ಮೈಸೂರು: ಮೊದಲ ಪತ್ನಿಯನ್ನು ಕೊಂದು ಸೆರೆಮನೆ ವಾಸ ಮುಗಿಸಿ ಬಂದವನೊಬ್ಬ ಕುಡಿತದ ಅಮಲಿನಲ್ಲಿ ಎರಡನೇ ಪತ್ನಿಯನ್ನೂ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದು,
ಇದನ್ನು ತಡೆಯಲು ಬಂದ ಅತ್ತೆ ಮಾವ ಸೇರಿ ನಾಲ್ವರ ಮೇಲೆ ದಾಳಿ ನಡೆಸಿದ ಘಟನೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.
ನಿಂಗವ್ವ ಮೃತ ದುರ್ದೈವಿ, ಈರಯ್ಯ ಎಂಬುವವನೇ ಕೊಲೆ ಆರೋಪಿ, ಈತ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ಬಳಿಕ ಹೊರ ಬಂದವ ನಿಂಗವ್ವಳನ್ನು ಎರಡನೇ ಮದುವೆಯಾದ.
ಆದರೆ ಅದೇನಾಗಿತ್ತೋ ಗೊತ್ತಿಲ್ಲ ಎರಡನೇ ಪತ್ನಿಯನ್ನೂ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಮಾಡಿದ್ದಾನೆ.
ಈ ವೇಳೆ ಜಗಳ ಬಿಡಿಸಲು ಬಂದ ನಿಂಗವ್ವ ಅವರ ತಾಯಿ, ತಂದೆ, ಮತ್ತಿಬ್ಬರು ಹಲ್ಲೆ ನಡೆಸುವುದನ್ನು ತಡೆಯಲು ಬಂದಿದ್ದಾರೆ ಆದರೆ ಈರಯ್ಯ ಅವರ ಮೇಲೂ ಮಾರಾಕಾಸ್ತ್ರದಿಂದ ದಾಳಿ ಮಾಡಿದ್ದಾನೆ,
ಪರಿಣಾಮ ನಾಲ್ವರೂ ಗಂಭೀರ ಗಾಯಗೊಂಡಿದ್ದು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಂಗವ್ವಳ ತಂದೆ, ತಾಯಿ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಈರಯ್ಯನನ್ನು ವಶಕ್ಕೆ ಪಡೆದಿದ್ದಾರೆ.