ಸ್ ತರಿಸಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಸಾರ್ವಜನಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃ*ತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಉಡುಪಿ : ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ವಂಚನೆ; 2.80 ಲಕ್ಷ ಕಳೆದುಕೊಂಡ ಯುವತಿ !

    Published

    on

    ಉಡುಪಿ : ಮೊಬೈಲ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಸಂದೇಶ ಪಡೆದ ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಚೈತ್ರಾ (26) , ಸೈಬರ್ ವಂಚಕರ ಮೋಸಕ್ಕೆ ಬಲಿಯಾಗಿ 2.80 ಲಕ್ಷ ರೂ. ಕಳೆದುಕೊಂಡಿದ್ದಾರೆ.

    ಸುಮಾರು ಏಳು ತಿಂಗಳ ಹಿಂದೆ ತನ್ನ ಮೊಬೈಲ್‌ನಲ್ಲಿ ಮಾಡಿದ ಮೆಸೇಜ್‌ಗೆ ವಿಡಿಯೋ ಒಂದನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದು, ಅದರಿಂದ ಗೇಮ್ ಡೌನ್‌ಲೋಡ್ ಮಾಡಿದ್ದರು. ಅದಕ್ಕೆ 20,000ರೂ. ಹಾಕುವಂತೆ ಬಂದ ಸೂಚನೆಯಂದೆ ಗೂಗಲ್‌ಪೇ ಮೂಲಕ ಹಣ ಹಾಕಿದ್ದರು.

    ಅದೇ ರೀತಿ ಸೈಬರ್ ವಂಚಕರ ವಿವಿಧ ಖಾತೆಗಳಿಗೆ ಒಟ್ಟು 2,80,000ರೂ. ಗಳನ್ನು ಗೂಗಲ್‌ಪೇ ಮೂಲಕ ಹಾಕಿದ್ದು, ಕೊನೆಗೂ ಆನ್‌ಲೈನ್ ವಂಚಕರಿಂದ ಮೋಸ ಹೋಗಿರುವುದು ತಿಳಿದಿದೆ.

    ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    BIG BOSS

    BBK11: ಬಿಗ್​ಬಾಸ್​ ಮನೆಯಿಂದ ಆಚೆ ಬರುತ್ತಿದ್ದಂತೆ ಮದ್ವೆ ಆಗ್ತಾರಂತೆ ಈ ಸ್ಪರ್ಧಿ; ಯಾರವರು?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಐದನೇ ವಾರಕ್ಕೆ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಬಿಗ್​ಬಾಸ್​ಗೆ ಮೂರನೇ ವಾರಕ್ಕೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಗಾಯಕ ಹನುಮಂತ ಮದುವೆ ಆಗ್ತಾರಂತೆ. ಹೌದು, ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಬೆನ್ನಲ್ಲೇ ಮದುವೆ ಆಗ್ತಾ ಇರೋದೆ ಅಂತ ಹೇಳಿದ್ದಾರೆ.

    ಗೌತಮಿ ಜಾಧವ್​ ಯಾವಾಗ ಮದುವೆ ಆಗ್ತೀರಾ ಅಂತ ಹೇಳುತ್ತಾರೆ. ಆಗ ಅದಕ್ಕೆ ಹನುಮಂತ ಇಲ್ಲಿಂದ ಹೋಗಿದ ಕೂಡಲೇ ಮದ್ವೆ ಆಗ್ತೀನಿ. ಹುಡುಗಿ ಇದ್ದಾಳೆ ಅಂತ ಹೇಳಿದ್ದಾರೆ. ಅದಕ್ಕೆ ಗೌತಮಿ ಆ ಹುಡುಗಿ ಹೆಸರೇನು? ಅವರ ಬಗ್ಗೆ ಒಂದು ಹಾಡು ಹಾಡಿ ಅಂತ ಪಿಡಿಸಿದ್ದಾರೆ. ಇದಾದ ಬಳಿಕ ಗೌತಮಿ ಅವರ ಮುಂದೆ ಎರಡು ಹಾಡು ಹಾಡಿದ್ದಾರೆ.

    ಸದ್ಯ ಬಿಗ್​ಬಾಸ್​ ಮನೆಗೆ ಬಂದ ಹನುಮಂತ ಅವರು ಎರಡು ಬಾರಿ ಕ್ಯಾಪ್ಟನ್​ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್​ ಅವರಿಂದ ಚಪ್ಪಾಳೆ ಹೊಡೆಸಿಕೊಂಡು ಸಹ ಸ್ಪರ್ಧಿಗಳಿಗೆ ಶಾಕ್​ ನೀಡಿದ್ದರು. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಹನುಮಂತ ಅವರು ಎಲ್ಲರ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.

    Continue Reading

    DAKSHINA KANNADA

    ಹಿಂದುಗಳ ಶ್ರದ್ಧಾಕೇಂದ್ರದ ಗುರುಗಳ ಮೇಲೆ ನಡೆದಿರುವ ದಾ*ಳಿ ಅತ್ಯಂತ ಗಂಭೀ*ರ ವಿಚಾರ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

    Published

    on

    ಮಂಗಳೂರು : ಕಾಸರಗೋಡಿನ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ತೀರ್ಥ ಶ್ರೀಗಳು ಸಂಚರಿಸುತ್ತಿದ್ದ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡ್ಡಗಟ್ಟಿ ಹಾನಿಗೊಳಿಸಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ.

    ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಚೌಟ, 400 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಎಡನೀರು ಸಂಸ್ಥಾನದ ಪೀಠಾಧಿಪತಿಯಾಗಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದಾ*ಳಿ ಮಾಡಿದ ದು*ಷ್ಕರ್ಮಿಗಳನ್ನು ಕೇರಳ ಸರ್ಕಾರವು ಕೂಡಲೇ ಬಂಧಿಸಿ ಇಂಥಹ ವಿಕೃತ ಮನಸ್ಥಿತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕು. ಶಾಂತಿ-ಸಾಮರಸ್ಯದ ಮೂಲಕ ಹಿಂದೂ ಸಮಾಜದ ಪರ ಕೆಲಸ ಮಾಡುತ್ತಿರುವ ಸ್ವಾಮೀಜಿ ಮೇಲೆಯೇ ಕಿಡಿಗೇಡಿಗಳು ನಡುರಸ್ತೆಯಲ್ಲೇ ಈ ರೀತಿ ಕಾನೂನು ಕೈಗೆತ್ತಿಕೊಂಡು ಹ*ಲ್ಲೆಗೆ ಮುಂದಾಗಿರುವುದು ಅತ್ಯಂತ ಗಂಭೀ*ರ ವಿಚಾರವಾಗಿದೆ ಎಂದು ಹೇಳಿದ್ದಾರೆ.

    ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಕಾಸರಗೋಡಿನ ಬೋವಿಕ್ಕಾನ–ಇರಿಯಣ್ಣಿ ಮಾರ್ಗ ಮಧ್ಯೆ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರನ್ನು ಫಾಲೋ ಮಾಡಿಕೊಂಡು ಬಂದು ದು*ಷ್ಕರ್ಮಿಗಳ ಗುಂಪು ದಾ*ಳಿ ನಡೆಸಿರುವುದು ಅಕ್ಷಮ್ಯ. ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಹಾಗೂ ಹಿಂದೂ ಸಮಾಜದ ಆಧರಣೀಯರು, ಮಾರ್ಗದರ್ಶಕರಾಗಿರುವ, ಆಧ್ಯಾತ್ಮಿಕ ಗುರು ಎಡನೀರು ಸಂಸ್ಥಾನದ ಶ್ರೀಗಳ ಮೇಲೆ ನಡೆದಿರುವ ಈ ದಾಳಿಯು ಹಿಂದೂ ಸಮುದಾಯದವರ ಮೇಲೆ ನಡೆಸಿರುವ ದಾ*ಳಿಯಾಗಿದೆ. ಇಂತಹ ಜಿಹಾದಿ ಮನಸ್ಥಿತಿಯ ಘಟನೆಗಳನ್ನು ಇಡೀ ಹಿಂದೂ ಸಮಾಜವು ಒಟ್ಟಾಗಿ ಖಂಡಿಸಬೇಕು ಎಂದು ಕ್ಯಾ. ಚೌಟ ತಿಳಿಸಿದ್ದಾರೆ.

    ಇದನ್ನೂ ಓದಿ : ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

    ಹೀಗಿರುವಾಗ, ಕೇರಳ ಸರ್ಕಾರವು ಸ್ವಾಮೀಜಿ ಮೇಲಿನ ಹ*ಲ್ಲೆ ಯತ್ನ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆಯನ್ನು ಸರ್ಕಾರದ ಕಡೆಯಿಂದ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಚೌಟ ಒತ್ತಾಯಿಸಿದ್ದಾರೆ

    Continue Reading

    LATEST NEWS

    Trending