Connect with us

    haveri

    ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಸಾವು ..! ಹೊಸ ವಾಹನಕ್ಕೆ ಪೂಜೆ ಮಾಡಿಸಲು ಹೋದ ಕುಟುಂಬ ದುರಂತ ಅಂತ್ಯ

    Published

    on

    ಹಾವೇರಿ: ಹೊಸದಾಗಿ ಖರೀದಿ ಮಾಡಿದ್ದ ವಾಹನಕ್ಕೆ ಪೂಜೆ ಮಾಡಿಸಲೆಂದು ಹೊರಟಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ 13 ಜನ ಮೃತಪಟ್ಟ ಘಟನೆ ಜೂ.27ರಂದು ಬೆಳಗಿನ ಜಾವ ಹಾವೇರಿಯಲ್ಲಿ ನಡೆದಿದೆ.

    ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್‌ ಬಳಿಯ ಬೆಂಗಳೂರು –ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದು ಭೀಕರ ಅಫಘಾತ ಸಂಭವಿಸಿದೆ. ಶಿವಮೊಗ್ಗ ಮೂಲದ 15 ಜನರು ಟಿಟಿ ವಾಹನದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರು. ದೇವಿ ದರ್ಶನ ಪಡೆದು ಮರಳಿ ಊರಿಗೆ ಬರುತ್ತಿದ್ದ ವೇಳೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ.

    ಘಟನೆಯಿಂದಾಗಿ ಮಹಿಳೆಯರು, ಮಕ್ಕಳು ಸೇರಿದಂತೆ 13 ಮಂದಿ ಅಸುನೀಗಿದ್ದಾರೆ. ಪರಶುರಾಮ್ ​​(45), ಭಾಗ್ಯ (40), ನಾಗೇಶ (50), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾ ಬಾಯಿ (65), ಪುಣ್ಯ (50), ಮಂಜುಳಾಬಾಯಿ, ಚಾಲಕ ಆದರ್ಶ್ (23), ಮಾನಸ (24), ರೂಪಾ (40), ಮಂಜುಳಾ (50) ಮೃತರು ಮೃತಪಟ್ಟವರು. ಶಿವಮೂಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಎಮ್ಮೆಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.

    Read More..; ಕಚೇರಿಗೆ ತೆರಳಲು ಸಿದ್ಧವಾಗುತ್ತಿದ್ದಾಗ ಹೃದಯಾ*ಘಾತ; 24 ವರ್ಷದ ಯುವತಿ ದುರ್ಮ*ರಣ

    ಅಪಘಾತದಲ್ಲಿ ಮೃತಪಟ್ಟ ನಾಗೇಶ್ ಕೃಷಿಕರಾಗಿದ್ದು, ಪತ್ನಿ ವಿಶಾಲಾಕ್ಷಿ ಆಶಾಕಾರ್ಯಕರ್ತೆಯಾಗಿದ್ದರು. ಇವರ ಪುತ್ರ ಆದರ್ಶ್ ಹೊಸದಾಗಿ ಟಿಟಿಯನ್ನು ಖರೀದಿಸಿದ್ದರು. ವಾಹನದ ಪೂಜೆಗಾಗಿ ಕುಟುಂಬದವರು ಕಲಬುರಗಿಯ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರು. ಸೋಮವಾರ ಮದ್ಯಾಹ್ನ 12 ಗಂಟೆ ವೇಳೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಾಯಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ವಾಹನ ಪೂಜೆ ಮಾಡಿಸಿ, ಬಳಿಕ ಮಹಾರಾಷ್ಟ್ರ ತುಳಜಾಭವಾನಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ನಂತರ ಬೆಳಗಾವಿ ಜಿಲ್ಲೆ ಸವದತ್ತಿಗೆ ಆಗಮಿಸಿ, ಇಲ್ಲಿಯ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳಿ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.

    ಮೃತ ದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    haveri

    ಬ್ಯಾಡಗಿ ಮೆಣಸಿನ ದರ ಕುಸಿತ…! ಏರಿದ ರೈತರ ಆಕ್ರೋಶ..! APMC ಧ*ಗ ಧ*ಗ…!

    Published

    on

    ಹಾವೇರಿ : ಬ್ಯಾಡಗಿ ಮೆಣಸಿನಕಾಯಿಗೆ (byadagi chilly ) ಮಾರುಕಟ್ಟೆಯಲ್ಲಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಆ*ಕ್ರೋಶಿತ ರೈತರ ಪ್ರ*ತಿಭಟನೆ ತೀವೃ ಸ್ವರೂಪಕ್ಕೆ ತಿರುಗಿದೆ. ಪ್ರತಿಭಟನೆ ನಿಯಂತ್ರಿಸಲು ಬಂದ ಪೊಲೀಸರನ್ನೇ ಓಡಿಸಿದ ರೈತರು ವಾಹನಗಳಿಗೆ ಬೆಂ*ಕಿ ಹಚ್ಚಿದ್ದಾರೆ. ಬ್ಯಾಡಗಿ ಎಪಿಎಂಸಿ ಮುಂದೆ ಪ್ರ*ತಿಭಟನೆ ನಡೆಸಿದ ರೈತರು ಕಚೇರಿ ದ್ವಂಸ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.  ಬೆಂ*ಕಿ ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನೇ ಸ್ಥಳದಿಂದ ಓಡಿಸಿದ ರೈತರು ಚಿತ್ರೀಕರಣ ಮಾಡುತ್ತಿದ್ದ ಮಾದ್ಯಮದವರ ಮೇಲೂ ಹ*ಲ್ಲೆ ನಡೆಸಿದ್ದಾರೆ.

    (more…)

    Continue Reading

    LATEST NEWS

    Trending