Thursday, September 29, 2022

ಕನಸಿನ, ಆಕರ್ಷಣೆಯ ಹಾಗೂ ಅಭಿವೃದ್ದಿಯ ಮಂಗಳೂರಿಗೆ ಪಣ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

ಮಂಗಳೂರು: ಕನಸಿನ, ಆಕರ್ಷಣೆಯ ಹಾಗೂ ಅಭಿವೃದ್ದಿಯ ಮಂಗಳೂರನ್ನು ಮಾಡಲು ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.


ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯದ ಅಮೃಹಮಹೋತ್ಸವ ಹಿನ್ನೆಲೆ ಧ್ವಜಾರೋಹಣ ನಡೆಸಿದ ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟ ಒಂದು ದಿನ ಅಥವಾ ಒಂದು ತಿಂಗಳ ಹೋರಾಟವಲ್ಲ.

ಲಕ್ಷಾಂತರ ಜನರ ಬಲಿದಾನ, ಹೋರಾಟದ ತೀವ್ರತೆಗೆ ಸ್ವಾತಂತ್ರ್ಯ ಸಿಕ್ಕಿದೆ. ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ, ಅಮರ ಸುಳ್ಯದ ಹೋರಾಟ ಸಹಿತ ಸ್ವಾತಂತ್ರ್ಯಕ್ಕಾಗಿ ಹಲವು ಕೊಡುಗೆ ನೀಡಿದೆ.


ಅವಳಿ ಜಿಲ್ಲೆಗಳ ವಿದ್ಯುತ್‌ ಪೂರೈಕೆ ನೀಗಿಸಲು ಮಂಗಳೂರಿನ ಕೆಪಿಟಿಸಿಎಲ್‌ನಲ್ಲಿ 300 ಕೋಟಿ ವೆಚ್ಚದಲ್ಲಿ 400 ಕೆ.ವಿಯ ಸಬ್‌ಸ್ಟೇಷನ್‌, ಮಂಗಳೂರಿನಲ್ಲಿ 100 ಎಲೆಕ್ಟ್ರಿಕಲ್‌ ವಾಹನ ಚಾರ್ಜಿಂಗ್‌ ಸೆಂಟರ್‌, ಉಡುಪಿಯಲ್ಲಿ 50 ಚಾರ್ಜಿಂಗ್‌ ಸೆಂಟರ್‌, ತ್ಯಾಜ್ಯ ನಿವಾರಿಸುವ ನಿಟ್ಟಿನಲ್ಲಿ ಮಂಗಳೂರು, ಉಜಿರೆ, ಪುತ್ತೂರು, ಬಂಟ್ವಾಳ ಸೇರಿ 4 ಕಡೆಗಳಲ್ಲಿ ಎಂಆರ್‌ಎಫ್‌ ತ್ಯಾಜ್ಯ ಘಟಕ,

ಅಮೃತ್‌ ಸರೋವರ ಯೋಜನೆಯಡಿ 75 ಕೆರೆ ಅಭಿವೃದ್ಧಿ, 518 ಕೋಟಿ ರೂ ವೆಚ್ಚದಲ್ಲಿ ಮನೆ ಮನೆಗೆ ನೀರು ಯೋಜನೆ, ತಣ್ಣೀರು ಬೀಚ್‌ ಅನ್ನು ಬ್ಲೂ ಫ್ಲ್ಯಾಗ್‌ ಬೀಚ್‌ ಅಡಿ ಸೇರಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಸಶಸ್ತ್ರ ಮೀಸಲು ಪಡೆ, ದ.ಕ ಜಿಲ್ಲಾ ಪೊಲೀಸ್‌ ತುಕಡಿ, ಮಂಗಳೂರು ನಗರ ಸಿವಿಲ್‌ ಹಾಗೂ ಸಂಚಾರಿ ಪೊಲೀಸ್‌, ಮಂಗಳೂರು ನಗರ ಮಹಿಳಾ ಪೊಲೀಸ್‌, ರಾಜ್ಯ ಗೃಹರಕ್ಷಕ ದಳ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುತ್ತು ಸೇವೆ, ಅಬಕಾರಿ ಇಲಾಖೆ, ಒಟ್ಟು 8 ತುಕಡಿಗಳು ಸ್ಕೌಟ್‌, ಗೈಡ್ಸ್‌,

ಎನ್‌ಸಿಸಿ, ಆರ್‌ಎಸ್‌ಪಿ, ವಿದ್ಯಾರ್ಥಿಗಳ ಐದು ತಂಡಗಳು ಮತ್ತು ಪೊಲೀಸ್‌ ವಾದ್ಯವೃಂದಿಂದ ಗೌರವ ರಕ್ಷೆ ಸಲ್ಲಿಸಿದರು. ಕವಾಯತಿನ ದಂಡನಾಯಕರಾಗಿ ಮಂಗಳೂರು ಕಮೀಷನರೇಟ್‌ನ ಸಂಚಾರಿ ವಿಭಾಗ ಎಸಿಪಿ ಗೀತಾ ಕುಲಕರ್ಣಿ ಇದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್‌ ಕಾಮತ್‌, ಮಂಗಳೂರು ನಗರ ಮೇಯರ್‌ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಸಿಇಒ ಡಾ.ಕುಮಾರ್‌, ಪೊಲೀಸ್‌ ವರಿಷ್ಠಾಧಿಕಾರಿ ಖುಷಿಕೇಶ್‌ ಸೋನಾವಣೆ, ಮಂಗಳೂರು ನಗರ ಡಿಸಿಪಿ ಅಂಶು ಕುಮಾರ್‌ ಸೇರಿ ಹಲವರು ಇದ್ದರು.

LEAVE A REPLY

Please enter your comment!
Please enter your name here

Hot Topics

PFI ಬ್ಯಾನ್‌ಗೆ ಕೇಂದ್ರ ಕೊಟ್ಟ ಕಾರಣಗಳೇನು ಗೊತ್ತಾ…?

ಹೊಸದಿಲ್ಲಿ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿ ಇಂದು ಬೆಳಿಗ್ಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಪಿಎಫ್‌ಐ ಬ್ಯಾನ್‌ಗೆ...

ಉಡುಪಿ: ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್‌ನಲ್ಲಿ ‘ಫಾರ್ಮಾಸಿಸ್ಟ್‌ ಡೇ’ ಆಚರಣೆ

ಉಡುಪಿ: ಗಿರಿಜಾ ಹೆಲ್ತ್‌ಕೇರ್ ಆ್ಯಂಡ್ ಸರ್ಜಿಕಲ್ಸ್‌ನಲ್ಲಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್‌ ವತಿಯಿಂದ ಫಾರ್ಮಾಸಿಸ್ಟ್‌ ದಿನವನ್ನು ಉಡುಪಿಯಲ್ಲಿ ಆಚರಿಸಲಾಯಿತು.ಉಡುಪಿಯ ಸೀನಿಯರ್ ಸಿಟಿ ಲೀಗನ್ ಸಹಕಾರದೊಂದಿಗೆ ಉಡುಪಿ ಭಾಗದ ಕೆಲ ಹಿರಿಯ ಫಾರ್ಮಸಿಸ್ಟ್ ಗಳನ್ನು...

ಪುತ್ತೂರು: PFI ಪ್ರಧಾನ ಕಛೇರಿಗೆ ಬೆಳಿಗ್ಗೆಯಿಂದಲೇ ಬೀಗ-ಗುಪ್ತಸಭೆ ನಡೆಸುತ್ತಿದ್ದ ಆರೋಪ

ಪುತ್ತೂರು: ದೇಶದಾದ್ಯಂತ ಪಿಎಫ್ಐ ಹಾಗೂ ಅದರ ಬೆಂಬಲಿತ ಸಂಘಟನೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪಿಎಫ್ಐ ನ ಪ್ರಧಾನ...