Connect with us

    DAKSHINA KANNADA

    1-10ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಿನಿಂದಲೇ ವಾರವಿಡೀ ʻಮೊಟ್ಟೆʼ ವಿತರಣೆ!

    Published

    on

    ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, 1-10ನೇ ತರಗತಿ ವಿದ್ಯಾರ್ಥಿಗಳಿಗೆ ವಾರವೀಡಿ ಮೊಟ್ಟೆ ವಿತರಿಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

    ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ರಜಾ ದಿನ ಹೊರತುಪಡಿಸಿ, ವಾರದ 6 ದಿನವೂ ಮೊಟ್ಟೆ ವಿತರಣೆಗೆ ನಿರ್ಧರಿಸಲಾಗಿದೆ.

    ಈ ಮೊದಲು ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ವಾರಕ್ಕೊಮ್ಮೆ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಅದನ್ನು 10ನೇ ತರಗತಿಯವರೆಗೆ ವಿಸ್ತರಿಸಿದೆ. ವಾರದಲ್ಲಿ ಒಂದು ದಿನದ ಬದಲು ಎರಡು ದಿನಕ್ಕೆ ಹೆಚ್ಚಿಸಲಾಗಿತ್ತು. ಇನ್ನು ವಾರವಿಡೀ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

    DAKSHINA KANNADA

    ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ; ಸ್ಥಳೀಯರಿಂದ ರಕ್ಷಣೆ

    Published

    on

    ಸುಬ್ರಹ್ಮಣ್ಯ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳಿಯರು ರಕ್ಷಿಸಿದ ಘಟನೆ ಶುಕ್ರವಾರ (ಅ.18) ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಬಳಿ ನಡೆದಿದೆ.


    ಬೆಂಗಳೂರಿನಿಂದ ಒಂಟಿಯಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ವೃದ್ಧರೋರ್ವರು ಸ್ನಾನಘಟ್ಟದ ಬಳಿ ನೀರಿಗೆ ಇಳಿದು ಬಳಿಕ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದವರು ದೇವಳದ ಸಿಬಂದಿ ಲೋಕಾನಾಥ್‌ ಅವರಿಗೆ ಮಾಹಿತಿ ನೀಡಿದ್ದರು. ತತ್‌ಕ್ಷಣ ಅಲ್ಲಿಗೆ ಆಗಮಿಸಿದ ಲೋಕನಾಥ್‌ ಅವರು ಅಲ್ಲಿ ಅಂಗಡಿ ನಡೆಸುತ್ತಿರುವ ಗೋಪಾಲ್‌ ಹಾಗೂ ಇನ್ನೋರ್ವರ ಸಹಕಾರದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧರನ್ನು ನೀರಿನಿಂದ ಹೊರಕ್ಕೆ ಕರೆತಂದು, ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.

    ವೃದ್ಧರು ಮನೆಯವರ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ರಕ್ಷಣೆ ವೇಳೆ ವೃದ್ಧ ವ್ಯಕ್ತಿ ನನ್ನನ್ನು ಯಾಕೆ ರಕ್ಷಿಸಿದ್ದೀರಿ, ನಾನು ಸಾಯಬೇಕು ಎಂದು ಹೇಳುತ್ತಿದ್ದರು. ಮನಸ್ಸಿಗೆ ಏನೋ ಬೇಜಾರಾಗಿ ಮನೆಯನ್ನು ಬಿಟ್ಟು ಒಂಟಿಯಾಗಿ ಬಂದಿದ್ದರು ಎಂದು ತಿಳಿದುಬಂದಿದೆ.

    Continue Reading

    DAKSHINA KANNADA

    ಮಂಗಳೂರು ಏರ್ಪೋರ್ಟಿನಲ್ಲಿ ದುರಂತ – ಅಣಕು ಕಾರ್ಯಾಚರಣೆ

    Published

    on

    ಬಜಪೆ: ಕೇಂದ್ರ ಸರಕಾರದ ಗೃಹ ಸಚಿವಾಲಯದ ಸೂಚನೆಯಂತೆ ವಿಮಾನ ದುರಂತಕ್ಕೆ ಸಂಬಂಧಿಸಿದ ಅಣಕು ಕಾರ್ಯಾಚರಣೆ ಮಂಗಳೂರು ಏರ್ಪೋರ್ಟಿನಲ್ಲಿ ನಡೆಯಿತು.

    ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ಇಲಾಖೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಎನ್‌ಡಿಆರ್‌ಎಫ್‌, ಜಿಲ್ಲಾಡಳಿತ ಆರೋಗ್ಯ ಸೇವೆಗಳ ವಿಭಾಗ, ಅಗ್ನಿಶಾಮಕ ದಳ, ಎಸ್ ಡಿ ಆರ್‌ ಎಫ್‌, ಬಜಪೆ ಠಾಣಾ ಪೊಲೀಸರು ಅಣಕು ಕಾರ್ಯಾಚರಣೇಯಲ್ಲಿ ಪಾಳ್ಗೊಂಡರು. ಎನ್‌ಡಿ ಆರ್ ಎಫ್‌ ತಂಡಕ್ಕೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದರು.

    ರನ್‌ವೇ ಮೂಲಕ ವಿಮಾನ ಜಾರಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ರಾಸಾಯನಿಕ ಸೋರಿಕೆ, ಪ್ರಯಾಣಿಕರ ರಕ್ಷಣೆ ಹೇಗೆ ಎಂಬಿತ್ಯಾದಿಯಾಗಿ ಮಾಹಿತಿ ನೀಡಲಾಯಿತು. ವಿಮಾನ ದುರಂತಗಳಾದ ಸಂಧರ್ಭದಲ್ಲಿ ಸೋಡಿಯಂ ಅಸಿಟೇಟ್ ರಾಸಾಯನಿಕ ಸೋರಿಕೆ ಭೀತಿ, ಸಮೀಪದ ಜನತೆಯ ಸುರಕ್ಷತೆ, ಯಾವುದೇ ರೀತಿಯಲ್ಲಿ ಅನಾಹುತಗಳಾಗದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮೂಲಕ ಜಾಗೃತಿ ಮೂಡಿಸಲಾಯಿತು.

     

    ಕಾರ್ಯಾಚರಣೆಯಲ್ಲಿ 150 ಪ್ರಯಾಣಿಕರೊಂದಿಗೆ ದುಬೈನಿಂದ ಬಂದ ವಿಮಾನವು ಲ್ಯಾಂಡಿಂಗ್‌ ವೇಳೆ ಟೈರ್ ಸಿಡಿದ ಸಂದರ್ಭದಲ್ಲಾಗುವ ವೇಳೆ ವಹಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

    Continue Reading

    DAKSHINA KANNADA

    SHOCKING NEWS – ಉಳ್ಳಾಲ: ತಿಂಗಳ ಹಿಂದಷ್ಟೇ ಖರೀದಿಸಿದ್ದ ಟಿವಿಎಸ್‌ ಸ್ಕೂಟಿ ಬೆಂಕಿಗಾಹುತಿ

    Published

    on

    ಉಳ್ಳಾಲ: ಟಿವಿಎಸ್‌ ಕಂಪನಿಯ ಎಂಟಾರ್ಕ್‌ ಸ್ಕೂಟರ್‌ ತನ್ನಷ್ಟಕ್ಕೆ ಉರಿದು ಸುಟ್ಟ ಆಶ್ಚರ್ಯಕರ ಘಡನೆ ಉಳ್ಳಾಲದಲ್ಲಿ ನಡೆದಿದೆ.

    ಕುಂಪಲ ವಿದ್ಯಾನಗರ ನಿವಾಸಿ ಐಟಿಐ ಕಲಿಯುತ್ತಿರುವ ರಾಕೇಶ್‌ ಎಂಬ ವಿದ್ಯಾರ್ಥಿ ತಿಂಗಳ ಹಿಂದೆ ಖರೀದಿ ಮಾಡಿದ್ದನು. ಆ ಸ್ಕೂಟರ್ ತನ್ನಷ್ಟಕ್ಕೆ ತಾನೇ ಬೆಂಕಿಗಾಹುತಿ ಆದದಲ್ಲದೆ, ಮನೆಯ ಗೋಡೆ, ಕಿಟಕಿಗಳ ಗಾಜುಗಳು, ಒಣಗಲು ಹಾಕಲಾದ ಬಟ್ಟೆಗಳು ಸುಟ್ಟು ಕರಕಲಾಗಿದೆ.

    ಘಟನೆ ನಡೆದಾಗ ಕೂಡಲೇ ಮನೆ ಮಂದಿ ಎಚ್ಚೆತ್ತು ಬೆಂಕಿಯನ್ನು ನಂದಿಸಿ, ಮನೆಗೆ ವ್ಯಾಪಿಸಲಿದ್ದ ಬೆಂಕಿಯನ್ನು ನಂದಿಸಿ, ಹೆಚ್ಚಾಗುವ ಅನಾಹುತವನ್ನು ತಡೆದಿದ್ದಾರೆ.

    ರಾಕೇಶ್‌ ಓದಿನ ಜೊತೆ ಪಾರ್ಟ್‌ ಟೈಂ ಕೆಲಸ ಮಾಡಿ ತೊಕ್ಕೊಟ್ಟಿನ “ಸೋನಾ ಟಿವಿಎಸ್‌” ಶೋರೂಂನಲ್ಲಿ ಸ್ಕೂಟರ್‌ ಖರೀದಿ ಮಾಡಿದ್ದರು.

    ಎರಡು ದಿನಗಳ ಹಿಂದೆ ಮೊದಲ ಇಎಮ್‌ಐ ಕಂತು ಕಟ್ಟಿದ್ದು. ಸ್ಕೂಟರಿನ ಬ್ಯಾಟರಿ ಸಿಡಿದು ಬೆಂಕಿ ಹತ್ತಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ರಾಕೇಶ್‌ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

    Continue Reading

    LATEST NEWS

    Trending