Connect with us

LATEST NEWS

ಲವ್ವಿಡವ್ವಿಯೊಂದಿಗೆ ಮೂರು ಭಾರಿ ಗರ್ಭಪಾತ :ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕನ ಕಥೆಯಿದು..!

Published

on

5 ವರ್ಷ ಲಿವಿಂಗ್ ಟು ಗೆದರ್, ಮೂರು ಭಾರಿ ಗರ್ಭಪಾತ. ಬಾಳು ಕೊಡ್ತೀನಿ ಎಂದು 5 ವರ್ಷ ಸಂಸಾರ ಮಾಡಿದ್ದ ಪೊಲೀಸಪ್ಪ ಈಗ ಕೈಕೊಟ್ಟಿದ್ದಾನೆ.

ಕೊಪ್ಪಳ: ಆತ ವೃತ್ತಿಯಲ್ಲಿ ಪೊಲೀಸ್ . ಆಕೆ ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಳು. ಇಬ್ಬರ ಮಧ್ಯೆ ಪ್ರೀತಿ ಶುರುವಾಗಿ ಒಟ್ಟಿಗೆ ಬಾಳುವುದಕ್ಕೆ ಮುಂದಾಗಿದ್ದಾರೆ.

ನಿನ್ನನ್ನ ಮಾದುವೆಯಾಗುತ್ತೇನೆ ಎಂದು ಆಕೆಯನ್ನ ನಂಬಿಸಿ ಜತೆಯಲ್ಲಿ ಸಂಸಾರವನ್ನು ಮಾಡಿದ್ದ. ಆದ್ರೆ 5 ವರ್ಷ ಸಂಸಾರ ಮಾಡಿದ್ದವ ಈಗ ಕೈಕೊಟ್ಟಿದ್ದಾನೆ.

ಹೌದು.. ಕೊಪ್ಪಳಜಿಲ್ಲೆ ಮುನಿರಾಬಾದ್​ IRB ಪೊಲೀಸ್ ಆಗಿರುವ ಯಮನೂರಪ್ಪ, ವಿಧವೆ ಜತೆ ಲವ್ವಿ ಡವ್ವಿ ಆಟ ಆಡಿ ಕೈಕೊಟ್ಟಿರುವ ಆರೋಪ ಹೊತ್ತಿದ್ದಾನೆ.

ಈ ಐನಾತಿ ಯಮನೂರಪ್ಪ, ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬಳನ್ನು ಮೋಹಿಸಿದ್ದ. ಅಲ್ಲದೇ ಮದ್ವೆಯಾಗೋದಾಗಿ ನಂಬಿಸಿದ್ದ. ಆಕೆಯೊಂದಿಗೆ 5 ವರ್ಷ ಲಿವಿಂಗ್ ಟು ಗೆದರ್ ಸಂಬಂಧ ಇಟ್ಟುಕೊಂಡಿದ್ದನಂತೆ.

ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿದ್ದ ಯಮನೂರಪ್ಪ. ಸುಮಾಳ ಜೊತೆ ಪತಿಯ ರೀತಿ ಜೀವನ ನಡೆಸಿದ್ದಾನಂತೆ.

ಕಳೆದ ಐದು ವರ್ಷಗಳಲ್ಲಿ ಮೂರು ಭಾರಿ ಗರ್ಭವತಿಯಾಗಿದ್ದ ಸುಮಾಳಿಗೆ ಸುಳ್ಳು ಹೇಳಿ ಗರ್ಭಪಾತ ಬೇರೆ ಮಾಡಿಸಿದ್ದನಂತೆ.

ಮದ್ವೆಗೂ ಮುಂಚೆ ಗರ್ಭಿಣಿಯಾದ್ರೆ ಸಮಾಜ ಒಪ್ಪೋದಿಲ್ಲ ಎಂದು ನಾಟಕ ಮಾಡ್ತಿದ್ದನಂತೆ.

ಆದ್ರೆ, ಮತ್ತೊಮ್ಮೆ ಸುಮಾ ಗರ್ಭಿಣಿ ಯಾಗಿದ್ದಾಳೆ. ಮತ್ತೆ ಯಮನೂರಪ್ಪ ಹಳೇ ಚಾಳಿಯನ್ನೇ ಮುಂದುವರೆಸಿದ್ದಾನೆ. ಇದಕ್ಕೆ ಒಪ್ಪದೆ ಮದ್ವೆಯಾಗುವಂತೆ ಹಠ ಹಿಡಿದಿದ್ದಾಳೆ.

ಪೇಚಿಗೆ ಸಿಲುಕಿದ ಯಮನೂರಪ್ಪ ವಿಧವೆಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ. ಬಟ್ಟೆ ಅಂಗಡಿಯಿಟ್ಟುಕೊಂಡು ಜೀವನ ನಡೆಸುತ್ತಿದ್ದ ಸುಮಾಳಿಗೆ ಅದಾಗಲೇ 2 ಮದ್ವೆಯಾಗಿತ್ತು.

ಮೊದಲ ಪತಿ ತೀರಿಕೊಂಡ್ರೆ, 2ನೇ ಪತಿ ಡೈವೋರ್ಸ್​ ಪಡೆದುಕೊಂಡಿದ್ದ.. ಮಗುವಿನ ಜೊತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು.

ಆದ್ರೆ ಈಕೆಗೆ ಬಾಳು ಕೊಡ್ತೀನಿ ಅಂತಾ ಬಂದ ಪೊಲೀಸ್ ಕಾನ್ಸ್‌ಟೇಬಲ್ ಕೂಡ ನಂಬಿಸಿ ಕೈಕೊಟ್ಟಿದ್ದಾನೆ.

ದಿಕ್ಕು ತೋಚದ ಮಹಿಳೆಯ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.ಸದ್ಯ ಪೊಲೀಸಪ್ಪನ ಲವ್ವಡವ್ವಿ ಕಹಾನಿ ಎಸ್ಪಿ ಕಚೇರಿಗೂ ತಲುಪಿದೆ.

ಎಲ್ಲ ಪಡೆದುಕೊಂಡು ನೀನು ಬೇಡ ಎಂತಿರುವ ಪೊಲೀಸ್‌ನಿಂದ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಠಾಣೆ ಮೆಟ್ಟಿಲೇರಿದ್ದಾಳೆ.

ಅದೇನೆ ಇರಲಿ ಜನರ ಪಾಲಿಗೆ ಆರಕ್ಷರರಾಗಬೇಕಿದ್ದ ಪೊಲೀಸಪ್ಪನೇ ವಿಧವೆ ಪಾಲಿಗೆ ರಾಕ್ಷಸನಾಗಿದ್ದು ನಿಜಕ್ಕೂ ದುರಂತವೇ ಸರಿ.

FILM

ಬಾಲಿವುಡ್ ಜನಪ್ರಿಯ ನಿರೂಪಕಿ ಭಾರತಿ ಸಿಂಗ್ ಆಸ್ಪತ್ರೆ ದಾಖಲು..!

Published

on

ಮುಂಬೈ: ಬಾಲಿವುಡ್ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಡ್ಯಾನ್ಸ್ ದೀವಾನೆ ಸೀಸನ್ 4 ಅನ್ನು ಹೋಸ್ಟ್ ಮಾಡುತ್ತಿರುವ ಖ್ಯಾತ ನಿರೂಪಕಿ ಭಾರತಿ ಸಿಂಗ್  ತೀವ್ರ ಹೊಟ್ಟೆ ನೋವಿನಿಂದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

bharathi

‘ಕಳೆದ ಮೂರು ದಿನಗಳಿಂದ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದೇನೆ’ ಎಂದು ತನ್ನ ವ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅದನ್ನು ಗ್ಯಾಸ್ಟ್ರೊನಲ್ ಅಥವಾ ಆಮ್ಲೀಯ ಅಸ್ವಸ್ಥತೆ ಆಗಿರಬಹುದೆಂದು ಭಾವಿಸಿ ನಿರ್ಲಕ್ಷ ಮಾಡಿದ್ದರಂತೆ. ಆದರೆ, ನೋವು ತಡೆದುಕೊಳ್ಳಲಾಗದೆ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಧರಿಸಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ವ್ಲಾಗ್‌ನಲ್ಲಿ ಹೇಳಿದ್ದಾರೆ. ಇನ್ನು ವೈದ್ಯಕೀಯ ಪರೀಕ್ಷೆ ಬಳಿಕ ಭಾರತಿಗೆ ಪಿತ್ತಕೋಶದಲ್ಲಿ ಕಲ್ಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಏನೂ ತಿನ್ನಲು ಆಗುತ್ತಿಲ್ಲ ತಿಂದರೂ ವಾಂತಿ ಆಗುತ್ತಿದೆ ಎಂದ ಹೇಳಿದ ಅವರು ಭಾವುಕರಾದರು.

ಮುಂದೆ ಓದಿ..;‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಈ ನಡುವೆ ಭಾರತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೇಗ ಚೇತರಿಸಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಕಮೆಂಟ್‌ಗಳನ್ನು ಹಾಕಿದ್ದಾರೆ.

 

Continue Reading

DAKSHINA KANNADA

ಪ್ರವಾಸಿಗರಿಗೆ ಗುಡ್ ನ್ಯೂಸ್ : ಮತ್ತೆ ಆರಂಭವಾಯ್ತು ಲಕ್ಷದ್ವೀಪ – ಮಂಗಳೂರು ಸ್ಪೀಡ್ ಪ್ಯಾಸೆಂಜರ್ ಹಡಗು

Published

on

ಮಂಗಳೂರು : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪದ ಬೀಚ್‌ನಲ್ಲಿ ವಾಯುವಿಹಾರ ನಡೆಸುವ ಮೂಲಕ ಲಕ್ಷದ್ವೀಪ ಬಾರಿ ಸುದ್ದಿಯಾಗಿತ್ತು. ಈ ವೇಳೆ ಮಂಗಳೂರು ಲಕ್ಷದ್ವೀಪ ನಡುವೆ ಈ ಹಿಂದೆ ಇದ್ದ ಪ್ರಯಾಣಿಕರ ಹಡಗು ಆರಂಭಿಸಲು ಬೇಡಿಕೆ ಕೂಡಾ ಆರಂಭವಾಗಿತ್ತು.

ಇದೀಗ ಲಕ್ಷದ್ವೀಪದ ಆಡಳಿತ ಮಂಗಳೂರಿಗೆ ಸ್ಪೀಡ್ ಪ್ಯಾಸೆಂಜರ್ ಹಡಗನ್ನು ಆರಂಭಿಸಿದೆ. ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ ಸ್ಪೀಡ್ ಪ್ಯಾಸೆಂಜರ್ ಬೋಟ್‌ನಲ್ಲಿ 150 ಜನ ಲಕ್ಷದ್ವೀಪವಾಸಿಗಳು ಆಗಮಿಸಿದ್ದಾರೆ.

ಪ್ರಯಾಣ ದರ ಎಷ್ಟು?


ಮಂಗಳೂರು ಲಕ್ಷದ್ವೀಪದ ನಡುವೆ ಮತ್ತೆ ಸಂಪರ್ಕ ಸೇತುವೆ ನಿರ್ಮಿಸಲು ಲಕ್ಷದ್ವೀಪ ಆಡಳಿತ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭಿಸಿದೆ. ಕೋವಿಡ್ ಆರಂಭಕ್ಕೂ ಮೊದಲು ಮಂಗಳೂರು ಲಕ್ಷದ್ವೀಪದ ನಡುವೆ ಎರಡು ಪ್ರಯಾಣಿಕ ಹಡಗುಗಳು ಸಂಚಾರ ಮಾಡುತ್ತಿತ್ತು. ಸಾಕಷ್ಟು ಪ್ರಯಾಣಿಕರು ಮಂಗಳೂರು ಲಕ್ಷದ್ವೀಪ ನಡುವೆ ಪ್ರಯಾಣ ಮಾಡುವ ಮೂಲಕ ಅದರ ಅನುಕೂಲ ಪಡೆದುಕೊಂಡಿದ್ದರು.


ಲಕ್ಷದ್ವೀಪದವರಿಗೆ ತಮ್ಮ ದೈನಂದಿನ ಅವಶ್ಯಕತೆಗೆ ಮಂಗಳೂರು ಅವಲಂಬಿತರಾಗಿದ್ದರೆ, ಮಂಗಳೂರಿನ ಜನರಿಗೆ ಲಕ್ಷದ್ವೀಪ ವೀಕೆಂಡ್ ಪಾಯಿಂಟ್. ಆದ್ರೆ ಕೋವಿಡ್ ಕಾರಣದಿಂದ ಲಕ್ಷಾದ್ವೀಪಕ್ಕೆ ಇದ್ದ ಹಡಗಿನ ವ್ಯವಸ್ಥೆ ನಿಂತು ಹೋಗಿದ್ದು, ಈಗ ಮತ್ತೆ ಆರಂಭವಾಗಿದೆ. ಹಿಂದೆ 24 ಗಂಟೆ ಇದ್ದ ಪ್ರಯಾಣ ಕೇವಲ 5.30 ರಿಂದ 6 ಗಂಟೆಗಳಿಗೆ ಇಳಿದಿದೆ. ಹಡಗಿನಲ್ಲಿ ಎಲ್ಲಾ ವ್ಯವಸ್ಥೆ ಇರೋ ಕಾರಣದಿಂದ ಜನರು ಕೂಡಾ ಉತ್ಸಾಹದಿಂದ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ಹೈ-ಸ್ಪೀಡ್ ಪ್ರಯಾಣಿಕ ಹಡಗಿನ ದರ ಕೇವಲ 450 ರೂ. ಆಗಿದೆ.

ಹೆಚ್ಚಿನ ಹಡಗಿಗೆ ಬೇಡಿಕೆ :


ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಆರಂಭದಿಂದ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಇನ್ನಷ್ಟು ಹೆಚ್ಚಾಗಲಿದೆ. ಅಷ್ಟೇ ಅಲ್ಲದೆ, ಲಕ್ಷದ್ವೀಪಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಂಗಳೂರಿನಿಂದ ತೆರಳುವ ಮೂಲಕ ಅಲ್ಲೂ ಕೂಡಾ ಆರ್ಥಿಕ ಅಭಿವೃದ್ದಿ ಆಗಲಿದೆ.


ಸ್ಪೀಡ್ ಪ್ಯಾಸೆಂಜರ್ ಹಡಗು ಕನಿಷ್ಟ ಎರಡು ದಿನಕ್ಕೊಮ್ಮೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗುವ ವ್ಯವಸ್ಥೆ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ. ಈಗ ಆರಂಭವಾಗಿರೋ ಹಡಗಿನಲ್ಲಿ ಸುಖಕರ ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಟಿವಿ, ಎಸಿ, ಸೇರಿದಂತೆ ಅಗತ್ಯ ಸೇವೆಗಳು ಲಭ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಹಡಗಿನ ಬಳಕೆ ಮಾಡುವ ಸಾಧ್ಯತೆ ಇರುವ ಕಾರಣ ಹೆಚ್ಚಿನ ಹಡಗಿನ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದೀಗ ಆರಂಭಗೊಂಡಿರೋ ಪ್ರಯಾಣಿಕರ ಹಡಗು ಸೇವೆ ಜೂನ್ ತಿಂಗಳ ಬಳಿಕ ಸ್ಥಗಿತವಾಗಲಿದೆ.

ಇದನ್ನೂ ಓದಿ :  ‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಮಳೆಗಾಲ ಕಳೆದ ಬಳಿಕ ಇದು ಮತ್ತೆ ಆರಂಭವಾಗುತ್ತದೆಯೋ ಇಲ್ಲವೋ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದ್ರೆ, ಮತ್ತೆ ಆರಂಭಿಸುವ ಬಗ್ಗೆ ಲಕ್ಷಾದ್ವೀಪ ಆಡಳಿತ ಭರವಸೆ ನೀಡಿದೆ. ಒಟ್ಟಾರೆ ಹೇಳೋದಾದ್ರೆ ಸದ್ಯಕ್ಕಂತೂ ಲಕ್ಷದ್ವೀಪಕ್ಕೆ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭದಿಂದ ಮಂಗಳೂರಿನ ಜನರಿಗಂತೂ ಸಾಕಷ್ಟು ಖುಷಿಯಾಗಿರೋದಂತು ನಿಜ.

Continue Reading

LATEST NEWS

ಈಜಲು ಹೋದ ಅಣ್ಣ ನೀರು*ಪಾಲು.! ತಂಗಿಯ ವೀಡಿಯೋದಲ್ಲಿ ಸೆರೆಯಾಯ್ತು ಅಣ್ಣನ ಸಾ*ವಿನ ಕೊನೆ ಕ್ಷಣ..!

Published

on

ಕೋಲಾರ: ಕೃಷಿ ಹೊಂಡದಲ್ಲಿ ಈಜುತ್ತಿರುವುದನ್ನು ತಂಗಿ ವೀಡಿಯೋ ಮಾಡುತ್ತಿದ್ದಾಗಲೇ ಸಹೋದರ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ನಾಗವಾಳ ಗ್ರಾಮದಲ್ಲಿಈ ಘಟನೆ ನಡೆದಿದೆ.

swim death

ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್(26 ವ) ಮೃತ ದುರ್ದೈವಿ. ಗೌತಮ್ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗಾವಾಳಕ್ಕೆ ಬಂದಿದ್ದರು. ಈ ವೇಳೆ ಕುಟುಂಬ ಸದಸ್ಯರು ಹಾಗೂ ತಂಗಿಯ ಜೊತೆ ಕೃಷಿ ಹೊಂಡದ ಬಳಿ ಹೋಗಿದ್ದಾರೆ.  ಅಲ್ಲಿ ತಂಗಿಯ ಬಳಿ ವೀಡಿಯೋ ಮಾಡಲು ಮೊಬೈಲ್ ಕೊಟ್ಟು ಹೊಂಡಕ್ಕೆ ಈಜಲು ಧುಮುಕಿದ್ದಾರೆ. ಸರಿಯಾಗಿ ಈಜಲು ಗೊತ್ತಿರದ ಗೌತಮ್ ನೀರಿಗೆ ಧುಮುಕಿದ್ದು, ಇತ್ತ ತಂಗಿ ಈಚೆ ಬಾ ಎಂದು ಕೂಗುವುದು ವೀಡಿಯೋದಲ್ಲಿ ರೆಕಾರ್ಡ್‌ ಆಗಿದೆ. ನೋಡು ನೋಡುತ್ತಿದ್ದಂತೆ ಗೌತಮ್ ನೀರಲ್ಲಿ ಮುಳುಗಿ ಉಸಿರು ಚೆಲ್ಲಿದ್ದಾರೆ. ಇನ್ನು ಈ ವೀಡಿಯೋದಲ್ಲಿ ಗೌತಮ್ ನೀರಿನಲ್ಲಿ ಮುಳುಗುವ ದೃಶ್ಯ ಸೆರಯಾಗಿದೆ. ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

LATEST NEWS

Trending