ಅಪ್ರಾಪ್ತ ಬಾಲಕನೊಬ್ಬ 53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹೈತ್ಯಗೈದಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಭೋಪಾಲ್: ದೇಶದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಪ್ರಕರಣಗಳು ನಾಗರೀಕರ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡುತ್ತಿದೆ.
ಇದೀಗ ಅಪ್ರಾಪ್ತ ಬಾಲಕನೊಬ್ಬ 53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹೈತ್ಯಗೈದಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಪತಿ ಹಾಗೂ ಮಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ ವೇಳೆ ಮನೆಗೆ ನುಗ್ಗಿದ ಅಪ್ರಾಪ್ತ ಬಾಲಕ ಆರಂಭದಲ್ಲೇ ಹಲ್ಲೆ ನಡೆಸಿದ್ದಾರೆ.
ಬಳಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಪತಿ ಹಾಗೂ ಮಗ ಆಸ್ಪತ್ರೆಯಿಂದ ಮನಗೆ ಹಿಂತಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇದೀಗ ಅನಾರೋಗ್ಯ ಪೀಡಿತ ಮಗ ನೀಡಿದ ಮಾಹಿತಿ ಮೇರೆಗೆ 16ರ ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಮಹಿಳೆ ಪತಿ ಹಾಗೂ ಓರ್ವ ಮಗನ ಜೊತೆ ರೇವಾ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ವಾಸವಿದ್ದರು.
ಪತಿ ಹಾಗೂ ಮಗ ಅನಾರೋಗ್ಯ ಕಾರಣ ಜಬಲಪುರದಲ್ಲಿ ಚಿಕಿತ್ಸೆಗಾಗಿ ತೆರಳಿದ್ದರು.
ಮಹಿಳೆ ಮನೆಯಲ್ಲಿ ಒಂಟಿಯಾಗಿರುವುದನ್ನು ಅರಿತ 16 ವರ್ಷದ ಬಾಲಕ ನೇರವಾಗಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಬಾಲಕನ ಹಲ್ಲೆಗೆ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.