Connect with us

    LATEST NEWS

    ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದು*ರ್ಮ*ರಣ

    Published

    on

    ದಾವಣಗೆರೆ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾ*ವನ್ನಪ್ಪಿದ ಮನಕಲಕುವ ಘಟನೆ ಜಗಳೂರಿನ ಅಸಗೋಡು ಗ್ರಾಮದಲ್ಲಿ ನಡೆದಿದೆ.

    ಮೃ*ತ ಬಾಲಕಿಯರನ್ನು ಗಂಗಮ್ಮ (12) ಹಾಗೂ ಕಾವ್ಯ (8) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಕಾಲು ಜಾರಿ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಪೋಷಕರು ಮಕ್ಕಳ ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಬಾಲಕಿಯರು ಮೃ*ತಪಟ್ಟಿದ್ದಾರೆ. ಮಕ್ಕಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ‘ದಾಂಡಿಯಾ’ಕ್ಕೆ ಬ್ರೇಕ್‌..! ದುರ್ಗಾವಾಹಿನಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ..!

    Published

    on

    ಮಂಗಳೂರು: ನವರಾತ್ರಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಹಬ್ಬವನ್ನು ಆಚರಿಸಿಕೊಳ್ಳಲು ಜನರು ಬರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಹಬ್ಬದಲ್ಲಿ ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ ಹಾಗೂ ಮಾದಕ ವಸ್ತುಗಳ ಸೇವನೆಯಂತಹ ಘಟನೆಗಳು ನಡೆಯುತ್ತಿದೆ ಎಂದು ವಿಹೆಚ್‌ಪಿ ಆರೋಪಿಸಿದೆ.

    ಕಳೆದ ವರ್ಷ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ ಜಾಗಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ ಘಟನೆ ಕೂಡಾ ನಡೆದಿದೆ. ದಾಂಡಿಯಾ ಹೆಸರಿನಲ್ಲಿ ಆಯೋಜಿಸಲಾಗುವ ಇಂತಹ ಕಾರ್ಯಕ್ರಮಗಳು ಸಂಘರ್ಷಕ್ಕೂ ಕಾರಣವಾಗುತ್ತಿದೆ. ದಾಂಡಿಯಾ ಅನ್ನೋದು ದೇವಿಯ ಹೆಸರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಇಲ್ಲಿ ಅಸಭ್ಯ ನೃತ್ಯಕ್ಕೆ ಅವಕಾಶ ನೀಡಬಾರದು ಎಂದು ವಿಹೆಚ್‌ಪಿಯ ದುರ್ಗಾವಾಹಿನಿ ಸಂಘಟನೆ ಆಗ್ರಹಿಸಿದೆ.

    ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಂತಹ ಕಾರ್ಯಕ್ರಮ ಆಯೋಜನೆಯಿಂದ ಕೋಮು ಸೌಹಾರ್ದತೆ ಹಾಳಾಗುವ ಆತಂಕವನ್ನು ದುರ್ಗಾವಾಹಿನಿ ವ್ಯಕ್ತಪಡಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಮನವಿ ಸಲ್ಲಿಸಿ ಯಾವುದೇ ಕಾರಣಕ್ಕೂ ಅಸಭ್ಯವಾಗಿ ನೃತ್ಯ ಮಾಡುವಂತಹ ದಾಂಡಿಯಾ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

    Continue Reading

    LATEST NEWS

    ಗೋಮೂತ್ರ ಕುಡಿದರಷ್ಟೇ ಗಾರ್ಬಾ ಪೆಂಡಾಲ್‌ಗೆ ಎಂಟ್ರಿ..! ಬಿಜೆಪಿ ನಾಯಕನ ಹೇಳಿಕೆ

    Published

    on

    ಮಂಗಳೂರು/ ಇಂದೋರ್ :  ಉತ್ತರ ಭಾರತದಲ್ಲಿ ನವರಾತ್ರಿಯಲ್ಲಿ ನಡೆಯುವ ಗಾರ್ಬಾ ಸಂಭ್ರಮಕ್ಕೆ ಪೆಂಡಾಲ್ ಒಳಗೆ ಬರುವವರಿಗೆ ಗೋಮೂತ್ರ ಕುಡಿಸಬೇಕು ಎಂದು ಬಿಜೆಪಿಯ ಮುಖಂಡರೊಬ್ಬರು ಕರೆ ನೀಡಿದ್ದಾರೆ. ಹಿಂದೂಗಳಲ್ಲಿ ‘ಅಚಮಾನ’ದ ಮೂಲಕವೇ ಪೂಜೆಯನ್ನು ಪ್ರಾರಂಭ ಮಾಡುವುದು ಸಂಪ್ರದಾಯ. ಇದೇ ರೀತಿ ಅಚಮಾನ ಸಂಪ್ರದಾಯದಂತೆ ಗಾರ್ಬಾ ಸಂಭ್ರಮಕ್ಕೂ ಮೊದಲು ಪೆಂಡಲಾ ಪ್ರವೇಶದ್ವಾರದಲ್ಲೇ ಗೋಮೂತ್ರ ಸೇವಿಸಿದವರಿಗೆ ಮಾತ್ರ ಒಳಗೆ ಪ್ರವೇಶ ನೀಡಬೇಕು ಎಂದು ಬಿಜೆಪಿ ಮುಖಂಡ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

    ಸಾಂದರ್ಭಿಕ ಚಿತ್ರ

    ಇಂದೋರ್ ಬಿಜೆಪಿ ಜಿಲ್ಲಾಧ್ಯಕ್ಷ ಚಿಂಟು ವರ್ಮಾ ಅವರು ಈ ಹೇಳಿಕೆ ನೀಡಿದ್ದು, ಗಾರ್ಬಾ ಸಂಘಟಕರು ಗೋಮೂತ್ರವನ್ನು ‘ಅಚಮಾನ’ದ ರೀತಿಯಲ್ಲಿ ನೀಡಬೇಕು ಎಂದು ಕೋರಿದ್ದಾರೆ.

    ಈ ವಿಚಾರವಾಗಿ ಕೆಂಡಕಾರಿರುವ ಕಾಂಗ್ರೆಸ್ ಪಕ್ಷ, ಇದು ಕೇಸರಿ ಪಕ್ಷದ ಧ್ರುವೀಕರಣದ ಹೊಸ ತಂತ್ರ ಎಂದು ಬಣ್ಣಿಸಿದೆ. ಗೋಶಾಲೆಗಳ ದುಃಸ್ಥಿತಿಯ ಬಗ್ಗೆ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಹೀಗಾಗಿ ಈ ವಿಷಯವನ್ನು ರಾಜಕೀಯ ವಿಷಯ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.

     ಇದನ್ನೂ ಓದಿ : ಇನ್ಸ್ಟಾಗ್ರಾಮ್ ಲವ್ – ಸೆಕ್ಸ್ – ದೋಖಾ; ಪೊಲೀಸ್ ಪೇದೆ ವಿರುದ್ಧ ಠಾಣೆ ಮೆಟ್ಟಿಲೇರಿದ ಯುವತಿ

    ಹಿಂದು ಸಂಪ್ರಾಯದ ಪ್ರಕಾರ ‘ಅಚಮಾನ’ ಅಂದರೆ ಧಾರ್ಮಿಕ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಶುದ್ಧೀಕರಣಕ್ಕಾಗಿ ಮಂತ್ರಗಳನ್ನು ಪಠಿಸುವಾಗ ನೀರನ್ನು ತೀರ್ಥ ರೂಪವಾಗಿ ಕುಡಿಯುವ ಪ್ರಕ್ರಿಯೆಯಾಗಿದೆ. ಆಧಾರ್ ಕಾರ್ಡ್‌ ಎಡಿಟ್ ಮಾಡಬಹುದಾದ್ರೂ, ಒಬ್ಬ ವ್ಯಕ್ತಿ ಹಿಂದೂ ಆಗಿದ್ದರೆ ಆತನ ಗೂಮೂತ್ರದ ‘ಆಚಮನ’ದ ನಂತರವೇ ಗಾರ್ಬಾ ಪೆಂಡಾಲ್ ಪ್ರವೇಶಿಸುತ್ತಾನೆ. ಹೀಗಾಗಿ ಯಾವ ಹಿಂದೂ ಕೂಡಾ ಇದನ್ನು ನಿರಾಕರಿಸುವ ಪ್ರಶ್ನೆಯೇ ಉದ್ಭವ ಆಗುವುದಿಲ್ಲ ಎಂದು ಚಿಂಟು ವರ್ಮಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ( ಈ ಸುದ್ದಿಯನ್ನು ಸಿಂಡಿಕೇಟೆಡ್‌ ಸುದ್ದಿ ಸಂಸ್ಥೆ ಪಿಟಿಐ ವರದಿಯನ್ನು ಆಧರಿಸಿ ಬರೆಯಲಾಗಿದೆ)

    Continue Reading

    LATEST NEWS

    ಮೂಡಬಿದಿರೆ: ಡಿ. 10ರಿಂದ 15ರವರೆಗೆ ಆಳ್ವಾಸ್ ವಿರಾಸತ್

    Published

    on

    ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಡಿಸೆಂಬರ್ 10 ರಿಂದ 15 ರವರೆಗೆ ನಡೆಯಲಿದೆ.

    ವಿರಾಸತ್ 30 ವರ್ಷಗಳನ್ನು ಪೂರೈಸುತ್ತಿದ್ದು ಈ ಸಂದರ್ಭದಲ್ಲಿ ಅಪೂರ್ವ ಮತ್ತು ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ಆಳ್ವಾಸ್ ವಿರಾಸತ್-2024ನ್ನು ಅತ್ಯಂತ ಯಶಸ್ವೀ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಹೇಳಿದ್ದಾರೆ.

    ಸುದ್ದಿಗಾರರ ಜೊತೆ ಮಾತನಾಡಿದ ಅವರು ಆಳ್ವಾಸ್ ವಿರಾಸತ್-2024 ಡಿಸೆಂಬರ್ 10ರ ಮಂಗಳವಾರದಿಂದ ಪ್ರಾರಂಭವಾಗಿ ಡಿಸೆಂಬರ್ 15ರ ಭಾನುವಾರ ಮುಕ್ತಾಯಗೊಳ್ಳಲಿದೆ. ಒಟ್ಟು 6 ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು. ವೈಭವೋಪೇತವಾಗಿ ಜರುಗಲಿದೆ. ಮೊದಲ 5 ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಹಾರೋತ್ಸವ, ಕರಕುಶಲ ವಸ್ತುಗಳೇ ಮೊದಲಾದ ವಸ್ತು ಪ್ರದರ್ಶನಗಳಿಗೆ ಅವಕಾಶವಿದ್ದು ಕೊನೆಯ ದಿನ ಭಾನುವಾರವನ್ನು ಕೇವಲ ವಸ್ತುಪ್ರದರ್ಶನಗಳಿಗಾಗಿಯೇ ಮೀಸಲಿಡಲಾಗಿದೆ.

    ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಸಂಸ್ಥೆಯು ನಡೆಸುವ ಆಳ್ವಾಸ್ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ 2014ಕ್ಕೆ ಸಂಸ್ಕೃತಿ ಪ್ರಿಯರೂ, ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮೋಹನ್ ಆಳ್ವ ವಿನಂತಿಸಿದ್ದಾರೆ.

    Continue Reading

    LATEST NEWS

    Trending