Connect with us

    LATEST NEWS

    ಇಂದು ರಾತ್ರಿಯಿಂದ 14ದಿನ ರಾಜ್ಯದಾದ್ಯಂತ ಲಾಕ್ ಡೌನ್: ಊರು ಬಿಟ್ಟು ತೆರಳುತ್ತಿರುವ ವಲಸೆ ಕಾರ್ಮಿಕರು..!

    Published

    on

    ಉಡುಪಿ: ರಾಜ್ಯದಲ್ಲಿ ಇಂದು ರಾತ್ರಿಯಿಂದ  ಲಾಕ್ ಡೌನ್ ಘೋಷಣೆಯಾಗಿದ್ದು, ರಾತ್ರಿ 9 ಗಂಟೆಯಿಂದಲೇ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ನೂತನ ಆದೇಶ ಜಾರಿಯಾಗಲಿದೆ.

    ಅಗತ್ಯ ಸೇವೆಗಳು ಹೊರತುಪಡಿಸಿದ್ರೆ ಉಳಿದ ಎಲ್ಲಾ ಕಾರ್ಯ ಚಟುಚಟಿಕೆಗಳು ಸ್ಥಗಿತವಾಗಲಿದೆ.ಹೀಗಿರುವಾಗಲೇ ಉಡುಪಿ ಜಿಲ್ಲೆಯಲ್ಲಿ ಕೊಪ್ಪಳ, ಗದಗ, ಸಿದ್ದಾಪುರ ಭಾಗದ  ವಲಸೆ ಕಾರ್ಮಿಕರು ಉಡುಪಿ ಬಿಟ್ಟು ತಮ್ಮ ಊರಿಗೆ ತೆರಳುತ್ತಿದ್ದಾರೆ. ಇಂದು ಬೆಳಗ್ಗೆ ಊರಿಗೆ ಹೋಗುವುದಕ್ಕೆಂದು ನಗರದ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಾರ್ಮಿಕರು ಕುಟುಂಬ ಸಮೇತ ಗಂಟು ಮೂಟೆ -ಕಟ್ಟಿ ಬಸ್ಸಿಗಾಗಿ ಸಿದ್ಧವಾಗಿ ನಿಂತಿರುವ ದೃಶ್ಯ ಕಂಡು ಬಂತು.. ಬಸ್ಸಿನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗದೆ ನೂಕು ನುಗ್ಗಲಿನೊಂದಿಗೆ ತರಾತುರಿಯಲ್ಲಿ ಬಸ್ಸಿನಲ್ಲಿ ಸಂಚರಿಸುವುದು ಕಂಡು ಬಂತು.ಅವರನ್ನು ಮಾತಾಡಿಸಿದಾಗ ಬಾಡಿಗೆ ಹಣ ಕೊಡುವುದು ಸೇರಿದಂತೆ ಇತರ ಖರ್ಚುಗಳನ್ನು ಸರಿದೂಗಿಸುವುದು ಕಷ್ಟ 15ದಿನ ಲಾಕ್ ಡೌನ್ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯ ಹಿನ್ನೆಲೆ ಊರಿಗೆ ಮರಳುತ್ತಿರುವುದಾಗಿ ಹೇಳಿದ್ದಾರೆ..

    FILM

    ‘ಪೆಂಡ್ರೈವ್‌’ನಲ್ಲಿ ಬಿಗ್‌ಬಾಸ್‌ ತನಿಷಾ ಕುಪ್ಪಂಡ..!

    Published

    on

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮತ್ತೆ ಸೌಂಡ್ ಮಾಡಲಿದೆ ‘ಪೆಂಡ್ರೈವ್’. ಹೌದು, ಈಗಾಗಲೇ ರಾಜ್ಯದಲ್ಲಿ ಎರಡು ಪ್ರಕರಣಗಳು ಭಾರೀ ಸದ್ದು ಮಾಡುತ್ತಿದ್ದೆ. ನಟ ದರ್ಶನ್ ಕೊಲೆ ಕೇಸ್‌ ನಲ್ಲಿ ಜೈಲು ಸೇರಿದ್ದರೆ, ಪ್ರಜ್ವಲ್ ರೇವಣ ಪೆಂಡ್ರೈವ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.

    ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಪೆಂಡ್ರೈವ್‌ ಸದ್ದು ಮಾಡಲು ತಯಾರಾಗುತ್ತಿದೆ. ಹೌದು, ವಿಶೇಷ ಅಂದ್ರೆ ತನಿಷಾ ಕುಪ್ಪಂಡ ಈ ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್‌ ಬಾಸ್ ಸೀಸನ್ 10 ರ ಬಳಿಕ ತನಿಷಾ ಕುಪ್ಪಂಡ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿದ್ದಾರೆ. ಹೊಸದಾಗಿ ಬಿಸ್‌ನೆಸ್‌ ಕೂಡಾ ಶುರು ಮಾಡಿದ್ದಾರೆ. ಇದೀಗ ಪೆಂಡ್ರೈವ್‌ ಶೀರ್ಷೆಕೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಸರ್ಕಾರಕ್ಕೆ ತುಳು ಚಿತ್ರ ನಿರ್ಮಾಪಕರ ಮನವಿ: ಸಿಎಂ ಸ್ಪಂದನೆ…!

    ‘ಪೆಂಡ್ರೈವ್’ ಟೈಟಲ್ ಯಾಕೆ?

    ಹಾಗಂತ ಈ ‘ಪೆನ್‌ಡ್ರೈವ್’ ಸಿನಿಮಾಗೂ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಹೇಳಿದೆ. ಹಾಗಾದ್ರೆ ಸಿನೆಮಾಗೆ ಈ ಟೈಟಲ್ ಇಟ್ಟಿರುವುದಾದರೂ ಯಾಕೆ? ಈ ಸಿನಿಮಾವನ್ನು ಸೆಬಾಸ್ಟಿನ್ ಡೇವಿಡ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಟ್ರೆಂಡಿಂಗ್‌ನಲ್ಲಿರುವ ವಿಷಯಗಳನ್ನು, ವ್ಯಕ್ತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಇವರಿಗೆ ಅನುಭವಿದೆ. ಈ ಕಾರಣಕ್ಕೆ ‘ಪೆನ್‌ಡ್ರೈವ್’ ಟೈಟಲ್ ಇಟ್ಟು ಸಿನಿಮಾ ಮಾಡುವುದಕ್ಕೆ ಹೊರಟಾಗ ಸಿನಿಪ್ರಿಯರಲ್ಲಿ ಗುಮಾನಿ ಮೂಡಿತ್ತು. ಆದರೆ, ಸ್ವತ: ಸಿನೆಮಾ ನಿರ್ದೇಶಕರೇ ಮಾಧ್ಯಮಗಳಿಗೆ ತಮ್ಮ ಸಿನಿಮಾ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಪಟ್ಟಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ಆಗಿದೆ ಎಂದು ಹೇಳಿದ್ದಾರೆ.

    ಪೆನ್‌ಡ್ರೈವ್ ಸಿನೆಮಾವನ್ನು ಲಯನ್ ಆರ್ ವೆಂಕಟೇಶ್ ಮತ್ತು ಲಯನ್ ಎಸ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಸಿನೆಮಾದಲ್ಲಿ ರಾಧಿಕಾ, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಭಾಗ್ಯ, ಗೀತಪ್ರಿಯಾ, ಗೀತಾ ಮೊದಲಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಜು.4 ರಂದು  ಸಿನೆಮಾ ಶೀರ್ಷಿಕೆ ಅನಾವರಣ ಆಗಲಿದ್ದು, ವರ್ತೂರು ಸಂತೋಷ್ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ.

    Continue Reading

    DAKSHINA KANNADA

    ಸರ್ಕಾರಕ್ಕೆ ತುಳು ಚಿತ್ರ ನಿರ್ಮಾಪಕರ ಮನವಿ: ಸಿಎಂ ಸ್ಪಂದನೆ…!

    Published

    on

    ಮಂಗಳೂರು : ತುಳು ಚಿತ್ರ ನಿರ್ಮಾಪಕರು ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಪ್ರಾದೇಶಿಕ ಚಲನಚಿತ್ರಗಳಿಗೆ ಸಬ್ಸಿಡಿ ಹಾಗೂ ನಿರ್ಮಾಕರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಮನವಿ ಸಲ್ಲಿಸಿದ್ದಾರೆ. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್ ಅವರು ಸಂಘದ ಪರವಾಗಿ ಮನವಿ ಸಲ್ಲಿಸಿದ್ದಾರೆ.

    ಪ್ರಾದೇಶಿಕ ಚಲನಚಿತ್ರವಾಗಿ ತುಳು ಭಾಷೆಯಲ್ಲಿ ವಾರ್ಷಿಕ 15 ರಿಂದ 20 ಸಿನೆಮಾಗಳು ನಿರ್ಮಾಣವಾಗುತ್ತಿದೆ. ಭಾಷೆಯ ಮೇಲಿನ ಅಭಿಮಾನದಿಂದ ನಿರ್ಮಾಪಕರು ಚಿತ್ರ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ. ಯಾವುದೇ ಪರಭಾಷೆಗೆ ಕಡಿಮೆ ಇಲ್ಲದಂತೆ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರ ಮೂರು ನಾಲ್ಕು ಸಿನೆಮಾಗಳಿಗೆ ಮಾತ್ರ ಸಬ್ಸಿಡಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕನಿಷ್ಟ ಹದಿನೈದು ಸಿನೆಮಾಗಳಿಗೆ ಸಬ್ಸಿಡಿ ನೀಡುವಂತೆ ಮನವಿ ಸಲ್ಲಿಸಲಾಗಿದೆ.

    ಇನ್ಮುಂದೆ ಹಳದಿ ಹಕ್ಕಿಯ ಚಿಲಿಪಿಲಿ ಕೇಳಲ್ಲ – ಬಾಗಿಲು ಹಾಕಿತು ಕೂ ಆ್ಯಪ್

    ಇದೇ ವೇಳೆ ಮಂಗಳೂರಿನ ಕೊಡಿಯಾಲ್ ಬೈಲ್ ಎ ಗ್ರಾಮದ ಸರ್ವೆ ನಂಬ್ರ 1554 – 2 ಬಿ ಯಲ್ಲಿ ಸರ್ಕಾರದ ಖಾಲಿ ಜಮೀನಿನಲ್ಲಿ ಐದು ಸೆಂಟ್ಸ್ ಜಾಗವನ್ನು ತುಳು ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡುವಂತೆಯೂ ಮನವಿಯಲ್ಲಿ ಕೊರಲಾಗಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ ಸೂಕ್ತ ಭರವಸೆಯನ್ನು ನೀಡಿದ್ದಾರೆ.

    Continue Reading

    LATEST NEWS

    ಇನ್ಮುಂದೆ ಹಳದಿ ಹಕ್ಕಿಯ ಚಿಲಿಪಿಲಿ ಕೇಳಲ್ಲ – ಬಾಗಿಲು ಹಾಕಿತು ಕೂ ಆ್ಯಪ್

    Published

    on

    ಬೆಂಗಳೂರು: ಟ್ವಿಟ್ಟರ್‌ಗೆ ಪರ್ಯಾಯವಾಗಿ ಆರಂಭಗೊಂಡಿದ್ದ ಕೂ ಆ್ಯಪ್ ಇದೀಗ ಬಾಗಿಲು ಹಾಕಿದೆ. ದೇಶೀಯ ಸಾಮಾಜಿಕ ಜಾಲತಾಣ ವೇದಿಕೆ ಕೂ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

    ಸ್ವಾಧೀನ ಮಾತುಕತೆ ವಿಫಲ ಮತ್ತು ಹೆಚ್ಚಿನ ತಂತ್ರಜ್ಞಾನದ ವೆಚ್ಚಗಳಿಂದ ಕೂ ವೇದಿಕೆಯನ್ನು ಮುಚ್ಚುವುದಾಗಿ ಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಕೂ ಉತ್ತುಂಗದಲ್ಲಿದ್ದಾಗ ಸುಮಾರು 20 ಲಕ್ಷ ದೈನಂದಿನ ಸಕ್ರಿಯ ಬಳಕೆದಾರರನ್ನು ಮತ್ತು 9,000 ವಿಐಪಿಗಳನ್ನು ಒಳಗೊಂಡಂತೆ 1 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿತ್ತು. ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಬಳಕೆದಾರರರನ್ನು ಪ್ರೋತ್ಸಾಹಿಸಲು ಮುಂದಾಗಿದ್ದರೂ ಕೂ ಬಳಕೆದಾರರನ್ನು ತಲುಪಲು ವಿಫಲವಾಗಿತ್ತು.

    ಭವಿಷ್ಯದ ಉದ್ಯಮಗಳ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ. ಇಲ್ಲಿಯವರೆಗೆ ಸಹಕಾರ ನೀಡಿದ ಬೆಂಬಲಿಗರು, ಹೂಡಿಕೆದಾರರು ಮತ್ತು ಬಳಕೆದಾರರಿಗೆ ಸಂಸ್ಥಾಪಕರು ಕೃತಜ್ಞತೆ ಸಲ್ಲಿಸಿದ್ದಾರೆ.

    Continue Reading

    LATEST NEWS

    Trending