Thursday, October 22, 2020

ಎಕ್ಕೂರು ಬಾಬರ ಸ್ಮರಣೆ:ತೊಕ್ಕೊಟ್ಟಿನಲ್ಲಿ ಯುವಸೇನೆ ನೆರಳಲ್ಲಿ ನೂರಾರು ಜನರಿಂದ ರಕ್ತದಾನ..!

ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..!

ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..! ಮಂಗಳೂರು : ಕೊಲೆ, ಕೊಲೆಯತ್ನ , ದರೋಡೆ ಸೇರಿದಂತೆ ಉಳ್ಳಾಲ ಸಹಿತ ಮಂಗಳೂರಿನ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳ ಆರೋಪಿಯಾಗಿದ್ದ ಟಾರ್ಗೆಟ್ ತಂಡದ...

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..!

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..! ಮಂಗಳೂರು : ಉಳ್ಳಾಲದಲ್ಲಿ ಮಿತಿಮೀರಿದ ವೇಗದ ಬೈಕ್ ಚಾಲನೆಗೆ ಓರ್ವ ಸತ್ತು- ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅಮಿತ ವೇಗದಲ್ಲಿ ಧಾವಿಸಿದ ಬೈಕ್ ಪಾದಚಾರಿಗೆ ಢಿಕ್ಕಿ ಹೊಡೆದು ರಸ್ತೆ...

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..!

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..! ಉಡುಪಿ : ರಾಜ್ಯದ ವಿವಿಧೆಡೆಗಳಲ್ಲಿ ವಯಸ್ಸಾದ ಒಂಟಿ ಹೆಂಗಸರು ಹಾಗೂ ಗಂಡಸರನ್ನು ನಯವಾದ ಮಾತುಗಳಿಂದ ವಂಚಿಸಿ ಚಿನ್ನಾಭರಣಗಳನ್ನು ಕಳವು ಮಾಡುತಿದ್ದ...

ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ:ಆಡಿಯೋ ಸಂದೇಶ ಕಳುಹಿಸಿ ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್..!

ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ:ಆಡಿಯೋ ಸಂದೇಶ ಕಳುಹಿಸಿ ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್..! ಬಂಟ್ವಾಳ :  ಚಿತ್ರ ನಟ ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ. ಪೊಲೀಸರಿಗೆ ಆಡಿಯೋ ಸಂದೇಶ ಕಳುಹಿಸಿ ಆರೋಪಿ...

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..!

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..! ಉಡುಪಿ: ಹೊರ ರಾಜ್ಯದ ಮೀನುಗಾರರು ರಾಜ್ಯದ ಕರಾವಳಿ ಪ್ರವೇಶಿಸಿ ಸ್ಥಳೀಯ ಮೀನುಗಾರರಿಗೆ ಕಿರುಕುಳ ಕೊಡುವ...

ಎಕ್ಕೂರು ಬಾಬರ ಸ್ಮರಣೆ:ತೊಕ್ಕೊಟ್ಟಿನಲ್ಲಿ ಯುವಸೇನೆ ನೆರಳಲ್ಲಿ ನೂರಾರು ಜನರಿಂದ ರಕ್ತದಾನ..!

ಮಂಗಳೂರು : ಶುಭಕರ ಶೆಟ್ಟಿ (ಎಕ್ಕೂರು ಬಾಬ)ಅವರ ಸ್ಮರಣಾರ್ಥವಾಗಿ ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ಹಿಂದೂ ಯುವಸೇನೆ ಪಾಂಚಜನ್ಯ ಶಾಖೆ ತೊಕ್ಕೊಟ್ಟು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರದಂದು ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ನೂರರು ಮಂದಿ‌ ರಕ್ತದಾನ ಮಾಡಿ ಮಾದರಿಯಾದರು.

ಕಾರ್ಯಕ್ರಮ ಉದ್ಘಾಟಿಸಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮಾತನಾಡಿ ಹಿಂದೂ ಸಮಾಜದ ಹುಲಿಯಂತಿದ್ದ ಬಾಬ ಅವರು ಸಂಘಟನಾತ್ಮಕವಾಗಿ ಅನೇಕ ಯುವಕರ‌ ಮನಸ್ಸನ್ನು ಗೆದ್ದಿದ್ದರು.ಸಾಮಾನ್ಯ ಮನೆತನದ ಹುಡುಗ ಈ ಮಟ್ಟದಲ್ಲಿ ಹೆಸರುಗಳಿಸಿದ್ದು ನೋಡಿದರೆ ನಿಜಕ್ಕೂ‌ ಅಚ್ಚರಿಯಾಗುತ್ತದೆ. ಆಧ್ಯಾತ್ಮದ ಮುಂದೆ ವಿಜ್ನಾನ ಏನೂ ಬೆಳೆಯಲಿಲ್ಲ ಎಂಬ ವಿಚಾರ ಕೊರೊನ ಕಾಲ ಘಟ್ಟದಲ್ಲಿ ಜನರಿಗೆ ಮನದಟ್ಟಾಗಿದೆ.ವಿಜ್ನಾನವನ್ನು ನಂಬಿ ಕೂತವರು, ನಾಸ್ಥಿಕರೂ ಕೂಡ ಇವತ್ತು ರೋಗ ನಿರ್ಮೂಲನೆಗೆ ದೇವರ ಮೊರೆ ಹೋಗಿದ್ದಾರೆ.ಇಂತಹ ಅರ್ಥಪೂರ್ಣ ಶಿಬಿರಗಳು,ಸೇವೆಗಳು ನಿರಂತರ ಮಾಡುವ ಮೂಲಕ ಎಕ್ಕೂರು ಬಾಬರ ಹೆಸರನ್ನು ಅಜರಾಮರವನ್ನಾಗಿಸುವ ಕಾರ್ಯ ಯುವಸೇನೆ ಮಾಡಿದೆ ಎಂದರು.

ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯಶೋಧರ ಚೌಟ ಮಾತನಾಡಿ ಅಂದಿನ ಕಾಲದಲ್ಲಿ ಹಿಂದೂ ಸಂಘಟನೆಗಳನ್ನು ಹುಟ್ಟು ಹಾಕುವುದು ಆಗಲಿ, ಮುನ್ನಡೆಸಿ ಕೊಂಡೊಯ್ಯುವುದಾಗಲಿ ಅಷ್ಟು ಸುಲಭದ ಮಾತಾಗಿರಲಿಲ್ಲ.ಹಿಂದುತ್ವಕ್ಕೆ ಪ್ರತಿಕೂಲ ವಾತಾವರಣ ಇಲ್ಲದ ಸಂಧರ್ಭದಲ್ಲೂ ಯುವಸೇನೆಯನ್ನು ಮುನ್ನಡೆಸಿದ ಕೀರ್ತಿ ಎಕ್ಕೂರು ಬಾಬಾರಿಗೆ ಸಲ್ಲಬೇಕು ಎಂದರು.ಅಮೂಲ್ಯ ಜೀವ ಉಳಿಸಲು ರಕ್ತವು ಸಂಜೀವಿನಿಯಾಗಿದ್ದು ಬಾಬಾರವರ ಸ್ಮರಣಾರ್ಥ ಇಂತಹ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದ್ದು ಸಂತಸದ ವಿಚಾರವೆಂದರು.

ಶಿಬಿರದಲ್ಲಿ ನೂರಾರು ಮಂದಿ ರಕ್ತದಾನಗೈದು ಮಾದರಿಯಾದರು.ರಕ್ತದಾನಿಗಳಿಗೆ ಟೀ ಶರ್ಟ್ ಮತ್ತು ಪ್ರಮಾಣ ಪತ್ರ ನೀಡಲಾಯಿತು.ಈ ವೇಳೆ ಪ್ರಧಾನ ಮಂತ್ರಿ ಜನ್‌ ಧನ್ ಖಾತೆ ತೆರೆಯಲು ಉಚಿತ ನೋಂದಾವಣಿ ಪ್ರಕ್ರಿಯೆಯು ನಡೆಯಿತು.

ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ ಸುವರ್ಣ ಅವರು ಸಭಾಧ್ಯಕ್ಷತೆ ವಹಿಸಿದ್ದರು.ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷರಾದ ಭಾಸ್ಕರ್ ಚಂದ್ರ ಶೆಟ್ಟಿ,ಜಿಲ್ಲಾ ಸಮಿತಿ ಅಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಉಪಾಧ್ಯಕ್ಷ ಯಾದವ್ ಕುಂದರ್ ವಾಮಂಜೂರು ,ಕಾರ್ಯದರ್ಶಿ ರವಿಚಂದ್ರ ಎಕ್ಕೂರು ,ಮಾತೃ ಮಂಡಳಿ ಪ್ರಮುಖರು ಹೇಮ ಪ್ರಕಾಶ್ ಹೆಗ್ಡೆ ,ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ,ಮುಖಂಡರಾದ ಚಂದ್ರಶೇಖರ್ ಉಚ್ಚಿಲ್,ಬಿಜೆಪಿ ಯುವಮೋರ್ಚದ ಕ್ಷೇತ್ರ ಅಧ್ಯಕ್ಷ ಸಚಿನ್ ಮೋರೆ, ಉದ್ಯಮಿಗಳಾದ ಸತೀಶ್ ಕರ್ಕೇರ, ಜಯಂತ್ ಕಾಪಿಕಾಡ್,ಜಗದೀಶ್ ಆಚಾರ್ಯ,ಗಣೇಶ್ ಅಂಚನ್ ,ಮುಖಂಡರಾದ ದಯಾನಂದ್ ತೊಕ್ಕೊಟ್ಟು, ಲೋಕೇಶ್ ಶೆಟ್ಟಿ, ಹಿಂದೂ ಯುವಸೇನೆ ಪಾಂಚಜನ್ಯ ಶಾಖೆ ಅಧ್ಯಕ್ಷ ದೀಕ್ಷಿತ್ ತೊಕ್ಕೊಟ್ಟು, ಪ್ರವೀಣ್ ಎಸ್.ಕುಂಪಲ,ಪುರುಷೋತ್ತಮ ಕಲ್ಲಾಪು,ಆಶಿಕ್ ಗೋಪಾಲಕೃಷ್ಣ ಮೊದಲಾದವರು ಇದ್ದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.