ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವದ ಪ್ರಯುಕ್ತ 116 ಮಂದಿ ಭಕ್ತರಿಂದ ಇಂದು ಎಡೆಮಡೆ ಸ್ನಾನ ನಡೆಯಿತು.
ದೇವರ ನೈವೇದ್ಯದ ಮೇಲೆ ಎಡೆಮಡೆ ಉರುಳು ಸೇವೆಯನ್ನು ಭಕ್ತರು ಇಂದು ನೆರವೇರಿಸಿದರು. ಆಗಮ ಪಂಡಿತ ಮಾರ್ಗದರ್ಶನದಲ್ಲಿ ಎಡೆಮಡೆ ಸ್ನಾನ ಆಚರಣೆ ನಡೆಸಲಾಯಿತು.
ಈ ಕ್ಷೇತ್ರದಲ್ಲಿ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿದ್ದಂತಹ ಮಡೆ ಸ್ನಾನಕ್ಕೆ ನ್ಯಾಯಾಲು ನಿಷೇಧ ಹೇರಲಾಗಿತ್ತು. ಹಿಂದೆ ಬ್ರಾಹ್ಮಣರು ತಿಂದು ಉಳಿಸಿದಂತಹ ಎಲೆಯ ಮೇಲೆ ಭಕ್ತಾದಿಗಳು ಈ ಸೇವೆಯನ್ನು ನೆರವೇರಿಸುತ್ತಿದ್ದರು.
ಆದ್ರೆ ಈ ಸೇವೆಗೆ ಕೆಲವು ವರ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಈ ಪದ್ಧತಿಯನ್ನು ನಿಷೇಧಗೊಳಿಸಿ ಆದೇಶ ಹೊರಡಿಸಿದ ಬಳಿಕ ಕ್ಷೇತ್ರದಲ್ಲಿ ದೇವರಿಗೆ ನೈವೇಧ್ಯವಿಟ್ಟ ಅನ್ನವನ್ನು ಗೋವುಗಳಿಗೆ ತಿನ್ನಿಸಿದ ಬಳಿಕ ಆ ಎಲೆಯ ಮೇಲೆ ಭಕ್ತಾದಿಗಳು ಉರುಳು ಸೇವೆ ಮಾಡುವ ಎಡೆಮಡೆಸ್ನಾನ ಪದ್ಥತಿಯನ್ನು ಆರಂಭಿಸಲಾಯಿತು.