Connect with us

    BANTWAL

    ಬಂಟ್ವಾಳ: ಮಹಿಳೆಯೊಬ್ಬರ ಕುತ್ತಿಗೆಯಿಂದ 1ಲಕ್ಷ ಮೌಲ್ಯದ ಮಾಂಗಲ್ಯ ಸರ ಎಗರಿಸಿದ ದ್ವಿಚಕ್ರ ಸವಾರರು

    Published

    on

    ಬಂಟ್ವಾಳ: ಬೈಕ್ ನಲ್ಲಿ ಬಂದ ಇಬ್ಬರು ಆಗಂತುಕರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಳೆದು ಪರಾರಿಯಾದ ಘಟನೆ ನಿನ್ನೆ ಬೆಳಿಗ್ಗೆ ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ನಡೆದಿದೆ.


    ಈ ಕುರಿತು ಕೈಕುಂಜೆ ಪೂರ್ವ ಬಡಾವಣೆ ನಿವಾಸಿ ಮಹಿಳೆ ಸುಲೋಚನಾ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.

    ಸುಲೋಚನಾರವರು ಮನೆಯಿಂದ ಹೊರಟು ಕೈಕುಂಜೆಯಲ್ಲಿ ಹೊಲಿಯಲು ಕೊಟ್ಟ ಬಟ್ಟೆಯನ್ನು ಪಡೆದುಕೊಂಡು ವಾಪಸ್ ಬರುತ್ತಿರುವ ಸಂದರ್ಭದಲ್ಲಿ ಬೆಳಿಗ್ಗೆ ಬಡಾವಣೆಯ ರಸ್ತೆಯಲ್ಲಿ ಎದುರಿಗೆ ಬೈಕೊಂದು ಬಂದಿತ್ತು.

    ಅದರಲ್ಲಿ ಇಬ್ಬರು ಅಪರಿಚಿತರು ಇದ್ದು, ಹಿಂಬದಿ ಸವಾರ ತನ್ನ ಕುತ್ತಿಗೆಯಲ್ಲಿದ್ದ ಅಂದಾಜು 1 ಲಕ್ಷ ರೂ ಮೌಲ್ಯದ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿದ್ದಾರೆ.

    ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ವಿವೇಕಾನಂದ ಮತ್ತವರ ತಂಡ ಕಾರ್ಯಾಚರಣೆ ನಡೆಸಲು ಆರಂಭಿಸಿತು.

    ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಹಾಡಹಗಲೇ ಇಂಥ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಎಡೆಮಾಡಿದೆ.

    2018ರಲ್ಲಿ ಇದೇ ಮಾದರಿಯ ಘಟನೆ ಕೈಕುಂಜೆಯಲ್ಲಿ ಸಂಜೆಯ ವೇಳೆ ನಡೆದಿದ್ದು, ಅಂದು ಬಿಎಸ್ಸೆನ್ನೆಲ್ ಉದ್ಯೋಗಿಯೊಬ್ಬರು ನಡೆದುಕೊಂಡು ಮನೆಗೆ ಮರಳುತ್ತಿದ್ದ ವೇಳೆ ಬೈಕ್ ನಲ್ಲಿ ಬಂದವರು ಚಿನ್ನದ ಸರ ಸೆಳೆದೊಯ್ದಿದ್ದರು.

    ಬಳಿಕ ಅವರನ್ನು ಆಗಿನ ಎಸ್ಸೈ ನಂದಕುಮಾರ್ ಮತ್ತವರ ತಂಡ ಬಂಧಿಸಿ, ಸರವನ್ನು ವಶಪಡಿಸಿ ವಾರೀಸುದಾರರಿಗೆ ಮರಳಿಸಿತ್ತು.

    Click to comment

    Leave a Reply

    Your email address will not be published. Required fields are marked *

    BANTWAL

    ಬಸ್ಸಿನಿಂದ ಪರಿಸರ ಮಾಲಿನ್ಯ; ಸಾರ್ವಜನಿಕರ ಆಕ್ರೋಶ

    Published

    on

    ಬಂಟ್ವಾಳ: ಮಂಗಳೂರು ವಿಭಾಗಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಮಂಗಳೂರು – ಧರ್ಮಸ್ಥಳ ಸಂಚರಿಸುವ ವೇಳೆಯಲ್ಲಿ  ಜೀವಕ್ಕೆ ಹಾಗೂ ಪರಿಸರಕ್ಕೆ ಹಾನಿಕಾರಕವಾದ ಕಪ್ಪು ಹೊಗೆಯನ್ನು ಹೊರ ಹಾಕುತ್ತಿದ್ದು  ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


    ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಸರಿಯಾದ ನಿರ್ವಹಣೆ ಇಲ್ಲದ ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸುತ್ತಿದ್ದು, ಇದರಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಶೀಘ್ರವೇ ನಿವಾರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಕಪ್ಪು ಹೋಗೆ ಹೊರ ಸೂಸುವ ಬಸ್ಸಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.

    Continue Reading

    BANTWAL

    ಬಂಟ್ವಾಳ: ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿ

    Published

    on

    ಬಂಟ್ವಾಳ: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಅಪಾರ ಹಾನಿಯುಂಟಾದ ಘಟನೆ ಬಂಟ್ವಾಳದ ಉರುವಾಲು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

    ತಾರಿದಡಿ ನಿವಾಸಿ ಸೇಸಪ್ಪ ಅವರ ಮನೆಗೆ ಸಿಡಿಲು ಬಡಿದಿದ್ದು, ಗೋಡೆ ಬಿರುಕು ಬಿಟ್ಟಿದೆ. ಇದರೊಂದಿಗೆ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

    ಸಿಡಿಲು ಬಡಿದ ಸಂದರ್ಭದಲ್ಲಿ ಸಂದರ್ಭ ಸೇಸಪ್ಪ ಗೌಡರು ಮಕ್ಕಳನ್ನು ಶಾಲೆಯಿಂದ ಕರೆದುಂಡು ಬರಲು ತೆರಳಿದ್ದರು. ಹೀಗಾಗಿ ಸಂಭವನೀಯ ಅಪಾಯ ತಪ್ಪಿದಂತಾಗಿದೆ. ಇನ್ನು ಸಿಡಿಲು ಬಡಿದ ಪರಿಣಾಮ 9 ವರ್ಷಗಳ ಹಿಂದೆ ಕಟ್ಟಿದ್ದ ಈ ಕಾಂಕ್ರೀಟ್ ಮನೆ ಸಂಪೂರ್ಣ ಹಾನಿಗೀಡಾಗಿದೆ ಎಂದು ಸೇಸಪ್ಪ ಅವರು ಹೇಳಿದ್ದಾರೆ.

    Continue Reading

    BANTWAL

    ದೊಡ್ಮನೆಗೆ ಎಂಟ್ರಿ ಕೊಟ್ಟ ಕರಾವಳಿಯ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ಯ

    Published

    on

    ಬಂಟ್ವಾಳ : ಖ್ಯಾತ ಯುಟ್ಯೂಬರ್ ಧನರಾಜ್ ಆಚಾರ್ಯ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
    ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ಯ ತಮ್ಮ ಕಾಮಿಡಿ ಮ್ಯಾನರಿಸಂನಿಂದಲೇ ಫೇಮಸ್. ಹಾಸ್ಯಮಯ ವೀಡಿಯೋಗಳನ್ನು ಮಾಡಿ ಜನಮನಕ್ಕೆ ಹತ್ತಿರವಾಗಿದ್ದಾರೆ. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ.

    ಟಿಕ್ ಟಾಕ್ ನಲ್ಲಿ ಕಾಮಿಡಿ ವೀಡಿಯೋ ಮಾಡಿ ಪ್ರಸಿದ್ದಿ ಪಡೆದಿದ್ದ ಧನರಾಜ್ ಬಳಿಕ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು.


    ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್ಯ ಜೊತೆಗೂಡಿ ವೀಡಿಯೋಗಳನ್ನು ಮಾಡುತ್ತಿರುವ ಧನರಾಜ್ ಆಚಾರ್ಯ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

    Continue Reading

    LATEST NEWS

    Trending