Connect with us

LATEST NEWS

50ರ ಸಂಭ್ರಮದಲ್ಲಿ ಪಂಪ್‌ವೆಲ್ ಗಣೇಶೋತ್ಸವ: ಆ. 29ರಿಂದ ಸೆ.2 ರ ವರೆಗೆ ಉತ್ಸವ

Published

on

ಮಂಗಳೂರು: ಕಂಕನಾಡಿ ಪಂಪ್‌ವೆಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಆ. 29ರಿಂದ ಸೆ.2 ರ ವರೆಗೆ 5 ದಿನಗಳ ಕಾಲ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆಯೋಜನೆಗೊಳ್ಳಲಿದೆ.


ನೂತನವಾಗಿ ಉದ್ಘಾಟನೆಗೊಂಡ ಸಮಿತಿ ಕಟ್ಟಡ ಸುಮುಖ ಭವನದಲ್ಲಿ ಗಣೇಶೋತ್ಸವ ಜರುಗಲಿದ್ದು, 108 ಕಾಯಿಯ ಗಣಯಾಗ, ಮೂಡಪ್ಪ ಸೇವೆ, ರುದ್ರಹೋಮ,

ಚಂಡಿಕಾ ಹೋಮ ಹಾಗೂ ವಿವಿಧ ವೈದಿಕ ಕಾರ್ಯಕ್ರಮ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿದಿನ ಹಮ್ಮಿಕೊಳ್ಳಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕೇಮಾರು ಮಠಾಧೀಶರಾದ ಶ್ರೀ ಈಶ ವಿಠಲದಾಸ ಸ್ವಾಮೀಜಿ,

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ, ಹೊರನಾಡು ಕ್ಷೇತ್ರದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಶಿ,

ಸಾಮಾಜಿಕ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಪ್ರೊ.ಎಂ.ಬಿ.ಪುರಾಣಿಕ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಗಣೇಶೋತ್ಸವ ಪ್ರಯುಕ್ತ ಐದು ದಿನಗಳ ಕಾಲ ನಿರಂತರ ಬೆಳಗ್ಗೆ, ಸಂಜೆ ಉಪಹಾರ ಹಾಗೂ ಮಧ್ಯಾಹ್ನ ರಾತ್ರಿ ಅನ್ನಸಂತರ್ಪಣೆ ನೆರವೇರಲಿದೆ.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಕೆ., ಗೌರವಾಧ್ಯಕ್ಷ ಎಂ.ಎಂ.ಪ್ರಭು, ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಕೆ.ಬಿ.ಅರಸ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಉಪಸ್ಥಿತರಿದ್ದರು.

FILM

ಚಾರ್ಲಿ ಕಡೆಯಿಂದ ಸಿಕ್ತು ಗುಡ್ ನ್ಯೂಸ್; ಸಂಭ್ರಮ ಹಂಚಿಕೊಂಡ ರಕ್ಷಿತ್ ಶೆಟ್ಟಿ

Published

on

ಮೈಸೂರು : ಎರಡು ವರ್ಷಗಳ ಹಿಂದೆ ತೆರೆಕಂಡು ಭಾರೀ ಯಶಸ್ಸು ಬಾಚಿಕೊಂಡ ಚಿತ್ರ 777 ಚಾರ್ಲಿ. ಈ ಸಿನಿಮಾ ನೋಡಿದವರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಚಾರ್ಲಿ ಕಡೆಯಿಂದ ಶುಭಸುದ್ದಿ ಸಿಕ್ಕಿದೆ. ಹೌದು, ಚಾರ್ಲಿ ಪಾತ್ರ ಮಾಡಿದ್ದ ನಾಯಿ, 6 ಮರಿಗಳಿಗೆ ಜನ್ಮ ನೀಡಿದೆ. 5  ಹೆಣ್ಣು ಮರಿಗಳು, ಒಂದು ಗಂಡು ಮರಿಗೆ ಅವಳು ಜನ್ಮ ನೀಡಿದ್ದಾಳೆ.  ಸ್ವತಃ ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲೈವ್‌ಗೆ ಬಂದ ಅವರು, ಮೈಸೂರಿನಲ್ಲಿದ್ದು, ಚಾರ್ಲಿ ಆರು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದಾಳೆ. ಅವನ್ನು ನೋಡಲು ಬಂದಿದ್ದೇನೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಚಾರ್ಲಿಯನ್ನು ನೋಡಲು ರಕ್ಷಿತ್ ಶೆಟ್ಟಿ ಮೈಸೂರಿನ ಪ್ರಮೋದ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಬೇಕು ಗೊತ್ತೇ..?

ಅಲ್ಲಿಂದಲೇ ಲೈವ್ ಮಾಡಿ, ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ. ಚಾರ್ಲಿ ಸಿನಿಮಾಗೆ ಸಾಕಷ್ಟು ಪ್ರೀತಿ ಸಿಕ್ಕಿದೆ, ವಿಶೇಷವಾಗಿ ಮಕ್ಕಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅವರಿಗೆ ಈ ವಿಚಾರ ತಿಳಿಸಬೇಕು ಎನ್ನಿಸಿತು ಅದಕ್ಕಾಗಿ ಲೈವ್‌ಗೆ ಬಂದೆ ಎಂದು ಹೇಳಿದ್ದಾರೆ.


ಸದ್ಯ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಸಿನಿಮಾದ ತಯಾರಿಯಲ್ಲಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.

Continue Reading

LATEST NEWS

ಕಟ್ಟಡದ ಬೆಂಕಿ ನಂದಿಸುವಾಗ ನೀರು ಖಾಲಿ; ಅಗ್ನಿಗೆ ಆಹುತಿಯಾದ ಅಗ್ನಿಶಾಮಕ ಸಿಬ್ಬಂದಿ

Published

on

ಬಿಹಾರ : ಸಾಮಾನ್ಯವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯಿಂದ ಜನರನ್ನು ರಕ್ಷಿಸುತ್ತಾರೆ. ಬೆಂಕಿ ಅನಾಹುತಗಳು ಇನ್ನಷ್ಟು ಬಿಗಡಾಯಿಸದಂತೆ ಎಚ್ಚರ ವಹಿಸುತ್ತಾರೆ. ಆದ್ರೆ, ಇಲ್ಲಿ ಆಗಿದ್ದು ಬೇರೆ. ಹೌದು,  ಮನೆಯೊಂದರಲ್ಲಿ ಅಗ್ನಿ ಅವಘ*ಡ ಸಂಭವಿಸಿತ್ತು. ಇಡೀ ಮನೆಯನ್ನು ಆವರಿಸುತ್ತಿದ್ದ ಬೆಂಕಿಯನ್ನು ನಂದಿಸುವ ಸಲುವಾಗಿ ಅಗ್ನಿಶಾಮಕ ದಳ ಕಾರ್ಯಪ್ರವೃತ್ತವಾಗಿತ್ತು. ಆಗ ಏಕಾಏಕಿ ಅಗ್ನಿಶಾಮಕ ವಾಹನದಲ್ಲಿದ್ದ ನೀರು ಖಾಲಿಯಾಗಿದೆ. ಪರಿಣಾಮ ಬೆಂ*ಕಿ ನಂದಿಸಲು ತೆರಳಿದ್ದ ಅಧಿಕಾರಿ ಅಗ್ನಿಯಲ್ಲಿ ಬೆಂದು ಹೋದ ಘಟನೆ ನಡೆದಿದೆ. ಈ ದುರಂ*ತ ಸಂಭವಿಸಿದ್ದು ಬಿಹಾರದ ಸಿವಾನ್​ನಲ್ಲಿ.


ಭಾಗಲ್ಪುರ ನಿವಾಸಿ ರವಿಕಾಂತ್ ಮಂಡಲ್ (40) ಮೃ*ತ ಅಗ್ನಿಶಾಮಕ ದಳದ ಸಿಬ್ಬಂದಿ. ಮನೆಯಲ್ಲಿದ್ದ ಯಂತ್ರಕ್ಕೆ ಬೆಂ*ಕಿ ತಗುಲಿ ಸ್ವಲ್ಪ ಸಮಯದಲ್ಲೇ ಮನೆಯೆಲ್ಲಾ ವ್ಯಾಪಿಸಿದೆ. ರವಿಕಾಂತ್ ಮನೆಯ ಮೇಲ್ಛಾವಣಿಯ ಮೇಲೆ ಹತ್ತಿ ಬೆಂ*ಕಿ ನಂದಿಸಲು ಆರಂಭಿಸಿದ್ದರು. ಭಾರೀ ಬೆಂ*ಕಿಯಿಂದಾಗಿ ಛಾವಣಿ ಕುಸಿದಿದೆ. ರವಿಕಾಂತನಿಗೆ ಪ್ರಜ್ಞೆ ಬರುವಷ್ಟರಲ್ಲಿ ಅವರೂ ಉರಿಯುವ ಬೆಂಕಿಗೆ ಬಿದ್ದಿದ್ದರು. ಪರಿಣಾಮ ಅವರು ಬೆಂಕಿಗೆ ಆಹುತಿಯಾದರು.

ನೀರು ಖಾಲಿ…ಸಿಬ್ಬಂದಿ ಪ್ರಾ*ಣ ಹೋಯ್ತು :

ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನ ನಡೆಸುತ್ತಿತ್ತು. ಇದ್ದಕ್ಕಿದ್ದಂತೆ ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾಯಿತು. ಈ ವೇಳೆ ಬೆಂಕಿಯ ಕೆನ್ನಾಲೆಗೆ ಸಿಲುಕಿದ ರವಿಕಾಂತ್ ರನ್ನು ರಕ್ಷಿಸಲಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊ*ಲೆ; ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಯುವತಿಯ ಹ*ತ್ಯೆಗೈದ ಪಾಪಿ!

ಇದರಿಂದ ಲಕ್ಷಾಂತರ ಮೌಲ್ಯದ ಆಸ್ತಿ ಸುಟ್ಟು ಭಸ್ಮವಾಗಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮವಹಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

Continue Reading

DAKSHINA KANNADA

ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಬೇಕು ಗೊತ್ತೇ..?

Published

on

ಮಂಗಳೂರು: ಹೆಣ್ಮಕ್ಕಳಿಗೆ ರೇಷ್ಮೆ ಸೀರೆ ಅಂದರೆ ಭಾರೀ ಇಷ್ಟ. ಯಾವೂದೇ ಒಂದು ಶುಭ ಕಾರ್ಯಕ್ರಮಕ್ಕೆ ಹೋಗಬೇಕಾದರೆ ಹೆಣ್ಮಕ್ಕಳಿಗೆ ರೇಷ್ಮೆ ಸಾರಿ ಬೇಕೇ ಬೇಕು. ಅಮ್ಮನ ರೇಷ್ಮೆ ಸೀರೆಯನ್ನು ಕಂಡರಂತೂ ಎಲ್ಲಿಲ್ಲದ ಪ್ರೀತಿ. ರೇಷ್ಮೆ ಸೀರೆಯ ಬೆಲೆ ಜಾಸ್ತಿ ಆದರೂ ಹಣ ಹೊಂದಿಸಿಕೊಂಡು ಹೋಗಿ ಅದನ್ನು ಖರೀದಿ ಮಾಡುತ್ತಾರೆ. ಹಬ್ಬ, ಹರಿದಿನ, ಪೂಜೆ, ದೇವಸ್ಥಾನ, ಮದುವೆ ಹೀಗೆ ಯಾವೂದೇ ಸಮಾರಂಭಕ್ಕೆ ರೇಷ್ಮೆ ಸೀರೆ ಬೇಕೇ ಬೇಕು.

ಸಾಮಾನ್ಯವಾಗಿ ಮಹಿಳೆಯರ ರೇಷ್ಮೆ ಸೀರೆ ತುಂಬಾನೇ ದುಬಾರಿ ಇರುತ್ತೆ. ಯಾಕೆಂದರೆ ಇದನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಯವಾದ, ಮೃದುವಾದ ಸೀರೆಯನ್ನು ತಯಾರಿಸಬೇಕೆಂದರೆ ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಈ ರೇಷ್ಮೆ ಸೀರೆಯನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ತಿಳಿಯೋಣ.

ರೇಷ್ಮೆ ಸೀರೆ ತಯಾರಿಸುವುದು ಹೇಗೆ ?

ರೇಷ್ಮೆ ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬ ಹೆಂಗಳೆಯರ ಬಳಿ ಒಂದಾದರೂ ರೇಷ್ಮೆ ಸೀರೆ ಇದ್ದೇ ಇರುತ್ತದೆ. ಒಂದು ವೇಳೆ ಇಲ್ಲದಿದ್ದರೆ ಖರೀದಿಸಲೇ ಬೇಕು ಎನ್ನುವ ಆಸೆ ಇದ್ದೇ ಇರುತ್ತದೆ.

ರೇಷ್ಮೆ ಸೀರೆಯನ್ನು ತಯಾರಿಸುವುದು ರೇಷ್ಮೆ ನೂಲಿನಿಂದ. ಒಂದು ಹೆಣ್ಣು ಹುಳು ಒಮ್ಮೆಗೆ 300-500 ಮೊಟ್ಟೆಗಳನ್ನು ಇಡುತ್ತದೆ. ಈ ಎಲ್ಲಾ ಮೊಟ್ಟೆಗಳನ್ನು ಒಂದೇ ಸ್ಥಳದಲ್ಲಿ ಇರಿಸಬೇಕಾಗುತ್ತದೆ. ಇದರಿಂದ ಲಾರ್ವಾಗಳು ಹೊರಹೊಮ್ಮುತ್ತವೆ. ಅದರ ಸಹಾಯದಿಂದ ರೇಷ್ಮೆ ನೂಲು ತಯಾರಿಸಿ ಸೀರೆ ಮಾಡಲಾಗುತ್ತದೆ.

ಮೊದಲಿಗೆ ರೇಷ್ಮೆ ಹುಳುವಿನ ಕೃಷಿ ಮಾಡಬೇಕು. ಈ ಕೃಷಿಗೆ ತುಂಬಾ ಕಷ್ಟಪಡಬೇಕಾಗುತ್ತದೆ. ಪರಿಶ್ರಮ ಹಾಕಿದರೆ ಇದು ಬಂಗಾರದ ಕೃಷಿ. ಇನ್ನು ಪ್ರತಿಯೊಂದು ರೇಷ್ಮೆ ಹುಳುವನ್ನು ಕೈಯಿಂದಲೇ ತೆಗೆದು ಅವುಗಳನ್ನು ಸಣ್ಣ ವಿಭಾಗಗಳಲ್ಲಿ ಚಂದ್ರಿಕೆಯಲ್ಲಿ ಇರಿಸಲಾಗುತ್ತದೆ. ಬಳಿಕ ಅವುಗಳ ಮೇಲೆ ಮಲ್ಬೆರಿ ಎಲೆಗಳನ್ನು ಹೊಂದಿಸಲಾಗುತ್ತೆ. ರೇಷ್ಮೆ ಹುಳುಗಳು ಈ ಎಲೆಗಳನ್ನು ತಿನ್ನುತ್ತವೆ. ಆಹಾರ ಸೇವನೆ ನಿಂತಾಗ, ಅವು ನೂಲನ್ನು ಬಿಡಲು ಆರಂಭಿಸುತ್ತದೆ.

ಈ ಸಂಪೂರ್ಣ ಪ್ರಕ್ರಿಯೆಯು 3ರಿಂದ 8 ದಿನಗಳನ್ನು ತೆಗೆದುಕೊಳ್ಳುತ್ತದೆ. ರೇಷ್ಮೆ ಹುಳು 100 ಮೀಟರ್ ಉದ್ದದ ರೇಷ್ಮೆಯ ಒಂದೇ ದಾರವನ್ನು ಮಾಡುತ್ತದೆ. ಈ ದಾರವು ಅವುಗಳ ಪಕ್ಕದಲ್ಲಿರುವ ನೈಸರ್ಗಿಕ ಅಂಟಿಗೆ ಅಂಟಿಕೊಂಡಿರುತ್ತದೆ. ಅರ್ಧ ಕಿಲೋ ರೇಷ್ಮೆ ಮಾಡಲು 2600 ರಿಂದ 3000 ರೇಷ್ಮೆ ಹುಳುಗಳ ಪರಿಶ್ರಮ ಇರುತ್ತದೆ. ಒಂದು ಸುಂದರವಾದ ಸೀರೆ ತಯಾರಾಗಲು ಸುಮಾರು 1700-2500 ರೇಷ್ಮೆ ಹುಳುಗಳು ಸಾಯುತ್ತವೆ.

ರೇಷ್ಮೆಗೆ ಬಣ್ಣ ಹಾಕೋದು ಹೇಗೆ?

ದಾರವನ್ನು ಬ್ಲೀಚಿಂಗ್ ಮಾಡಿದ ನಂತರ ಒಣಗಿಸಿ ನಂತರ ರೇಷ್ಮೆಗೆ ಬಣ್ಣ ಹಾಕಲಾಗುತ್ತೆ. ರೇಷ್ಮೆ ಗುಣಮಟ್ಟದ ಮೇಲೆ ಪರಿಣಾಮ ಬೀರದಂತೆ ಬಣ್ಣವನ್ನು ಸಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಲವಾರು ದಿನಗಳವರೆಗೆ ಪದೇ ಪದೇ ಬಣ್ಣ ಹಾಕಿ ಒಣಗಿಸಲಾಗುತ್ತೆ.

ಸೀರೆ ಹೇಗೆ ತಯಾರಿಸಲಾಗುತ್ತದೆ?

ಕೊನೆಗೆ ದಾರ ಸಿದ್ದವಾದ ಬಳಿಕ ಆ ಎಳೆಗಳು ಮಗ್ಗಕ್ಕೆ ಹೋಗುತ್ತವೆ. ಪವರ್ ಲೂಮ್ ಮತ್ತು ಹ್ಯಾಂಡ್ ಲೂಮ್‌ನಲ್ಲಿ ರೇಷ್ಮೆ ಸೀರೆಗಳನ್ನು ತಯಾರಿಸಬಹುದು. ಈ ಎಳೆಗಳನ್ನು ಸ್ಥಿರ ಮಾದರಿಯಲ್ಲಿ ನೇಯಲಾಗುತ್ತದೆ. ಈ ಪ್ರಕ್ರಿಯೆಯಿಂದ ಬಟ್ಟೆಯನ್ನು ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ತಯಾರಿಸಲು 4-5 ದಿನಗಳಿಂದ 2-3 ತಿಂಗಳವರೆಗೆ ತೆಗೆದುಕೊಳ್ಳುತ್ತದೆ.

 

ಸಿಲ್ಕ್ ಮಾರ್ಕ್ ನೋಡಿ ರೇಷ್ಮೆ ಸೀರೆ ಖರೀದಿಸಿ

ನಾವು ಚಿನ್ನ ಖರೀದಿಸುವಾಗ ಹಾಲ್‌ಮಾರ್ಕ್ ನೋಡಿ ಖರೀದಿಸುತ್ತೇವೆ. ಅದೇ ರೀತಿ ರೇಷ್ಮೆ ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ನೋಡುವುದು ಕೂಡ ಮುಖ್ಯ. ಈ ಬಗ್ಗೆ ಹಲವಾರು ವರ್ಷಗಳಿಂದ ಸಿಲ್ಕ್ ಮಾರ್ಕ್ ಆರ್ಗನೈಜೇಷನ್ ಆಫ್ ಇಂಡಿಯಾ ಜಾಗೃತಿ ಮೂಡಿಸುತ್ತಾ ಬಂದಿದೆ.

Continue Reading

LATEST NEWS

Trending