Connect with us

LATEST NEWS

ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಮೇಲೀನ ಹಲ್ಲೆ ಪ್ರಕರಣ : 7ವರ್ಷಗಳ ಬಳಿಕ ಅಪರಾಧಿಗೆ ಶಿಕ್ಷೆ ಪ್ರಕಟ..!

Published

on

ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಮೇಲೀನ ಹಲ್ಲೆ ಪ್ರಕರಣ : 7 ವರ್ಷಗಳ ಬಳಿಕ ಅಪರಾಧಿಗೆ ಶಿಕ್ಷೆ ಪ್ರಕಟ..!

ಬೆಂಗಳೂರು : 7 ವರ್ಷಗಳ ಹಿಂದೆ ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಎಂಬಾಕೆಯ ಮೇಲೆ ನಡೆದ  ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ. 

ಮುಂಜಾನೆ ಎಟಿಎಂಗೆ ಹಣ ತೆಗೆಯಲು ತೆರಳಿದ್ದ ಜ್ಯೋತಿಯ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿ, ಪರಾರಿಯಾಗಿದ್ದ ಮಧುಕರ್ ರೆಡ್ಡಿ  4 ವರ್ಷದ ಬಳಿಕ ಪೊಲೀರ ಕೈಗೆ ಸಿಕ್ಕಿಬಿದ್ದಿದ್ದ. ಆ ಪ್ರಕರಣದಲ್ಲಿ ಮಧುಕರ್ ರೆಡ್ಡಿ ಅಪರಾಧಿ ಎಂದು ನಿನ್ನೆ ನ್ಯಾಯಾಲಯ ಘೋಷಿಸಿದ್ದು, ಆತನಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ.

2013ರ ನ. 19 ರಂದು ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್​ನಲ್ಲಿದ್ದ ಎಟಿಎಂನಲ್ಲಿ ಈ ಹಲ್ಲೆ ನಡೆದಿತ್ತು. ಹಣ ಡ್ರಾ ಮಾಡಲು ಎಟಿಎಂಗೆ ತೆರಳಿದ್ದ ಜ್ಯೋತಿ ಉದಯ್ ಎಂಬ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಎಟಿಎಂನ ಶೆಟರ್​ ಎಳೆದುಕೊಂಡು ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಆರೋಪಿಯನ್ನು ಹಿಡಿಯಲು ನಾಲ್ಕು ವರ್ಷಗಳೇ ಬೇಕಾಗಿದ್ದವು. ಹಣ ಡ್ರಾ ಮಾಡುವ ವೇಳೆ ಹಣ ನೀಡಲು ನಿರಾಕರಿಸಿದ್ದ ಜ್ಯೋತಿ ಉದಯ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಮಧುಕರ್ ರೆಡ್ಡಿಯ ಕೃತ್ಯದ ಭೀಕರ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜ್ಯೋತಿ ಉದಯ್ ದೀರ್ಘಕಾಲದ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಮಧುಕರ್ ರೆಡ್ಡಿಗಾಗಿ ಕರ್ನಾಟಕ, ಆಂಧ್ರಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದ್ದ ಪೊಲೀಸರು ಮಧುಕರ್ ರೆಡ್ಡಿ ಬಗ್ಗೆ ಮಾಹಿತಿ ನೀಡಿದವರಿಗೆ 12 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೂ ಮಧುಕರ್ ರೆಡ್ಡಿಯ ಬಂಧನ ಸಾಧ್ಯವಾಗಿರಲಿಲ್ಲ.

2016ರಲ್ಲಿ ನ್ಯಾಯಾಲಯಕ್ಕೆ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದರು. 2017ರಲ್ಲಿ ಕೊಲೆ ಕೇಸ್ ಸಂಬಂಧ ಮಧುಕರ್ ರೆಡ್ಡಿಯನ್ನು ಬಂಧಿಸಲಾಗಿತ್ತು. ಆಂಧ್ರ ಪ್ರದೇಶದ ಮದನಪಲ್ಲಿ ಪೊಲೀಸರು ಮಧುಕರ್ ರೆಡ್ಡಿಯನ್ನು ಬಂಧಿಸಿದ್ದರು. ಬಾಡಿ ವಾರೆಂಟ್ ಮೇಲೆ ಮಧುಕರ್ ರೆಡ್ಡಿಯನ್ನು ಬೆಂಗಳೂರು ಪೊಲೀಸರು ಕರೆ ತಂದಿದ್ದರು. ವಿಚಾರಣೆ ಬಳಿಕ ನ್ಯಾಯಾಲಯದಲ್ಲಿ ಮಧುಕರ್ ರೆಡ್ಡಿ ತಪ್ಪು ಒಪ್ಪಿಕೊಂಡಿದ್ದ. ಬೇಗ ನನಗೆ ಶಿಕ್ಷೆ ಕೊಡಿ, ನನಗೆ ಹೆಂಡತಿ ಮಕ್ಕಳಿದ್ದಾರೆ. ಶಿಕ್ಷೆ ಮುಗಿಸಿ ನಾನು ಹೊರಬರಬೇಕು ಎಂದು ಕೋರ್ಟ್​ನಲ್ಲಿ ಹೇಳಿದ್ದ.

2017ರ ಮೇ 8 ರಲ್ಲಿ ಎಸ್ ಜೆ ಪಾರ್ಕ್ ಪೊಲೀಸರಿಂದ ಚಾರ್ಚ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ರಾಜ್ಯಾದ್ಯಂತ ಸದ್ದು ಮಾಡಿದ್ದ ಜ್ಯೋತಿ ಉದಯ್ ಮೇಲಿನ ಹಲ್ಲೆಯ ಬಳಿಕ ಎಟಿಎಂ ಸೆಕ್ಯೂರಿಟಿ, ಸಿಸಿಟಿವಿ ಕಡ್ಡಾಯಗೊಳಿಸಲಾಗಿತ್ತು. ಅಪರಾಧಿ ಮಧುಕರ ರೆಡ್ಡಿಗೆ ಇಂದು ಶಿಕ್ಷೆ ಪ್ರಕಟವಾಗಲಿದ್ದು, ಎಷ್ಟು ಪ್ರಮಾಣದ ಶಿಕ್ಷೆ ನೀಡಲಾಗುವುದು ಎಂಬ ಬಗ್ಗೆ ಇಂದು ನಿರ್ಧಾರವಾಗಲಿದೆ. 65ನೇ ಸಿಟಿ ಸಿವಿಲ್ ಕೋರ್ಟ್ ಮತ್ತು ಸೆಷನ್ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಮೇ 9 ರಂದು SSLC ಫಲಿತಾಂಶ ಪ್ರಕಟ…!

Published

on

ಮಂಗಳೂರು : 2023-24 ರ SSLC ಪರೀಕ್ಷೆಯ ಫಲಿತಾಂಶ ಮೇ 9 ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್‌ 25 ರಿಂದ ಎಪ್ರಿಲ್ 6 ರ ವರೆಗೆ ಪರೀಕ್ಷೆ ನಡೆಸಲಾಗಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆಗೆ ವಿಳಂಭವಾಗಿದೆ ಎಂದು ಹೇಳಿದೆ


2023- 24ರ SSLC ಪರೀಕ್ಷೆಯಲ್ಲಿ ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ವಿದ್ಯಾರ್ಥಿಗಳು ರೀ ಎಕ್ಸಾಂ ಬರೆದಿದ್ದಾರೆ. ಇದರಲ್ಲಿ 4.41 ಲಕ್ಷ ಬಾಲಕರು ಮತ್ತು 4.28 ಲಕ್ಷ ಬಾಲಕಿಯರು ಇದ್ದಾರೆ.

ಫಲಿತಾಂಶವನ್ನು ನೋಡಲು ಈ ವೆಬ್‌ಸೈಟ್ ಬಳಸಿ..!

ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. kseab.karnataka.gov.in ಹಾಗೂ karresults.nic.in ವೆಬ್‌ಸೈಟ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.

Continue Reading

LATEST NEWS

ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ..! WHO ಈ ಬಗ್ಗೆ ಹೇಳಿದ್ದೇನು ?

Published

on

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅನ್ನೋದು ಸಾಮಾನ್ಯವಾಗಿದೆಯಾದ್ರೂ, ಕ್ಯಾನ್ಸರ್ ಪೀಡಿತರ ಕಷ್ಟ, ನೋವು ಸಹಿಸಲು ಅಸಾದ್ಯವಾಗಿದೆ. ಇನ್ನು ಭಾರತದ ವಿಚಾರಕ್ಕೆ ಬಂದ್ರೆ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇತ್ತೀಚಿಗೆ ಹೆಸರಾಂತ ಆಸ್ಪತ್ರೆಯೊಂದು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಭಾರತೀಯರ ಒಟ್ಟಾರೆ ಆರೋಗ್ಯ ಕ್ಷೀಣಿಸುತ್ತಿದೆ ಅನ್ನೋ ಆತಂಕಕಾರಿ ವಿಚಾರವನ್ನು ಬಹಿರಂಗ ಪಡಿಸಿದೆ.


2020 ರಲ್ಲಿ ಭಾರತದಲ್ಲಿ 14 ಲಕ್ಷ ಜನರಿಗೆ ಕ್ಯಾನ್ಸರ್ ರೋಗ ಇದ್ದ ಬಗ್ಗೆ ಅಪೋಲೋ ಆಸ್ಪತ್ರೆಗಳ ವರದಿ ತಿಳಿಸಿತ್ತು. ಆದ್ರೆ, ಇದು 2025 ರ ವೇಳೆಗೆ ಅಂದರೆ ಐದು ವರ್ಷದಲ್ಲಿ ಸುಮಾರು 15.8 ಲಕ್ಷಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ.

ಪಬ್ಲಿಕ್‌ ಹೆಲ್ತ್‌ ಫೌಂಡೇಶನ್ ಆಫ್‌ ಇಂಡಿಯಾದ ಮಾಜಿ ಅಧ್ಯಕ್ಷ ಕೆ. ಶ್ರೀನಾಥ್ ರೆಡ್ಡಿ ಅವರು ಜರ್ಮನ್ ಸುದ್ದಿ ಸಂಸ್ಥೆಯಾದ ಡಾಯ್ಜ್ ವೆಲ್ಲೆ ( ಡಿಡಬ್ಲ್ಯೂ) ಗೆ ನೀಡಿದ ಸಂದರ್ಶನದಲ್ಲಿ “ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ” ಎಂದಿದ್ದಾರೆ.

ಕ್ಯಾನ್ಸರ್‌ನ ಸಾಮಾನ್ಯ ವಿಧಗಳು ಯಾವುವು?

ಕ್ಯಾನ್ಸರ್ ಕಾಯಿಲೆ ಹೇಗೆ ಬರುತ್ತದೆ ಅನ್ನೋದು ಇನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲವಾಗಿದೆ. ಆದ್ರೆ ದೇಹದ ಕೆಲವು ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುವುದು ಹಾಗೂ ಅದು ದೇಹದ ಇತರ ಭಾಗಗಳಿಗೆ ಹರಡುವುದು ಈ ರೋಗದ ಲಕ್ಷಣವಾಗಿದೆ. ಇದು ದೇಹದ ಯಾವ ಭಾಗದಲ್ಲಿ ಬೇಕಾದ್ರೂ ಕಾಣಿಸಿಕೊಂಡು ದೇಹಕ್ಕೆ ವ್ಯಾಪಿಸಿಕೊಳ್ಳಬಹುದು. ಪ್ರಮುಖವಾಗಿ ಸ್ತನ ಕ್ಯಾನ್ಸರ್, ಗರ್ಭಕಂಠ ಮತ್ತು ಅಂಡಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಶ್ವಾಸಕೋಶ, ಬಾಯಿ, ಪ್ರಸ್ಟ್ರೇಟ್‌ ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸುವ ಕ್ಯಾನ್ಸರ್ ಆಗಿದೆ.

ಗ್ಲೋಬಲ್ ಕ್ಯಾನ್ಸರ್‌ ಅಬ್ಸರ್ವೇಟರಿ 2022 ರಲ್ಲಿ ನಡೆಸಿದ ಸರ್ವೇ ಪ್ರಕಾರ ಭಾರತದಲ್ಲಿ ಮಹಿಳೆಯರಿಗಿಂತ ಪುರಷರಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಾಣಸಿದೆ. ಸುಮಾರು 7,22,138 ಪುರುಷರು ಕ್ಯಾನ್ಸರ್‌ಗೆ ತುತ್ತಾಗಿದ್ದರೆ, 6,19,178 ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಪತ್ತೆಯಾಗಿರೋ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 32 ಪ್ರಕರಣಗಳು ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್ ಅನ್ನೋದು ಗಮನಾರ್ಹ.

ಇದರಲ್ಲಿ 1,92,020 (26.6%) ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮುಖ ಕ್ಯಾನ್ಸರ್ ಆಗಿದ್ರೆ, 1,27,526 ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು (17.7%) ಗುರುತಿಸಲಾಗಿದೆ. ಇನ್ನು ಶೇಕಡಾ 6.6 ರಷ್ಟು ಮಹಿಳೆಯರು ಅಂಡಾಶಯ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ.
ಪುರುಷರಲ್ಲಿ ಬಾಯಿಯ ಕ್ಯಾನ್ಸರ್ 1,07,812 (15.6%) , ಶ್ವಾಸಕೋಶದ ಕ್ಯಾನ್ಸರ್ 58,970 (8.5%),ಅನ್ನನಾಳದ ಕ್ಯಾನ್ಸರ್ 45608- (6.6%).

ಇದನ್ನೂ ಓದಿ : ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ

ಇನ್ನು ಕ್ಯಾನ್ಸರ್ ಸಾವಿನ ಪ್ರಕರಣದಲ್ಲಿ ಸ್ತನ ಕ್ಯಾನ್ಸರ್‌ಗೆ 98,337 – (13.7%) ಜನ ಸಾವಿಗೀಡಾಗಿದ್ದರೆ, ಬಾಯಿಯ ಕ್ಯಾನ್ಸರ್ ಗೆ 79,979 (5.6%) ಮತ್ತು ಗರ್ಭಕಂಠದ ಕ್ಯಾನ್ಸರ್ 79,906 ( 11.2%).ಜೀವ ಕಳೆದುಕೊಂಡಿದ್ದಾರೆ.

WHO ಪ್ರಕಾರ ಜಗತ್ತಿನ ಶೇಕಡಾ 30 ರಿಂದ 40 ಕ್ಯಾನ್ಸರ್ ಪ್ರಕರಣಗಳು ಜನರ ಜೀವನ ಶೈಲಿಯಿಂದ ಬರುತ್ತಿದೆಯಂತೆ. ತಂಬಾಕು ಸೇವನೆ, ಅಲ್ಕೋಹಾಲ್ ಸೇವನೆ, ಹಣ್ಣು ತರಕಾರಿಗಳಲ್ಲಿನ ಪೌಷ್ಠಿಕಾಂಶದ ಪ್ರಮಾಣ ಇಳಿಕೆಯಾಗಿರುವುದು ಇದಕ್ಕೆ ಕಾರಣ ಎಂದು ಹೇಳಿದೆ. ಹೀಗಾಗಿ ಜನರು ಹೆಚ್ಚಾಗಿ ತಜ್ಞ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವರ್ಲ್ಡ್‌ ಹೆಲ್ತ್‌ ಆರ್ಗನೈಸೇಶನ್ ಸಲಹೆ ನೀಡಿದೆ.

Continue Reading

LATEST NEWS

KARKALA : ಸಿಡಿದ ಸುಡುಮದ್ದು ತಯಾರಿಕಾ ಘಟಕ; ಮಹಿಳೆಯರಿಗೆ ಗಂಭೀರ ಗಾಯ

Published

on

ಕಾರ್ಕಳ :  ಸುಡುಮದ್ದು ತಯಾರಿಕಾ ಘಟಕ ಸಿಡಿದು ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಾಜೆ ಎಂಬಲ್ಲಿ ನಡೆದಿದೆ.

ಇಲ್ಲಿ ಹಲವಾರು ವರ್ಷಗಳಿಂದ ಸುಡುಮದ್ದು ತಯಾರಿಕಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಎಂದಿನಂತೆ ಇಂದು ಬೆಳಗ್ಗೆ ಸುಡುಮದ್ದು ತಯಾರಿಕೆ ಆರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸ್ಫೋಟಗೊಂಡಿದೆ.

ಇದನ್ನೂ ಓದಿ : ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ

ಘಟನೆಯಲ್ಲಿ ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯರಿಬ್ಬರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಹೊತ್ತಿ ಉರಿದಿದ್ದು, ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದೆ. ಈ ಸುಡುಮದ್ದು ತಯಾರಿಕಾ ಘಟಕದಲ್ಲಿ 3 ಬೇರೆ ಬೇರೆ ಕಟ್ಟಡಗಳಿದ್ದು, ಒಂದು ಕಟ್ಟಡದಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Continue Reading

LATEST NEWS

Trending