Connect with us

    MANGALORE

    ಮಕ್ಕಿಮನೆ ಕಲಾವೃಂದ- ಅನ್ನಪೂರ್ಣ ನರ್ಸರಿ ಸಹಭಾಗಿತ್ವದಲ್ಲಿ ದಶದಿನ ಭಜನೋತ್ಸವ- ಸಾಂಸ್ಕೃತಿಕ ಉತ್ಸವ

    Published

    on

    ಮಕ್ಕಿಮನೆ ಕಲಾವೃಂದ- ಅನ್ನಪೂರ್ಣ ನರ್ಸರಿ ಸಹಭಾಗಿತ್ವದಲ್ಲಿ ದಶದಿನ ಭಜನೋತ್ಸವ- ಸಾಂಸ್ಕೃತಿಕ ಉತ್ಸವ

    ಮಂಗಳೂರು : ಮಕ್ಕಿಮನೆ ಕಲಾವೃಂದ, ಮಂಗಳೂರು ಹಾಗೂ ಅನ್ನಪೂರ್ಣ ನರ್ಸರಿಯ ಜಂಟಿ ಆಶ್ರಯದಲ್ಲಿ ನವರಾತ್ರಿ ದಸರಾ ಮಹೋತ್ಸವ- 2020 ರ ದಶದಿನ ಭಜನೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಿನ್ನೆ ಜರುಗಿತು.

    ತಿರುಪತಿ ದಾಸಸಾಹಿತ್ಯದ ಭಜನಾ ತರಬೇತುದಾರರಾದ ಶ್ರೀಮತಿ ವೀಣಾಪ್ರಸನ್ನ ರವರು ದೀಪ ಬೆಳಗಿಸಿ , ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಗಾಟಿಸಿ, ಭಗವಂತನ ನಾಮಸ್ಮರಣೆಯಿಂದ ಸಕಲ ಸಂಕಷ್ಟಗಳೂ ಪರಿಹಾರವಾಗುವುದು ಎಂದು ಶುಭ ಹಾರೈಸಿದರು,

    ಸಭಾಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶೀಲಾ . ಕೆ ಶೆಟ್ಟಿಯವರು ಸಮೃದ್ಧಿ ಸಂಜೀವಿನಿ ಸ್ವಸಹಾಯ ಸಂಘದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿ , ಲಾಕ್ ಡೌನ್ ನ ಸಂಧರ್ಭದಲ್ಲಿ ಧೃತಿಗೆಡದೆ ಕರಕುಶಲವಸ್ತುಗಳ ತಯಾರಿಯಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ಥಿತಿಯನ್ನು ಸರಿತೂಗಿಸಿದ ಸಮೃದ್ಧಿ ಸಂಜೀವಿನಿಯ ಸದಸ್ಯೆಯರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

    ಮೀನುಗಾರಿಕಾ ಫೆಡರೇಷನ್ ನ ಅಧ್ಯಕ್ಷ ರಾದ ಶ್ರೀಯುತ ಯಶ್ ಪಾಲ್ ಸುವರ್ಣ ರವರು ಮಾತನಾಡಿ , ಕರಾವಳಿಯಲ್ಲಿ ನೂರಾರು ಭಜನಾ ಮಂಡಳಿಗಳು ಇದ್ದು , ಭಜಕರೂ ಸಾಕಷ್ಟಿರುವುದರಿಂದ ಯಾವುದೇ ರೋಗ ರುಜಿನಗಳು ಅಷ್ಟಾಗಿ ಕಾಡುವುದಿಲ್ಲ ಎಂದರು.

    ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಹಾಗೂ ಕಾರ್ಯದರ್ಶಿ ಪ್ರಕಾಶ್ ಕುಲಾಲ್ ಉಪಸ್ಥಿತರಿದ್ದರು. ಅನ್ನಪೂರ್ಣ ನರ್ಸರಿಯ ಮಾಲಕ ಶ್ಯಾಮ್ ಪ್ರಸಾದ್ ಭಟ್ ಸ್ವಾಗತಿಸಿ, ಪ್ರಸನ್ನಾ ಪ್ರಸಾದ್ ಪ್ರಾರ್ಥನೆಗೈದರು. ಶ್ರೀಮತಿ ಸಹನಾ. ಕೆ ಹೆಬ್ಬಾರ್ ನಿರೂಪಿಸಿದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮುಮ್ತಾಜ್ ಅಲಿ ಸಾ*ವಿನ ಹಿಂದೆ ಹನಿಟ್ರ್ಯಾಪ್ ಕೈವಾಡ! ಏನಂದ್ರು ಕಮಿಷನರ್?

    Published

    on

    ಮಂಗಳೂರು : ಮಂಗಳೂರು ಉತ್ತರದ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮುಮ್ತಾಜ್ ಆಲಿ ಆತ್ಮಹ*ತ್ಯೆ ಪ್ರಕರಣದಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಮ್ತಾಜ್ ಅಲಿ ಅವರನ್ನು ಕೆಲವೊಂದು ವ್ಯಕ್ತಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಈಗಾಗಲೇ 50 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದರು. ಈ ವಿಚಾರವನ್ನು ವಾಯ್ಸ್‌ ಮೆಸೇಜ್ ಮೂಲಕ ತಮ್ಮ ಕುಟುಂಬ ಸದಸ್ಯರಿಗೆ ಕಳುಹಿಸಿದ್ದ ಮುಮ್ತಾಜ್ ಆಲಿ ನಾಪತ್ತೆಯಾಗಿದ್ದರು.

    ಇದೀಗ ಅವರ ಮೃತ ದೇಹ ಪತ್ತೆಯಾಗಿದ್ದು, ಅವರ ಆತ್ಮಹತ್ಯೆಗೆ ಬ್ಲ್ಯಾಕ್‌ ಮೇಲ್‌ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮುಮ್ತಾಜ್ ಆಲಿ ಅವರ ವಾಯ್ಸ್ ಮೆಸೇಜ್ ಆಧಾರದಲ್ಲಿ ಆರು ಜನರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ನವಜಾತ ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿದ ಪಾಪಿ ತಾಯಿ

    ರೆಹಮತ್‌ ಎಂಬಾಕೆ ಮುಮ್ತಾಜ್‌ ಆಲಿ ಅವರನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿದ್ದು, ಅಬ್ದುಲ್ ಸತ್ತಾರ್, ಶಾಫೀ, ಮುಸ್ತಾಫ, ಶೋಯಿಬ್ ಹಾಗೂ ಸಿರಾಜ್‌ ಎಂಬವರು ಮುಮ್ತಾಜ್ ಆಲಿ ಅವರನ್ನು ಹಣಕ್ಕಾಗಿ ಪೀಡಿಸಿದ್ದಾರೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮುಮ್ತಾಜ್ ಅಲಿ ಅವರು ಮರ್ಯಾದೆಗೆ ಅಂಜಿ ಈ ಆತ್ಮಹ*ತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಇಲಾಖೆ ಹೆಚ್ಚಿನ ತನಿಖೆ ನಡೆಸಲಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

     

    Continue Reading

    LATEST NEWS

    ಮಂಗಳೂರು: ಕಾರಿಗೆ ಏಕಾಏಕಿ ಬೆಂಕಿ – ಸಂಪೂರ್ಣ ಸುಟ್ಟು ಹೋದ ಕಾರು.!

    Published

    on

    ಕಿನ್ನಿಗೋಳಿ: ಕಾರಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಪೇಟೆಯಲ್ಲಿ ಸಂಭವಿಸಿದೆ.

    ಕಾರೊಂದಕ್ಕೆ ಆಕಸ್ಮತ್ ಬೆಂಕಿ ತಗುಲಿದ ಘಟನೆ ಕಿನ್ನಿಗೋಳಿ ಮುಖ್ಯ ರಸ್ತೆಯ ಮಾರುಕಟ್ಟೆ ಮುಂಭಾಗ ನಡೆದಿದೆ. ಮಕ್ಕಳು ಹಾಗೂ ತಾಯಿಯನ್ನು ಕಾರಿನಲ್ಲಿ ಕೂರಿಸಿ AC ಹಾಕಿ ಬೇಕರಿಗೆ ಹೋದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ನಿವಾಸಿ ಜಾಸ್ಮಿನ್ ಅವರು ಮತ್ತೊರ್ವ ಮಹಿಳೆ‌ ಮತ್ತು ಎರಡು‌ ಮಕ್ಕಳೊಂದಿಗೆ ಕಿನ್ನಿಗೋಳಿ‌ ಮಾರುಕಟ್ಟೆ ಮುಂಭಾಗ ಕಾರು ನಿಲ್ಲಿಸಿ ಹೋದ ಸಂದರ್ಭ ಕಾರಿನಲ್ಲಿ ಹೊಗೆ ಬರಲಾರಂಭಿಸಿದೆ.

     

    ಕಾರಿನಲ್ಲಿದ್ದ ಮಹಿಳೆ ಮತ್ತು ಎರಡು ಮಕ್ಕಳು ಬೊಬ್ಬೆ ಹಾಕಿದ್ದು ಕೂಡಲೇ ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ಅಪಾಯದಿಂದ ಪಾರು‌ಮಾಡಿದ್ದಾರೆ. ಸ್ಥಳಿಯ ಅಂಗಡಿ‌ಮಾಲಿಯ ರಾಘವೇಂದ್ರ ಪ್ರಭು ಸ್ಥಳೀಯ ಪ್ರೆಟ್ರೋಲ್ ಪಂಪ್ ನಿಂದ ಅಗ್ನಿ ಶಮನದ ಸಾಧನದ ಮೂಲಕ, ಸ್ಥಳಿಯರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.

     

    Continue Reading

    LATEST NEWS

    ದ.ಕ. ಜಿಲ್ಲೆಯಲ್ಲಿ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಹೊತ್ತಿಗೆ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆಯಾಗಿದೆ.

    ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಿದೆ.

    ಮಂಗಳೂರು ನಗರದಲ್ಲಿ ಸಿಡಿಲಿನ ಅಬ್ಬರ ಜೋರಾಗಿತ್ತು. ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಆದರೆ ಸಂಜೆ ಹೊತ್ತಿಗೆ ಭಾರೀ ಮಳೆ ಸುರಿದಿದೆ. ಮುಂದಿನ‌‌ ನಾಲ್ಕು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

    Continue Reading

    LATEST NEWS

    Trending