Connect with us

  MANGALORE

  ಮಂಗಳೂರು: ಯಶಸ್ವಿ 20 ವರ್ಷ ಪೂರೈಸಿದ ಎ.ಜೆ ಆಸ್ಪತ್ರೆ

  Published

  on

  ಮಂಗಳೂರು: ನಗರದಲ್ಲಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸುತ್ತಿರುವ ಅತ್ಯಾಧುನಿಕ ಹಾಗೂ ಸುಸಜ್ಜಿತ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರವು ಯಶಸ್ವಿ 20 ವರ್ಷಗಳನ್ನು ಪೂರೈಸಿದೆ.
  2001ರಲ್ಲಿ ಪ್ರಾರಂಭಗೊಂಡ, 425 ಹಾಸಿಗೆಗಳುಳ್ಳ ಈ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಆರೋಗ್ಯ ಸೇವೆ ನೀಡಲು ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ವಿನ್ಯಾಸಗೊಳಿಸಲಾಗಿದೆ.
  ಇದು ಮಂಗಳೂರಿನಲ್ಲಿ NABH ಮಾನ್ಯತೆ ಪಡೆದ ಮೊದಲ ಆಸ್ಪತ್ರೆ, ಇದು 30ಕ್ಕೂ ಹೆಚ್ಚು ಪ್ರಮುಖ ವೈದ್ಯಕೀಯ ವಿಭಾಗಗಳನ್ನು ಹೊಂದಿದ್ದು, ಉನ್ನತ ಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.


  ಅತ್ಯಾಧುನಿಕ ಸೌಕರ್ಯಗಳು ಮತ್ತು ಸಲಕರಣೆಗಳನ್ನು ಹೊಂದಿರುವ ಎ.ಜೆ. ಆಸ್ಪತ್ರೆಯು, ಅನುಭವಿ ವೈದ್ಯರ ತಂಡದ ನೇತೃತ್ವದಲ್ಲಿದೆ ಹಾಗೂ ನುರಿತ ಪ್ರೊಫೆಶನಲ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಯಿಂದ ಬೆಂಬಲಿತವಾಗಿದೆ.
  ಆಸ್ಪತ್ರೆಯು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ. ಪ್ರಶಾಂತ ವಾತವರಣದಲ್ಲಿರುವ ಈ ಆಸ್ಪತ್ರೆಯು ರೋಗಿಯ ಅಗತ್ಯತೆಗಳು ಮತ್ತು ವೈದ್ಯಕೀಯ ಸೌಲಭ್ಯಗಳ ನಡುವೆ ಉತ್ತಮ ಹೊಂದಾಣಿಕೆಯನ್ನು ಒದಗಿಸುತ್ತದೆ.

  ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಿದೆ. ಆಸ್ಪತ್ರೆಯು ಹ್ರದ್ರೋಗ, ಯುರೋಲಜಿ, ಕಾಸ್ಮೆಟಿಕ್, ಪುನರ್‌ನಿರ್ಮಾಣ ಮತ್ತು ಮೈಕ್ರೋವ್ಯಾಸ್ಕ್ಯುಲರ್ ಸರ್ಜರಿಗಳಲ್ಲಿ ಪ್ರಭಾವಶಾಲಿ ದಾಖಲೆಗಳನ್ನು ಸ್ಥಾಪಿಸಿದೆ.


  ಎ.ಜೆ. ಕ್ಯಾನ್ಸರ್ ಸಂಸ್ಥೆಯು ಕೀಮೋಥೆರಪಿ, ರೇಡಿಯೆಶನ್ (ವಿಕಿರಣ), ಶಸ್ತ್ರಚಿಕಿತ್ಸೆ, ಹೆಮಾಟೊ-ಆಂಕೋಲಾಜಿ ಮತ್ತು ನೋವು ಶಮನಕಾರಿ ಚಿಕಿತ್ಸೆಯೊಂದಿಗೆ ಸಮಗ್ರ ಕ್ಯಾನ್ಸರ್ ಅರೈಕೆಯನ್ನು ಒದಗಿಸುತ್ತದೆ. ಕ್ಯಾನ್ಸರ್ ವಿಭಾಗವು ಪೆಟ್-ಸಿಟಿ ಮತ್ತು ಅಯೋಡಿನ್ ಥೆರಪಿ ವಾರ್ಡ್ ನೊಂದಿಗೆ ಪರಿಪೂರ್ಣವಾಗಿದೆ.
  ರೋಬೊಟಿಕ್ ಸಿಸ್ಟಮ್: ನೇ ತಲೆಮಾರಿನ ಡ ವಿನ್ಸಿ ಸಿಸ್ಟಮ್ಸ್ (USA) ಸಂಸ್ಥೆಯ ರೋಬೊಟ್ ಅನ್ನು ಎ.ಜೆ. ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ದೇಶದಲ್ಲಿಯೇ ಈ ಸೌಲಭ್ಯವನ್ನು ಹೊಂದಿರುವ 4ನೇ ಆಸ್ಪತ್ರೆಯಾಗಿದೆ.

  ರೋಬೊಟ್ ಶಸ್ತ್ರಚಿಕಿತ್ಸೆಯು ರೋಗಿ ಮತ್ತು ವೈದ್ಯರಿಬ್ಬರಿಗೂ ಲಾಭದಾಯಕ. ರೋಬೊಟಿಕ್ ಸಿಸ್ಟಮ್ ಯುರೋಲಜಿ, ಗೈನಕಾಲಜಿ (ಸ್ರೀ ರೋಗ ಶಸ್ತ್ರ ಚಿಕಿತ್ಸೆ), ಜಠರ ಮತ್ತು ಕರುಳಿನ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಹಾಗೂ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳಲ್ಲಿ ಉಪಯೋಗವಾಗುತ್ತದೆ. ರೋಗಿಗಳು ಶಸ್ತ್ರಚಿಕಿತ್ಸೆಯಲ್ಲಿ ನಿಖರತೆ ಮತ್ತು ಆಸ್ಪತ್ರೆಯ ಕಡಿಮೆ ವಾಸ್ತವ್ಯದ ಹೆಚ್ಚುವರಿ ಪ್ರಯೋಜನದೊಂದಿಗೆ ಬೇಗ ಚೇತರಿಸಿಕೊಳ್ಳುವುದರಿಂದ ಪ್ರಯೋಜನ ಪಡೆಯುತ್ತಾರೆ.


  ಎ. ಜೆ. ಆಸ್ಪತ್ರೆಯು ಈ ಕೆಳಗಿನ ಎಲ್ಲಾ ಸೂಪರ್ ಸ್ಪೆಶಾಲಿಟಿ (ವಿಭಾಗ)ಗಳಾದ ಹೃದಯರೋಗ, ಹೃದಯ ಶಸ್ತ್ರಚಿಕಿತ್ಸೆ, ಎಂಡೊಕ್ರೈನೊಲಜಿ, ಎಮರ್ಜೆನ್ಸಿ ಮೆಡಿಸಿನ್, ಗ್ಯಾಸ್ಟ್ರೋಎಂಟರೋಲಜಿ, ಹೆಮಟೊ ಒಂಕಾಲೊಜಿ, ಇಂಟರ್ವೆನ್ಶನಲ್ ರೆಡಿಯೋಲಜಿ, ಮೆಡಿಕಲ್ ಒಂಕಾಲೊಜಿ, ನೆಪ್ರೋಲಜಿ (ಕಿಡ್ನಿ/ಮೂತ್ರಪಿಂಡ ರೋಗ), ನ್ಯುರೋಲಜಿ (ನರರೋಗ), ನ್ಯುರೋಸರ್ಜರಿ (ನರರೋಗ ಶಸ್ತ್ರಚಿಕಿತ್ಸೆ), ನ್ಯುಕ್ಲಿಯರ್ ಮೆಡಿಸನ್, ಪೆಯಿನ್ ಆ್ಯಂಡ್ ಪಲ್ಲಿಯೆಟಿವ್ ಮೆಡಿಸನ್ (ನೋವು ಶಮನಕಾರಿ ಚಿಕಿತ್ಸೆ), ಮಕ್ಕಳ ಹೃದಯರೋಗ, ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಆ್ಯಂಡ್ ಮೈಕ್ರೋವ್ಯಾಸ್ಕ್ಯುಲರ್ ಶಸ್ತ್ರಚಿಕಿತ್ಸೆ, ರೇಡಿಯೇಶನ್ ಒಂಕೋಲಜಿ, ಸರ್ಜಿಕಲ್ ಒಂಕೋಲಜಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರೊಲಜಿ (ಬೆರಿಯಟ್ರಿಕ್ ಸರ್ಜರಿ ಆ್ಯಂಡ್ ಲಿವರ್ ಟ್ರಾನ್ಸ್ ಪ್ಲಾಂಟ್), ಯುರೋಲಜಿ (ಮೂತ್ರರೋಗ), ಕಿಡ್ನಿ ಕಸಿ ಮತ್ತು ಸಾಮಾನ್ಯ ಸ್ಪೆಶಾಲಿಟಿಗಳಲ್ಲಿ (ಸಾಮಾನ್ಯ ವಿಭಾಗಗಳ) ಚಿಕಿತ್ಸೆಯನ್ನು ಪೂರೈಸುತ್ತದೆ.

  ‘ಎ.ಜೆ. ಆಸ್ಪತ್ರೆಯು ತನ್ನ ವಿಶಾಲವಾದ ಕ್ಯಾಂಪಸ್ ನಲ್ಲಿರುವ ವಿಶ್ವದರ್ಜೆಯ ಸೌಲಭ್ಯಗಳು ಮತ್ತು ಸಮರ್ಪಿತ ಸಿಬ್ಬಂದಿಯೊಂದಿಗೆ, ರೋಗಿಗಳ ಸೇವೆಗೆ ಆದ್ಯತೆಯನ್ನು ನೀಡುವ ಮೂಲಕ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುತ್ತಿದೆ’.
  ಡಾ. ಪ್ರಶಾಂತ್ ಮಾರ್ಲ ಕೆಎಂಎಸ್, (ಯುರೋಲಜಿ) ವೈದ್ಯಕೀಯ ನಿರ್ದೇಶಕರು, ಎ.ಜೆ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್

  LATEST NEWS

  ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿಗೆ ಯೋಧನ ಜೀವಾಂತ್ಯ..!

  Published

  on

  ಅಯೋಧ್ಯಾ : ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್‌ ಯೋಧ ಅನುಮಾನಾಸ್ಪದವಾಗಿ ಗುಂಡು ತಾಗಿ ಸಾ*ವನ್ನಪ್ಪಿದ್ದಾರೆ. ಜೂನ್ 19 ರ ಮುಂಜಾನೆ 5.25 ಕ್ಕೆ ಈ ಘಟನೆ ನಡೆದಿದ್ದು, ಯೋಧನ ಹಣೆಗೆ ಗುಂಡು ತಾಗಿ ಮಂದಿರದ ವಿಐಪಿ ಗೇಟ್ ಬಳಿ ಮೃ*ತಪಟ್ಟಿದ್ದಾನೆ. ಮೃ*ತ ಯೋಧನನ್ನು ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಘಟನೆ ಹೇಗಾಯ್ತು ಅನ್ನೋದು ಇನ್ನೂ ನಿಗೂಢವಾಗಿ ಉಳಿದಿದೆ.

  ಮೂಲಗಳ ಪ್ರಕಾರ, ರಾಮಮಂದಿರ ಸಂಕೀರ್ಣದ ವಿಐಪಿ ಗೇಟ್ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ. ಸಹೋದ್ಯೋಗಿ ಭದ್ರತಾ ಸಿಬ್ಬಂದಿ ಓಡಿ ಬಂದು ನೋಡಿದಾಗ ಶತ್ರುಘ್ನ ವಿಶ್ವಕರ್ಮ ಹಣೆಗೆ ಗುಂಡು ತಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದ್ರೂ ಆ ವೇಳೆಗೆ ಅವರು ಮೃ*ತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇವರು ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು, ಘಟನಾ ಸ್ಥಳಕ್ಕೆ ಐಜಿ ಹಾಗೂ ಎಸ್‌ಎಸ್‌ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  ಘಟನೆ ವೇಳೆ ಶತ್ರುಘ್ನ ವಿಶ್ವಕರ್ಮ ಮೊಬೈಲ್ ನೋಡುತ್ತಿದ್ದು, ಅವರ ಜೊತೆ ಬೇರೆ ಸಿಬ್ಬಂದಿ ಇದ್ದರು ಎಂದು ಮೊದಲ ಮಾಹಿತಿ ದೊರೆತಿದೆ. ಆದ್ರೆ, ಗುಂಡು ಹಣೆಗೆ ಹೇಗೆ ತಾಗಿತು ಅನ್ನೋ ಬಗ್ಗೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಯೋಧ ಶತ್ರುಘ್ನ ವಿಶ್ವಕರ್ಮ ಅವರ ಸಹೋದರರು ಆರೋಪಿಸಿದ್ದಾರೆ. ಸಹೋದರನ ಸಾ*ವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ತನಿಖೆಗೆ ಆಗ್ರಹಿಸಿದ್ದಾರೆ.

  Continue Reading

  DAKSHINA KANNADA

  ತೊಳೆದ್ರು ಬಿಳಿ ಬಟ್ಟೆ ಮೇಲಿನ ಕಲೆ ಹೋಗ್ತಿಲ್ವಾ? ಹೀಗೆ ಮಾಡಿ

  Published

  on

  ಮಂಗಳೂರು: ಬಿಳಿ ಬಟ್ಟೆಯನ್ನು ಕಲೆಯಾಗದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಕೈ ತಪ್ಪಿ ಟೀ ಕಾಫಿ ಚೆಲ್ಲಿಯೋ, ಪೆನ್ನಿನ ಇಂಕ್ ತಾಗಿಯೋ ಬಿಳಿ ಬಟ್ಟೆಯ ಅಂದವನ್ನು ಹಾಳು ಮಾಡುತ್ತದೆ. ಈ ವೇಳೆ ಯಾವುದೇ ಡಿಟರ್ಜೆಂಟ್, ಸೋಪ್ ಬಳಸಿ ತಿಕ್ಕಿ ತೊಳೆದರೂ ಪ್ರಯೋಜನವಂತೂ ಆಗುವುದೇ ಇಲ್ಲ. ಬಟ್ಟೆಯನ್ನು ಜಾಸ್ತಿ ಉಜ್ಜಿದರೆ, ಆ ಬಟ್ಟೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ನಿಮಗೂ ಈ ರೀತಿ ಅನುಭವವಾಗಿದ್ದರೆ ಟೆನ್ಶನ್ ಮಾಡಿಕೊಳ್ಬೇಡಿ, ಈ ವಸ್ತುಗಳನ್ನು ಬಳಸಿ ಕಲೆಯನ್ನು ನಿವಾರಿಸಿಕೊಳ್ಳಬಹುದು.

  • ಅರ್ಧ ಕಪ್ ನೀರಿಗೆ ಅರ್ಧ ಕಪ್ ವಿನೆಗರ್ ಮಿಶ್ರಣ ಮಾಡಿ ಬಿಳಿ ಬಟ್ಟೆಯ ಮೇಲೆ ಇರುವ ಕಲೆಗೆ ಸ್ಪ್ರೇ ಮಾಡಿ, ಸ್ವಲ್ಪ ಸಮಯ ಹಾಗೆ ಬಿಡಬೇಕು. ತದನಂತರದಲ್ಲಿ ಅದೇ ನೀರಿನಿಂದ ತಿಕ್ಕಿ ತೊಳೆದರೆ ಕಲೆ ಬಿಡುತ್ತದೆ.
  • ಬಿಳಿ ಬಟ್ಟೆ ಮೇಲಿನ ಕಲೆಯನ್ನು ತೆಗೆದು ಹಾಕಲು ಅಡುಗೆ ಸೋಡಾ ಬೆಸ್ಟ್ ಎನ್ನಬಹುದು. ನೀರಿಗೆ ಅಡುಗೆ ಸೋಡಾ ಸೇರಿಸಿ, ಕಲೆಯಾದ ಬಟ್ಟೆಯನ್ನು ಆ ನೀರಿನಲ್ಲಿ ನೆನೆಸಿಡಬೇಕು. ಸ್ವಲ್ಪ ಸಮಯದ ಬಳಿಕ ಬಟ್ಟೆಯನ್ನು ತೊಳೆದರೆ ಕಲೆಯೂ ಹೋಗುತ್ತದೆ.
  • ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಆ ಜಾಗಕ್ಕೆ ನಿಂಬೆರಸ ಹಾಕಿ ಉಪ್ಪು ಮತ್ತು ಸೋಪಿನಿಂದ ಚೆನ್ನಾಗಿ ತೊಳೆದರೆ ಕಲೆಯೂ ಇಲ್ಲದಂತಾಗುತ್ತದೆ.
   ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಉಜ್ಜುವುದರಿಂದ ಬಿಳಿ ಬಟ್ಟೆ ಮೇಲಿನ ಕಲೆಯೂ ನಿವಾರಣೆಯಾಗುತ್ತದೆ.
  • ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಸ್ವಲ್ಪ ಬಿಸಿ ನೀರನ್ನು ಆ ಜಾಗಕ್ಕೆ ಹಾಕಿ, ಡಿರ್ಟಜೆಂಟ್‌ ನಿಂದ ಉಜ್ಜಿ ಕಲೆಯನ್ನು ತೆಗೆದು ಹಾಕಬಹುದು.
  • ಬಿಳಿ ಬಟ್ಟೆ ಮೇಲಿನ ಕಲೆ ನಿವಾರಣೆಗೆ ಟೂತ್ ಪೇಸ್ಟ್ ಬಳಸುವುದು ಪರಿಣಾಮಕಾರಿಯಾಗಿದೆ. ಕಲೆ ಮೇಲೆ ಟೂತ್ಪೇಸ್ಟ್ ಅನ್ವಯಿಸಿ, ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಬಿಡಬೇಕು. ಆ ಬಳಿಕ ಡಿಟೆರ್ಜಂಟ್ ಬಳಸಿ ಸ್ವಚ್ಛಗೊಳಿಸಿದರೆ ಕಲೆ ಉಳಿಯುವುದಿಲ್ಲ.
  Continue Reading

  DAKSHINA KANNADA

  ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಸ್ವರ್ಣಪಾದುಕೆ ಸಮರ್ಪಣೆ

  Published

  on

  ಮಂಗಳೂರು: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೆಯ ಅಧಿಪತಿಗಳಾದ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸುವರ್ಣಮಹೋತ್ಸವದ ಸ್ಮರಣಾರ್ಥ ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಶೃಂಗೇರಿ ಶಾರದಾಪೀಠದ ವತಿಯಿಂದ 40 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣಪಾದುಕೆ ಹಾಗೂ ಒಡ್ಯಾಣವನ್ನು ಸಮರ್ಪಿಸಲಾಗಿದೆ.

  ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರು 1974 ರಲ್ಲಿ ಸನ್ಯಾಸ ಸ್ವೀಕರಿಸಿದ್ದು, 2024 ಕ್ಕೆ 50 ವರ್ಷಗಳಾಗುತ್ತಿವೆ. ಶೃಂಗೇರಿಯಲ್ಲಿ ಉಭಯ ಜಗದ್ಗುರುಗಳು ಈ ಪಾದುಕೆ ಹಾಗೂ ಒಡ್ಯಾಣವನ್ನು ಕಟೀಲು ದೇವಳದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಅವರಿಗೆ ಹಸ್ತಾಂತರಿಸಿದರು. ಇದನ್ನು ಜೂ.19 ರಂದು ಶ್ರೀದೇವಿಗೆ ತೊಡಿಸಿ ಅಲಂಕಾರ ಮಾಡಲಾಯಿತು. ಈ ಸೇವೆಯನ್ನು ಶೃಂಗೇರಿ ಶ್ರೀಮಠದ ಶಿಷ್ಯರಾದ ಆಂಧ್ರಪ್ರದೇಶದ ಶ್ರೀಪೋಲಿಸೆಟ್ಟಿ ಶ್ಯಾಮ್ ಸುಂದರ್ ಅವರು ನೀಡಿರುತ್ತಾರೆ.

  Read More..; ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕ್ರಿಕೆಟಿಗ ಮಯಂಕ್ ಅಗರವಾಲ್ ಭೇಟಿ

  Continue Reading

  LATEST NEWS

  Trending