ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರು ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅದ್ಯಕ್ಷ ಹಾಗೂ ಮಾಜಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರು ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
79 ವರ್ಷದ ಮುಷರಫ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಮುಷರಫ್ ಅವರು ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಮುಷರಫ್ ಅವರು 1943ರ ಆಗಸ್ಟ್ 11ರಂದು ದೆಹಲಿಯಲ್ಲಿ ಜನಿಸಿದರು. ಅವರು 1999 ರಲ್ಲಿ ದೇಶದಲ್ಲಿ ಮಾರ್ಷಲ್ ಕಾನೂನನ್ನು ಹೇರಿದ ನಂತರ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ವಹಿಸಿಕೊಂಡರು ಮತ್ತು 2001 ರಿಂದ 2008 ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಮಾಜಿ ಅಧ್ಯಕ್ಷರ ಕುಟುಂಬವು 1947 ರಲ್ಲಿ ನವದೆಹಲಿಯಿಂದ ಕರಾಚಿಗೆ ಸ್ಥಳಾಂತರಗೊಂಡಿತು. ಅವರು 1964 ರಲ್ಲಿ ಪಾಕಿಸ್ತಾನದ ಸೇನೆಗೆ ಸೇರಿದರು ಮತ್ತು ಕ್ವೆಟ್ಟಾದ ಸೇನಾ ಸಿಬ್ಬಂದಿ ಮತ್ತು ಕಮಾಂಡ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು.